ವಾರ-ಭವಿಷ್ಯ: 14 ಜುಲೈ ರಿಂದ 20 ಜುಲೈ ರವರೆಗೆ, 2019!!

0
246

Astrology in kannada | kannada news ವಾರ-ಭವಿಷ್ಯ: 14 ಜುಲೈ ರಿಂದ 20 ಜುಲೈ ರವರೆಗೆ, 2019!!

ವಾರ-ಭವಿಷ್ಯ: 14 ಜುಲೈ ರಿಂದ 20 ಜುಲೈ ರವರೆಗೆ, 2019!!

ಮೇಷ:

ದಿನ ಭವಿಷ್ಯ

ಮೇಷ:- ನಿಮ್ಮ ಆದರ್ಶಗಳು ನಿಮ್ಮ ಕಾರ್ಯ ಸಾಧನೆಗೆ ಮೆಟ್ಟಿಲುಗಳಾಗುವವು. ಸಾಮಾಜಿಕ ಸ್ಥಾನಮಾನ, ಗೌರವ ಹೆಚ್ಚಾಗಲಿದೆ. ಎದುರಾಗುವ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ನಿಮಗಿದೆ. ಪ್ರೀತಿಪಾತ್ರರು ನಿಮಗೆ ಸಮಯೋಚಿತ ಸಲಹೆ ನೀಡುವರು. ಇಷ್ಟಮಿತ್ರರ ಆಗಮನವಾಗಲಿದೆ. ಚಿಲ್ಲರೆ ವ್ಯಾಪಾರಿಗಳಿಗೆ ಅಧಿಕ ಲಾಭವಾಗಲಿದೆ. ವಾಹನಗಳನ್ನು ಚಲಾಯಿಸುವಾಗ ಎಚ್ಚರವಿರಲಿ. ಹೊಸ ವಸ್ತು ಖರೀದಿ ಬೇಡ. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ಸೋಮವಾರ, ಮಂಗಳವಾರ ಶುಭ ದಿನಗಳು.

ವೃಷಭ:

ದಿನ ಭವಿಷ್ಯ

ವೃಷಭ:- ನಿಮ್ಮ ಆದರ್ಶಗಳು ನಿಮ್ಮ ಕಾರ್ಯ ಸಾಧನೆಗೆ ಮೆಟ್ಟಿಲುಗಳಾಗುವವು. ಸಾಮಾಜಿಕ ಸ್ಥಾನಮಾನ, ಗೌರವ ಹೆಚ್ಚಾಗಲಿದೆ. ಎದುರಾಗುವ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ನಿಮಗಿದೆ. ಪ್ರೀತಿಪಾತ್ರರು ನಿಮಗೆ ಸಮಯೋಚಿತ ಸಲಹೆ ನೀಡುವರು. ಇಷ್ಟಮಿತ್ರರ ಆಗಮನವಾಗಲಿದೆ. ಚಿಲ್ಲರೆ ವ್ಯಾಪಾರಿಗಳಿಗೆ ಅಧಿಕ ಲಾಭವಾಗಲಿದೆ. ವಾಹನಗಳನ್ನು ಚಲಾಯಿಸುವಾಗ ಎಚ್ಚರವಿರಲಿ. ಹೊಸ ವಸ್ತು ಖರೀದಿ ಬೇಡ. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ಸೋಮವಾರ, ಮಂಗಳವಾರ ಶುಭ ದಿನಗಳು.

ಮಿಥುನ:

