ವಾರ-ಭವಿಷ್ಯ: 11 ಆಗಸ್ಟ್ ರಿಂದ 17 ಆಗಸ್ಟ್ ರವರೆಗೆ, 2019!!

0
214

Astrology in kannada | kannada news 

ವಾರ-ಭವಿಷ್ಯ: 11 ಆಗಸ್ಟ್ ರಿಂದ 17 ಆಗಸ್ಟ್ ರವರೆಗೆ, 2019!!

ಮೇಷ:

ದಿನ ಭವಿಷ್ಯ

ಮೇಷ:- ಮಿತ್ರರೊಂದಿಗಿದ್ದ ವೈಮನಸ್ಸು ದೂರವಾಗಲಿದೆ. ಬಂಧುಗಳ ಆಗಮನದಿಂದ ಮನೆಯಲ್ಲಿ ಸಡಗರ ಮೂಡಲಿದೆ. ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಆಗಲಿದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಮುನ್ನಡೆ ಉಂಟಾಗುವುದು. ನಿಮ್ಮಲ್ಲಿ ದಾನದ ಬುದ್ಧಿಯು ವಿಶೇಷವಾಗಿ ಮೂಡಲಿದ್ದು ಮಠ-ಮಾನ್ಯಗಳಿಗೆ ವಿಶೇಷ ದಾನ ಮಾಡುವಿರಿ. ಹೊಸ ಮನೆ ಕಟ್ಟಲು ಈ ವಾರ ಉತ್ತಮ ಸಮಯವಾಗಿದೆ.

ವೃಷಭ:

ದಿನ ಭವಿಷ್ಯ

 

ವೃಷಭ:- ಸದ್ಯಕ್ಕೆ ಗ್ರಹಗತಿಗಳು ನಿಮ್ಮ ವಿರುದ್ಧವಾಗಿರುವುದರಿಂದ ಅನಾವಶ್ಯಕ ವಿಷಯಗಳ ಬಗ್ಗೆ ಚರ್ಚಿಸದೆ ಇರುವುದು ಒಳ್ಳೆಯದು. ಗುರು-ಹಿರಿಯರ ಮನೋಭಿಲಾಷೆಗಳನ್ನು ತಿಳಿದು ಅವರ ಬಯಕೆಯನ್ನು ಪೂರೈಸಿದಲ್ಲಿ ಅವರ ವಿಶೇಷ ಆಶೀರ್ವಾದ ಗಳಿಸಿ ನಿಮಗೆ ಸಹಾಯ ಮಾಡುವರು. ಆಗ ಅಂದುಕೊಂಡ ಕಾರ್ಯಗಳನ್ನು ಸಾಧಿಸಲು ಅನುಕೂಲವಾಗುವುದು.

ಮಿಥುನ:

ದಿನ ಭವಿಷ್ಯ

ಮಿಥುನ:- ಯಾರದೋ ಮಾತಿನ ಪ್ರಭಾವಕ್ಕೆ ಒಳಗಾಗಿ ತೆಗೆದುಕೊಂಡ ವಾಹನಗಳು ಪದೇ ಪದೇ ರಿಪೇರಿಗೆ ಬಂದು ನಿಮಗೆ ತಲೆನೋವನ್ನುಂಟು ಮಾಡುವುದು. ಬಾಕಿ ಬರಬೇಕಾಗಿದ್ದ ಹಣಕಾಸು ಈ ವಾರದಲ್ಲಿ ಬರುವ ನಿರೀಕ್ಷೆ ಇದೆ. ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನವಿಡುವುದು ಒಳ್ಳೆಯದು. ವ್ಯಾಪಾರ-ವ್ಯವಹಾರದಲ್ಲಿ ನೀವು ಬಯಸಿದಷ್ಟು ಹಣಕಾಸು ಬರದೆ ಇರುವ ಸಾಧ್ಯತೆ ಇರುತ್ತದೆ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಹೊಸ ವ್ಯಾಪಾರ ವ್ಯವಹಾರ ಆರಂಭಿಸುವವರು ಆರ್ಥಿಕ ಕ್ರೋಡಿಕರಣ ಮಾಡಿಕೊಂಡು ಮುಂದುವರೆಯುವುದು ಉತ್ತಮ. ಇಲ್ಲವಾದಲ್ಲಿ ಮಹತ್‌ ಸಂಕಷ್ಟಕ್ಕೆ ಗುರಿ ಆಗುವಿರಿ. ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯವಿರಿಸಿಕೊಳ್ಳುವುದು ಉತ್ತಮ. ಮನಸ್ಸು ಆಧ್ಯಾತ್ಮದ ಕಡೆ ತಿರುಗಲಿದೆ. ಸೋದರರಿಗೆ ವಿವಾಹ ನಿಶ್ಚಯ ಮಾಡುವ ಮೊದಲು ಅವನ ಅಭಿಪ್ರಾಯವನ್ನು ತಿಳಿಯುವುದು ಒಳ್ಳೆಯದು.

