ಕೇರಳದ ವಯನಾಡ್ ಕನ್ನಡ ಜೈನರು ಬೆಳೆಸಿದ ನಾಡು !!

0
1583

ವಯನಾಡ್ ಪ್ರಾಚೀನ ಇತಿಹಾಸದ ಪ್ರಕಾರ, ಜೈನರು ವಯನಾಡ್ಗೆ ವಲಸೆ ಬಂದ ಮೊದಲ ಗುಂಪು. ವಯನಾಡ್ ನಲ್ಲಿ ಕನ್ನಡ ಮಾತನಾಡುವ ಜನರು ದಿಗಂಬರ ಪಂಥಕ್ಕೆ ಸೇರಿರುವ ಜೈನರು,ಅವರನ್ನು ಗೌಡರು ಎಂದು ಕರೆಯಲಾಗುತ್ತದೆ. ೧೨ನೇ ಶತಮಾನದಲ್ಲಿ ಶೈವ ಧರ್ಮ ಕರ್ನಾಟಕದಲ್ಲಿ ಬಲವಾದ ಹಿಡಿತವನ್ನು ಸಾಧಿಸುತ್ತದೆ ಮತ್ತು ಜೈನ ಧರ್ಮದವರ ಮೇಲೆ ಪದೇ ಪದೇ ದಾಳಿ ಇಂದಾಗಿ ಕೇರಳಕ್ಕೆ ಮತ್ತು ವಿಶೇಷವಾಗಿ ವಯನಾಡಿಗೆ ಜೈನರು ವಲಸೆ ಹೋಗುತ್ತಾರೆ.

12 ಶತಮಾನದಲ್ಲಿ ಹೊಯ್ಸಳ ರಾಜರು ಕರ್ನಾಟಕದ ಆಡಳಿತಗಾರರು ಮತ್ತು ವಯನಾಡ್ ಕರ್ನಾಟಕದ ಒಂದು ಭಾಗವಾಗಿತ್ತು. ಆ ಸಮಯದಲ್ಲಿ ವಯನಾಡನ್ನು ಬೈಲ್ನಾಡ್ ಎಂದು ಕರೆಯಲಾಗುತ್ತಿತ್ತು.
ಹೊಯ್ಸಳ ರಾಜವಂಶದ ಆಡಳಿತಗಾರರು ವಿಷ್ಣುವರ್ಧನನ ಕಾಲದವರೆಗೂ ಜೈನರು.

ವಯನಾಡ್ನಲ್ಲಿ ಜೈನ್ ಧರ್ಮ ಹೊಯ್ಸಳ ರಾಜವಂಶದ ದಿನಗಳಲ್ಲಿ ಉನ್ನತಿಯಲ್ಲಿತ್ತು . ಹೊಯ್ಸಳ ರಾಜರು ಜೈನ್ ಧರ್ಮವನ್ನು ಹರಡಲು ವಿವಿಧ ಭಾಗಗಳಿಗೆ ಅನೇಕ ಧರ್ಮ ಪ್ರಚಾರಕರನ್ನು ಕಳುಹಿಸಿಕೊಟ್ಟಿದ್ದರು. ವಯನಾಡ್ನಲ್ಲಿ  ಜೈನ್ ಧರ್ಮ ಅಸ್ತಿತ್ವವನ್ನು ಸಮರ್ಥಿಸಿಕೊಳ್ಳಲು ಅನೇಕ ಸಾಕ್ಷ್ಯಗಳು ಇವೆ. ಇತಿಹಾಸ ಬಥೆರಿಯ ಜೈನ ದೇವಾಲಯ 800 ವರ್ಷಗಳ ಹಿಂದೆ ನಿರ್ಮಿಸಲಾಯಿತು ಎಂದು ನಮಗೆ ಹೇಳುತ್ತದೆ.

