ವಾರ-ಭವಿಷ್ಯ: 10 ನವೆಂಬರ್ ರಿಂದ 16 ನವೆಂಬರ್, ರವರೆಗೆ, 2019!!

0
314

Astrology in kannada | kannada news ವಾರ-ಭವಿಷ್ಯ: 10 ನವೆಂಬರ್ ರಿಂದ 16 ನವೆಂಬರ್, ರವರೆಗೆ, 2019!!

ವಾರ-ಭವಿಷ್ಯ: 10 ನವೆಂಬರ್ ರಿಂದ 16 ನವೆಂಬರ್, ರವರೆಗೆ, 2019!!

ಮೇಷ:

ದಿನ ಭವಿಷ್ಯ

ಮೇಷ:- ನಿಮ್ಮ ಆರೋಗ್ಯ ಅಲಕ್ಷಿಸಿದಷ್ಟು ಸಮಸ್ಯೆಗಳು ಹೆಚ್ಚುತ್ತಲೇ ಹೋಗುತ್ತವೆ. ತಾಯಿ ಸಂಬಂಧಿಕರಿಂದ ಹಣಕಾಸಿನ ಸಹಾಯ ದೊರೆಯುವುದು. ಅವಸರದ ನಿರ್ಧಾರಗಳಿಂದ ನಷ್ಟ ಎದುರಿಸಬೇಕಾಗುವುದು. ಬಿಡುವಿಲ್ಲದ ಕೆಲಸದಿಂದಾಗಿ ದೇಹಾಲಸ್ಯ ಉಂಟಾಗುವುದು. ಔದ್ಯೋಗಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಮಡದಿ, ಮಕ್ಕಳ ಆಶೋತ್ತರಗಳನ್ನು ನೆರವೇರಿಸಲು ಸಾಕಷ್ಟು ಪರಿಶ್ರಮ ಪಡೆಯಲಿದ್ದೀರಿ. ಬಂಧುಗಳ ಅನಿರೀಕ್ಷಿತ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಉಂಟಾಗುವುದು.

ವೃಷಭ:

ದಿನ ಭವಿಷ್ಯ

ವೃಷಭ:- ಕಾಲದ ಪರಿಮಿತಿಯಲ್ಲಿ ಕೆಲಸ ಕಾರ್ಯಗಳನ್ನು ಪೂರೈಸಿಕೊಳ್ಳುವುದು ಒಳ್ಳೆಯದು. ವ್ಯಾಪಾರದಲ್ಲಿ ಈ ವಾರ ಹೆಚ್ಚಿನ ಲಾಭವಿಲ್ಲ. ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡಲ್ಲಿ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಹಕಾರಿಯಾಗಲಿದೆ. ವ್ಯವಹಾರ ನಿಮಿತ್ತ ರಾಜಕಾರಣಿಗಳ ಭೇಟಿ ಇಲ್ಲವೆ ನಿಮ್ಮ ಸಮಾಜದ ಮುಖಂಡರ ಭೇಟಿ ಮಾಡುವಿರಿ. ಕುಲದೇವತಾ ಪ್ರಾರ್ಥನೆ ಮಾಡುವುದು ಕ್ಷೇಮಕರ.

ಮಿಥುನ:

ದಿನ ಭವಿಷ್ಯ

ಮಿಥುನ:- ಆಗಿರುವ ನಷ್ಟವನ್ನು ನೆನೆಯದೆ ಆಗಲಿರುವ ಲಾಭದ ಬಗ್ಗೆ ಆಲೋಚಿಸಿ. ಬಂಧುಗಳಿಂದ ಬರುವ ಸಲಹೆಗಳನ್ನು ತಿರಸ್ಕರಿಸದಿರಿ. ಅನಿರೀಕ್ಷಿತವಾಗಿ ಬದಲಾದ ನಿಮ್ಮ ಗುಣ ಸ್ವಭಾವದಿಂದಾಗಿ ಮನೆಯಲ್ಲಿ ಅಸಹನೆ ಮೂಡುವುದು. ಪದೇ ಪದೆ ಬದಲಾಗುವ ನಿರ್ಧಾರಗಳಿಂದಾಗಿ ಕಾರ್ಯಹಾನಿ ಆಗುವುದು. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಮಗಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಉಂಟಾಗುವುದು. ಆರ್ಥಿಕ ಪ್ರಗತಿ ಕಂಡು ಬರಲಿದೆ. ವೈಯಕ್ತಿಕ ಜೀವನ ಸಂತೋಷ ತರಲಿದೆ. ಹಿರಿಯರೊಡನೆ ಪುಣ್ಯಕ್ಷೇತ್ರಗಳ ದರ್ಶನ ಮಾಡುವಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿದೆ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಜಮೀನು ಆಸ್ತಿ ಖರೀದಿಯ ವಿಷಯದಲ್ಲಿ ಹಿತೈಷಿಗಳ ಸಲಹೆ ಪಡೆಯುವುದು ಒಳ್ಳೆಯದು. ಮನೆ ಕಟ್ಟುವ ನಿರ್ಧಾರಕ್ಕೆ ಮನೆಯಲ್ಲಿ ಬೆಂಬಲ ವ್ಯಕ್ತವಾಗುವುದು. ಉದರ ಸಂಬಂಧಿ ತೊಂದರೆ ಮರುಕಳಿಸುವ ಸಾಧ್ಯತೆ ಇದೆ. ಆದಾಯದ ಮೂಲ ಹೆಚ್ಚಿ ಆರ್ಥಿಕ ಭದ್ರತೆ ಕಂಡು ಬರಲಿದೆ. ಮಹತ್ತರ ತೀರ್ಮಾನಗಳನ್ನು ಕೈಗೊಳ್ಳಲು ಈ ವಾರ ಸೂಕ್ತವಲ್ಲ. ಮೇಲಧಿಕಾರಿಗಳು ನಿಮ್ಮ ಶ್ರದ್ಧೆ ಹಾಗೂ ಶ್ರಮವನ್ನು ಕೊಂಡಾಡುವರು. ನವ ದಂಪತಿಗಳಲ್ಲಿದ್ದ ಭಿನ್ನಾಭಿಪ್ರಾಯ ದೂರವಾಗುವುದು. ಉದ್ಯಮದಲ್ಲಿ ಪ್ರತಿಸ್ಪರ್ಧಿ ಹುಟ್ಟಿಕೊಳ್ಳುವ ಸಾಧ್ಯತೆ ಇದೆ.

ಸಿಂಹ:

ದಿನ ಭವಿಷ್ಯ

ಸಿಂಹ:- ಸಮಾಧಾನದಿಂದ ಇದ್ದಲ್ಲಿ ಮಾತ್ರ ನೆರೆ ಹೊರೆಯವರೊಂದಿಗೆ ಆಗಬಹುದಾದ ಕಲಹವನ್ನು ತಪ್ಪಿಸಬಹುದು. ಉತ್ತಮ ನಡವಳಿಕೆ ಮತ್ತು ಉತ್ತಮ ಮಾತುಕತೆ ನಿಮ್ಮದಾಗಿರಲಿ. ಖಾಸಗಿ ನೌಕರರಿಗೆ ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆ ಆಗುವುದು. ಭಾವೋದ್ವೇಗಕ್ಕೆ ಒಳಗಾಗದೆ ಶಾಂತವಾಗಿ ವರ್ತಿಸಿ. ಧಾರ್ಮಿಕ ಸಮಾರಂಭಗಳಲ್ಲಿ ವಿಶೇಷವಾಗಿ ಭಾಗವಹಿಸುವಿರಿ. ಮಗನ ವಿದ್ಯಾಭ್ಯಾಸ ಅಥವಾ ಮದುವೆ ಬಗ್ಗೆ ಚಿಂತೆ ಕಾಡುವುದು. ನವಗ್ರಹ ಪೂಜೆ ಮಾಡಿ ಅವರ ಅನುಗ್ರಹ ಪಡೆಯಿರಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಸಾಲ ಬಾಧೆಯಿಂದ ಸಿಗುವ ಮುಕ್ತಿ ನೆಮ್ಮದಿ ತರುವುದು. ದೈನಂದಿನ ವ್ಯವಹಾರಗಳಲ್ಲಿ ಚುರುಕು ಕಂಡು ಬರುವುದು. ಉದ್ಯೋಗದಲ್ಲಿ ಬಂದಿದ್ದ ಉದಾಸೀನತೆ ದೂರವಾಗುವುದು. ಕೌಟುಂಬಿಕ ಸಮಸ್ಯೆಗಳು ಹಿರಿಯರ ಮಧ್ಯಸ್ಥಿಕೆಯಿಂದ ಪರಿಹಾರವಾಗುವುದು. ಚಿಕ್ಕ ಮಕ್ಕಳ ಆರೋಗ್ಯದ ಕಡೆ ಗಮನವಿರಲಿ. ಅನಿರೀಕ್ಷಿತ ಪ್ರಯಾಣ ಎದುರಾಗುವುದು. ನಿರುದ್ಯೋಗಿ ಮಗನ ಸಮಸ್ಯೆಗಳು ಬಗೆಹರಿಯುವವು. ವ್ಯವಹಾರದಲ್ಲಿ ನಿಮ್ಮ ಜಾಣತನವೇ ಲಾಭಕ್ಕೆ ದಾರಿಯಾಗಲಿದೆ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ನ್ಯಾಯಾಲಯದ ಕೇಸುಗಳು ನಿಮ್ಮಂತೆ ಆಗುವುದು. ಸಾಲಗಳು ತಕ್ಕ ಮಟ್ಟಿಗೆ ತೀರಲಿವೆ. ಜೀವನೋಪಾಯಕ್ಕೆ ಹೊಸ ಮಾರ್ಗ ಸಿಗಲಿದೆ. ಸಂಗಾತಿಯಿಂದ ಸಹಕಾರ ದೊರೆಯಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಶೀಘ್ರದಲ್ಲಿಯೇ ದೊರೆಯಲಿದೆ. ವ್ಯಾಪಾರಗಳಿಗೆ ಸ್ನೇಹಿತರಿಂದ ಬೆಂಬಲ ಮತ್ತು ಸಹಕಾರ ದೊರೆಯುವುದು. ಪ್ರೇಮಿಗಳಲ್ಲಿ ಅನಿರೀಕ್ಷಿತ ಭಿನ್ನಾಭಿಪ್ರಾಯಗಳು ಕಂಡು ಬರುವುದು. ಅಜೀರ್ಣ ಸಂಬಂಧಿ ವ್ಯಾಧಿ ನಿಮ್ಮನ್ನು ಬಾಧಿಸುವುದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ನೀವು ಬಯಸಿದಂತೆ ಈ ವಾರ ನಿಮ್ಮ ಕಾರ್ಯಗಳು ಕೈಗೂಡುವವು. ಲೇವಾದೇವಿ ವ್ಯವಹಾರವನ್ನು ಈ ವಾರ ತಡೆ ಹಿಡಿಯುವುದು ಒಳ್ಳೆಯದು. ವ್ಯಾಜ್ಯಗಳನ್ನು ನ್ಯಾಯಾಲಯಗಳ ಹೊರಗೆ ಇತ್ಯರ್ಥ ಮಾಡಿಕೊಳ್ಳುವುದು ಒಳ್ಳೆಯದು. ನಿಷ್ಠೆ ಮತ್ತು ಪ್ರಾಮಾಣಿಕತೆ ನಿಮ್ಮ ಯಶಸ್ಸಿಗೆ ದಾರಿ ಮಾಡುವುದು. ಉದ್ಯೋಗದಲ್ಲಿ ಬದಲಾವಣೆ ಕಂಡು ಬರುವ ಸಾಧ್ಯತೆ ಇದೆ. ಹಣಕಾಸು ವ್ಯವಹಾರದಲ್ಲಿ ಕಟ್ಟುನಿಟ್ಟಾಗಿರಿ. ಕೆಲಸ ಮುಗಿಸಲೇಬೇಕೆಂಬ ಧಾವಂತದಿಂದ ಅನೇಕ ತಪ್ಪುಗಳಾಗುವವು.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ವಿವಿಧ ಮೂಲಗಳಿಂದ ಆದಾಯ ಹೆಚ್ಚಿ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಭೂ ವ್ಯವಹಾರದಿಂದ ಅಧಿಕ ಲಾಭ ಉಂಟಾಗುವುದು. ಸಾಧು ಸಂತರ ದರ್ಶನದಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದು. ದಾಂಪತ್ಯ ಸಮಸ್ಯೆಗಳು ಬಗೆಹರಿಯುವವು. ಶ್ರಮದ ಉತ್ತಮ ಫಲಗಳನ್ನು ನೀವು ಅನುಭವಿಸುವಿರಿ. ಗೆಳೆಯರಿಗೋಸ್ಕರ ಪಟ್ಟ ಶ್ರಮ ಸಾರ್ಥಕವಾಗಲಿದೆ. ಮೇಲಿಂದ ಮೇಲೆ ಪ್ರಯಾಣ ಮಾಡುವ ಯೋಗ ನಿಮ್ಮದಾಗುತ್ತದೆ. ಮಹಿಳಾ ಉದ್ಯೋಗಿಗಳ ಬಳಿ ವಿನಯದಿಂದಿರುವುದು ಉತ್ತಮ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಅತಿಯಾದ ಕಾರ್ಯಗಳಿಂದ ಮಾನಸಿಕ ಒತ್ತಡಗಳಿಗೆ ಈಡಾಗುವಿರಿ. ಹೊಸ ಯೋಜನೆಗಳ ಫಲಿತಾಂಶ ಶೀಘ್ರದಲ್ಲಿಯೇ ಸಿಗಲಿದೆ. ಬಂಧುಗಳೊಡನೆ ಸೌಜನ್ಯದಿಂದ ವರ್ತಿಸಿರಿ. ಮನೆಯ ಹಿರಿಯರಿಗೆ ದೀರ್ಘ ಕಾಲದಿಂದ ಕಾಡುತ್ತಿದ್ದ ಅನಾರೋಗ್ಯ ಕ್ರಮೇಣ ಸುಧಾರಿಸಲಿದೆ. ಆರಂಭಿಸಿದ ಕಟ್ಟಡ ಕೆಲಸಗಳು ಸುಗಮವಾಗಿ ನಡೆಯುವುದು. ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ದೊರೆಯುವುದು. ಕಲಾವಿದರಿಗೆ ಉತ್ತಮ ಅವಕಾಶ ಸಿಗುವುದು. ಸಮಾಜದಲ್ಲಿ ನಿಮ್ಮ ಕೀರ್ತಿ ಹಾಗೂ ಪ್ರತಿಷ್ಠೆ ಹೆಚ್ಚಲಿದೆ.

