ಮಂಡ್ಯ ಜಿಲ್ಲೆಯಲ್ಲಿ 130 ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ.!

0
116

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಮಂಡ್ಯ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 130 ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಧಿಕೃತ ವೆಬ್ ಸೈಟ್ ಮೂಲಕ November 2, 2019 ರ ಒಳಗೆ ಅರ್ಜಿ ಸಲ್ಲಿಸಬೇಕು.

Also read: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 695 ಶಿಶಿಕ್ಷು (ಅಪ್ರೆಂಟಿಸ್) ತರಬೇತಿಗೆ ಅರ್ಜಿಗಳನ್ನು ಆಹ್ವಾನ.!

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು (Name Of The Posts): ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿ

ಸಂಸ್ಥೆ (Organisation): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ವಿದ್ಯಾರ್ಹತೆ (Educational Qualification): ಎಸ್.ಎಸ್‌.ಎಲ್‌.ಸಿ ವಿದ್ಯಾರ್ಹತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಕನಿಷ್ಠ 4ನೇ ತರಗತಿ ಮತ್ತು ಗರಿಷ್ಟ 9ನೇ ತರಗತಿ ತೇರ್ಗಡೆಯಾಗಿರಬೇಕು.

ವಯೋಮಿತಿ: ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 18 ರಿಂದ 35 ವರ್ಷ ವಯೋಮಿತಿಯೊಳಗಿನವರಾಗಿರಬೇಕು. ಅಂಗವಿಕಲ ಅಭ್ಯರ್ಥಿಗಳಿಗೆ ಮಾತ್ರ 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

ಆದ್ಯತೆ: ಆಸಿಡ್ ದಾಳಿಗೊಳಗಾದವರಿಗೆ, ಬಾಲ ನ್ಯಾಯ ಕಾಯ್ದೆಯಡಿ ಇಲಾಖೆಯ ಸಂಸ್ಥೆಗಳಲ್ಲಿರುವರಿಗೆ, ವಿಧವೆಯರಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿಗೆ ಮೊದಲ ಆದ್ಯತೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Application End Date): November 2, 2019

ಅರ್ಜಿ ಶುಲ್ಕ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ

ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಅಂಗನವಾಡಿಯ ಅಧಿಕೃತ ವೆಬ್‌ಸೈಟ್‌ https://anganwadirecruit.kar.nic.in/ ಗೆ ಹೋಗಿ ಅಧಿಸೂಚನೆಯನ್ನು ಓದಿಕೊಂಡು ನಂತರ ಹುದ್ದೆಗಳಿಗೆ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ನವೆಂಬರ್ 2,2019ರ ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ: https://anganwadirecruit.kar.nic.in/ ಕ್ಲಿಕ್ ಮಾಡಿ.