ವಾರ-ಭವಿಷ್ಯ: 25 ಆಗಸ್ಟ್ ರಿಂದ 31 ಆಗಸ್ಟ್ ರವರೆಗೆ, 2019!!

0
306

Astrology in kannada | kannada news ವಾರ-ಭವಿಷ್ಯ: 25 ಆಗಸ್ಟ್ ರಿಂದ 31 ಆಗಸ್ಟ್ ರವರೆಗೆ, 2019!!

ವಾರ-ಭವಿಷ್ಯ: 25 ಆಗಸ್ಟ್ ರಿಂದ 31 ಆಗಸ್ಟ್ ರವರೆಗೆ, 2019!!

ಮೇಷ:

ದಿನ ಭವಿಷ್ಯ

ಮೇಷ:- ಮನೆ ಕಟ್ಟಿಸುವ ಇಲ್ಲವೆ ಜಾಗ ಖರೀದಿಸುವ ಆಸಕ್ತಿಯಿದ್ದಲ್ಲಿ ಈ ವಾರ ಉತ್ತಮ. ನಿಮ್ಮ ಬಯಕೆಗಳು ಪೂರ್ಣಗೊಳ್ಳುವವು. ಗುತ್ತಿಗೆದಾರರಿಗೆ ಉತ್ತಮ ಅವಕಾಶಗಳ ಜೊತೆಗೆ ಬಾಕಿ ಹಣ ಕೈ ಸೇರುವುದು. ರಾಜಕೀಯ ಗಣ್ಯರಿಂದ ಸಹಾಯ ದೊರೆಯುವುದು. ಮಿತಿ ಮೀರುತ್ತಿರುವ ಖರ್ಚಿಗೆ ತಡೆ ಹಾಕುವುದು ಉತ್ತಮ. ಅತಿ ಮುಖ್ಯವಾದ ಕೆಲಸಗಳಿಗೆ ಮಾತ್ರ ಪ್ರಾಮುಖ್ಯತೆ ಕೊಡಿರಿ. ದೂರದ ಪ್ರಯಾಣ ಈ ವಾರ ಬೇಡ. ಪ್ರತಿಷ್ಠಿತ ಜನರ ಪರಿಚಯವಾಗಲಿದೆ. ಸೋಮವಾರ ಶುಭ ದಿನ..

ವೃಷಭ:

ದಿನ ಭವಿಷ್ಯ

ವೃಷಭ:- ಸರ್ಕಾರಿ ಹಾಗೂ ಅರೆ ಸರ್ಕಾರಿ ಕೆಲಸಗಳು ಪೂರ್ಣಗೊಳ್ಳುವವು. ಶತ್ರುಗಳ ಬಾಧೆ ನಿವಾರಣೆ ಆಗಲಿದೆ. ಮಕ್ಕಳ ನಡಾವಳಿ ನಿಮಗೆ ಹೆಚ್ಚು ಖುಷಿ ನೀಡುವುದು. ಸಂಗಾತಿಯ ಆರೈಕೆ ಹಾಗೂ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆ ಕಂಡು ಬರಲಿದೆ. ಕೌಟುಂಬಿಕ ಸಮಸ್ಯೆಗಳನ್ನು ಮನೆಯ ಸದಸ್ಯರೊಂದಿಗೆ ಬಗೆಹರಿಸಿಕೊಳ್ಳುವಿರಿ. ಮನೆಯಲ್ಲಿ ಧಾಮಿಕ ಕಾರ್ಯಗಳು ನಡೆದು ಮನಸ್ಸಿಗೆ ನೆಮ್ಮದಿಯಾಗುವುದು. ಭಾನುವಾರ, ಗುರುವಾರ ಶುಭ ದಿನಗಳು.

ಮಿಥುನ:

