ವಾರ-ಭವಿಷ್ಯ: 13 ಸೆಪ್ಟೆಂಬರ್ ರಿಂದ 19 ಸೆಪ್ಟೆಂಬರ್ ರವರೆಗೆ, 2020!!

0
2915

Astrology in kannada | kannada news ವಾರ-ಭವಿಷ್ಯ: 13 ಸೆಪ್ಟೆಂಬರ್ ರಿಂದ 19 ಸೆಪ್ಟೆಂಬರ್ ರವರೆಗೆ, 2020!!

ವಾರ-ಭವಿಷ್ಯ: 13 ಸೆಪ್ಟೆಂಬರ್ ರಿಂದ 19 ಸೆಪ್ಟೆಂಬರ್ ರವರೆಗೆ, 2020!!

ಮೇಷ:

ದಿನ ಭವಿಷ್ಯ

ಮೇಷ:- ಗ್ರಹಗಳು ಉತ್ತಮ ಸ್ಥಿತಿಯಲ್ಲಿ ಸಂಚರಿಸುತ್ತಿದ್ದು ಕುಟುಂಬದ ಸದಸ್ಯರ ನಡುವೆ ಇದ್ದ ಭಿನ್ನಾಭಿಪ್ರಾಯಗಳು ಕರಗಿ ಒಮ್ಮತ ಹಾಗೂ ಒಗ್ಗಟ್ಟು ಮೂಡುವುದು. ಮನೆಯ ಪ್ರತಿ ಸದಸ್ಯರು ನಿಮ್ಮ ಬೆಂಬಲಕ್ಕೆ ನಿಲ್ಲುವರು. ಸೋದರನ ಸಹಾಯ ಮತ್ತು ಸಹಕಾರವೇ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡುವುದು. ಮಿತಿ ಮೀರಿದ ಆಹಾರ ಸೇವನೆಯಿಂದ ಅನಗತ್ಯ ತೊಂದರೆಗಳು ಎದುರಾಗುವ ಸಂಭವವಿರುತ್ತವೆ. ಈ ಬಗ್ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಒಳಿತು. ಉದ್ಯೋಗದಲ್ಲಿ ಯಶಸ್ಸು ದೊರೆಯುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ..

ವೃಷಭ:

ದಿನ ಭವಿಷ್ಯ

ವೃಷಭ:- ಕರ್ತವ್ಯವೇ ದೇವರು ಎಂದು ತಿಳಿದಿರುವ ನಿಮಗೆ ವೃತ್ತಿಯಲ್ಲಿ ಬಡ್ತಿ ದೊರೆಯುವ ಸಂಭವವಿರುತ್ತದೆ. ಅದರ ಜೊತೆಯಲ್ಲಿ ಜವಾಬ್ದಾರಿಯೂ ಹೆಚ್ಚಾಗುವುದು. ಹಣ ನೀರಿನಂತೆ ಖರ್ಚಾಗುವುದು. ಎಲ್ಲವನ್ನು ಖರ್ಚು ಮಾಡಿ ಬರಿಗೈಯಾಗುವ ಸಾಧ್ಯತೆಯಿದೆ. ಹಣಕಾಸಿನ ವ್ಯವಹಾರದಲ್ಲಿ ತುಂಬಾ ಎಚ್ಚರಿಕೆಯಿಂದ ಇರಿ. ಅಮೂಲ್ಯ ಒಡವೆ ವಸ್ತುಗಳನ್ನು ಒತ್ತೆಯಿಡುವ ಸಂದರ್ಭ ಎದುರಾಗುವುದು. ಗುರು ಸ್ತೋತ್ರ ಪಠಿಸಿ. ಸಹೋದರರಿಂದ ಸುಖ ದೊರೆಯುವುದಿಲ್ಲ. ಆದಷ್ಟು ತಾಳ್ಮೆ ರೂಢಿಸಿಕೊಳ್ಳಿ.

ಮಿಥುನ:

ದಿನ ಭವಿಷ್ಯ

ಮಿಥುನ:- ಊಹಿಸದ ಕಡೆಯಿಂದ ಅನಿರೀಕ್ಷಿತವಾದ ಹಣ ಹರಿದು ಬರಲಿದೆ. ಬಂಡವಾಳ ಹೂಡಲು ಉತ್ತಮ ದಿನವಾಗಿದೆ. ಕುಲದೇವತಾ ಪ್ರಾರ್ಥನೆ ಮಾಡಿ ಪ್ರಯಾಣ ಮಾಡಿ. ಇದರಿಂದ ನಿಮ್ಮ ಮನೋಕಾಮನೆಗಳು ಈಡೇರುವವು. ಕೆಲವರಿಗೆ ದಿಢೀರ್‌ ಪ್ರಯಾಣ ಮಾಡುವ ಸಂದರ್ಭ ಬರಲಿದೆ. ಬಂಧುಗಳ ಹೊಂದಾಣಿಕೆ ನಿರಂತರವಾಗಿರುತ್ತದೆ. ಬರಬೇಕಾಗಿದ್ದ ಹಣದ ಬಗ್ಗೆ ಒಂದು ತೀರ್ಮಾನವನ್ನು ಆದಷ್ಟು ಬೇಗ ತೆಗೆದುಕೊಳ್ಳಿ. ಕುಟುಂಬದ ಇತರ ಸದಸ್ಯರ ಆರೋಗ್ಯ ಉತ್ತಮವಾಗಿರುತ್ತದೆ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ವಿದೇಶದಲ್ಲಿ ಅಧ್ಯಯನ ಮಾಡಬೇಕೆಂಬ ಮಗನ ಬಯಕೆ ಕೈಗೂಡಲಿದೆ. ಅದಕ್ಕೆ ಬೇಕಾದ ಸೂಕ್ತ ಮಾಹಿತಿ ಸಂಗ್ರಹಿಸಿ ಮುಂದುವರೆಯಿರಿ. ಸಮಾಜದಲ್ಲಿ ಗೌರವ, ಪ್ರತಿಷ್ಠೆ ಹೆಚ್ಚಾಗುವುದು. ಇದರಿಂದಾಗಿ ಅನೇಕ ಜನರು ನಿಮ್ಮೊಡನೆ ಸ್ನೇಹ ಬೆಳೆಸಲು ಬಯಸುವರು. ಅಂದುಕೊಂಡ ಕೆಲಸಗಳು ಸರಿಯಾದ ಸಮಯಕ್ಕೆ ಕೈಗೂಡಲಿವೆ. ಮಡದಿಗೆ ದೃಷ್ಟಿದೋಷ ಸಂಬಂಧಿ ಸಮಸ್ಯೆ ಕಾಡಲಿದ್ದು ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸಿ. ಗುರು ಮಂತ್ರ ಪಠಿಸಿ ಹಾಗೂ ಗುರು, ಹಿರಿಯರ ಆಶೀರ್ವಾದ ಪಡೆಯಿರಿ.

ಸಿಂಹ:

ದಿನ ಭವಿಷ್ಯ

ಸಿಂಹ:- ಸಹೋದ್ಯೋಗಿಗಳು ಮಾಡುವ ತಪ್ಪಿನಿಂದ ನೀವು ಇಲ್ಲಸಲ್ಲದ ಆಪಾದನೆಗಳಿಗೆ ಗುರಿಯಾಗಿ ಶಿಕ್ಷೆ ಅನುಭವಿಸಬೇಕಾಗುವುದು. ನೀವು ಕೈಗೊಳ್ಳುವ ಒಂದು ತೀರ್ಮಾನದಿಂದ ಸಮಾಜದಲ್ಲಿ ಅವಮಾನ ಎದುರಿಸಬೇಕಾಗುವುದು. ಶತ್ರುಮಿತ್ರರ ಅರಿವಿಲ್ಲದೆ ಎಲ್ಲರೊಂದಿಗೂ ಸಂಸಾರದ ಸುಖ ದುಃಖಗಳನ್ನು ಹೇಳಿಕೊಳ್ಳಬೇಡಿ. ಆದಾಯದಲ್ಲಿ ಅನಿರೀಕ್ಷಿತ ಹೆಚ್ಚಳ ಕಂಡು ಬರುವುದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಯಾವುದೇ ಕಾರಣಕ್ಕೂ ರಾಜಕಾರಣಿಗಳನ್ನು ನಂಬಿಕೊಂಡು ನಿರ್ಧಾರ ತೆಗೆದುಕೊಳ್ಳಬೇಡಿ. ಸೋದರಿಯ ಆರೋಗ್ಯದ ಕಡೆ ಗಮನವಿರಲಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಧನ ಸಹಾಯ ನಿಮಗೆ ದೊರೆಯುವುದು. ಅಮೂಲ್ಯ ವಸ್ತುಗಳ ಖರೀದಿ ಜೋರಾಗಿಯೇ ನಡೆಯಲಿದೆ. ವ್ಯವಹಾರದಲ್ಲಿ ಅತ್ಯಂತ ಪ್ರಾಮಾಣಿಕರಾದ ನಿಮಗೆ ಸರ್ಕಾರದಿಂದ ಸಕಲ ಸವಲತ್ತುಗಳೂ ಸಕಾಲದಲ್ಲಿ ದೊರೆಯಲಿವೆ. ನಿರುದ್ಯೋಗಿಗಳಿಗೆ ಉತ್ತಮ ವೇತನದ ನೌಕರಿ ದೊರೆತು ತುಸು ನೆಮ್ಮದಿ ಸಿಗುವುದು. ವ್ಯವಹಾರದಲ್ಲಿ ಬಂಡವಾಳ ಹೂಡಿಕೆಗೆ ಹಾಗೂ ಪಾಲುದಾರಿಕೆಗೆ ಉತ್ತಮ ದಿನಗಳು ಬರಲಿವೆ. ಕುಲದೇವತಾರಾಧನೆ ಮಾಡಿ. ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡು ಬರುವುದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಜನಪ್ರಿಯತೆ ಹಾಗೂ ಸಂಭಾವನೆ ಪ್ರಮಾಣ ಹೆಚ್ಚಾಗಲಿದೆ. ಮನೆಯಲ್ಲಿನ ಸಣ್ಣ ವಿಚಾರವೊಂದು ಭಾರಿ ಪ್ರಮಾಣದಲ್ಲಿ ಸಂಚಲನ ಮೂಡಿಸಲಿದೆ. ಇದರಿಂದ ಕುಟುಂಬದ ಸದಸ್ಯರಲ್ಲಿ ಮನೆ ಮಾಡಿದ ತೀವ್ರ ಭಿನ್ನಾಭಿಪ್ರಾಯ ಹಾಗೂ ಗೊಂದಲಗಳು ನಿವಾರಣೆ ಆಗುವವು. ಹಣಕಾಸಿನ ಸ್ಥಿತಿ ಸಾಕಷ್ಟು ಸುಧಾರಿಸಲಿದೆ. ಚಿಕ್ಕ ಮಕ್ಕಳ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ಗುರು, ಹಿರಿಯರ ಆಶೀರ್ವಾದ ಪಡೆಯಿರಿ. ಸಹೋದರನ ಸಂಗಡ ವಾದ ವಿವಾದ ಬೇಡ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಸಂಯಮದಿಂದ ವರ್ತಿಸಿದರೆ ನೆಮ್ಮದಿಯ ಜೀವನ ಕಂಡುಕೊಳ್ಳಬಹುದು. ಕುಲದೇವತಾ ಅನುಗ್ರಹ ಪಡೆಯಿರಿ. ಇದರಿಂದ ನೀವು ಅಂದುಕೊಂಡ ಕಾರ್ಯಗಳು ಸುಸೂತ್ರವಾಗಿ ನೆರವೇರಲಿವೆ. ಮಡದಿ, ಮಕ್ಕಳು ನಿಮಗೆ ಸಂತಸ ನೀಡುವರು. ಕಾರಣವಿಲ್ಲದೆ ಮತ್ತೊಬ್ಬರನ್ನು ಅವಮಾನಿಸಬೇಡಿ. ಆಡುವ ಮಾತಿನಲ್ಲಿ ಹಿಡಿತವಿರಲಿ. ದೃಷ್ಟಿಗೆ ಸಂಬಂಧಪಟ್ಟ ಕೆಲ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ. ವಿವಾಹ ಯೋಗ್ಯ ಮಕ್ಕಳಿಗೆ ಕಂಕಣಭಾಗ್ಯ ಒದಗಿ ಬರುವುದು.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ನೀವು ಮತ್ತೊಬ್ಬರಿಗಾಗಿ ಎಲ್ಲಾ ಶ್ರಮ ವಹಿಸಬೇಕಾಗುವುದು. ಆದರೆ ಪ್ರತಿಫಲ ಶೂನ್ಯವಾಗಿರುವುದು. ಹಾಗಾಗಿ ಸಾಧ್ಯವಾದಷ್ಟು ನೀವು ನಿಮ್ಮ ಪಾಡಿಗೆ ಇರುವುದು ಕ್ಷೇಮಕರ. ಮನಸ್ಸು ಧಾರ್ಮಿಕ ವಿಚಾರಗಳ ಕಡೆ ಸೆಳೆಯಲಿದ್ದು ಅಂತಹ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ. ಅನೇಕ ಸಾಧು ಸಜ್ಜನರ ಸಹವಾಸವಾಗಲಿದೆ. ಮಾತೇ ಬಂಡವಾಳವಾಗಿರುವ ಉಪಾಧ್ಯಾಯರು ಮತ್ತು ವಕೀಲರಿಗೆ ಹೇರಳ ಧನಾಗಮವಾಗುವುದು. ರೈತಾಪಿ ಜನರು ರಾಜಕೀಯ ವ್ಯಕ್ತಿಗಳನ್ನು ನಂಬದಿರುವುದು ಒಳ್ಳೆಯದು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ನೆರೆಹೊರೆಯವರೊಂದಿಗೆ ಸೌಹಾರ್ದದಿಂದ ವರ್ತಿಸಿ. ಬಡ್ಡಿ ವ್ಯವಹಾರದಲ್ಲಿ ಹೆಚ್ಚು ಹಣ ತೊಡಗಿಸುವುದು ಒಳ್ಳೆಯದಲ್ಲ. ವಿದ್ಯಾವಂತ ಮಗಳಿಗೆ ಉದ್ಯೋಗ ದೊರೆಯಲಿದೆ. ವ್ಯವಹಾರದಲ್ಲಿ ಹೆಚ್ಚು ಹಣ ತೊಡಗಿಸುವುದು ಉತ್ತಮವಲ್ಲ. ಕೈಗಾರಿಕೆ ಉದ್ಯಮದಲ್ಲಿರುವವರಿಗೆ ಒಳ್ಳೆಯ ದಿನಗಳಾಗಿದ್ದು ಪ್ರತಿಯೊಂದು ಕೂಡಾ ಅವರು ಅಂದುಕೊಂಡಂತೆ ನಿಗದಿತ ಸಮಯದಲ್ಲೇ ಆಗಲಿದೆ. ಕಾರ್ಮಿಕ ಸಮಸ್ಯೆಗಳಿಗೆ ಸ್ಪಂದಿಸುವುದು ಒಳ್ಳೆಯದು. ಮಗ ಆಧ್ಯಾತ್ಮದ ಕಡೆ ವಿಶೇಷ ಒಲವು ತೋರುವನು.