ದಿನ ಭವಿಷ್ಯ

ಮಿಥುನ:- ನಿಮ್ಮ ಬುದ್ಧಿವಂತಿಕೆ ಹಾಗೂ ಚಾಣಾಕ್ಷ ತನದಿಂದ ಶತ್ರುಗಳ ಪಿತೂರಿ ಬಯಲಾಗಲಿದೆ. ಯಾರದೋ ತಂಟೆ ಬಗೆಹರಿಸಲು ಹೋಗಿ ನೀವು ಹಣ ಕಳೆದುಕೊಳ್ಳುವಿರಿ. ಬರಲಿರುವ ಸವಾಲುಗಳನ್ನು ಸುಲಭವಾಗಿ ನಿಭಾಯಿಸುವಿರಿ. ಹಣಕಾಸು ವಿವಿಧ ಮೂಲಗಳಿಂದ ಕೈ ಸೇರಲಿದೆ. ಕೈಗಾರಿಕೋದ್ಯಮದಲ್ಲಿ ಸಾಕಷ್ಟು ಪ್ರಗತಿ ಕಾಣಲಿದೆ. ಅನೇಕ ಶುಭ ಸಮಾರಂಭಗಳಲ್ಲಿ ಭಾಗವಹಿಸಬೇಕಾಗುವುದು. ಹಿರಿಯರ ಅಭಿಪ್ರಾಯವನ್ನು ಗೌರವಿಸಿರಿ. ಬುಧವಾರ, ಗುರುವಾರ ಉತ್ತಮ ದಿನಗಳು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಸೇವಾ ಭದ್ರತೆ ದೊರೆಯಲಿದೆ. ಅನೇಕ ಕಡೆಗಳಿಂದ ಭರವಸೆಯ ಮಹಾಪೂರವೇ ಹರಿದು ಬರಲಿದೆ. ಧಾರ್ಮಿಕ ಸೇವೆಗಳು ನಿಮ್ಮಿಂದ ನಡೆಯಲಿದೆ. ಎಂತಹ ತೊಂದರೆ ಎದುರಾದರೂ ನಿಮ್ಮ ಕೆಲಸ ಕಾರ್ಯಗಳಿಗೇನೂ ತೊಂದರೆ ಇಲ್ಲ. ಸಾಮಾಜಿಕ ಗೌರವ ಹೆಚ್ಚಲಿದೆ. ನಿಮ್ಮ ಬುದ್ಧಿವಂತಿಕೆಯನ್ನು ಎಲ್ಲರೂ ಕೊಂಡಾಡುವರು. ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ಆಗುತ್ತಿರುವ ಖರ್ಚಿಗೊಂದಿಷ್ಟು ಅಂಕುಶ ಹಾಕುವುದು ಉತ್ತಮ. ಸೋಮವಾರ, ಶುಕ್ರವಾರ ಶುಭ ದಿನಗಳು.

ಸಿಂಹ:

ದಿನ ಭವಿಷ್ಯ

ಸಿಂಹ:- ಹೊಂದಾಣಿಕೆ ಮನೋಭಾವ ರೂಢಿಸಿಕೊಳ್ಳಿ. ಕೆಲವೊಮ್ಮೆ ಸನ್ನಿವೇಶಗಳು ನಿಮ್ಮ ವಿರುದ್ಧವಾಗುವವು. ಅತಿ ಮುಖ್ಯ ವಿಷಯಗಳಲ್ಲಿ ರಾಜೀ ಮಾಡಿಕೊಳ್ಳುವುದು ಉತ್ತಮ. ಮಾನಸಿಕ ನೆಮ್ಮದಿಗೆ ಧಾರ್ಮಿಕ ಶ್ರದ್ಧಾಕೇಂದ್ರಗಳಿಗೆ ಭೇಟಿ ಕೊಡುವಿರಿ. ಸೋದರಿಯ ಆಗಮನ ಮತ್ತೊಂದು ಸಮಸ್ಯೆಗಳಿಗೆ ದಾರಿ ಮಾಡಿಕೊಡುವುದು. ಹೊಸ ವ್ಯಾಪಾರ, ವ್ಯವಹಾರಗಳನ್ನು ಆರಂಭಿಸುವುದು ಬೇಡ. ಶ್ರಮದಿಂದ ಸಾಧಿಸಿದ ಕಾರ್ಯ ನೆಮ್ಮದಿ ತರಲಿದೆ. ಭಾನುವಾರ, ಶನಿವಾರ ಉತ್ತಮ ದಿನಗಳು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಅನೇಕ ದಿನಗಳಿಂದ ನಿರೀಕ್ಷಿಸಿದ್ದ ಶುಭ ಕಾರ್ಯವೊಂದು ಸದ್ಯದಲ್ಲೇ ನಡೆಯಲಿದೆ. ವೃತ್ತಿಯಲ್ಲಿ ಸ್ಥಾನ ಬದಲಾವಣೆ ಸಾಧ್ಯತೆ ಇದೆ. ನೀವು ಮಾಡಿದ ಸಾಮಾಜಿಕ ಕೆಲಸಗಳಿಂದ ವಿಶೇಷ ಮನ್ನಣೆ ಸಿಗಲಿದೆ. ನಿಮ್ಮ ಕನಸುಗಳ ಬಗ್ಗೆ ಬಂಧುಗಳಿಂದ ಸಕಾರಾತ್ಮಕ ಸಲಹೆಗಳು ಬರಬಹುದು. ಆದರೆ ನಿಮ್ಮ ನಿಲುವುಗಳಿಂದ ಹಿಂದೆ ಸರಿಯದಿರುವುದೇ ಉತ್ತಮ. ದುಡುಕಿನ ನಿರ್ಧಾರ ತಳೆಯುವುದು ಒಳಿತಲ್ಲ. ಮಕ್ಕಳ ಭವಿಷ್ಯದ ಬಗ್ಗೆ ಈಗಲೇ ಒಂದು ನಿರ್ಧಾರಕ್ಕೆ ಬರುವುದು ಸೂಕ್ತ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಸರ್ಕಾರಿ ಅಧಿಕಾರಿಗಳಿಂದ ಸಂಪೂರ್ಣ ಸಹಕಾರ ದೊರೆಯಲಿದ್ದು, ನಿಮ್ಮ ಕೆಲಸದ ಕಾರ್ಯಕ್ಷೇತ್ರವನ್ನು ವಿಸ್ತರಿಸಲು ಅನುಕೂಲವಾಗುವುದು. ಕೃಷಿಕರು ಕೃಷಿ ಸಂಬಂಧ ಉಪಕರಣಗಳನ್ನು ಜಾಗ್ರತೆಯಿಂದ ಉಪಯೋಗಿಸಿ. ಮಡದಿಯ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ಮಗುವಿನ ವಿದ್ಯಾಭ್ಯಾಸದ ಬಗ್ಗೆ ದಿನಕ್ಕೊಂದು ಕುತೂಹಲಕರ ಘಟನೆ ನಿಮ್ಮನ್ನು ಚಕಿತಗೊಳಿಸುವುದು. ಕೌಟುಂಬಿಕ ವಿವಾದಗಳನ್ನು ಜಾಣತನದಿಂದ ಬಗೆಹರಿಸುವಿರಿ. ನಿಮ್ಮ ಆಯಾಸವೆಲ್ಲಾ ಪರಿಹಾರವಾಗಲಿದೆ. ಬುಧವಾರ, ಶುಕ್ರವಾರ ಶುಭ ದಿನಗಳು..

