ದ್ವಿಚಕ್ರ ಸವಾರರಿಗೆ ಮತ್ತೊಂದು ಬಿಗ್ ಶಾಕ್; ಇನ್ಮುಂದೆ ಅರ್ಧ ಹೆಲ್ಮೆಟ್‌ ಧರಿಸಿದರೂ ಬೀಳುತ್ತೆ ದಂಡ.!

0
509

ಬೈಕ್ ಸವಾರರಿಗೆ ತಲೆನೋವು ತಂದ ಹೆಲ್ಮಟ್ ಪದ್ಧತಿ ದಿನಕ್ಕೊಂದು ಹೊಸ ನಿಯಮ ಜಾರಿಗೆ ಬರುತ್ತಿದ್ದು ಜನರನ್ನು ಕೆರಳಿಸಿದೆ. ಏಕೆಂದರೆ ಇಷ್ಟು ದಿನ ಬರಿ ಹೆಲ್ಮಟ್ ದರಿಸಿದರೆ ಸಾಕು ಎನ್ನುತ್ತಿದ್ದ ಪೊಲೀಸರು ಈಗ ಅರ್ಧ ಹೆಲ್ಮಟ್ ದರಿಸಿದರೆ ಅದಕ್ಕೆ ಮಾನ್ಯತೆ ಇಲ್ಲ ಎಂದು ದಂಡವನ್ನು ಹಾಕುತ್ತಿದ್ದಾರೆ. ಇದೊಂದು ಒಳ್ಳೆಯ ನಿಯಮವಾದರೆ ಕೆಲವು ಇದನ್ನೇ ಮಾನದಂಡವಾಗಿಟ್ಟುಕೊಂಡು ಪೊಲೀಸರು ಸುಲಿಗೆ ಮಾಡುತ್ತಿದ್ದಾರೆ. ದಂಡ ಕಟ್ಟಲು ಹಣವಿಲ್ಲ ಎಂದರೆ ದೌರ್ಜನ್ಯ ತೋರುತ್ತಾರೆ. ಇಂತಹ ಪೊಲೀಸರು ಮೊದಲು ಸರಿಯಾದ ಹೆಲ್ಮಟ್ ದರಿಸಲಿ ಹೆಚ್ಚಾನು ಹೆಚ್ಚು ಅರ್ಧ ಹೆಲ್ಮಟ್ ದರಿಸುವುದು ಪೊಲೀಸರೆ ಎನ್ನುವುದು ಎಲ್ಲರ ಅಭಿಪ್ರಾಯವಾಗಿದೆ.

ಅರ್ಧ ಹೆಲ್ಮಟ್ ದರಿಸಿದರೆ ದಂಡ?

ಹೌದು ಮೋಟಾರು ವಾಹನ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಿದ್ದು. ಈ ಕಾಯ್ದೆಯಂತೆ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ವಾಹನ ಸವಾರರು ಮೂರು ಪಟ್ಟು ದಂಡ ಕಟ್ಟಬೇಕಾಗುತ್ತದೆ. ಸ್ಟೈಲ್‌ ಆಗಿ ಟೋಪಿ ಮಾದರಿ ಹೆಲ್ಮೆಟ್‌ ಧರಿಸಿ ಹೋಗುವಾಗ ಸ್ವಲ್ಪ ಯೋಚನೆ ಮಾಡಬೇಕಾಗುತ್ತೆ ಏಕೆಂದರೆ ಇನ್ಮುಂದೆ ಸಂಚಾರ ವಿಭಾಗದ ಪೊಲೀಸರಿಂದ ದಂಡ ಪ್ರಯೋಗವಾಗಲಿದೆ. ತಲೆಗೆ ಪೂರ್ತಿ ಮುಚ್ಚುವ ಹೆಲ್ಮೆಟ್‌ ಧರಿಸದೆ ಕೆಲವರು ಅರ್ಧ ತಲೆಗೆ ಮಾತ್ರ ಹೆಲ್ಮೆಟ್‌ ಹಾಕುತ್ತಿದ್ದಾರೆ. ಅದರಲ್ಲೂ ಕಾನೂನು ಪಾಲನೆ ಮಾಡಬೇಕಾದ ಪೊಲೀಸರೇ ಈ ರೀತಿಯ ಹೆಲ್ಮೆಟ್‌ ಧರಿಸುತ್ತಿರುವುದು ಕಂಡು ಬಂದಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಅಧಿಕಾರಿಗಳಿಗೆ ಸಂಚಾರ ವಿಭಾಗದ ಜಂಟಿ ಆಯುಕ್ತರು ಮೌಖಿಕ ಆದೇಶ ನೀಡಿದ್ದಾರೆ.

