ವಾರ-ಭವಿಷ್ಯ: 14 ಏಪ್ರಿಲ್ ರಿಂದ 20 ಏಪ್ರಿಲ್ ರವರೆಗೆ, 2019!!

0
246

Astrology in kannada | kannada news ವಾರ-ಭವಿಷ್ಯ: 14 ಏಪ್ರಿಲ್ ರಿಂದ 20 ಏಪ್ರಿಲ್ ರವರೆಗೆ, 2019!!

ವಾರ-ಭವಿಷ್ಯ: 14 ಏಪ್ರಿಲ್ ರಿಂದ 20 ಏಪ್ರಿಲ್ ರವರೆಗೆ, 2019!!

ಮೇಷ:

ದಿನ ಭವಿಷ್ಯ

ಮೇಷ:- ಈ ವಾರ ಕುಟುಂಬದಲ್ಲಿ ಒದಗಿ ಬರುವ ಭಾಧ್ಯತೆಗಳನ್ನು ಚೆನ್ನಾಗಿ ನಿಭಾಯಿಸುವಿರಿ. ಜೊತೆಗೆ ಸತ್ಕಾರ್ಯಗಳ ನಿರ್ವಹಣೆ, ಬೌದ್ಧಿಕ ಕಾರ್ಯಕ್ರಮಗಳ ಸಂಭ್ರಮ ನಡೆಯಲಿದೆ. ಪ್ರತಿಷ್ಠಿತರ ಭೇಟಿಯಿಂದ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಲಾಭವಿದೆ.

ವೃಷಭ:

ದಿನ ಭವಿಷ್ಯ

ವೃಷಭ:- ಈ ವಾರ ವೈಯಕ್ತಿಕ ವ್ಯವಹಾರಗಳಲ್ಲಿ ಗೊಂದಲದ ಹೇಳಿಕೆ ನೀಡುವುದರಿಂದ ಸಂಕಟ, ಕಷ್ಟ ಉಂಟಾಗಲಿದೆ. ಆದರೆ ವಾಹನ ವ್ಯಾಪಾರಿಗಳಿಗೆ ವಹಿವಾಟುಗಳಲ್ಲಿ ನಿರೀಕ್ಷೆಗೆ ತಕ್ಕ ಲಾಭವಿದೆ. ಹೊಸ ಉದ್ಯೋಗಿಗಳಿಗೆ ಔದ್ಯೋಗಿಕ ರಂಗದಲ್ಲಿ ಅನುಕೂಲ, ಪ್ರಗತಿ ಇದೆ.

ಮಿಥುನ:

ದಿನ ಭವಿಷ್ಯ

ಮಿಥುನ:- ಈ ವಾರ ಸ್ವತ್ತು ವಿವಾದಗಳಿಂದ ಡೋಲಾಯಮಾನ ಸ್ಥಿತಿ ಉಂಟಾಗಲಿದ್ದು, ದೇವತಾ ಕಾರ್ಯಗಳಿಂದ ಪರಿಹಾರ ಕಾಣುವಿರಿ. ಕೈಗೊಂಡ ಕಾರ್ಯಗಳಿಗೆ ಸೋದರಿಯರಿಂದ ಸಹಕಾರವಿದೆ. ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಉತ್ಸಾಹ ಉಂಟಾಗಲಿದೆ. ರಾಜಕಾರಣಿಗೆ ಶುಭವಿದೆ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಈ ವಾರ ನೀವು ನಿಮ್ಮ ಸಹೋದರರ ನೆರವಿನಿಂದ ಗೃಹ ಸಮಸ್ಯೆಗಳ ಪರಿಹಾರ ಕಾಣುವಿರಿ. ಶತ್ರುಗಳ ನಾಶದಿಂದ ನೆಮ್ಮದಿ ಎನಿಸಲಿದೆ. ಸ್ವತ್ತು ತಗಾದೆಗಳಿದ್ದರೆ, ಮುಂದೂಡುವುದು ಉತ್ತಮ. ಅಗತ್ಯ ವ್ಯವಹಾರಗಳಿಂದ ಉತ್ತಮ ಲಾಭ ದೊರೆಯಲಿದೆ.

ಸಿಂಹ:

ದಿನ ಭವಿಷ್ಯ

ಸಿಂಹ:- ಈ ವಾರ ನೀವು ಹಿರಿಯರಿಂದ ಪಡೆಯುವ ಸಲಹೆಗಳಿಂದ ಕೆಲ ಸನ್ನಿವೇಶಗಳಲ್ಲಿ ಅನಿರೀಕ್ಷಿತ ಬದಲಾವಣೆ ಕಾಣುವಿರಿ. ಹೊಸ ವ್ಯವಹಾರಗಳಲ್ಲಿ ಜಯವಿದೆ. ಹಿಂದಿನ ಕೋರ್ಟ್ ಕಚೇರಿ ಕೆಲಸಗಳಲ್ಲಿ ಸಕಾರಾತ್ಮಕ ಬೆಳವಣಿಗೆ ಕಾಣುವಿಕೆಯಿಂದ ಸಂತಸವಿದೆ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಈ ವಾರ ಅವಿವಾಹಿತರಿಗೆ ವೈವಾಹಿಕ ವ್ಯವಹಾರಗಳಿಗೆ ಚಾಲನೆ ದೊರೆಯಲಿದೆ. ಬರಹಗಾರರಿಗೆ ಬರವಣಿಗೆಯಿಂದ ದ್ರವ್ಯಾನುಕೂಲತೆ ಲಭ್ಯವಾಗಲಿದೆ. ಸಹೋದರರ ಸೌಲಭ್ಯಗಳಿಗೆ ಸಾಲ ಮಾಡುವ ಸಂಭವವಿದ್ದು, ಜಾಗರೂಕತೆ ಹೆಜ್ಜೆಯಿಂದ ನಡೆಯುವುದು ಉತ್ತಮ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಈ ವಾರ ನಿಮಗೆ ಒದಗಿ ಬರುವ ಕ್ಲಿಷ್ಟಕರ ಸಮಸ್ಯೆಗಳನ್ನು ಜಾಣ್ಮೆಯಿಂದ ಬಗೆಹರಿಸುವಿರಿ. ಜೊತೆಗೆ ಕೈಗೂಡುವ ಯೋಜನೆಗಳಿಂದ ಅಧಿಕ ಧನಾಗಮನವಿದೆ. ಆಪ್ತರ ಭೇಟಿ, ರುಚಿಕರ ಖಾದ್ಯಗಳ ಸೇವನೆಯಿಂದ ಮನೋಲ್ಲಾಸ, ನೆಮ್ಮದಿ ಇದೆ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಈ ವಾರ ನೀವು ಸಾಮಾಜಿಕ ಸಮಾರಂಭ ಹಾಗೂ ಕಾರ್ಯಗಳ ನಿಮಿತ್ತ ವೈಯಕ್ತಿಕ ವ್ಯವಹಾರಗಳಿಗೆ ಹಿಂದೇಟು ಹಾಕುವ ಸಂಭವವಿದೆ. ಹಿಂದಿನ ಸಾಲದಿಂದ ವೇದನೆಯುಂಟಾಗಲಿದೆ. ಹಿರಿಯ ಸಹೋದರನ ಸಲಹೆ ಸಹಾಯದಿಂದ ನಿಧಾನ ಪ್ರಗತಿ ಕಾಣಲಿದೆ.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ಈ ವಾರ ನೀವು ಆರಂಭದಲ್ಲಿ ಕೆಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಆದರೆ ಇತಿ ಮಿತಿ ಇಲ್ಲದ ಸುತ್ತಾಟದಿಂದ ಪ್ರಯಾಸ ಪಡುವಿರಿ. ಹಿರಿಯರ ಸಂಕಷ್ಟದಿಂದ ತುರ್ತು ಕಾರ್ಯಗಳಿಗೆ ಕುತ್ತು ಇದ್ದು, ದೇವಿ ಆರಾಧನೆಯಿಂದ ಸುಖವೆನಿಸಲಿದೆ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಈ ವಾರ ನೀವು ಸ್ವಕಾರ್ಯ ಸಾಧಿಸುವಲ್ಲಿ ಮಂದ ಗತಿಯನ್ನು ಕಾಣುವಿರಿ. ಸಾಲ ನೀಡುವ ನೀವೇ ಸಾಲ ಪಡೆಯುವ ಸಂಭವ ಬರಬಹುದು. ವಿಳಂಬ ಗತಿಯಲ್ಲಿ ಪುತ್ರರ ಸಮಸ್ಯೆಗೆ ಪರಿಹಾರ ಸಿಗಲಿದೆ. ಸಾಮಾಜಿಕ ಬದುಕು ಕೊಂಚ ದುಸ್ತರವೆನಿಸಲಿದೆ.

ಕುಂಭ:

ದಿನ ಭವಿಷ್ಯ

ಕುಂಭ:- ಈ ವಾರ ನೀವು ಧನಾಗಮನದಲ್ಲಿ ಏರುಪೇರು ಕಾಣುವಿರಿ. ನೆರೆ ಹೊರೆಯವರಿಂದ ವಿನಾಕಾರಣ ಕಲಹಗಳು ತೋರಿ ಬರುವುದರಿಂದ ಕೊಂಚ ಬೇಸರವೆನಿಸಲಿದ್ದು, ಗುರುವಾರಾಧನೆಯಿಂದ ಪರಿಹಾರ ಪಡೆಯುವಿರಿ. ಜೊತೆಗೆ ಆಪ್ತಮಿತ್ರನಿಂದ ನೆರವೂ ಸಿಗಲಿದೆ.

ಮೀನ:

ದಿನ ಭವಿಷ್ಯ

ಮೀನ:- ಈ ವಾರ ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವುದರಿಂದ ಘನತೆ ಹೆಚ್ಚಳಗೊಳ್ಳಲಿದೆ. ಬಂಧು ಸತ್ಕಾರಕ್ಕೆ ಅಧಿಕ ವೆಚ್ಚ ತಗುಲಲಿದೆ. ಜೊತೆಗೆ ಅಧಿಕ ಪ್ರವಾಸದಿಂದ ಪ್ರಯಾಸ ಪಡುವ ಸಂಭವವಿದ್ದು, ಪ್ರವಾಸದ ಮೊಟಕು ಉತ್ತಮ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ವಾರ-ಭವಿಷ್ಯ: 14 ಏಪ್ರಿಲ್ ರಿಂದ 20 ಏಪ್ರಿಲ್ ರವರೆಗೆ, 2019!!