ಕರ್ನಾಟಕದಲ್ಲಿ ಕನ್ನಡವೇ ಅಧಿಕೃತ, ಕನ್ನಡ ಸ್ವಾಭಿಮಾನಕ್ಕೆ ಧಕ್ಕೆ ತರುವ ವಿಚಾರವನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ಅಮಿತ್ ಶಾಗೆ ಬಿಎಸ್‍ವೈ ಟಾಂಗ್.!

0
210

ಹಿಂದಿ ಒಂದೇ ದೇಶದ ಭಾಷೆ ಎಂದು ಹೇಳಿದ ಅಮಿತ್ ಶಾ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ನಿಷ್ಟುರವಾದ ಉತ್ತರವನ್ನು ಕೊಟ್ಟಿದ್ದು, ಕನ್ನಡ ಭಾಷೆಯ ಅಭಿಮಾನವನ್ನು ಎತ್ತಿಹಿಡಿದ್ದಾರೆ. ಭಾರತದಲ್ಲಿ ಹಲವಾರು ಭಾಷೆಗಳಿವೆ ಮತ್ತು ಅವುಗಳು ತಮ್ಮದೇ ಆದ ಮೌಲ್ಯವನ್ನು ಹೊಂದಿವೆ, ಆದರೆ ರಾಷ್ಟ್ರವು ಅದನ್ನು ಗುರುತಿಸುವ ಒಂದು ಭಾಷೆಯನ್ನು ಹೊಂದಿರುವುದು ಬಹಳ ಮುಖ್ಯ. ದೇಶವನ್ನು ಒಂದುಗೂಡಿಸುವ ಒಂದು ಭಾಷೆ ಇದ್ದರೆ, ಅದು ಹಿಂದಿ. ಎಂದು ಹೇಳಿದರು ಇದಕ್ಕೆ ಬಿ.ಎಸ್​​ ಯಡಿಯೂರಪ್ಪನವರು ಟ್ವೀಟ್ ಮೂಲಕ ಅಮಿತ್ ಶಾ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಕನ್ನಡ ಪ್ರಥಮ

ನಮ್ಮ ದೇಶದಲ್ಲಿ ಎಲ್ಲಾ ಅಧಿಕೃತ ಭಾಷೆಗಳು ಸಮಾನ. ಆದರೆ, ಕರ್ನಾಟಕದಲ್ಲಿ ಕನ್ನಡವೇ ಪ್ರಧಾನ ಭಾಷೆ. ಕನ್ನಡ ಭಾಷೆಯ ಪ್ರಾಮುಖ್ಯತೆಯಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಕನ್ನಡ ಮತ್ತು ರಾಜ್ಯ ಸಂಸ್ಕೃತಿಯನ್ನು ಉತ್ತೇಜಿಸಲು ನಾವು ಕಟಿಬದ್ಧರಾಗಿದ್ದೇವೆ ಎಂದು ಹಿಂದಿ ಹೇರಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊನೆಗೂ ಮೌನ ಮುರಿದಿದ್ದು ಕನ್ನಡ ಭಾಷಾ ಸ್ವಾಭಿಮಾನಕ್ಕೆ ಧಕ್ಕೆ ತರುವ ಯಾವ ಪ್ರಯತ್ನವನ್ನೂ ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಟಾಂಗ್ ನೀಡಿದ್ದಾರೆ.

Also read: ಮೈಸೂರು ಪಾಕ್ ವಿವಾದಕ್ಕೆ ಸ್ಪಷ್ಟತೆ ಇಲ್ಲದೆ ತಮಿಳುನಾಡು ಮೈಸೂರು ಪಾಕ್ ಜಿಐ ಟ್ಯಾಗ್ ಪಡೆದಿದೆ ಎಂದು ಸುಳ್ಳು ವಿಷಯವನ್ನು ಸುದ್ದಿ ಮಾಡಿದ ಕನ್ನಡ ಚಾನೆಲ್ಸ್.!