jain1
ಹನ್ನೆರಡು ಬೀದಿ ಬಸ್ತಿ

ಈ ದೇವಾಲಯವನ್ನು ಕಿದಂಗಾಡ್ ಬಸ್ತಿ ಎಂದು ಕರೆಯಲಾಗುತ್ತದೆ ಮತ್ತು ಬಥೆರಿಯ ಹಳೆಯ ಹೆಸರು ಹನ್ನೆರಡು ಬೀದಿ ಆಗಿತ್ತು. ಈ ಎರಡು ಹೆಸರುಗಳು ಕನ್ನಡದ ಹೆಸರುಗಳು ಮತ್ತು ಇದು ಕರ್ನಾಟಕ ಜೈನರ ಪ್ರಭಾವವನ್ನು ಬಿಂಬಿಸುತ್ತವೆ.ಇನ್ನು ಕೆಲವು ಸ್ಥಳಗಳ ಹೆಸರುಗಳು: ಬೆಣ್ಣಗೋಡೆ (ವೆಣ್ಣಿಯೊಡೆ), ಫಲಗೊಂತು (ಪಲುಕುನ್ನು ), ಮುತ್ತಂಗಡಿ (ಪುತ್ತಂಗಡಿ), ಮತ್ತು ಹೋಸೆಅಂಗಡಿ (ಮನಂಥವಡಿ). ಈ ಎಲ್ಲಾ ಕನ್ನಡ ಹೆಸರುಗಳು ವಯನಾಡ್ ರಲ್ಲಿ ಜೈನರ ಅಸ್ತಿತ್ವವನ್ನು ಸಮರ್ಥಿಸಿಕೊಳ್ಳಲು ಸಾಕ್ಷ್ಯವಾಗಿದೆ.
ಎಡಕಲ್ ಗುಹೆಗಳು ವಯನಾಡಿನ ಹಳೆಯ ಐತಿಹಾಸಿಕ ಸ್ಮಾರಕವಾಗಿದೆ. ಗೋಡೆಯ ಶಾಸನಗಳಲ್ಲಿ ನಿಕಟವಾಗಿ ಜೈನ್ ಧರ್ಮ ಸಂಬಂಧಿಸಿದ ಸ್ವಸ್ತಿಕ್ ಗುರುತು ಏಳನೇ ತೀರ್ಥಂಕರ ಸುಪಾರ್ಶ್ವನಾಥರ ಗುರುತುಗಳನ್ನು ಗೋಡೆಯ ಮೇಲೆ ಕೆತ್ತನೆ ಮಾಡಲಾಗಿದೆ, ಚಂದ್ರಬಿಂಬ ಎಂಟನೇ ತೀರ್ಥಂಕರ ಚಂದ್ರನಾಥರ ಗುರುತು ಸಹ ಕಾಣಬಹುದು.

wayanad-photos-edakkal-caves-shareiq-1451883267-520227-jpg-destreviewimages-500x375-1451883267
ಎಡಕಲ್ ಗುಹೆಗಳು

ಹದಿನೆಂಟನೇ ಶತಮಾನದ ಕೊನೆಯಲ್ಲಿ ಅನೇಕ ಜೈನ ದೇವಾಲಯಗಳು ನಾಶವಾದವು, ಈ ಪಾಳುಬಿದ್ದ ದೇವಾಲಯಗಳು ಅವಶೇಷಗಳನ್ನು ಬಥೆರಿ, ಪುತ್ತಂಗಡಿ ಮತ್ತು ಪೂತಡಿಯಲ್ಲಿ ಕಾಣಬಹುದು.

jain2
ಪಾಳುಬಿದ್ದ ದೇವಾಲಯಗಳು

ವಲಸೆ ಹೋದ ಜೈನರು ಮೊದಲು ಕಬಿನಿ ನದಿಯ ತೀರದ ಪಣಮರಂನಲ್ಲಿ ನೆಲೆಸಿತು ಅಲ್ಲಿಂದ ಜೈನ್ ಗುಂಪುಗಳು ವಯನಾಡ್ನ ವಿವಿಧ ಭಾಗಗಳಿಗೆ ಹರಡಿತು. ಈ ಜೈನರು ಬೇಸಾಯಗಾರರಾಗಿದ್ದರು.

jain3
ಪಣಮರಂ

ಕನ್ನಡ ಮೂಲದ ಇತರ ಸ್ಥಳನಾಮಗಳು ಕೆಳಗೆ ನೀಡಲಾಗಿದೆ.

ಹನ್ನೆರೆಡು ಬೀದಿ
ಹೊಸೇನ್ಗಡಿ ( ಒಂದಯಂಗಡಿ,ಮನಂಥವಡಿ ).
ಬೆಣ್ಣಗೋಡೆ (ವೆಣ್ಣಿಯೋದೇ ),
ಫಲಗೊಂತು (ಪಲುಕುನ್ನು ),
ಮುತ್ತಂಗಡಿ (ಪೂತಂಗಡಿ ),
ದೊಡಪ್ಪನ ಕುಲಂ (ಧೊಟ್ಟಪ್ಪನ್ ಕುಲಂ)
ಬಾರದೋರ್ (ವರದೂರ್)
ಕೊಳಗಪ್ಪರ (ಅಂಬಲವಯಲ್)
ಕಣ್ಣಿಯ ಬೆಟ್ಟ (ಕಾಣಿಯಾಂಪೆಟ್ಟ )
ಕಲ್ಬೆಟ್ಟ (ಕಲ್ಪೆಟ್ಟ)
ಹಂಜುಕೊಂತು (ಅಂಜುಕುನ್ನು)
ಮೀನ್ ಅಂಗಡಿ
ಬಾಣಾಸುರ ( ಬ್ರಹ್ಮಗಿರಿ )
ಇನ್ನು ಅನೇಕ ಸ್ಥಳಗಳು ವಯನಾಡ್ನ ಹಾಗು ಕನ್ನಡ ,ಕರ್ನಾಟಕದ ನಂಟನ್ನು ಸಾರುತ್ತವೆ .