ಸಿಂಹ:

ದಿನ ಭವಿಷ್ಯ

 

ಸಿಂಹ:- ಸೋದರನು ಹಮ್ಮಿಕೊಳ್ಳುವ ವ್ಯವಹಾರದಲ್ಲಿ ಹಣದ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುವುದು. ಸಹೋದ್ಯೋಗಿಗಳೊಂದಿಗೆ ಮುಕ್ತವಾಗಿ ವ್ಯವಹರಿಸಿರಿ. ವಿದ್ಯುತ್‌ ಗುತ್ತಿಗೆದಾರರಿಗೆ ಹೆಚ್ಚಿನ ಕೆಲಸ ದೊರೆಯಲಿದೆ. ಆದಾಯ ಖರ್ಚು ಎರಡೂ ಸರಿ ಸಮವಾಗಲಿದೆ. ಆಡಳಿತಾತ್ಮಕವಾಗಿ ಉನ್ನತ ಅಧಿಕಾರಿಗಳಿಂದ ಗೌರವ ದೊರೆಯಲಿದೆ. ನಿಮ್ಮ ಗ್ರಾಹಕರಿಂದ ಮೆಚ್ಚುಗೆ ನುಡಿಯನ್ನು ಕೇಳುವಿರಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ನಿಮ್ಮ ಮೇಲೆ ಪರರು ಭಾವಿಸಿದ ತಪ್ಪು ತಿಳುವಳಿಕೆ ದೂರವಾಗಿ ಆತ್ಮೀಯತೆ ಹೆಚ್ಚಲಿದೆ. ಹೊಸ ಉದ್ಯಮಕ್ಕೆ ಕ್ರಮೇಣ ಚಾಲನೆ ದೊರೆಯಲಿದೆ. ಅದಕ್ಕೆ ಹಣಕಾಸು ಸಂಸ್ಥೆಗಳಿಂದ ಆರ್ಥಿಕ ನೆರವು ದೊರೆಯುವುದು. ಸ್ವಯಂ ಪ್ರಯತ್ನ ಹಾಗೂ ಪರಿಶ್ರಮದಿಂದ ಯಶಸ್ಸು. ಪ್ರಯಾಣ ಕಾಲದಲ್ಲಿ ಎಚ್ಚರಿಕೆ ಅಗತ್ಯ. ವಿದ್ಯಾವಂತ ನಿರುದ್ಯೋಗಿಗಳಿಗೆ ಹೆಚ್ಚಿನ ಅವಕಾಶ ಒದಗಿ ಬರಲಿದೆ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

 

ತುಲಾ:- ಕೆಲಸಗಳ ಒತ್ತಡದ ನೆಪದಲ್ಲಿ ವೈಯಕ್ತಿಕ ವಿಚಾರಗಳನ್ನು ಅಲಕ್ಷಿಸುವುದು ಸರಿಯಲ್ಲ. ಹೊಸ ಉದ್ಯಮ ಅಥವಾ ವ್ಯವಹಾರ ಆರಂಭಿಸುವ ಬಗ್ಗೆ ವಿಚಾರವೊಂದು ನಿಮ್ಮ ಮನದಲ್ಲಿ ಮೂಡಿದೆ. ಅದಕ್ಕೆ ಬೇಕಾಗುವ ಸಿದ್ಧತೆಯನ್ನು ಮಾಡಿಕೊಳ್ಳುವಿರಿ. ನಿಷ್ಠುರದ ಮಾತುಗಳನ್ನಾಡಿ ಮತ್ತೊಬ್ಬರ ಮನಸ್ಸನ್ನು ನೋಯಿಸದಿರಿ. ನಿರುದ್ಯೋಗಿಗಳಿಗೆ ವಿಫುಲ ಅವಕಾಶಗಳು ಒದಗಿ ಬರುವುದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಮಾತೇ ಬಂಡವಾಳವಾಗಿರುವವರಿಗೆ ಉತ್ತಮ ವಾರವಿದು. ಈ ವಾರ ನಿಮ್ಮ ಮಾತಿನ ವರಸೆಯಿಂದ ಎದುರಾಳಿಗಳನ್ನು ಬಗ್ಗು ಬಡಿಯುವಿರಿ. ಹಿರಿಯರ ಅನಾರೋಗ್ಯವು ನಿಮ್ಮ ಚಿಂತನೆಗೆ ಕಾರಣವಾಗುವುದು. ಮಿತ್ರರ ಸಲಹೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿರಿ. ಆಕಸ್ಮಿಕವಾಗಿ ಆಗಲಿರುವ ಧನಲಾಭವನ್ನು ಸದುಪಯೋಗಪಡಿಸಿಕೊಳ್ಳಿರಿ. ಹಳೇ ಕಡತಗಳನ್ನು ವಿಲೇವಾರಿ ಮಾಡುವುದು ಉತ್ತಮ.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ಹಣಕಾಸು ವ್ಯವಹಾರದ ಮಧ್ಯೆ ಸ್ನೇಹಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಿರಿ. ಆಯವ್ಯಯಗಳ ನಡುವೆ ಸಮತೋಲನ ನೋಡಿಕೊಳ್ಳಿರಿ. ಆಹಾರದ ವಿಚಾರದಲ್ಲಿ ಎಚ್ಚರವಿರಲಿ. ಅಕಾಲದಲ್ಲಿ ಸೇವಿಸಿದ ಆಹಾರ ಅನಾರೋಗ್ಯಕ್ಕೆ ಕಾರಣವಾಗಬಹುದು. ಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಹೆಚ್ಚಿನ ಖರ್ಚು ಅನಿವಾರ್ಯವಾಗುವುದು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