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ನಿಷ್ಠುರವಾದಿ ಲೋಕಕ್ಕೆ ವಿರೋಧಿ ಎನ್ನುವಂತೆ ಕೆಲವೊಮ್ಮೆ ಖಡಾ ಖಂಡಿತವಾಗಿ ಮಾತನಾಡುವುದರಿಂದ ವೃಥಾ ನಿಷ್ಠುರತೆ ಕಟ್ಟಿಕೊಳ್ಳಬೇಕಾಗುವುದು. ಮತ್ತೊಬ್ಬರಿಗೆ ಮಾತು ಕೊಡದಿರುವುದು ಒಳ್ಳೆಯದು. ಪ್ರೀತಿ, ವಿಶ್ವಾಸದಿಂದ ಎಲ್ಲರನ್ನು ಗೆಲ್ಲಲು ಪ್ರಯತ್ನಿಸಿ. ಸ್ವಯಂ ಉದ್ಯೋಗಿಗಳಿಗೆ ಪ್ರಗತಿ ಇದೆ. ದಾಂಪತ್ಯದಲ್ಲಿ ಹರ್ಷದಾಯಕ ವಾತಾವರಣ ನೆಲೆಸಲಿದೆ. ಮಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದು. ಭಾನುವಾರ, ಸೋಮವಾರ ಶುಭ ದಿನಗಳು.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ಸಹೋದರರಿಂದ ಸಮಯಕ್ಕೆ ಸರಿಯಾಗಿ ಸಹಾಯ ದೊರೆಯುವುದು. ಮನೆಯಲ್ಲಿ ಕಾಯಿಪಲ್ಯೆ ಹೆಚ್ಚುವಾಗ ಮತ್ತು ಹರಿತ ಆಯುಧಗಳನ್ನು ಬಳಸುವಾಗ ಎಚ್ಚರವಿರಲಿ. ಆರೋಗ್ಯದ ಕಡೆ ಅಲಕ್ಷ ್ಯ ಕೂಡದು. ದೈನಂದಿನ ಜೀವನ ಯಥಾಪ್ರಕಾರ ನಡೆಯಲಿದೆ. ಪ್ರತಿಸ್ಪರ್ಧಿಗಳು ನಿಮಗೆ ಪಂಥಾಹ್ವಾನ ನೀಡುವ ಸಾಧ್ಯತೆ ಇದೆ. ನಿಮ್ಮ ಸಾಹಸ ಪ್ರವೃತ್ತಿಯನ್ನು ವಿರೋಧಿಗಳು ಮೆಚ್ಚುವರು. ಪೂರ್ವ ಯೋಜಿತ ಪ್ರಯಾಣ ಹಾಗೂ ಕಾರ್ಯಕ್ರಮಗಳು ರದ್ದಾಗುವ ಸಾಧ್ಯತೆ ಇದೆ. ಸೋಮವಾರ, ಮಂಗಳವಾರ ಶುಭ ದಿನಗಳು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಮಾನಸಿಕ ಸಮತೋಲನ ಕಾಪಾಡಿಕೊಳ್ಳುವುದರ ಕಡೆ ವಿಶೇಷ ಗಮನ ಕೊಡಿ. ಮತ್ತೊಬ್ಬರ ಜವಾಬ್ದಾರಿ ಹೊರುವಾಗ ಎಚ್ಚರದಿಂದಿರಿ. ಇಲ್ಲವಾದಲ್ಲಿ ನೀವೇ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಕುಲದೇವತಾರಾಧನೆ ಮಾಡುವುದರಿಂದ ಆಪತ್ತುಗಳು ದೂರವಾಗುವವು. ಛಲದಿಂದ ಗುರಿ ಮುಟ್ಟಲು ಯತ್ನಿಸಿ. ಮಡದಿ ಮಕ್ಕಳು ಮಾಡುವ ದುಂದುವೆಚ್ಚದ ಬಗ್ಗೆ ತಿಳಿಹೇಳುವುದು ಉತ್ತಮ. ಹಿತಶತ್ರುಗಳಿಂದ ಅಂತರ ಕಾಯ್ದುಕೊಳ್ಳಿ. ಬುಧವಾರ, ಗುರುವಾರ ಶುಭ ದಿನಗಳು.