ಇತ್ತೇಚೆಗೆ ಹಿಂದಿ ದಿವಸ್​​ ಆಚರಣೆ ಮಾಡುವ ಕೇಂದ್ರ ಸರ್ಕಾರವೂ ಹಿಂದಿಯೇತರರ ಮೇಲೆ ಹೇರಿಕೆಗೆ ಮುಂದಾಗಿತ್ತು. ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಸೇರಿದಂತೆ ರಾಜ್ಯ ಬಿಜೆಪಿ ನಾಯಕರ, “ಒಂದು ದೇಶ, ಒಂದು ಭಾಷೆ” ಎಂಬ ಧ್ವನಿ ಎತ್ತಿದರು. ಅಲ್ಲದೇ ಇಡೀ ಜಗತ್ತು ಭಾರತವನ್ನು ಗುರುತಿಸಲು ಏಕಮಾತ್ರ ಭಾಷೆಯ ಅಗತ್ಯವಿದೆ. ಸದ್ಯಕ್ಕೀಗ ಇಡೀ ದೇಶವನ್ನು ಒಂದು ಭಾಷೆಯ ಅಡಿಯಲ್ಲಿ ಏಕತೆಗೊಳಿಸುವ ಶಕ್ತಿ ಹಿಂದಿ ಭಾಷೆಗೆ ಮಾತ್ರ ಇದೆ ಎಂದು ಟ್ವೀಟ್​ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಬೆನ್ನಲ್ಲೇ ಹಿಂದಿ ದಿವಸ್​​​ ರದ್ದಿಗೆ ಆಗ್ರಹಿಸಿ ಕನ್ನಡಿಗರು ಕರಾಳ ದಿನಾಚರಣೆ ಮಾಡಿದ್ದರು. ನಗರದ ಪುರಭವನದಿಂದ ಫ್ರೀಡಂ ಪಾರ್ಕ್‌ವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದರು. ಹಿಂದಿ ಬದಲಿಗೆ ಕನ್ನಡ ಭಾಷೆಯನ್ನು ಭಾರತ ಸರ್ಕಾರದ ಆಡಳಿತ ಭಾಷೆಯಾಗಿ ಮಾಡಬೇಕೆಂದು ಆಗ್ರಹಿಸಿ ಬೃಹತ್ ಹಕ್ಕೊತ್ತಾಯ ಸಮಾವೇಶ ನಡೆಸಿದರು.

Also read: ಟ್ರಾಫಿಕ್ ಪೋಲೀಸರ ಎಡವಟ್ಟು; ರೈತರ ಎತ್ತಿನ ಬಂಡಿಗೆ ವಿಮೆ ಮಾಡಿಸದ ವಾಹನವೆಂದು 1 ಸಾವಿರ ರೂ. ದಂಡ.!

ಈ ಎಲ್ಲಾ ಹಿನ್ನೆಲೆಯಲ್ಲಿ ಅಮಿತ್ ಶಾ ಅವರ ಒಂದು ದೇಶ, ಒಂದೇ ಭಾಷೆ ಹೇಳಿಕೆ ಕುರಿತು ದೇಶಾದ್ಯಂತ ಭಾರೀ ಚರ್ಚೆ ನಡೆಯುತ್ತಿದ್ದು, ದಕ್ಷಿಣ ಭಾರತದ ರಾಜಕೀಯ ನಾಯಕರು ಅವರ ಹೇಳಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿ, ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ಸಿಎಂ, ಭಾರತೀಯ ಸಂವಿಧಾನ ಅಂಗೀಕರಿಸಿದ ಭಾಷೆಗಳಲ್ಲಿ ಯಾವುದೇ ತಾರತಮ್ಯ ಸಲ್ಲದು. ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಅಧಿಕೃತ ಭಾಷೆ ಮತ್ತು ಕನ್ನಡ ಭಾಷಾ ಸ್ವಾಭಿಮಾನಕ್ಕೆ ಧಕ್ಕೆ ತರುವ ಯಾವ ಪ್ರಯತ್ನವನ್ನೂ ನಮ್ಮ ಸರ್ಕಾರ ಸಹಿಸುವುದಿಲ್ಲ. ನಮ್ಮ ದೇಶದಲ್ಲಿನ ಎಲ್ಲ ಅಧಿಕೃತ ಭಾಷೆಗಳು ಸಮಾನವಾಗಿವೆ. ಅದೇ ರೀತಿ ಕರ್ನಾಟಕದಲ್ಲಿಯೂ ಕನ್ನಡ ಪ್ರಮುಖ ಭಾಷೆಯಾಗಿದೆ. ಕನ್ನಡದ ಮಹತ್ವ ಹಾಗೂ ಅಸ್ಮಿತೆಯ ವಿಚಾರದಲ್ಲಿ ನಾವು ಎಂದಿಗೂ ರಾಜಿಯಾಗುವುದಿಲ್ಲ. ಅಲ್ಲದೆ, ಕನ್ನಡ ಹಾಗೂ ರಾಜ್ಯದ ಸಂಸ್ಕೃತಿಯನ್ನು ಬೆಳೆಸಲು ಕಟಿಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.