ವಾರ-ಭವಿಷ್ಯ: 01 ಮಾರ್ಚ್ ರಿಂದ 07 ಮಾರ್ಚ್, ರವರೆಗೆ, 2020!!

0
1089

Astrology in kannada | kannada news ವಾರ-ಭವಿಷ್ಯ: 01 ಮಾರ್ಚ್ ರಿಂದ 07 ಮಾರ್ಚ್, ರವರೆಗೆ, 2020!!

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು
ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಾರ-ಭವಿಷ್ಯ: 01 ಮಾರ್ಚ್ ರಿಂದ 07 ಮಾರ್ಚ್, ರವರೆಗೆ, 2020!!

ಮೇಷ:

ದಿನ ಭವಿಷ್ಯ

ಮೇಷ:- ಶ್ರಮಕ್ಕೆ ತಕ್ಕ ಪ್ರತಿಫಲ ಯಾವಾಗಲೂ ಇದ್ದೇ ಇರುತ್ತದೆ. ಅಂತೆಯೇ ನಿಮ್ಮ ಶ್ರಮಕ್ಕೆ ಆದಾಯದ ಮೂಲದಲ್ಲಿ ಹೆಚ್ಚಳ ಕಂಡುಬರುವುದು. ಆದಾಯದ ಮುಕ್ಕಾಲು ಭಾಗವನ್ನು ಪರೋಪಕಾರಕ್ಕೆ ಮೀಸಲಾಗಿಡಲು ನಿರ್ಧರಿಸುವಿರಿ. ಬಂಧು ಬಾಂಧವರೊಂದಿಗಿನ ಸಂಬಂಧ ಗಟ್ಟಿಗೊಳ್ಳುವುದು. ಕೌಟುಂಬಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯುವುದರಿಂದ ಕುಟುಂಬದಲ್ಲಿ ನೆಮ್ಮದಿ, ಸಂತೋಷ ನೆಲೆಸುವವು. ವಿಸ್ತಾರಗೊಳ್ಳುತ್ತಿರುವ ನಿಮ್ಮ ವ್ಯವಹಾರಗಳಿಗೆ ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ದೊರೆಯುವುದು. ತಾಯಿಯ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವುದು ಒಳ್ಳೆಯದು.

ವೃಷಭ:

ದಿನ ಭವಿಷ್ಯ

ವೃಷಭ:- ನಿಮ್ಮ ಮಿತಿ ಮೀರಿದ ಆಲೋಚನೆಗಳು ನಿಮ್ಮ ಕೆಲಸ ಕಾರ್ಯದಲ್ಲಿ ಅಪಯಶಸ್ಸು ತಂದುಕೊಡುವ ಸಾಧ್ಯತೆ ಇದೆ. ಹಾಗಾಗಿ ವಸ್ತುಸ್ಥಿತಿಯ ಬಗ್ಗೆ ಚಿಂತಿಸುವುದು ಒಳ್ಳೆಯದು. ಗುರುವಿನ ಅನುಗ್ರಹ ಪಡೆಯುವುದು ಅನಿವಾರ್ಯವಾಗುವುದು. ಸಜ್ಜನರ ಸಂಪರ್ಕ ನಿಮ್ಮ ಮನಸ್ಸಿನ ತಳಮಳವನ್ನು ಕಡಿಮೆ ಮಾಡುವುದು. ಸಾಂಸಾರಿಕ ಜೀವನದ ಮಧುರತೆಯನ್ನು ಅನುಭವಿಸಲು ವಿಫಲರಾಗುವಿರಿ. ಗೌರೀಪತಿ ಪರಮೇಶ್ವರನನ್ನು ಅನನ್ಯವಾಗಿ ಪ್ರಾರ್ಥಿಸಿ. ವಿವಾಹ ಯೋಗ್ಯ ವಧು, ವರರಿಗೆ ಉತ್ತಮ ಸಂಬಂಧಗಳು ಬರುವ ಸಾಧ್ಯತೆ ಇದೆ.

