ನಾವು 2014ರ ಚುನಾವಣೆ ಗೆದಿದ್ದು ಸುಳ್ಳು ಭರವಸೇ ಕೊಟ್ಟೆ..!

0
312

ಭಾರತೀಯರಿಗೆಲ್ಲಾ ವಂಚಿಸಿತಾ ಭಾಜಪಾ..?

ಅಯ್ಯಯ್ಯೋ ಹೋಯ್ತು ಎಲ್ಲಾ ಹೋಯ್ತು.. ಬರೀ ಸುಳ್ಳು ಹೇಳಿ, ಮೋಸ ಮಾಡಿ ಅಧಿಕಾರಕ್ಕೆ ಬಂದ್ರಂತೆ ಬಿಜೆಪಿಯವರು.. ಮೊನ್ನೆಯಷ್ಟೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಸತ್ಯಾನಾದ್ರೂ ಆಗಿರ್ಲಿ, ಸುಳ್ಳಾದ್ರೂ ಆಗಿರಲಿ, ಆದ್ರೆ ಪ್ರತಿ ದಿನ ಯಾವುದಾದರೂ ಸುದ್ದಿಯನ್ನ ವೈರಲ್ ಮಾಡ್ತಿರಿ ಅಂತ ಹೇಳಿದ್ರು.. ಆದ್ರೀಗ ಮೋದಿ ಸರ್ಕಾರ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂತು ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

Also read: ಈ ಶಾಲೆಯಲ್ಲಿ ಹಿಂದೂ, ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ; ಹಸಿ ಮನಸ್ಸಿನ ಮಕ್ಕಳಿಗೆ ಶಿಕ್ಷಕರಿಂದಲೇ ಧರ್ಮ ಬೇಧದ ಪಾಠ..

ಮೋದಿ ಸರ್ಕಾರ ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂತು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಬಾಸಿವುಡ್ ಶೋ ಒಂದರಲ್ಲಿ ಹೇಳಿದ್ದಾರೆ. ನಟ ನಾನಾ ಪಾಟೇಕರ್ ನಿರೂಪಿಸಿದ ಮಾತುಕತೆಯೊಂದರಲ್ಲಿ ನಿತಿನ್ ಗಡ್ಕರಿ ‘ಕಳೆದ ಚುನಾವಣೆಯಲ್ಲಿ ನಮಗೆ ಅಧಿಕಾರ ಸಿಗುವುದು ಕಷ್ಟ ಎಂದು ಗೊತ್ತಾಗಿತ್ತು. ಹೀಗಾಗಿ ನಮ್ಮವರೇ ಸುಳ್ಳು ಆಶ್ವಾಸನೆಗಳನ್ನು ಕೊಡಲು ಸಲಹೆ ನೀಡಿದರು. ಅದರಂತೆ ನಾವು ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದೆವು. ಈಗ ಜನರು ಅದನ್ನು ನಮಗೆ ನೆನಪಿಸುತ್ತಿದ್ದಾರೆ. ಆದರೆ ನಮಗೆ ಅದನ್ನು ಪೂರೈಸಲು ಸಾಧ್ಯವಿಲ್ಲದ ಕಾರಣ ನಕ್ಕು ಮುಂದೆ ಹೋಗುತ್ತಿದ್ದೇವೆ’ ಎಂದಿದ್ದಾರೆ.

Also read: ದಸರಾ ದೀಪಾವಳಿ ಪ್ರಯಕ್ತ ಕೇವಲ 1 ರೂ. ಗೆ ಸ್ಮಾರ್ಟ್​​ಫೋನ್​..?

ಈ ಹೇಳಿಕೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ‘ನೀವು ಸರಿಯಾಗಿಯೇ ಹೇಳಿದ್ದೀರಿ ಗಡ್ಕರಿ ಜೀ’ ಎಂದು ರಾಹುಲ್ ಕೇಂದ್ರ ಸಚಿವರಿಗೆ ಶಹಬ್ಬಾಶ್ ಗಿರಿ ಕೊಟ್ಟಿದ್ದಾರೆ. ಆದರೆ ನಿತಿನ್ ಗಡ್ಕರಿ ತಮ್ಮ ಹೇಳಿಕೆ ಬಗ್ಗೆ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ. ಆದರೆ ನಾನಾ ಪಾಟೇಕರ್ ಜತೆಗೆ ನಡೆಸಿದ ಸಂದರ್ಶನದ ವಿಡಿಯೋ ಒಂದನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಕೇಂದ್ರ ಸರ್ಕಾರದ ವಿರುದ್ಧ ಲೇವಡಿ ಮಾಡಿದೆ. ನೀವು ಹೇಳಿದ್ದು ಸರಿ. ಜನರೂ ಕೂಡಾ ಇದೇ ರೀತಿ ಸುಳ್ಳು ಭರವಸೆಗಳ ಆಸೆಗೆ ಮೋಸ ಹೋದೆವು ಎಂದು ಈಗ ಪರಿತಪಿಸುತ್ತಿದ್ದಾರೆ ಎಂದು ರಾಹುಲ್ ಲೇವಡಿ ಮಾಡಿದ್ದಾರೆ.

Also read: ಹೆಣ್ಣು ಹುಟ್ಟಿದರೆ ಶಾಪವೆನ್ನುವ ಕಾಲದಲ್ಲಿ ಮಗಳ ನೆನಪಿಗೋಸ್ಕರ ಇಡಿ ಶಾಲೆಯ ಬಡ ಹೆಣ್ಣುಮಕ್ಕಳ ಫೀಸ್ ಕಟ್ಟಿದ ಸಾಧಾರಣ ಕ್ಲರ್ಕ್ ಬಸವರಾಜ್..

ಒಟ್ನಲ್ಲಿ 2019ರ ಲೋಕಸಭಾ ಚುನಾವಣೆ ಹತ್ರ ಬರ್ತಿದ್ದಂಗೆ ಭಾಜಪಾ ಒಂದಲ್ಲ ಒಂದು ವಿವಾದಾದ್ಮಕ ಸುದ್ದಿ ಹೇಳಿ ಜನರಲ್ಲಿ ಆತಂಕ ಮೂಡಿಸುತ್ತಿದ್ರೆ, ಇನ್ನೊಂದು ಕಡೆ ವಿರೋಧ ಪಕ್ಷಗಳಿಗೆ ಲಾಭ ಮಾಡಿಕೊಡುತ್ತಿದೆ.