ಫ್ಯಾಷನ್ ಟ್ರೆಂಡ್ ಎಂದು ಟೈಟ್ ಜೀನ್ಸ್ ಧರಿಸುವ ಮುನ್ನ ಎಚ್ಚರ; ಯಾಕೇ ಅಂತ ಮಿಸ್ ಮಾಡದೇ ಈ ಮಾಹಿತಿ ಓದಿ..!

0
347

ಇತ್ತೀಚಿಗೆ ಜನರು ಆರೋಗ್ಯಕ್ಕಿಂತ ಫ್ಯಾಷನ್-ಗೆ ಹೆಚ್ಚಿನ ಬೆಲೆ ಕೊಡುತ್ತಿರುವುದು ಕಂಡು ಬರುತ್ತಿದ್ದು. ಅದರಲ್ಲಿ ಈ ಜೀನ್ಸ್ ಪ್ಯಾಂಟ್ ಬಂದಾಗಿನಿಂದ ಜನರ ವೇಷವೇ ಬದಲಾಗಿದೆ. ಇಂತಹ ಉಡುಗೆಗಳಿಂದ ಎಷ್ಟೊಂದು ತೊಂದರೆಗಳು ಎನ್ನುವುದು ಅರಿಯದೇ ಜನರು ಎಲ್ಲದರಲ್ಲಿ ಜೀನ್ಸ್ ಹಾಕುತ್ತಾರೆ. ಅದರಲ್ಲಿ ಟೈಟ್​​ ಪ್ಯಾಂಟ್ ಧರಿಸಿ ಕಾರು ಡ್ರೈವ್​ ಮಾಡುವುದು ಹೆಚ್ಚು ಅಪಾಯಕರವಾಗಿದ್ದು, ಇದಕ್ಕೆ ಸಾಕ್ಷಿಯಾಗಿ ಆಟೋಮ್ಯಾಟಿಕ್​ ಗಿಯರ್​ ಹೊಂದಿರುವ ಕಾರ್ ಡ್ರೈವ್​ ಮಾಡಿದ ವ್ಯಕ್ತಿ ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದಾನೆ.


Also read: ನೀವು ಪೇಟಿಎಂ ಗ್ರಾಹಕರೇ? ಹಾಗಾದ್ರೆ ನಿಮಗೆ ಕಂಪೆನಿಯಿಂದ ಗಂಭೀರ ಎಚ್ಚರಿಕೆ; ಸ್ವಲ್ಪ ಯಾಮಾರಿದರೆ ನಿಮ್ಮ ಹಣ ಗುಳುಂ.!

ಏನಿದು ಘಟನೆ?

ಹೌದು ದೆಹಲಿ ಮೂಲದ ಸೌರಭ್​ ಶರ್ಮಾ ಎನ್ನುವ 30 ವರ್ಷದ ಉದ್ಯಮಿ ಸೌರಭ್ ಶರ್ಮಾ ಎನ್ನುವರು ತಮ್ಮ ಆಟೋಮ್ಯಾಟಿಕ್ ಕಾರನ್ನು ತೆಗೆದುಕೊಂಡು ದೆಹಲಿಯಿಂದ ಹೃಷಿಕೇಶದ ವರೆಗೆ ತಾವೇ ಡ್ರೈವ್ ಮಾಡಿಕೊಂಡು ಹೊರಟಿದ್ದರು. ಈ ವೇಳೆ ಅವರು ಧರಿಸಿದ್ದು ಮಾತ್ರ ಟೈಟ್ ಜೀನ್ಸ್ ಪ್ಯಾಂಟ್. ಸುಮಾರು 8 ಗಂಟೆಗಳ ಕಾಲ ಇಂತಹ ಪ್ಯಾಂಟ್ ಧರಿಸಿ ಕಾರು ಚಾಲನೆ ಮಾಡಿದ್ದರಿಂದಾಗಿ, ಹೃಷಿಕೇಷ ತಲುಪುತ್ತಿದ್ದಂತೆ ಕಾಲು ಊದಿಕೊಂಡಿದೆ. ಉದ್ಯಮಿ ಸೌರಭ್ ಶರ್ಮಾ ಟೈಟ್ ಜೀನ್ಸ್ ಫ್ಯಾಂಟ್ ಧರಿಸಿದ್ದರಿಂದಾಗಿ ಕಾಲು ಊದಿಕೊಂಡಿದ್ದಲ್ಲದೇ, ಕಣ್ಣು ಮಂಜಾಗಿ, ಸ್ವಲ್ಪ ಹೊತ್ತಿನಲ್ಲಿಯೇ ಪ್ರಜ್ಞೆ ಕೂಡ ತಪ್ಪಿದೆ. ಇಂತಹ ವ್ಯಕ್ತಿಯನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾರಿಹೋಕರು ಸಾಗಿಸಿ, ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಈ ಮೂಲಕ ಪ್ರಾಣಾಪಾಯಾದಿಂದ ಪಾರಾಗಿದ್ದಾರೆ.


Also read: ಧೂಮಪಾನಿ ವ್ಯಕ್ತಿಯ ಶ್ವಾಸಕೋಶ ನೋಡಿ ವೈದ್ಯೆರೆ ಶಾಕ್; ಈ ಭಯಾನಕ ಕಪ್ಪು ಶ್ವಾಸಕೋಶ ನೋಡಿದರೆ ಜೀವನದಲ್ಲಿ ಸಿಗರೇಟ್ ನೆನಪಿಗೆ ಬರೋದಿಲ್ಲ.!