ಮಿಥುನ:

ದಿನ ಭವಿಷ್ಯ

ಮಿಥುನ:- ನಿಮ್ಮ ಪ್ರಗತಿಯನ್ನು ಸಹಿಸದ ಕೆಲವರು ನಿಮ್ಮನ್ನು ಪ್ರಚೋದಿಸಿ ಬಾಯಿಂದ ನಿಷ್ಠುರ ಮಾತುಗಳು ಬರುವಂತೆ ಮಾಡುವರು. ದ್ವಿತೀಯ ವಾಕ್‌ ಸ್ಥಾನದ ರಾಹು ಸಜ್ಜನರಲ್ಲಿ ದ್ವೇಷ ಹುಟ್ಟುವಂತೆ ಮಾಡುವನು. ಮಾತನಾಡುವಾಗ ಸಮಯ, ಸಂದರ್ಭದ ಅರಿವಿರಲಿ. ವಾಹನಗಳ ಬಿಡಿ ಭಾಗಗಳ ಮಾರಾಟದಿಂದ ಹೆಚ್ಚಿನ ಲಾಭವಿದೆ. ನಿರುದ್ಯೋಗಿಗಳಿಗೆ ಉತ್ತಮ ನೌಕರಿ ದೊರೆಯುವ ಸಾಧ್ಯತೆ ಇದೆ. ಲೇವಾದೇವಿ ವ್ಯವಹಾರದಲ್ಲಿ ತುಸು ಎಚ್ಚರಿಕೆ ವಹಿಸುವುದು ಒಳ್ಳೆಯದು. ಅಪರಿಚಿತರೊಂದಿಗೆ ಅಂತರಂಗದ ವಿಷಯಗಳನ್ನು ಬಹಿರಂಗಗೊಳಿಸದಿರಿ. ಆಂಜನೇಯ ಸ್ತೋತ್ರ ಪಠಿಸಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕಟಕ:

ದಿನ ಭವಿಷ್ಯ

ಕಟಕ:- ಕೆಲವು ವಿಷಯಗಳಲ್ಲಿ ಅತಿ ಬುದ್ಧಿವಂತಿಕೆ ತೋರದೆ ಸಹಜ ಸ್ಥಿತಿಯೊಂದಿಗೆ ಹೊಂದಿಕೊಂಡು ಹೋಗುವುದು ಬುದ್ಧಿವಂತರ ಲಕ್ಷ ಣ. ಬರಲಿರುವ ಉತ್ತಮ ಅವಕಾಶಗಳನ್ನು ನಿಮ್ಮ ಲಾಭಕ್ಕೆ ಉಪಯೋಗಿಸಿಕೊಳ್ಳವುದನ್ನು ಕಲಿಯಿರಿ. ಆಸ್ತಿ ಹಂಚಿಕೆಯ ಬಗ್ಗೆ ಭಾರಿ ಚರ್ಚೆಗಳು ನಡೆದರೂ ಯಾವುದೇ ದೃಢ ನಿರ್ಧಾರಕ್ಕೆ ಬರಲಾಗುವುದಿಲ್ಲ. ಹಿರಿಯರ ಸಲಹೆಗಳನ್ನು ಸ್ವೀಕರಿಸಿ. ಹಿರಿಯರ ಸಲಹೆಗಳು ಅನುಭವದಿಂದ ಕೂಡಿರುತ್ತದೆ ಎಂಬುದನ್ನು ಮರೆಯದಿರಿ. ಸಂಗಾತಿಯೊಂದಿಗೆ ಚಿಕ್ಕ ಚಿಕ್ಕ ವಿಷಯಗಳಿಗೂ ರೇಗುವುದು ಉತ್ತಮವಲ್ಲ. ತಾಳ್ಮೆ ಇರಲಿ.