ಟೋಪಿ ಮಾದರಿಯ ಹೆಲ್ಮೆಟ್‌ ಧರಿಸುವವರಿಗೆ ದಂಡ ವಿಧಿಸಲು ಕಾನೂನು ಪ್ರಕಾರ ಅವಕಾಶವಿದೆ. ಈ ಸಂಬಂಧ ಹಿಂದೆಯೂ ಸಹ ಆದೇಶವಿತ್ತು. ಆ ಹಳೆಯ ಆದೇಶವನ್ನು ಮತ್ತೆ ಜಾರಿಗೆ ತರುವಂತೆ ಜಂಟಿ ಆಯುಕ್ತರು ಸೂಚಿಸಿರುವುದಾಗಿ ಪಶ್ಚಿಮ ವಿಭಾಗದ (ಸಂಚಾರ) ಡಿಸಿಪಿ ಡಾ.ಸೌಮ್ಯಲತಾ ತಿಳಿಸಿದ್ದು ಹೆಲ್ಮೆಟ್‌ ಅಂದರೆ ತಲೆಗೆ ರಕ್ಷ ಕವಚವಾಗಬೇಕು. ಆದರೆ ಕೆಲವರು ಆ ಪದ ಅರ್ಥವೇ ಬದಲಾಗುವಂತೆ ಮಾಡಿದ್ದಾರೆ. ಅರ್ಧ ಶಿರ ಮುಚ್ಚುವಂತೆ ಧರಿಸಿದರೆ ಅಪಾಯ ತಪ್ಪಿದ್ದಲ್ಲ. ಹೀಗಾಗಿ ಹೆಲ್ಮೆಟ್‌ ಧಾರಣೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಜಂಟಿ ಆಯುಕ್ತರರು ಆದೇಶಿಸಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಕೆ.ಪಿ.ಜಗದೀಶ್‌ ಹೇಳಿದರು.

ನಾಲ್ಕು ವರ್ಷದ ಮಕ್ಕಳಿಗೆ ಹೆಲ್ಮಟ್ ಕಡ್ಡಾಯ?

ಇದೇ ವರ್ಷ ಜನವರಿ 1 ರಿಂದ ಜೂನ್ ಅಂತ್ಯಕ್ಕೆ ನಗರದಲ್ಲಿ ಉಂಟಾದ ಬೈಕ್ ಅಪಘಾತಗಳಲ್ಲಿ 105 ಮಂದಿ ಬೈಕ್ ಸವಾರರು ಮೃತಪಟ್ಟಿದ್ದಾರೆ. 667 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೀಗಾಗಿ ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ಹೆಲ್ಮೆಟ್ ಕಡ್ಡಾಯಗೊಳಿಸಿದ್ದರು. ಈಗ ಟೋಪಿಯಂತಹ ಅಥವಾ ಅರ್ಧ ಹೆಲ್ಮೆಟ್ ಧರಿಸಿದರೆ ಫೈನ್ ಹಾಕಲು ಸಂಚಾರಿ ಪೊಲೀಸ್ ಆಯುಕ್ತ ಡಾ. ಬಿ.ಆರ್ ರವಿಕಾಂತೇಗೌಡ ಸೂಚಿಸಿದ್ದಾರೆ ಎನ್ನಲಾಗಿದೆ. ಅದರಂತೆ 4 ವರ್ಷದ ನಂತರದ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಈ ಟೋಪಿಯಂತಹ ಹೆಲ್ಮೆಟ್ ಅನ್ನು ಹೆಚ್ಚಾಗಿ ಪೊಲೀಸರೇ ಹಾಕಿಕೊಳ್ಳುತ್ತಾರೆ. ಹೀಗೆ ಹಾಕಿಕೊಳ್ಳುವವರಿಗೆ ದಂಡ ವಿಧಿಸಲು ಕಾನೂನಿನಲ್ಲಿಯೂ ಅವಕಾಶವಿದೆ. ಈ ನಿಯಮ ಸೆಪ್ಟೆಂಬರ್ 1 ಅಥವಾ ಗಣೇಶ ಹಬ್ಬದಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಈ ನಿಯಮಕ್ಕೆ ವಾಹನ ಸವಾರರಿಂದ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

Also read: ಬಂಧನದ ಭೀತಿಯಲ್ಲಿರುವ ಡಿಕೆಶಿ, ದೆಹಲಿಯಲ್ಲಿ ಸಿಕ್ಕ ಹಣ ನನ್ನದೆಂದು ಒಪ್ಪಿಕೊಂಡು ಬಿಚ್ಚಿಟ್ಟ ಸತ್ಯವೇನು??