ಈ ಕುರಿತಂತೆ ಮಾಹಿತಿ ನೀಡಿರುವ ಆಸ್ಪತ್ರೆಯ ವೈದ್ಯರು ಸೌರಭ್ ಅವರು, ಟೈಟ್ ಜೀನ್ಸ್ ಫ್ಯಾಂಟ್ ಧರಿಸಿದ್ದರಿಂದ ಕಾಲಿಗೂ ಯಾವುದೇ ಕೆಲಸವಿಲ್ಲದೇ ಕಡಿಮೆ ರಕ್ತದೊತ್ತಡ ಉಂಟಾಗಿ ಊತ ಬಂದಿದೆ. ಇದರಿಂದಾಗಿ ಕಿಡ್ನಿ ಸರಿಯಾಗಿ ಕೂಡ ಕೆಲಸ ಮಾಡಿಲ್ಲ. ಅವರನ್ನು 24 ಗಂಟೆಗಳ ಕಾಲ ಡಯಾಲಿಸಿಸ್ ಮಾಡಿಸಿ, ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಇದಕ್ಕೆ ಕಾರಣ, ಬಿಡುವಿಲ್ಲದೇ ನಿರಂತರವಾಗಿ ಡ್ರೈವಿಂಗ್ ಮಾಡಿರುವುದೇ ಕಾರಣ ಎಂದು ತಿಳಿಸಿದ್ದಾರೆ.
ಇಂತಹುದೇ ಒಂದು ಭೀಕರ ಘಟನೆ ಈ ಹಿಂದೆ ನಡೆದಿತ್ತು 35ರ ಹರೆಯದ ಮಹಿಳೆ ಧರಿಸಿದ್ದ ಟೈಟ್ ಜೀನ್ಸ್‌ನಿಂದಾಗಿ ಆಕೆಯ ಕಾಲಿನ ಮೀನಖಂಡಕ್ಕೆ ರಕ್ತ ಸಂಚಲನ ನಿಂತುಹೋಗಿದೆ. ಅಲ್ಲದೆ, ಎರಡು ನರಗಳು ಸಂಕುಚಿತಗೊಂಡು ಊದಿಕೊಂಡಿವೆ. ಇದರಿಂದ ನಿಲ್ಲಲೂ ಕೂಡ ಶಕ್ತಿಸಾಲದೆ ಆಕೆ ಕುಸಿದು ಬಿದ್ದಿದ್ದಾಳೆ.ಇನ್ನು ಆಕೆಯನ್ನು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಕಾಲುಗಳಲ್ಲಿ ಭಾರಿ ಊತ ಕಾಣಿಸಿಕೊಂಡಿತ್ತು. ಹೀಗಾಗಿ ಆಕೆಯ ಟೈಟ್ ಜೀನ್ಸ್ ಪ್ಯಾಂಟ್ ಅನ್ನು ಕಳಚಿ ತೆಗೆಯಲೂ ವೈದ್ಯರಿಗೆ ಸಾಧ್ಯವಾಗಲಿಲ್ಲವಂತೆ. ಕೊನೆಗೆ ಅದನ್ನು ಕತ್ತರಿಸಿ ಹೊರಗೆ ತೆಗೆದಿದ್ದಾರೆ.


Also read: ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಬ್ರ್ಯಾಂಡೆಂಡ್ ಹೆಸರಿನಲ್ಲಿ ಕಡಿಮೆ ಬೆಲೆಗೆ ಸಿಗುವ ಡೂಪ್ಲಿಕೇಟ್ ವಸ್ತುಗಳನ್ನು ಬಳಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.!

ಜೀನ್ಸ್ ಧರಿಸುವುದರಿಂದ ರಕ್ತನಾಳಗಳು ಊದಿಕೊಳ್ಳುತ್ತವೆ. ಇದರಿಂದ ಕಾಲು ದಪ್ಪವಾಗುತ್ತದ್ದೆ. ಇದು ಗುಣಪಡಿಸಲಾಗದ ರೋಗ, ಟೈಟ್ ಜೀನ್ಸ್ ಧರಿಸುವುದನ್ನು ಬಿಟ್ಟರೆ ಈ ಸಮಸ್ಯೆಯನ್ನು ತಪ್ಪಿಸಬಹುದು. ಟೈಟ್ ಜೀನ್ಸ್ ಧರಿಸಿದರೆ ಕಾಲಿನ ಸೆಳೆತದ ಸಮಸ್ಯೆಗಳೂ, ಹೃದಯದ ತೊಂದರೆಗಳು ಹೆಚ್ಚಾಗಬಹುದು. ಏಕೆಂದರೆ ಅದು ರಕ್ತದ ಹರಿವನ್ನು ನಿಲ್ಲಿಸುತ್ತದೆ. ಬಿಗಿಯಾದ ಜೀನ್ಸ್ ಧರಿಸುವ ಸಮಸ್ಯೆ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು. ಇದು ಗರ್ಭಾಶಯದ ಸಂಕೋಚನ ಮತ್ತು ಬಂಜೆತನದ ಅಪಾಯವನ್ನು ಹೆಚ್ಚಿಸುತ್ತದೆ. ಬಿಗಿಯಾದ ಜೀನ್ಸ್ ಧರಿಸುವುದರಿಂದ ಹೊಟ್ಟೆಗೆ ಹೆಚ್ಚಿನ ಒತ್ತಡ ಉಂಟಾಗುತ್ತದೆ, ಇದು ಭವಿಷ್ಯದಲ್ಲಿ ದೊಡ್ಡ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.