ಕುಂಭ:

ದಿನ ಭವಿಷ್ಯ

ಕುಂಭ:- ಬಹಳ ದಿನಗಳಿಂದ ಬಾಕಿ ಇದ್ದ ಕೆಲಸಗಳು ವೇಗವಾಗಿ ಸಾಗಲಿವೆ. ಸಾಮಾಜಿಕ ಮನ್ನಣೆ, ಗೌರವ ಹೆಚ್ಚಲಿದೆ. ಕೊಟ್ಟ ಮಾತನ್ನು ನಡೆಸಿಕೊಳ್ಳಲು ಪರದಾಡುವಿರಿ. ಯಾರು ಏನೇ ಸಲಹೆ ಸೂಚನೆಗಳನ್ನು ಕೊಟ್ಟರೂ ಅದಕ್ಕೆ ತಲೆ ಕೆಡಿಸಿಕೊಳ್ಳದೆ ಸ್ವಂತ ವಿಚಾರ ಮಾಡುವುದನ್ನು ಕಲಿಯಿರಿ. ನೂತನ ದಂಪತಿಯಲ್ಲಿದ್ದ ಭಿನ್ನಾಭಿಪ್ರಾಯ ದೂರವಾಗಲಿದೆ. ಬಂಧುಗಳಲ್ಲಿ ಮೂಡುವ ಒಮ್ಮತದ ಅಭಿಪ್ರಾಯ ನೆಮ್ಮದಿ ತರಲಿದೆ. ಪ್ರೀತಿಪಾತ್ರರನ್ನು ಭೇಟಿ ಆಗುವಿರಿ. ಭಾನುವಾರ, ಸೋಮವಾರ ಶುಭ ದಿನಗಳು.

ಮೀನ:

ದಿನ ಭವಿಷ್ಯ

ಮೀನ:- ವ್ಯಾಪಾರ, ವ್ಯವಹಾರಗಳಲ್ಲಿ ಅನಿರೀಕ್ಷಿತವಾಗಿ ಏರುಪೇರಾಗುವ ಸಂಭವವಿದೆ. ಇಲ್ಲಿ ನಿಮ್ಮ ಜಾಣತನದ ನಡೆ ಬಹುಮುಖ್ಯ. ಊಟ, ಉಪಚಾರಗಳಲ್ಲಿ ತುಸು ಜಾಗ್ರತೆ ಅಗತ್ಯ. ಮನೋನಿಯಾಮಕ ಶಿವನನ್ನು ಆರಾಧಿಸುವುದರಿಂದ ಕ್ಲೇಷಗಳು ದೂರವಾಗುವವು. ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳು ತಾವಾಗಿಯೇ ಬಗೆಹರಿಯಲಿವೆ. ಸ್ನೇಹಿತರ ಸಹಕಾರದಿಂದ ಕೋರ್ಟು, ಕಚೇರಿಯ ಕೆಲಸಗಳು ಸುಲಭವಾಗಲಿವೆ. ಬುಧವಾರ, ಶನಿವಾರ ಉತ್ತಮ ದಿನಗಳು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ವಾರ-ಭವಿಷ್ಯ: 14 ಜುಲೈ ರಿಂದ 20 ಜುಲೈ ರವರೆಗೆ, 2019!!