ನೆಲದ ಮೇಲೆ ಕುಳಿತೇ ಏಕೆ ಊಟ ಮಾಡಬೇಕು? ಇದರ ಹಿಂದಿರುವ ವೈಜ್ಞಾನಿಕ ಸತ್ಯ ಇಲ್ಲಿದೆ ನೋಡಿ..

0
1480

ಹಿಂದಿನ ಕಾಲದಲ್ಲಿ ಯಾವುದೇ ವಿಷಯವನ್ನು ಅಷ್ಟು ಸರಳವಾಗಿ ಒಪ್ಪಿಕೊಳ್ಳುತ್ತಿರಲಿಲ್ಲ ಏಕೆಂದರೆ ಪ್ರತಿಯೊಂದು ವಿಷಯಕ್ಕೂ ತನ್ನದೇಯಾದ ಸಂಪ್ರದಾಯದ ಬಲೆಯನ್ನು ಹೆಣೆದು ಅದರಲ್ಲಿ ತಮ್ಮ ಜೀವನವನ್ನು ಸಾಕಿ ಒಳ್ಳೆಯ ಜೀವನಕ್ಕೆ ಸಾಕ್ಷಿಯಾಗುತ್ತಿದರು. ಅವುಗಳನೆಲ್ಲವನ್ನು ವೈಜ್ಞಾನಿಕವಾಗಿ ನೋಡಿದರೆ ಹಿಂದಿನ ಕಾಲದ ಆಚಾರದಲ್ಲಿ ಎಷ್ಟೊಂದು ವಿಚಾರಗಳು ಹುದುಗಿವೆ ಎಂಬುದು ತಿಳಿಯುತ್ತದೆ. ಈ ಆಚಾರವನ್ನು ಹೆಕ್ಕಿ ನೋಡಿದಾಗ ಊಟದ ಪದ್ದತಿಯಲ್ಲಿ ಸಾಕಷ್ಟು ನಿಯಮಗಳು ಇರುವದು ಸತ್ಯವಾಗಿದೆ.

Also read: ವೀಳ್ಯದೆಲೆ ತಿಂದ್ರೆ ಆರೋಗ್ಯ ಹೆಚ್ಚಾಗುತ್ತೆ ಅಂತ ತಿಳಿದೇ ಹಿರಿಯರು ಊಟ ಆದ್ಮೇಲೆ ತಾಂಬೂಲ ತಿಂತಿದ್ರು ಅನ್ಸುತ್ತೆ…

ಆಗಿನ ಕಾಲದ ಜನರಿಗೆ ನೂರರಲ್ಲಿ ಒಬ್ಬರಿಗೆ ಆರೋಗ್ಯೆ ಸಮಸ್ಯೆಗಳು ಕಂಡು ಬರುತ್ತಿದವು ಈಗಿನ ಕಾಲದ ಊಟದ ಪದ್ದತಿ ನೋಡಿದರೆ ಮನೆಗಳಲ್ಲಿ ಇಂದು ಊಟಕ್ಕೆ ಟೇಬಲ್ಲುಗಳು ಬಂದಿವೆ. ಆದರೂ ಕೆಲ ಸಂಪ್ರದಾಯಸ್ಥರು ಅವುಗಳನ್ನು ಬಳಸದೆ ನೆಲದ ಮೇಲೆ ಕುಳಿತು ಊಟ ಮಾಡುತ್ತಾರೆ. ಅನ್ನಯಜ್ನವೆಂಬುದು ಒಂದು ಪವಿತ್ರ ಕ್ರಿಯೆ, ಟೇಬಲ್ ಮೇಲೆ ಅದನ್ನು ಮಾಡಬಾರದು, ಅದು ಪಾಶ್ಚಾತ್ಯ ಸಂಸ್ಕೃತಿ, ಭಾರತೀಯ ಸಂಸ್ಕೃತಿಯ ಪ್ರಕಾರ ನೆಲದ ಮೇಲೆ ಕುಳಿತು ಊಟ ಮಾಡುವುದೇ ಶ್ರೇಷ್ಠ ಎಂದು ಅವರು ಹೇಳುತ್ತಾರೆ. ಇದಕ್ಕಿರುವ ವೈಜ್ಞಾನಿಕ ಹಿನ್ನೆಲೆ ನಮ್ಮ ಆರೋಗ್ಯಕ್ಕೆ ಪೂರಕವಾಗಿದೆ.

Also read: ಊಟ ಆದ ಮೇಲೆ ೧೫ ನಿಮಿಷ ನಡಿದ್ರೆ ಎಷ್ಟೆಲ್ಲ ಲಾಭ ಇದೆ ಅಂತ ಗೊತ್ತಾದ್ರೆ ಇವತ್ತಿಂದನೇ ಈ ಅಭ್ಯಾಸ ರೂಡಿಸಿಕೊಳ್ತೀರಾ..