ದಿನ ಭವಿಷ್ಯ

ಮಿಥುನ:- ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಹೆಚ್ಚಿನ ಸಮಯ ಮೀಸಲಿಡಬೇಕು. ಹಿರಿಯ ಅಧಿಕಾರಿಗಳ ಭೇಟಿ ಮತ್ತು ಮಾತುಕತೆಯಿಂದ ಕೆಲಸಗಳು ಪೂರ್ಣಗೊಳ್ಳುವವು. ಅನಿವಾರ್ಯ ಕಾರಣಗಳಿಂದ ದೂರ ಪ್ರಯಾಣ ಮಾಡಬೇಕಾಗುವುದು. ಕುಟುಂಬದಲ್ಲಿದ್ದ ಭಿನ್ನಾಭಿಪ್ರಾಯ ದೂರವಾಗಿ ಒಮ್ಮತ ಮೂಡಲಿದೆ. ಕ್ರೀಡಾಪಟುಗಳ ಸಾಧನೆ ಉತ್ತಮವಾಗಿದ್ದು ಉತ್ಸಾಹ ವೃದ್ಧಿಸುವುದು. ಸಂಶೋಧಕರಿಗೆ ಉತ್ತಮ ಮಾರ್ಗದರ್ಶನ ಸಿಗಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು. ಶುಕ್ರವಾರ ಶುಭ ದಿನ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಗುರು, ಹಿರಿಯರ ಆಶೀರ್ವಾದದಿಂದ ಬಯಸಿದ ಕಾರ್ಯಗಳು ಕೈಗೂಡಲಿವೆ. ಮಗನ ಉನ್ನತ ವ್ಯಾಸಂಗ ವಿದೇಶದಲ್ಲಿ ಮುಂದುವರೆಯಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಪ್ರತಿಷ್ಠೆ ಹೆಚ್ಚಲಿದೆ. ವಿಶೇಷ ಸತ್ಕಾರ, ಸನ್ಮಾನಗಳು ಲಭಿಸಲಿವೆ. ಕಾರ್ಯಕ್ಷೇತ್ರದಲ್ಲಿ ತೀವ್ರ ಒತ್ತಡ ಎದುರಿಸಬೇಕಾಗುವುದು. ನಿಮ್ಮ ಹೋರಾಟ ತಾತ್ವಿಕ ಅಂತ್ಯ ಕಾಣಲಿದೆ. ಇದರಿಂದ ಜನ ಮನ್ನಣೆ ದೊರೆಯುವುದು. ಬರಲಿರುವ ಲಾಭವನ್ನು ಸದುಪಯೋಗ ಪಡಿಸಿಕೊಳ್ಳಿರಿ. ಸೋಮವಾರ, ಬುಧವಾರ ಶುಭ ದಿನಗಳು.

ಸಿಂಹ:

ದಿನ ಭವಿಷ್ಯ

ಸಿಂಹ:- ಅಪರಿಚಿತರ ಪರಿಚಯದಿಂದ ನಿಮ್ಮ ಜೀವನ ಶೈಲಿಯೇ ಬದಲಾಗುವುದು. ಬಂಧುಗಳ ಸಹಾಯದಿಂದ ಮಂಗಳ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುವುದು. ಹಳೆಯ ತಾಪತ್ರಯ ನಿವಾರಣೆಯಾಗಿ ನಿರಾಳತೆ ಮೂಡುವುದು. ದಿನಸಿ ವ್ಯಾಪಾರಿಗಳು ವಾರದ ಮಟ್ಟಿಗೆ ಎಚ್ಚರಿಕೆಯಿಂದ ವ್ಯವಹರಿಸುವುದು ಉತ್ತಮ. ಧಾರ್ಮಿಕ ಕಾರ್ಯಕ್ರಮಗಳಿಗೆ ವಿಶೇಷ ದೇಣಿಗೆ ಕೊಡಬೇಕಾಗುವುದು. ವಿದೇಶಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಸಿಗುವುದು. ನ್ಯಾಯವಾದಿಗಳಿಗೆ ಆರ್ಥಿಕಾಭಿವೃದ್ಧಿ ಆಗುವುದು. ಬುಧವಾರ, ಗುರುವಾರ ಶುಭ ದಿನಗಳು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಸರ್ಕಾರಿ, ಅರೆ ಸರ್ಕಾರಿ ನೌಕರಿಯಲ್ಲಿರುವವರಿಗೆ ವೃತ್ತಿಯಲ್ಲಿ ಕಿರಿಕಿರಿ ಇದೆ. ಸ್ಥಾನ ಬದಲಾವಣೆ ಸಾಧ್ಯತೆ ಇದೆ. ಮಗನ ವಿದ್ಯಾಭ್ಯಾಸಕ್ಕೆ ವಿಶೇಷ ಖರ್ಚು ಮಾಡಬೇಕಾಗುವುದು. ಕಳೆದು ಹೋಗಿದ್ದ ಅಮೂಲ್ಯ ವಸ್ತುಗಳು, ದಾಖಲೆಗಳು ದೊರೆಯುವ ಸಾಧ್ಯತೆ ಇದೆ. ತಾಯಿಯ ಆರೋಗ್ಯದ ಕಡೆ ಇಲ್ಲವೆ ಸಂಗಾತಿಯ ಆರೋಗ್ಯದ ಮೇಲೆ ಅಲ್ಪ ಪರಿಣಾಮ ಬೀರುವುದು. ಬರಹಗಾರರಿಗೆ ಉತ್ತಮ ಬೇಡಿಕೆ ಬರಲಿದೆ. ಶಿಕ್ಷ ಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಸನ್ಮಾನ ಸಿಗಲಿದೆ. ಮಂಗಳವಾರ, ಶುಕ್ರವಾರ ಶುಭ ದಿನಗಳು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಕಾರ್ಯಗಳ ಒತ್ತಡಗಳಿಂದಾಗಿ ನಿಮ್ಮ ವೈಯಕ್ತಿಕ ಕೆಲಸಗಳಲ್ಲಿ ಭಾರಿ ಹಿನ್ನಡೆ ಉಂಟಾಗುವುದು. ತಪ್ಪು ನಿರ್ಧಾರಗಳಿಂದಾಗಿ ನಷ್ಟ ಅನುಭವಿಸಬೇಕಾಗುವುದು. ಕೆಲವು ಪ್ರಸಂಗಗಳಲ್ಲಿ ಸ್ನೇಹಿತರೊಂದಿಗೆ ಸಮಾಲೋಚನೆ ಮಾಡದೆ ದೃಢ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಸ್ವಭಾವದಿಂದಾಗಿ ಬಂಧುಗಳು ದೂರವಾಗುವರು. ಹಿರಿಯರ ಸಲಹೆ ಪಡೆಯಿರಿ. ವ್ಯವಹಾರ ನಿಮಿತ್ತ ಪದೇ ಪದೆ ಪ್ರಯಾಣ ಮಾಡಬೇಕಾಗುವುದು. ಆದ್ದರಿಂದ ದೇಹಾರೋಗ್ಯದ ಬಗ್ಗೆ ವಿಶೇಷ ಗಮನ ನೀಡಿರಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಹಣದ ಮುಗ್ಗಟ್ಟು ತೀವ್ರವಾಗುವುದು. ಸಾಲಗಾರರ ಕಾಟವೂ ಮಾನಸಿಕ ನೆಮ್ಮದಿಯನ್ನು ದೂರ ಮಾಡುವುದು. ಯಾರ ವಿರುದ್ಧವೂ ದ್ವೇಷ ಸಾಧಿಸದೆ ಸ್ನೇಹಭಾವದಿಂದ ಇರಲು ಪ್ರಯತ್ನಿಸಿ. ಕೆಲವು ಪ್ರಸಂಗಗಳಲ್ಲಿ ಉಪಾಯದಿಂದ ತಪ್ಪಿಸಿಕೊಳ್ಳುವಿರಿ. ವೈಯಕ್ತಿಕ ಕೆಲಸಗಳಲ್ಲಿ ಹೆಚ್ಚಿನ ಪರಿಶ್ರಮ ತೋರಬೇಕಾಗುವುದು. ರಾಜಕಾರಣಿಗಳು ಉನ್ನತಿಗೋಸ್ಕರ ಹರಸಾಹಸ ಪಡಬೇಕಾಗುವುದು. ಕೆಲವರಿಗೆ ಉದ್ಯೋಗದಲ್ಲಿ ಅಥವಾ ಮನೆ ಬದಲಾವಣೆ ಸಾಧ್ಯತೆ ಇದೆ.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ಗೌರವ, ಅಗೌರವಗಳು ನಿಮ್ಮ ನಡೆ, ನುಡಿಯನ್ನು ಅನುಸರಿಸಿ ಇವೆ. ನಿಮ್ಮ ಹುದ್ದೆಗೆ ತಕ್ಕಂತೆ ಘನತೆಯಿಂದ ವರ್ತಿಸಿ. ಸರ್ಕಾರಿ ಕೆಲಸಗಳು ಸುಗಮವಾಗಲಿವೆ. ನಿತ್ಯ ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳುವುದು ಉತ್ತಮ. ಶಿಸ್ತುಳ್ಳ ಮನುಜಂಗೆ ಶಿವನು ತಲೆಬಾಗುವನು ಎಂಬ ಸತ್ಯವನ್ನು ಅರಿಯಿರಿ. ತೈಲ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಿದೆ. ಶಿವನ ಆರಾಧನೆಯಿಂದ ಆರೋಗ್ಯ ಸುಧಾರಿಸುವುದು. ಭಾನುವಾರ, ಬುಧವಾರ ಉತ್ತಮ ದಿನಗಳು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ದಿಢೀರ್‌ ಪ್ರಯಾಣ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಮಕ್ಕಳ ಶ್ರೇಯೋಭಿವೃದ್ಧಿಯಿಂದ ನೆಮ್ಮದಿ ಸಿಗುವುದು. ಹಮ್ಮಿಕೊಂಡ ಕಾರ್ಯದಲ್ಲಿ ಶೀಘ್ರವೇ ಯಶಸ್ಸು ದೊರೆಯುವುದು. ವಿದ್ಯಾರ್ಥಿಗಳು ಈಗಿನಿಂದಲೇ ಕಠಿಣ ಅಭ್ಯಾಸ ಮಾಡುವುದು ಒಳಿತು. ಬರಲಿರುವ ಸಂಕಷ್ಟಗಳು ನಿಮ್ಮ ಜಾಣ್ಮೆಯಿಂದ ಪರಿಹಾರವಾಗುವುದು. ಬಂಧುಗಳಿಂದ ಆರ್ಥಿಕ ಸಹಾಯ ದೊರೆಯಲಿದೆ. ಆಂಜನೇಯನ ಮಂತ್ರವನ್ನು ಪಠಿಸುವುದು ಒಳ್ಳೆಯದು. ಗುರುವಾರ, ಶುಕ್ರವಾರ ಉತ್ತಮ ದಿನಗಳು.

