ವಾರ-ಭವಿಷ್ಯ: 28 ಏಪ್ರಿಲ್ ರಿಂದ 4 ಮೇ ರವರೆಗೆ, 2019!!

0
428

Astrology in kannada | kannada news ವಾರ-ಭವಿಷ್ಯ: 28 ಏಪ್ರಿಲ್ ರಿಂದ 4 ಮೇ ರವರೆಗೆ, 2019!!

ವಾರ-ಭವಿಷ್ಯ: 28 ಏಪ್ರಿಲ್ ರಿಂದ 4 ಮೇ ರವರೆಗೆ, 2019!!

ಮೇಷ:

ದಿನ ಭವಿಷ್ಯ

ಮೇಷ:- ನಿಮ್ಮ ಕಾರ್ಯಕ್ಷೇತ್ರದಲ್ಲಿ ಮತ್ತೊಬ್ಬರ ಹಸ್ತಕ್ಷೇಪ ಬಯಸದ ನೀವು ನಿಮ್ಮ ಕೆಲಸದಲ್ಲಿ ನಿರಂತರ ಉತ್ಸಾಹ ಹಾಗೂ ಶ್ರದ್ಧೆ ತೋರುವಿರಿ. ಪರಿಸ್ಥಿತಿಯನ್ನು ಜಾಣತನದಿಂದ ನಿಭಾಯಿಸುವಿರಿ. ಜೀವನದಲ್ಲಿ ಅನೇಕ ಬದಲಾವಣೆಗಳು ಆಗಲಿವೆ. ನಿರುದ್ಯೋಗಿ ಮಗನಿಗೆ ಉತ್ತಮ ಕೆಲಸ ದೊರೆಯಲಿದೆ. ಸ್ನೇಹಿತರ ಸಲಹೆ ಸ್ವೀಕರಿಸುವುದು ಒಳ್ಳೆಯದು. ಆಯವ್ಯಯಗಳು ಸಮ ಪ್ರಮಾಣದಲ್ಲಿ ಇರುವುದರಿಂದ ಹೆಚ್ಚಿನ ತೊಂದರೆ ಇಲ್ಲ.

ವೃಷಭ:

ದಿನ ಭವಿಷ್ಯ

ವೃಷಭ:- ಮಾನಸಿಕ ದುಗುಡ ಹಾಗೂ ಅನಾವಶ್ಯಕ ಭಯ ಬಿಡಿ. ಬಿಟ್ಟು ಹೋಗಿದ್ದ ಬಾಂಧವ್ಯ ಮತ್ತೆ ಬೆಸೆಯಲಿದೆ. ಸದ್ಯದ ಪರಿಸ್ಥಿತಿಯಲ್ಲಿ ನಿಮ್ಮ ಸುತ್ತಲೂ ನಯವಂಚಕರ ಗುಂಪೇ ತುಂಬಿರುವುದು. ಅವರ ಮಾತಿನ ಜಾಲಕ್ಕೆ ಸಿಲುಕಬೇಡಿ. ದೂರಾಲೋಚನೆಯಿಂದ ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸು. ಕೋರ್ಟ್‌, ಕಚೇರಿ ಕೆಲಸಗಳು ನಿಮ್ಮಂತೆ ಆಗುವವು.

ಮಿಥುನ:

