ಹೋಟೆಲ್-ನಲ್ಲಿ ನೀವು ನೀರಿನ ಬಾಟಲಿ ಕೊಂಡಾಗ ಮೋಸ ಹೋಗಬಹುದು ಎಚ್ಚರ!!!

0
1004

ಬೆಂಗಳೂರಿನ ಒಂದು ರೆಸ್ಟೋರೆಂಟ್‌ನಲ್ಲಿ ವಾಟರ್ ಬಾಟಲ್ ಬೆಲೆ ೯೦ ರೂ. !

ಒಂದು ನೀರಿನ ಬಾಟಲ್ ಬೆಲೆ ದೇಶದ ಯಾವುದೇ ಅಂಗಡಿಗೆ ಹೋದರೂ ೧ ಲೀಟರ್‌ಗೆ ೨೦ ರೂಪಾಯಿ. ಆದರೆ ಬೆಂಗಳೂರಿನರೆಸ್ಟೋರಂಟ್ ಒಂದು ಈ ಬಾಟಲ್‌ಗೆ ಹಚ್ಚಿದ ಬೆಲೆ ನಿಮ್ಮ ನಿದ್ದೇ ಗೆಡಿಸದೆ ಇರದು.

Credits: The Logical Indian

ವಾರದ ಹಿಂದೆ ರವಿ ವಾಲದಿಯಾ ಎನ್ನುವರು ಕೋರಮಂಗಲದಲ್ಲಿನ ಏಷ್ಯಾ ಕಿಚನ್ ರೆಸ್ಟೋರೆಂಟ್‌ಗೆ ಹೋಗುತ್ತಾರೆ. ಅಲ್ಲಿಊಟಾ ಎಲ್ಲ ಆದ ಮೇಲೆ ಅವರ ಕೈಗೆ ಬಿಲ್ಲು ಬರುತ್ತದೆ. ಆ ಬಿಲ್ಲ ನೋಡಿದ ಮೇಲೆ ಅವರ ಎದೆ ಒಂದು ಕ್ಷಣ ನಿಂತ ಹಾಗೆಆಗುತ್ತದೆ. ಕಾರಣವಿಷ್ಟೇ ಅವರು ಹೋಟೇಲ್‌ನಲ್ಲಿ ೫ ಬಾಟಲ್ ನೀರನ್ನು ಪಡೆದಿರುತ್ತಾರೆ. ಸಾಮಾನ್ಯವಾಗಿ ೫ ಬಾಟಲ್ ನೀರಿನಬೆಲೆ ೧೦೦ ರೂಪಾಯಿ. ಆದರೆ ಈ ಅಂಗಡಿಯಲ್ಲಿ ೪೫೦ ರೂ. ಆಗಿತ್ತು. ಅಲ್ಲದೆ ಇದಕ್ಕೆ ೧೪.೫% ವ್ಯಾಟ್ ಸಹ ಕಟ್ಟಬೇಕು. ಅವರುತಾವು ಮೋಸಕ್ಕೆ ಒಳಗಾದ ಬಗ್ಗೆ ಅಂರ್ತಜಾಲದಲ್ಲಿ ಪೋಸ್ಟ್ ಮಾಡಿದ್ದಾರೆ.

Credits: Ravi Valdiya FacebookPost

ಇನ್ನು ಕುರಿತಾಗಿ ಸಂಬಂಧ ಪಟ್ಟ ಮೆಟ್ರೋಲಜಿ (Metrology) ಅಧಿಕಾರಿಗಳನ್ನು ಕೇಳಿದರೆ, ನಾವು ರಾಜ್ಯದಲ್ಲಿ ತಪಾಸಣೆನಡೆಸುತ್ತೇವೆ. ಒಂದುವೇಳೆ ಗ್ರಾಹಕರಿಗೆ ತೊಂದರೆ ಆದಲ್ಲಿ ಅವರು 080-22265644 /080-22253500 ಅಥವಾclm_lm_ka@nic.in.ಫೋನ್ ಅಥವಾ ಮೇಲ್ ಮಾಡಿದರೂ ಸಾಕು. ನಾವು ಎರಡು ದಿನಗಳಲ್ಲಿ ಈ ಬಗ್ಗೆ ತನಿಖೆನಡೆಸುತ್ತೇವೆ ಎಂದು ತಿಳಿಸಿದ್ದಾರೆ.

 

ಈ ಬಗ್ಗೆ ಕೇಂದ್ರ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಅವರು ಗ್ರಾಹಕರು ಎಚ್ಚೇತ್ತುಕೊಳ್ಳುವ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.ಅಲ್ಲದೆ ಇಂತಹ ಪ್ರಕರಣಗಳು ಕಂಡು ಬಂದಲ್ಲಿ ದೂರು ದಾಖಲಿಸುವಂತೆ ಗ್ರಾಹಕರಿಗೆ ಕರೆ ಬೀಡಿದ್ದಾರೆ. ಅಲ್ಲದೆ ಕ್ರಿಕೆಟ್ ಮೈದಾನ,ಪಂಚತಾರಾ ಹೋಟೇಲ್ ಹಾಗೂ ವಿಮಾನ ನಿಲ್ದಾಣಗಳಲ್ಲಿ ಎಂಆರ್‌ಪಿ ಗಿಂತ ಹೆಚ್ಚಿನ ಬೆಲೆಗೆ ನೀರನ್ನು ಮಾರಿದ್ದಲ್ಲಿ ದೂರುನೀಡಬಹುದು ಎಂದು ಹೇಳಿದ್ದಾರೆ.