 

ಮಕರ:- ನ್ಯಾಯಾಲಯದ ತಗಾದೆಗಳನ್ನು ನಿಮ್ಮಗಳ ಮಧ್ಯದಲ್ಲೇ ರಾಜಿ ಪಂಚಾಯ್ತಿ ಮುಖಾಂತರ ಬಗೆಹರಿಸಿಕೊಳ್ಳುವುದು ಉತ್ತಮ. ನೀವು ಬ್ಯಾಂಕ್‌ ಅಧಿಕಾರಿ ಆಗಿದ್ದಲ್ಲಿ ಕರ್ತವ್ಯದ ವಿಚಾರದಿಂದ ವಿಮುಖರಾಗದಿರಿ. ವಿದೇಶದಲ್ಲಿರುವ ಮಗನಿಗೆ ಕೆಲಸದಲ್ಲಿ ಮುಂಬಡ್ತಿ ದೊರೆಯಲಿದೆ. ಕೆಲವೊಂದು ಮುಖ್ಯ ನಿರ್ಣಯಗಳಿಗೆ ರಾಜಕಾರಣಿಗಳು ನಿಮ್ಮನ್ನು ಆಶ್ರಯಿಸಬಹುದು. ಜಾಣ್ಮೆಯಿಂದ ಅವರೊಡನೆ ವ್ಯವಹರಿಸಿರಿ.

ಕುಂಭ:

ದಿನ ಭವಿಷ್ಯ

ಕುಂಭ:- ಹೊಂದಾಣಿಕೆಯ ಮನೋಭಾವದಿಂದಾಗಿ ಕೌಟುಂಬಿಕ ಸದಸ್ಯರ ಬೆಂಬಲ ಪಡೆಯುವಿರಿ. ಜಗಳ ಕದನಗಳಿಂದ ದೂರವಿರುವುದು ಒಳ್ಳೆಯದು. ನಿವೇಶನ ಖರೀದಿ ವಿಚಾರದಲ್ಲಿ ಹೆಚ್ಚಿನ ಅನುಕೂಲ ಕಂಡುಬರುವುದು. ಪ್ರಭಾವಿ ವ್ಯಕ್ತಿಗಳ ಮಾತಿಗೆ ಮರುಳಾಗದಿರುವುದು ಒಳ್ಳೆಯದು. ಪರಿವಾರದೊಂದಿಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ.

ಮೀನ:

ದಿನ ಭವಿಷ್ಯ

ಮೀನ:- ತಂತ್ರಜ್ಞರಿಗೆ ವಿಫುಲ ಅವಕಾಶಗಳು ಬರಲಿದ್ದು ಅವನ್ನು ಸದುಪಯೋಗಪಡಿಸಿಕೊಳ್ಳಿರಿ. ಸರ್ಕಾರಿ ಉನ್ನತಾಧಿಕಾರಿಗಳಿಗೆ ಅನಿರೀಕ್ಷಿತ ವರ್ಗಾವಣೆ. ಕೊಟ್ಟ ಹಣ ಸಮಯಕ್ಕೆ ಸರಿಯಾಗಿ ಮರಳಿ ಬಾರದೇ ಹೋಗಬಹುದು. ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬರುವುದು. ಯಂತ್ರಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆ ಅಗತ್ಯ. ಅತಿದೂರ ಪ್ರಯಾಣ ಅನಾರೋಗ್ಯಕ್ಕೆ ಕಾರಣವಾದೀತು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

 

  • ವಾರ-ಭವಿಷ್ಯ: 11 ಆಗಸ್ಟ್ ರಿಂದ 17 ಆಗಸ್ಟ್ ರವರೆಗೆ, 2019!!