ದಿನ ಭವಿಷ್ಯ

ಮಿಥುನ:- ಜೀವನದಲ್ಲಿ ಹೊಂದಾಣಿಕೆ ಅನಿವಾರ್ಯ. ನೀವು ಎಷ್ಟೇ ತಿಳಿವಳಿಕೆಯುಳ್ಳವರಾದರೂ ಕೆಲವೊಂದು ವಿಚಾರಗಳಲ್ಲಿ ಆತ್ಮೀಯರ ಸಲಹೆಯನ್ನು ಸ್ವೀಕರಿಸುವುದು ಒಳ್ಳೆಯದು. ಚಿಕ್ಕಪುಟ್ಟ ತಪ್ಪುಗಳಿಗೂ ಭಾರೀ ಬೆಲೆ ತೆರಬೇಕಾಗುವುದು. ವಿದ್ಯಾರ್ಥಿಗಳು ಪ್ರಥಮ ಪ್ರಯತ್ನದಲ್ಲೇ ಯಶಸ್ಸು ಗಳಿಸುವರು. ವ್ಯಾಪಾರ ವ್ಯವಹಾರದಿಂದ ಹೆಚ್ಚಿನ ತೊಂದರೆಯಿರುವುದಿಲ್ಲ. ಹಣಕಾಸು ಒದಗಿ ಬರುವುದು. ಅತಿಪ್ರಯಾಣ ಅನಾರೋಗ್ಯಕ್ಕೆ ಕಾರಣವಾಗುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಪ್ರಾಮಾಣಿಕತೆಯೇ ನಿಮ್ಮ ಯಶಸ್ಸಿಗೆ ಸೋಪಾನವಾಗಲಿದೆ. ಮಕ್ಕಳಿಂದ ನೆಮ್ಮದಿ ಕಂಡುಕೊಳ್ಳುವಿರಿ. ನೀವು ಸ್ವಂತ ಉದ್ಯಮಿ ಅಥವಾ ಕಮೀಷನ್‌ ಏಜೆಂಟ್‌, ಸರಕಾರಿ ನೌಕರರಾಗಿದ್ದರೆ, ನಿಮ್ಮ ನಡಾವಳಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಿ. ವ್ಯಾಪಾರ-ವ್ಯವಹಾರದಲ್ಲಿ ಅಧಿಕ ಲಾಭ ಬರುವುದು. ಅತಿಲಾಭ ನಿಮ್ಮನ್ನು ಅತಿಯಾಸೆಗೆ ನೂಕದಂತೆ ನೋಡಿಕೊಳ್ಳಿ.

ಸಿಂಹ:

ದಿನ ಭವಿಷ್ಯ

ಸಿಂಹ:- ನೀವಾಗಿಯೇ ಸೃಷ್ಟಿಸಿಕೊಂಡಿದ್ದ ಗೊಂದಲಗಳು ಹಾಗೂ ಸಮಸ್ಯೆಗಳು ತಾವಾಗಿಯೇ ಪರಿಹಾರ ಕಂಡುಕೊಳ್ಳುವವು. ಸಾಮಾಜಿಕ ಜೀವನ ಅತ್ಯುತ್ತಮವಾಗಿದ್ದರೂ ಖಾಸಗಿ ಜೀವನದಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ. ಅವುಗಳನ್ನು ಚಾಣಾಕ್ಷ ತನದಿಂದ ದೂರ ಮಾಡಿಕೊಳ್ಳುವಿರಿ. ಸಕಾಲಿಕ ನೆರವಿನಿಂದ ಚಿಂತೆಗಳು ದೂರಾಗುವುದು. ನೂತನ ಕಾರ್ಯಗಳು ಪ್ರಾಯೋಗಿಕವಾಗಿ ಜಾರಿಗೆ ಬರಲಿವೆ. ಮಗನ ಮದುವೆ ವಿಷಯ ಮತ್ತೊಮ್ಮೆ ಬಂಧುಗಳೊಡನೆ ಚರ್ಚೆಯಾಗುವುದು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ವಿದ್ಯಾರ್ಥಿಗಳು ಸಾಧನೆ ಮಾಡಿದ ಸಂತೃಪ್ತಿಯನ್ನು ಹೊಂದುವರು. ಸರಕಾರದಿಂದ ಬರಬೇಕಾಗಿದ್ದ ಬಾಕಿ ಹಣ ಕೈಸೇರುವುದು. ಆರೋಗ್ಯದ ಕಡೆ ಗಮನವಿರಲಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಪಾಲುದಾರಿಕೆಯಲ್ಲಿ ಹೆಚ್ಚಿನ ಶುಭಫಲಗಳು ದೊರೆಯಲಿವೆ. ರಾಜಕೀಯ ರಂಗ ಪ್ರವೇಶವನ್ನು ತಾತ್ಕಾಲಿಕವಾಗಿ ಮುಂದೂಡುವುದು ಉತ್ತಮ. ವೃತ್ತಿಯಲ್ಲಿ ಯಶಸ್ಸು ಕಂಡುಬರಲಿದೆ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ವೈಯಕ್ತಿಕ ಕೆಲಸ ಕಾರ್ಯಗಳು ನೀವು ಎಣಿಸಿದ ವೇಗದಲ್ಲಿ ಜರುಗುವುದಿಲ್ಲ. ನೆಗಡಿ, ಕೆಮ್ಮು ಮೊದಲಾದ ತೊಂದರೆಗಳು ಕಾಡುವ ಸಂಗತಿ. ಸೋದರಿಯು ಆರ್ಥಿಕ ಸಹಾಯ ಕೋರಿ ನಿಮ್ಮ ಬಳಿಗೆ ಬರುವರು. ಆಡುವ ಮಾತುಗಳು ಹಿತಮಿತವಾಗಿರಲಿ. ಸಗಟು ವ್ಯಾಪಾರಸ್ಥರಿಗೆ ತೆರಿಗೆ ಅಧಿಕಾರಿಗಳಿಂದ ಬಾಧೆ. ನೇತ್ರ ಅಥವಾ ನರಸಂಬಂಧಿ ಸಮಸ್ಯೆಗಳು ನಿಮ್ಮನ್ನು ಆಗಿಂದಾಗ್ಗೆ ಬಾಧಿಸಬಹುದು. ದುಷ್ಟರ ಸಂಗದಿಂದ ದೂರವಿರಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಕೈಗಾರಿಕೋದ್ಯಮಿಗಳಿಗೆ ಆರ್ಥಿಕ ಮುಗ್ಗಟ್ಟು ಎದುರಾಗುವುದು. ಛಲ ಸ್ವಭಾವದಿಂದ ಹಿಡಿದ ಕಾರ್ಯ ಸಾಧಿಸುವಿರಿ. ಸ್ನೇಹಿತರ ಕಡೆಯಿಂದ ಸಕಾಲಿಕ ನೆರವು ಸಿಕ್ಕು ಬಂದ ಸಂಕಷ್ಟ ದೂರಾಗುವುದು. ಮಗನ ಮದುವೆ ಕಾರ್ಯ ಅನಿರೀಕ್ಷಿತವಾಗಿ ಮುಂದೆ ಹೋಗುವ ಸಾಧ್ಯತೆ ಅಥವಾ ಸಂಬಂಧ ಮುರಿದು ಬೀಳಬಹುದು. ಮಧುರ ಪದಾರ್ಥಗಳ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ಮಕ್ಕಳ ನಡಾವಳಿಯಿಂದ ಬೇಸರ ಮೂಡುವುದು. ಸಂಕಷ್ಟಗಳಿಗೆ ಪರಿಹಾರ ಕಂಡುಬರಲಿದೆ..