ಸಿಂಹ:

ದಿನ ಭವಿಷ್ಯ

ಸಿಂಹ:- ಭಿನ್ನಾಭಿಪ್ರಾಯ ಮೂಡಿದ್ದ ಕುಟುಂಬದಲ್ಲಿ ಏಕಾಭಿಪ್ರಾಯ ವ್ಯಕ್ತವಾಗಲಿದೆ. ಯಾವುದೇ ಸನ್ನಿವೇಶಕ್ಕೆ ಅಂಜದೆ ಗಟ್ಟಿ ನಿರ್ಧಾರ ತೆಗೆದುಕೊಂಡಲ್ಲಿ ಅದು ನಿಮ್ಮ ಜೀವನದ ಗತಿಯನ್ನೇ ಬದಲಾಯಿಸುವುದು. ಪ್ರೇಮಿಗಳು ಒಂದು ನಿರ್ದಿಷ್ಟ ನಿರ್ಧಾರಕ್ಕೆ ಬರದೇ ಇದ್ದಲ್ಲಿ ತೊಂದರೆ ಆಗುವುದು. ವ್ಯವಹಾರದಲ್ಲಿ ಪಾಲುದಾರರು ನಿಮ್ಮ ಅಭಿಪ್ರಾಯಕ್ಕೆ ಬೆಂಬಲ ಸೂಚಿಸುವರು. ಹಿರಿಯರ ಅಣತಿಯಂತೆ ನಡೆದುಕೊಳ್ಳುವುದು ಉತ್ತಮ. ಅರ್ಥವಿಲ್ಲದ ತಿರುಗಾಟಕ್ಕೆ ಪೂರ್ಣ ವಿರಾಮ ಹಾಕುವುದು ಒಳ್ಳೆಯದು. ಇಲ್ಲದೆ ಇದ್ದಲ್ಲಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ನೀವು ಹೋಗುತ್ತಿರುವ ದಾರಿ ಸರಿಯಾಗಿದ್ದು ಅದರ ಬಗ್ಗೆ ಗೊಂದಲ ಬೇಡ. ಬೇರೆಯವರ ಮಾತುಗಳು ನಿಮ್ಮ ದಾರಿಯನ್ನು ತಪ್ಪಿಸಬಹುದು. ನಿಮ್ಮ ಈ ದೃಢ ನಿರ್ಧಾರ ಎಲ್ಲರಿಗೂ ಸಂತಸ ತರಲಿದೆ. ಅಷ್ಟೇ ಅಲ್ಲದೆ ಸಾಮಾಜಿಕ ಗೌರವ ಹೆಚ್ಚಿಸಲಿದೆ. ಮನೆಯಲ್ಲಿ ಮೇಲಿಂದ ಮೇಲೆ ಶುಭ ಕಾರ್ಯಗಳು ಜರುಗುವ ಸಾಧ್ಯತೆ ಇದೆ. ಮೇಲಿಂದ ಮೇಲೆ ತೀರ್ಥಕ್ಷೇತ್ರಗಳ ದರ್ಶನ ಭಾಗ್ಯ ನಿಮ್ಮದಾಗಲಿದೆ. ಅತಿಥಿಗಳ ವಿಶೇಷಾಗಮನದಿಂದ ಸಂತಸ ಪಡುವಿರಿ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರುವರು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ತುಲಾ:

ದಿನ ಭವಿಷ್ಯ

ತುಲಾ:- ಬಿಡುವಿಲ್ಲದ ಕಾರ್ಯಗಳಿಂದಾಗಿ ದೇಹಕ್ಕೆ ವಿಶ್ರಾಂತಿ ಲಭಿಸದೆ ಹೋಗುವ ಸಾಧ್ಯತೆ ಇದೆ. ಈ ಬಗ್ಗೆ ಸಾಕಷ್ಟು ಎಚ್ಚರಿಕೆಯಿರಲಿ. ಸಮಾಜದ ಜನರಿಂದ ನಿರಂತರ ಟೀಕೆಗಳನ್ನು ಎದುರಿಸಬೇಕಾಗುವುದು. ಚಿಕ್ಕ ಮಕ್ಕಳ ಅನಾರೋಗ್ಯ ನಿಮ್ಮನ್ನು ಚಿಂತೆಗೆ ಈಡು ಮಾಡುವುದು. ದುಡಿಮೆಗೆ ತಕ್ಕ ಆದಾಯ ದೊರೆಯಲಿದೆ. ಮಿತಿ ಮೀರುತ್ತಿರುವ ಖರ್ಚಿಗೊಂದು ಕಡಿವಾಣ ಹಾಕುವುದು ಒಳ್ಳೆಯದು. ವಿರೋಧಿಗಳ ಮಾತನ್ನು ಸಾರಾಸಗಟಾಗಿ ವಿರೋಧಿಸುವುದೇ ಉತ್ತಮ. ವಾಹನದಲ್ಲಿ ಸಂಚರಿಸುವಾಗ ಲಕ್ಷ್ಮೀನಾರಸಿಂಹ ಸ್ತೋತ್ರವನ್ನು ಪಠಿಸಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಇದ್ದದ್ದನ್ನು ಇದ್ದಂತೆ ಹೇಳಿದರೆ ಎದೆಗೆ ಬಂದು ಒದ್ದ ಎನ್ನುವಂತೆ ನೀವು ಹೇಳುವ ವಿಚಾರ ಸತ್ಯವಾಗಿಯೇ ಇದ್ದರೂ ಅದನ್ನು ಸ್ವೀಕರಿಸುವ ಜನರಿಗೆ ಅಪಥ್ಯವಾಗುವುದು. ಇದರಿಂದ ನಿಮಗೆ ವಿರೋಧಿಗಳು ಹೆಚ್ಚಾಗುವ ಸಂಭವವಿದೆ. ಮನೆಯಲ್ಲಿ ಮಕ್ಕಳ ಮತ್ತು ಕುಟುಂಬ ಸದಸ್ಯರ ನಡಾವಳಿ ನಿಮಗೆ ಬೇಸರ ತರಿಸುವ ಸಾಧ್ಯತೆ ಇದೆ. ಹಾಗಾಗಿ ಮಾತಿನ ಮೊನಚು ಮತ್ತು ವ್ಯಂಗ್ಯಭರಿತ ಮಾತುಗಳಿಂದ ದೂರವಿರಿ. ಆರ್ಥಿಕ ಸ್ಥಿತಿ ಉತ್ತಮವಾಗಲು ಇನ್ನೂ ಸಮಯ ಬೇಕು. ಹಾಸಿಗೆ ಇದ್ದಷ್ಟು ಕಾಲು ಚಾಚಿ.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ವ್ಯಾಪಾರ ವ್ಯವಹಾರದಲ್ಲಿ ಹಣಕಾಸಿನ ಹರಿವು ಹೆಚ್ಚಲಿದೆ. ಇದರಿಂದ ನಿಮ್ಮ ಮನಸ್ಸು ಹಕ್ಕಿಯಂತೆ ಹಾರಾಡುವುದು ಮತ್ತು ನೂತನ ಕಾರ್ಯಭಾರವನ್ನು ವಹಿಸಿಕೊಳ್ಳಲು ಹುಮ್ಮಸ್ಸು ಮೂಡುವುದು. ಸ್ನೇಹಿತರ ಒತ್ತಾಯಕ್ಕೆಂದು ಮೋಜಿನ ಕೂಟದಲ್ಲಿ ಭಾಗವಹಿಸದಿರಿ. ಆಹಾರ ವ್ಯತ್ಯಯದಿಂದ ಉದರ ಸಂಬಂಧಿ ತೊಂದರೆಗಳು ಬಾಧಿಸುವ ಸಾಧ್ಯತೆ ಇದೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಪ್ರಗತಿ ತೋರುವರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಸಂಬಳ ಹೆಚ್ಚಾಗುವ ಸೂಚನೆಗಳು ದೊರೆಯುವವು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಚಂಚಲ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದೇ ದೊಡ್ಡ ಸವಾಲಿನ ವಿಷಯವಾಗುವುದು. ಈ ಚಿತ್ತ ಚಾಂಚಲ್ಯದಿಂದ ಮಾಡುವ ಕೆಲಸಗಳಲ್ಲಿ ತಪ್ಪು ನುಸುಳಿ ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವಿರಿ. ಹೋಟೆಲ್‌ ಉದ್ದಿಮೆದಾರರಿಗೆ ಅನುಕೂಲವಿದೆ. ಸಂಗಾತಿಯ ವಿಚಾರಗಳಲ್ಲಿ ತಪ್ಪು ಗ್ರಹಿಕೆಯಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ಸ್ನೇಹಿತರು ಮತ್ತು ಹಿರಿಯರ ಸಲಹೆಯನ್ನು ಸ್ವೀಕರಿಸಿ ಅದರಂತೆ ನಡೆದಲ್ಲಿ ಚೇತೋಹಾರಿ ದಿನಗಳನ್ನು ಕಾಣಬಹುದಾಗಿದೆ. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುವುದು.

