ವಾರ-ಭವಿಷ್ಯ: 10 ಮಾರ್ಚ್ ರಿಂದ 16 ಮಾರ್ಚ್ ರವರೆಗೆ, 2019!!

0
351

Astrology in kannada | kannada news ವಾರ-ಭವಿಷ್ಯ: 10 ಮಾರ್ಚ್ ರಿಂದ 16 ಮಾರ್ಚ್ ರವರೆಗೆ, 2019!!

ವಾರ-ಭವಿಷ್ಯ: 10 ಮಾರ್ಚ್ ರಿಂದ 16 ಮಾರ್ಚ್ ರವರೆಗೆ, 2019!!

ಮೇಷ:

ದಿನ ಭವಿಷ್ಯ

ಮೇಷ:- ಮನಸ್ಸಿನ ಕಾಮನೆಗಳು ಪೂರ್ಣಗೊಳ್ಳುವವು. ಅಂದುಕೊಂಡಿದ್ದನ್ನು ಸಾಧಿಸುವಿರಿ. ಕುಟುಂಬದ ಸದಸ್ಯರೊಂದಿಗೆ ದೇವರ ದರ್ಶನ ಪಡೆಯುವಿರಿ. ಮನಸ್ಸಿಗೆ ಮುದ ನೀಡುವ ದಿನ. ಆರ್ಥಿಕ ಸ್ಥಿತಿಗತಿಗಳು ಉತ್ತಮವಾಗಿವೆ. ಸ್ನೇಹಿತರ ಮನೆಯ ಸಡಗರದಲ್ಲಿ ಪಾಲ್ಗೊಳ್ಳುವಿರಿ. ಮೃಷ್ಟಾನ್ನ ಭೋಜನ ಸವಿಯುವಿರಿ. ನಿಮ್ಮ ಇಷ್ಟದಂತೆ ಕೆಲಸ ಕಾರ್ಯಗಳು ನಡೆಯುವವು.

ವೃಷಭ:

ದಿನ ಭವಿಷ್ಯ

ವೃಷಭ:- ಕೆಲಸದಲ್ಲಿ ಬಂಧುಬಾಂಧವರ ಹಾಗೂ ಸ್ನೇಹಿತರ ಸಹಕಾರ ದೊರೆಯುವುದು. ಮನೆಯ ಅಲಂಕಾರಿಕ ವಸ್ತುಗಳ ಖರೀದಿಗಾಗಿ ಹಣ ಖರ್ಚು ಮಾಡುವಿರಿ. ಸಾವಧಾನದಿಂದ ನಿರ್ಧಾರ ತೆಗೆದುಕೊಳ್ಳುವಿರಿ. ವಿವಾಹ ಯೋಗ್ಯರಿಗೆ ಕಂಕಣಬಲ ಕೂಡಿಬರುವುದು. ಮದುವೆ ಮಾತುಕತೆ ಫಲಪ್ರದವಾಗುವುದು. ಮನೆಯಲ್ಲಿ ಸಂತಸದ ವಾತಾವರಣ ಮೂಡಲಿದೆ. ಸಂಗಾತಿಯ ತಮಾಷೆ ಮಾತಿಗೆ ಕೋಪಗೊಳ್ಳುವುದು ತರವಲ್ಲ. ಮಕ್ಕಳ ಪ್ರಗತಿ ಸಂತಸ ನೀಡುವುದು.

ಮಿಥುನ:

ದಿನ ಭವಿಷ್ಯ

ಮಿಥುನ:- ವ್ಯಾಪಾರ ವ್ಯವಹಾರದಲ್ಲಿ ನಿಗದಿತ ಲಾಭಾಂಶ ಕಂಡುಬರುವುದು. ಹಣಕಾಸಿನ ನೆರವು ಕೇಳಿಕೊಂಡು ನಿಮ್ಮ ಸ್ನೇಹಿತರು ನಿಮ್ಮ ಬಳಿ ಬರುವ ಸಾಧ್ಯತೆ ಇದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿ. ವಾಹನ, ನಿವೇಶನ ಖರೀದಿಸುವವರಿಗೆ ಸಕಾಲ. ಒಂದು ಮಹತ್ತರ ಕಾರ್ಯದ ಒಪ್ಪಂದಕ್ಕೆ ಸಹಿ ಹಾಕುವಿರಿ. ಕೆಲಸ ಕಾರ್ಯಗಳು ದೈವಕೃಪೆಯಿಂದಾಗಿ ಪೂರ್ಣಗೊಳ್ಳುವವು. ಸಣ್ಣವಿಷಯಗಳಿಗೆ ತಲೆಕೆಡಿಸಿಕೊಳ್ಳಬೇಡಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಶ್ರಮಕ್ಕೆ ತಕ್ಕ ಪ್ರತಿಫಲವಿದೆ. ಸದಾ ಹೊರಜಗತ್ತಿನ ಚಿಂತೆ ಮಾಡುವ ನೀವು ಕೌಟುಂಬಿಕ ಸದಸ್ಯರ ಬೇಕು ಬೇಡಗಳಿಗೆ ಸ್ಪಂದಿಸುವುದು ಉತ್ತಮ. ನಿಮ್ಮ ಒಳ್ಳೆಯ ಕಾರ್ಯಗಳಿಗೆ ಕುಟುಂಬ ಸದಸ್ಯರ ಬೆಂಬಲ ದೊರೆಯುವುದು. ಒಳ್ಳೆಯ ಕಾರ್ಯಗಳಿಗೆ ಅನೇಕ ವಿಘ್ನಗಳು ತಲೆದೋರುವವು. ಹಿರಿಯರ ಮಾರ್ಗದರ್ಶನದಂತೆ ನಡೆದರೆ ಒಳಿತಾಗುವುದು. ಆಂಜನೇಯ ಸ್ವಾಮಿಯ ಜಪ ಮಾಡಿ. ಆರೋಗ್ಯದ ಕಡೆ ಗಮನ ಹರಿಸಿ.

ಸಿಂಹ:

ದಿನ ಭವಿಷ್ಯ

ಸಿಂಹ:- ಲೇವಾದೇವಿ ವ್ಯವಹಾರದಲ್ಲಿ ಧನಾಗಮನವಾಗಲಿದೆ. ವಿದ್ಯಾರ್ಥಿಗಳಿಗೆ ಪ್ರಗತಿಯ ಕಾಲವಾಗಿದ್ದು, ನಿಮ್ಮ ಕನಸು ನನಸಾಗುವುದು. ಬಾಕಿ ಬರಬೇಕಾಗಿದ್ದ ಹಣ ನಿಮ್ಮ ಕೈಸೇರುವುದು. ಇದರಿಂದಾಗಿ ನಿಮ್ಮ ಆರ್ಥಿಕ ಸಮಸ್ಯೆಗೆ ಪರಿಹಾರ ದೊರೆಯುವುದು. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಲಾಭ ಕಂಡು ಬರುವುದು. ಕೆಲಸ ಕಾರ್ಯಗಳು ಸುಗಮವಾಗಿ ಆಗಲು ಹಿರಿಯರ ಮಾರ್ಗದರ್ಶನ ಪಡೆಯಿರಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಮುಂದಾಲೋಚನೆಯಿಂದ ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ನಿಮ್ಮ ಮೇಲಧಿಕಾರಿಗಳು ನಿಮ್ಮ ಕಾರ್ಯ ವೈಖರಿಯನ್ನು ಮೆಚ್ಚುವರು. ಸಂಶೋಧನಾತ್ಮಕ ಲೇಖನಗಳಿಗೆ ಮನ್ನಣೆ ದೊರೆಯುವುದು. ವೃತ್ತಿಯಲ್ಲಿ ಸ್ವಲ್ಪ ಪರಿಶ್ರಮ ಅಗತ್ಯ. ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ. ಪ್ರಯಾಣ ಕಾಲದಲ್ಲಿ ನರಸಿಂಹ ದೇವರ ಪ್ರಾರ್ಥನೆ ಮಾಡಿ. ಒಳಿತಾಗುವುದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಖರ್ಚಿನ ಮೇಲೆ ನಿಗಾ ಇಡುವುದು ಒಳ್ಳೆಯದು. ಸ್ಥಿರ ಚರ ಆಸ್ತಿ ವಿಚಾರಗಳಲ್ಲಿ ಬಂಧುಗಳ ನಡುವೆ ಮನಸ್ತಾಪ ಆಗುವ ಸಾಧ್ಯತೆ ಇದೆ. ಗುರು ಹಿರಿಯರ ಮಧ್ಯಸ್ಥಿಕೆಯಿಂದ ಅನುಕೂಲವಾಗುವುದು. ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭ ಕಂಡುಬರುವುದು. ವಿದೇಶದಿಂದ ಬರುವ ವಾರ್ತೆ ನಿಮ್ಮ ವ್ಯಾಪಾರ ವೃದ್ಧಿಗೆ ಸಹಕಾರಿಯಾಗುವುದು. ವಿದ್ಯಾರ್ಥಿಗಳು ಅಧ್ಯಯನವನ್ನು ಹೆಚ್ಚಿನ ಗಮನವಿಟ್ಟು ಮಾಡಬೇಕು. ಆರೋಗ್ಯ ಸುಧಾರಿಸುವುದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಬಂಧುಗಳ ಆರೋಗ್ಯ ಸುಧಾರಣೆ ಜವಾಬ್ದಾರಿ ನಿಮ್ಮ ಮೇಲೆ ಬೀಳುವ ಸಾಧ್ಯತೆ ಇದೆ. ಸಂಬಂಧಪಡದ ವಿಷಯಗಳಿಂದಾಗಿ ದಂಪತಿ ಮಧ್ಯೆ ಕಲಹವಾಗುವ ಸಾಧ್ಯತೆ ಇದೆ. ಮನುಷ್ಯನಿಗೆ ಆತ್ಮವಿಶ್ವಾಸ ಅತಿ ಮುಖ್ಯ. ಆದರೆ ಅತಿ ಆತ್ಮವಿಶ್ವಾಸ ಕಾರ್ಯಹಾನಿಗೆ ಕಾರಣವಾದೀತು. ಹಾಗೆಂದ ಮಾತ್ರಕ್ಕೆ ಧೃತಿಗೆಡುವ ಅಗತ್ಯವಿಲ್ಲ. ಉಪನ್ಯಾಸ, ಭಾಷಣಗಳ ಮೂಲಕ ಜನರನ್ನು ಆಕರ್ಷಿಸುವಿರಿ. ಆಸ್ತಿ ದಾಖಲೆಗಳು ನಿಮ್ಮ ಕೈ ಸೇರಲಿವೆ. ಹಣಕಾಸಿನ ವಿಷಯದಲ್ಲಿ ತೊಂದರೆ ಇಲ್ಲ. ಹಣ ಉಳಿತಾಯದ ಕಡೆ ಗಮನ ಹರಿಸಿ.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ವ್ಯಾಪಾರ ವಹಿವಾಟುಗಳು ಚೆನ್ನಾಗಿ ನಡೆದರೂ ನಿರೀಕ್ಷಿತ ಲಾಭ ದೊರೆಯದೆ ಹೋಗಬಹುದು. ಖಾಸಗಿ ಕಂಪನಿ ನೌಕರರು ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವರು. ಪ್ರಯಾಣದಲ್ಲಿ ತುಸು ಎಚ್ಚರಿಕೆಯಿರಲಿ. ಧಾರ್ಮಿಕ ಕೆಲಸಗಳಲ್ಲಿ ಭಾಗವಹಿಸುವಿರಿ. ಮಠಗಳಿಂದ ಹೆಚ್ಚಿನ ಗೌರವ ಸಿಗುವುದು. ಅತಿ ಒತ್ತಡದ ಕೆಲಸಗಳು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವವು. ಚಿಕ್ಕ ಮಕ್ಕಳ ಆರೋಗ್ಯದ ಬಗ್ಗೆ ಯಾವುದೇ ಕಾರಣಕ್ಕೂ ಅಲಕ್ಷ ಬೇಡ. ಹಿರಿಯರ ಮಾತನ್ನು ಗೌರವಿಸಿ. ಮಡದಿಯ ಸಲಹೆಗಳು ನಿಮಗೆ ಪ್ರಯೋಜನಕ್ಕೆ ಬರುವವು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ನೂತನ ಕೆಲಸದ ಜವಾಬ್ದಾರಿ ತೆಗೆದುಕೊಳ್ಳಬೇಕಾಗುವುದು. ಗ್ರಾಹಕರೊಂದಿಗೆ ವ್ಯವಹರಿಸುವಾಗ ತಾಳ್ಮೆ ಇರಲಿ. ನಿಮ್ಮ ಮುಂಗೋಪದಿಂದ ಕೆಲವು ಕೆಲಸಗಳು ತಪ್ಪಿ ಹೋಗುವ ಸಾಧ್ಯತೆ ಇದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರದಿಂದಿರಿ. ನೀವು ಎಷ್ಟೇ ವೇಗದಿಂದ ಕೆಲಸ ಮಾಡಲು ಹೋದರೂ ಕಾರ್ಯ ವಿಳಂಬವಾಗುವುದು. ಮನೆಯಲ್ಲಿನ ಮಂಗಳ ಕಾರ್ಯಕ್ಕೆ ಗುರು ಹಿರಿಯರ ಆಶೀರ್ವಾದ ದೊರೆಯುವುದು. ಉದರಕ್ಕೆ ಸಂಬಂಧಪಟ್ಟ ತೊಂದರೆಗಳು ಕಾಣಿಸಿಕೊಳ್ಳುವವು. ಸೂಕ್ತ ಚಿಕಿತ್ಸೆ ಮಾಡಿಸಿಕೊಳ್ಳಿ.