ಕುಂಭ:

ದಿನ ಭವಿಷ್ಯ

ಕುಂಭ:- ವಿದೇಶಗಳಲ್ಲಿ ವ್ಯವಹಾರ ವಿಸ್ತರಿಸಲು ಉತ್ತಮ ಸಮಯವಿದು. ಬ್ಯಾಂಕ್‌ ನೌಕರರಿಗೆ ಪದೋನ್ನತಿಯೊಂದಿಗೆ ವೇತನದಲ್ಲಿ ಹೆಚ್ಚಳ ಕಂಡು ಬರುವುದು. ವರ್ಗಾವಣೆಗೆ ಮಾನಸಿಕವಾಗಿ ಸಿದ್ಧರಾಗುವುದು ಒಳ್ಳೆಯದು. ಮಡದಿ, ಮಕ್ಕಳು ತಮ್ಮ ಕೋರಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಬಹುದು. ವಾಹನ ಮೊದಲಾದ ಆಟೋಮೊಬೈಲ್‌ ವ್ಯವಹಾರದಲ್ಲಿ ಹೆಚ್ಚಿನ ಲಾಭ ದೊರೆಯುವುದು. ಬಂಧುಗಳ ಮನೆಯಲ್ಲಿ ನಡೆಯುವ ಶುಭ ಸಮಾರಂಭಗಳಲ್ಲಿ ಭಾಗವಹಿಸಬೇಕಾಗುವುದು. ಹಿರಿಯರ ಸಲಹೆಗಳನ್ನು ಪಾಲಿಸುವುದು ಉತ್ತಮ..

ಮೀನ:

ದಿನ ಭವಿಷ್ಯ

ಮೀನ:- ಹಣಕಾಸಿನ ಹರಿವು ಹೆಚ್ಚಾಗಲಿದ್ದು ಹಳೆಯ ಆರ್ಥಿಕ ಸಮಸ್ಯೆಗಳು ಬಗೆಹರಿಯಲಿವೆ. ಸೋದರಿಯ ಮಗಳಿಗೆ ಉತ್ತಮ ಸಂಬಂಧ ಬರಲಿದ್ದು, ಇಬ್ಬರಿಗೂ ಹೊಂದಾಣಿಕೆಯಾದಲ್ಲಿ ಮಾತುಕತೆ ಮುಂದುವರೆಸಿ. ಮಡದಿಯ ಆರೋಗ್ಯದ ಬಗ್ಗೆ ಉದಾಸೀನ ಬೇಡ. ಹಿರಿಯರು ತೀರ್ಥಯಾತ್ರೆ ಮಾಡಲು ಬಯಸುವರು. ಸಾಧ್ಯವಾದಷ್ಟು ಬೇಗನೆ ಅದನ್ನು ಪೂರೈಸಲು ಪ್ರಯತ್ನಿಸಿ. ನವಗ್ರಹ ಸ್ತೋತ್ರ ಪಾರಾಯಣ ಮಾಡಿ. ಪ್ರತಿಯೊಂದು ಕೆಲಸಕ್ಕೂ ಮುನ್ನುಗ್ಗಿ ಹೋಗಬೇಡಿ. ಅದರಿಂದ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಾಗುವುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ವಾರ-ಭವಿಷ್ಯ: 13 ಸೆಪ್ಟೆಂಬರ್ ರಿಂದ 19 ಸೆಪ್ಟೆಂಬರ್ ರವರೆಗೆ, 2020!!