ಕುಂಭ:

ದಿನ ಭವಿಷ್ಯ

ಕುಂಭ:- ಬಿಡುವಿಲ್ಲದ ಕಾರ್ಯಗಳು ನಿಮ್ಮನ್ನು ಬೆಂಬತ್ತಿ ಬರುವುದು. ಅಲ್ಲದೆ ನಿಮ್ಮ ವೃತ್ತಿ ಕೌಶಲ್ಯಕ್ಕೆ ಸವಾಲನ್ನು ಒಡ್ಡುವವು. ಹಣಕಾಸಿನ ವಿಷಯದಲ್ಲಿ ಬ್ಯಾಂಕ್‌ಗಳು ಧನಾತ್ಮಕ ಭರವಸೆ ನೀಡುವುದರಿಂದ ಕಾರ್ಯಗಳು ಯಶಸ್ಸಿನತ್ತ ಸಾಗುತ್ತವೆ. ಇದಕ್ಕೆ ನಿಮ್ಮ ಸಹಪಾಠಿಗಳ ಮತ್ತು ಮೇಲಧಿಕಾರಿಗಳ ಬೆಂಬಲ ದೊರೆಯುವುದರಿಂದ ನಿಮಗೆ ಹೆಚ್ಚು ಸಂತಸವಾಗುವುದು. ನಿಮ್ಮ ಕೆಲಸ ಕಾರ್ಯಗಳ ಜೊತೆಗೆ ಕೌಟುಂಬಿಕ ಜೀವನದ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ಪ್ರಸಂಗ ಎದುರಾಗುವುದು. ಗುರುವಿನ ಶುಭ ಆಶೀರ್ವಾದದಿಂದ ಎಲ್ಲವನ್ನು ನಿಭಾಯಿಸುವಿರಿ.

ಮೀನ:

ದಿನ ಭವಿಷ್ಯ

ಮೀನ:- ಬಂಧು, ಬಾಂಧವರೊಂದಿಗೆ ಸೌಹಾರ್ದತೆಯಿಂದ ವರ್ತಿಸಿ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗುವ ಸಂಭವವಿದೆ. ಈ ಬಗ್ಗೆ ಮನೆ ವೈದ್ಯರ ಸಲಹೆ ಪಡೆಯಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು. ಕೆಟ್ಟ ಕನಸುಗಳು ಬೀಳುವ ಮೂಲಕ ರಾತ್ರಿಯ ನಿರ್ಧಾರಕ್ಕೆ ಸಂಚಕಾರ ಬರುವ ಸಾಧ್ಯತೆ ಇದೆ. ಬರಹಗಾರರಿಗೆ ಸರ್ಕಾರದಿಂದ ಸನ್ಮಾನ ಹಾಗೂ ಹೆಚ್ಚಿನ ಸೌಲಭ್ಯಗಳು ದೊರೆಯಲಿವೆ. ಹಣಕಾಸಿನ ವಿಷಯದಲ್ಲಿ ಜಾಗ್ರತೆಯಿಂದ ಇರಿ. ಮಾತಿನಲ್ಲಿ ಸೌಜನ್ಯವನ್ನು ರೂಢಿಸಿಕೊಂಡಲ್ಲಿ ಜಗತ್ತೇ ನಿಮ್ಮನ್ನು ಪ್ರೀತಿಸುವುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಾರ-ಭವಿಷ್ಯ: 01 ಮಾರ್ಚ್ ರಿಂದ 07 ಮಾರ್ಚ್, ರವರೆಗೆ, 2020!!