ಕುಂಭ:

ದಿನ ಭವಿಷ್ಯ

ಕುಂಭ:- ಮಕ್ಕಳೊಂದಿಗಿರುವ ಭಿನ್ನಾಭಿಪ್ರಾಯಗಳು ಸದ್ಯದಲ್ಲೇ ಬಗೆಹರಿಯಲಿದೆ. ಸುಖ ದಾಂಪತ್ಯ ನಿಮ್ಮದಾಗಲಿದೆ. ಆತುರದ ನಿರ್ಧಾರ ತಳೆಯದೆ ಪಾಲುದಾರರೊಂದಿಗೆ ವಿಚಾರ, ವಿನಿಮಯ ಮಾಡಿಕೊಳ್ಳಿ. ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಇದು ಸುಸಮಯ. ಸಂಗಾತಿಯ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ನಿಮ್ಮ ಖ್ಯಾತಿ ದುರ್ಬಳಕೆಯಾಗದಂತೆ ನೋಡಿಕೊಳ್ಳಿ. ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಒಳಿತು. ಬುಧವಾರ, ಶನಿವಾರ ಉತ್ತಮ ದಿನಗಳು.

ಮೀನ:

ದಿನ ಭವಿಷ್ಯ

ಮೀನ:- ಯೋಜನಾ ಬದ್ಧವಾಗಿ ಆರಂಭಿಸಿದ ಕೆಲಸಗಳು ಅನಾಯಾಸವಾಗಿ ಮುಂದುವರೆಯಲಿದೆ. ಇದರಿಂದ ಸಂತಸ ಸಿಗಲಿದೆ. ಹಣಕಾಸು ವ್ಯವಹಾರದಲ್ಲಿ ಒಪ್ಪಂದದಂತೆ ನಡೆದುಕೊಳ್ಳಿ. ಸಂಬಂಧವಿಲ್ಲದ ವಿಷಯಗಳು ನಿಮ್ಮನ್ನು ಸಮಸ್ಯೆಯ ಸುಳಿಯಲ್ಲಿ ಸಿಲುಕಿಸಬಹುದು. ಸ್ತ್ರೀ ಸಂಬಂಧ ವಿಷಯಗಳಲ್ಲಿ ಅತ್ಯುತ್ಸಾಹ ಸಲ್ಲದು. ಹಂಗಾಮಿ ನೌಕರರ ಕೆಲಸ ಖಾಯಂ ಆಗುವ ಸಾಧ್ಯತೆ ಹೆಚ್ಚಾಗಿದೆ. ಮಗಳಿಗೆ ಉತ್ತಮ ವರ ದೊರೆಯುವ ಸಾಧ್ಯತೆ ಇದೆ. ನವಗ್ರಹ ಆರಾಧನೆ ಮಾಡಿರಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ವಾರ-ಭವಿಷ್ಯ: 25 ಆಗಸ್ಟ್ ರಿಂದ 31 ಆಗಸ್ಟ್ ರವರೆಗೆ, 2019!!