ಕುಂಭ:

ದಿನ ಭವಿಷ್ಯ

ಕುಂಭ:- ಹೊಸ ಮನೆ, ಆಸ್ತಿ ಖರೀದಿಗೆ ಸಕಾಲವಾಗಿದ್ದು ಈ ನಿಟ್ಟಿನಲ್ಲಿ ಯಾವುದೇ ಅಳುಕಿಲ್ಲದೆ ಮುಂದಡಿ ಇಡಿ. ಅತಿ ಉದ್ವೇಗ ಒಳ್ಳೆಯದಲ್ಲ. ಪ್ರತಿಯೊಂದನ್ನೂ ಸಮಾಧಾನದಿಂದ ಆಲೋಚಿಸಿ. ಮಕ್ಕಳ ಹಠ ನಿಮ್ಮ ಏಕಾಗ್ರತೆಗೆ ಭಂಗ ತರುವ ಸಾಧ್ಯತೆ ಇದೆ. ಮಕ್ಕಳೊಡನೆ ಸಂಯಮದಿಂದ ವರ್ತಿಸಿ. ಮಡದಿ ಮಕ್ಕಳ ಬೇಡಿಕೆ ದೊಡ್ಡ ಮೊತ್ತದ್ದಾಗಿದ್ದು ಅದನ್ನು ಅನಿವಾರ‍್ಯವಾಗಿ ಪೂರೈಸಬೇಕಾಗುವುದು. ಆದಾಯದಷ್ಟೇ ಖರ್ಚು ಕೂಡಾ ಇರುವುದರಿಂದ ಹಣ ಉಳಿತಾಯ ಸಾಧ್ಯವಾಗದು.

ಮೀನ:

ದಿನ ಭವಿಷ್ಯ

ಮೀನ:- ಬಹುದಿನಗಳಿಂದ ಬರಬೇಕಾಗಿದ್ದ ಹಣ ಬರುವುದರಿಂದ ಹಣಕಾಸಿನ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ವೃತ್ತಿಯಲ್ಲಿ ಹೊಸ ಹೊಸ ಅವಕಾಶಗಳು ನಿಮ್ಮನ್ನು ಅರಸಿಕೊಂಡು ಬರುವವು.ಭಗವಂತನ ಆರಾಧನೆಯಿಂದ ದೈವಬಲ ಮತ್ತು ಆತ್ಮಬಲವನ್ನು ಹೆಚ್ಚಿಸಿಕೊಳ್ಳಿ. ಮತ್ತೊಬ್ಬರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮುನ್ನಡೆದರೆ ಜೀವನ ಪ್ರಗತಿ ಪಥದಲ್ಲಿ ಸಾಗುವುದು. ಯಾವುದೇ ಕಾರಣಕ್ಕೂ ವೃತ್ತಿ ರಹಸ್ಯವನ್ನು ಮತ್ತೊಬ್ಬರಿಗೆ ಬಿಟ್ಟು ಕೊಡಬೇಡಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ವಾರ-ಭವಿಷ್ಯ: 10 ಮಾರ್ಚ್ ರಿಂದ 16 ಮಾರ್ಚ್ ರವರೆಗೆ, 2019!!