ನೆಲದ ಮೇಲೆ ಊಟಕ್ಕೆ ಕುಳಿತಾಗ ಸಾಮಾನ್ಯವಾಗಿ ಚಕ್ಕಳಮಕ್ಕಳ ಹಾಕಿ ಕುಲಿತುಕೊಲ್ಲುತ್ತೇವೆ. ಇದಕ್ಕೆ ಯೋಗದಲ್ಲಿ ಸುಖಾಸನ ಎನ್ನುವರು. ಇದೊಂದು ಆರೋಗ್ಯಕರ ಭಂಗಿ. ಇದು ದೇಹಕ್ಕೆ ಪ್ರಶಾಂತತೆಯನ್ನು ತಂದುಕೊಡುವ ಮೂಲಕ ಜಿರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಹೀಗೆ ಕುಳಿತಾಗ ನಮ್ಮ ಮೆದುಳಿನ ತನ್ನಿಂತಾನೇ ಸಂದೇಶ ರವಾನೆಯಾಗಿ, ಅದು ಹೊಟ್ಟೆಯನ್ನು ಜಿರ್ಣಕ್ರಿಯೆಗೆ ಸಿದ್ದಪದಿಸುತ್ತದೆ. ಇನ್ನೊಂದು ಪ್ರಾಮುಖ ಕಾರಣವಿದೆ. ಯಾವತ್ತೂ ಹೊಟ್ಟೆ ಸಂಪೂರ್ಣ ತುಂಬುವಂತೆ ಊಟ ಮಾಡಬಾರದು. ಮಾಡಿದರೆ ಜೀರ್ಣಕ್ರಿಯೆ ಕಷ್ಟವಾಗುತ್ತದೆ. ಕುರ್ಚಿ ಮೇಲೆ ಕುಳಿತು ಊಟ ಮಾಡುವಾಗ ಇಡೀ ಹೊಟ್ಟೆ ತುಂಬುವಷ್ಟು ಊಟ ಮಾಡಲು ಸಾಧ್ಯವಿದೆ. ಆದರೆ, ನೆಲದ ಮೇಲೆ ಕುಳಿತು ಊಟ ಮಾಡುವಾಗ ನಾವು ಮುಂದಕ್ಕೆ ಬಗ್ಗುವುದರಿಂದ ಹೊಟ್ಟೆ ಇನ್ನೇನು ತುಂಬುತ್ತಿದೆ ಎನ್ನುವಾಗಲೇ ಮುಂದಕ್ಕೆ ಬಗ್ಗುವುದು ಕಷ್ಟವಾಗಿ, ಹೊಟ್ಟೆ ತುಂಬಿದಂತೆನ್ನಿಸುತ್ತದೆ. ಆಗ ಊಟ ನಿಲ್ಲಿಸುತೇವೆ. ಇದರಿಂದ ಹೊಟ್ಟೆಬಿರಿ ಊಟ ಮಾಡದೆ, ಇನ್ನೂ ಸ್ವಲ್ಪ ಜಾಗ ಇರುವಾಗಲೇ ಊಟ ಮುಗಿಯುತ್ತದೆ. ಇದು ದೇಹಕ್ಕೆ ಒಳ್ಳೆಯದು. ಇದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಬೊಜ್ಜು ಬರುವುದು ತಪ್ಪುತ್ತದೆ. ನೆಲದ ಮೇಲೆ ಕುಳಿತು ಊಟ ಮಾಡುವವರು ಸಾಮಾನ್ಯವಾಗಿ ಸ್ಲಿಮ್ ಆಗಿರುವುದನ್ನು ಗಮನಿಸಿದ್ದೀರಾ?.

Also read: ಕೈಯಲ್ಲೇ ಊಟ ಮಾಡುವುದರಿಂದ ಆಗುವ ವೈಜ್ಞಾನಿಕ ಲಾಭಗಳು.

ಇನ್ನೊಂದು ವಿಷಯ ಅಂದರೆ ಹಳ್ಳಿಯಲ್ಲಿ ಇನ್ನೂ ಹಲವಾರು ಜನರು ಈ ಪದ್ದತಿಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ ಅದೆಲ್ಲ ಸಾಕ್ಷಿಯಾಗಿ ಹಳ್ಳಿಯಿಂದ ಬಂದು ಪಟ್ಟಣ ಸೇರಿದ ಮಕ್ಕಳು ಅಜ್ಜ ತಂದೆಯ ಆಚಾರವನ್ನು ವಿರೋದಿಸಿ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಜೀವನ ನಡೆಸುತ್ತಾರೆ. ಪರಿಣಾಮ ನೋಡಿದರೆ ತಂದೆ ಮಗನಿಗೂ ಅಜಗಜಾಂತರ ವ್ಯತಾಸವನ್ನು ಕಾಣಬಹುದು. ಈ ಎಲ್ಲ ವಿಚಾರ ತಿಳಿದ ಜನರು ಹಳೆಯ ಆಚಾರಕ್ಕೆ ಮಾರುಹೊಗುತ್ತಿದ್ದಾರೆ.