ಕುಂಭ:

ದಿನ ಭವಿಷ್ಯ

ಕುಂಭ:- ಆರ್ಥಿಕ ಪ್ರಗತಿ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಲಿದೆ. ಔದ್ಯೋಗಿಕ ಬದಲಾವಣೆಗೆ ಹೊಂದಿಕೊಳ್ಳಲು ಪ್ರಯತ್ನಿಸಿ. ಕೃಷಿಕರಿಗೆ ಬಿಡುವಿಲ್ಲದ ಕೆಲಸ ಇರುವುದು. ಬಂಧುಗಳು ನಿಮ್ಮ ಬಗ್ಗೆ ಅಸಹನೆ ಮತ್ತು ಕೋಪ ತಾಳುವ ಸಾಧ್ಯತೆ ಇದೆ. ಗುರಿ ಸಾಧನೆಗೆ ಏಕಾಗ್ರತೆ ಪ್ರಮುಖವಾಗುವುದು. ವ್ಯವಹಾರದಲ್ಲಿ ಅಡ್ಡಿಗಳು ಎದುರಾದರೂ ಆತಂಕ ಪಡುವ ಅಗತ್ಯವಿಲ್ಲ. ಅಮೂಲ್ಯ ವಸ್ತುಗಳ ಸಂಗ್ರಹಕ್ಕಾಗಿ ಅಪಾರ ಹಣ ವೆಚ್ಚ ಮಾಡುವಿರಿ. ಪ್ರತಿಭೆಗೆ ತಕ್ಕ ಪ್ರೋತ್ಸಾಹ ದೊರೆಯಲಿದೆ.

ಮೀನ:

ದಿನ ಭವಿಷ್ಯ

ಮೀನ:- ನಿಮ್ಮ ಅನಿಸಿಕೆಗೆ ತಕ್ಕಂತೆ ವಿವಿಧ ಮೂಲಗಳಿಂದ ವಿಶೇಷ ಧನಾಗಮನವಾಗಲಿದೆ. ವಿವಾದಾತ್ಮಕ ಹೇಳಿಕೆಗಳನ್ನು ಕೊಡುವುದನ್ನು ನಿಲ್ಲಿಸಿ. ಪಾಲುದಾರರಿಂದ ವ್ಯವಹಾರದಲ್ಲಿ ಉತ್ತೇಜನ ದೊರೆಯಲಿದೆ. ಮನೋಕಾಮನೆಗಳು ಪೂರ್ಣಗೊಳ್ಳುವವು. ಯೋಜನೆಗೆ ತಕ್ಕಂತೆ ಕಾರ್ಯವನ್ನು ಮಾಡಿ. ರಾಜಕಾರಣಿಗಳಿಗೆ ಮಾಧ್ಯಮದವರಿಂದ ಹೆಚ್ಚಿನ ಪ್ರಚಾರ ದೊರೆಯುವುದು. ಮಾನಸಿಕ ಒತ್ತಡದಿಂದ ದೈಹಿಕ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬರುವುದು. ಅಧಿಕಾರಿಗಳಿಗೆ ಬಡ್ತಿ ದೊರೆಯುವುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ವಾರ-ಭವಿಷ್ಯ: 10 ನವೆಂಬರ್ ರಿಂದ 16 ನವೆಂಬರ್, ರವರೆಗೆ, 2019!!