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ಪ್ರಯತ್ನ ಹಾಗೂ ಪರಿಶ್ರಮದಿಂದಾಗಿಯೇ ನಿಮ್ಮ ಉದ್ಯಮದಲ್ಲಿ ಯಶಸ್ಸು ಕಾಣುವಿರಿ. ನಿಮ್ಮ ಗಟ್ಟಿ ನಿರ್ಧಾರ ಕುಟುಂಬವನ್ನು ಒಗ್ಗೂಡಿಸುವುದು. ಮಂಗಳ ಕಾರ್ಯ ಮತ್ತು ಧಾರ್ಮಿಕ ಚಟುವಟಿಕೆಗಳು ವಿಶೇಷವಾಗಿ ನಡೆಯಲಿವೆ. ಬೇಡವಾದ ವಸ್ತುಗಳ ಖರೀದಿಯಿಂದ ಅನಾವಶ್ಯಕ ಖರ್ಚುಗಳನ್ನು ಭರಿಸಬೇಕಾಗುವುದು. ಬಂಧುಗಳ ಸಹಾಯವನ್ನು ತಿರಸ್ಕರಿಸಬೇಡಿ. ನಿಮ್ಮ ನಡೆಗಳನ್ನು ಎಲ್ಲರೂ ಪ್ರಶಂಸಿಸುವರು. ನಡೆದಾಡುವಾಗ ಎಚ್ಚರವಿರಲಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಉತ್ತಮ ಭಾವನೆ ಹಾಗೂ ಮನಸ್ಸಿನಿಂದಾಗಿ ಎಲ್ಲರ ಪ್ರೀತಿ ಸಂಪಾದಿಸುವಿರಿ. ನಿಮ್ಮ ಕನಸಿನ ಯೋಜನೆಗಳಿಗೆ ಬ್ಯಾಂಕ್‌ಗಳಿಂದ ವಿಶೇಷ ಆರ್ಥಿಕ ನೆರವು ಸಿಗಲಿದೆ. ಸಮಾಜದಲ್ಲಿ ಸ್ಥಾನಮಾನ ಹೆಚ್ಚಲಿದೆ. ಅಂಧಾಭಿಮಾನ ದೂರವಾಗಿ ಎಲ್ಲರನ್ನು ಪ್ರೀತಿಯಿಂದ ಕಾಣುವಿರಿ. ಯಾರೊಂದಿಗೇ ಆಗಲಿ ಅತಿಯಾದ ಸಲುಗೆ, ಅತೀ ಸ್ನೇಹ ಬೇಡ. ಈ ವಾರ ಆದಷ್ಟು ಹೊರ ಪ್ರಯಾಣವನ್ನು ನಿಲ್ಲಿಸಿ.

ಕುಂಭ:

ದಿನ ಭವಿಷ್ಯ

ಕುಂಭ:- ಯಾರು ಏನೇ ಹೇಳಿದರೂ ನಿಮ್ಮ ಲೆಕ್ಕಾಚಾರವೇ ಸರಿಯಾಗಿರುತ್ತದೆ. ನಿಮ್ಮ ಆದಾಯದ ಮೂಲಗಳು ಹೆಚ್ಚಾಗುವುದು. ಬದಲಾವಣೆ ಎಂಬುದು ಅನಿರೀಕ್ಷಿತ ಹಾಗೂ ಅನಿವಾರ್ಯ ಎಂಬುದನ್ನು ಮರೆಯದಿರಿ. ಉತ್ತಮ ಸಂಸ್ಕಾರ ಪ್ರಶಂಸೆಗೆ ಕಾರಣವಾಗುವುದು. ಅರ್ಥವಿಲ್ಲದ ತಿರುಗಾಟ ವ್ಯರ್ಥ ಎಂದು ತಿಳಿಯಿರಿ. ಅಧ್ಯಯನದಲ್ಲಿ ಹೆಚ್ಚಿನ ಏಕಾಗ್ರತೆ ಪಡೆಯಲು ಪ್ರಯತ್ನಿಸಿ. ಈವಾರ ತಾಳ್ಮೆಯೇ ದಿವ್ಯಮಂತ್ರವಾಗಿರಲಿ.

ಮೀನ:

ದಿನ ಭವಿಷ್ಯ

ಮೀನ:- ನಿಗದಿತ ಸಮಯದಲ್ಲಿ ಕೆಲಸ ಮುಗಿಸಬೇಕೆಂಬ ನಿಮ್ಮ ಪ್ರಯತ್ನ ಯಶಸ್ವಿಯಾಗಲಿದೆ. ನೊಂದ ಬಂಧುಗಳಿಗೆ ಸಾಂತ್ವನದ ಮಾತುಗಳನ್ನು ಆಡುವಿರಿ. ಜನಪ್ರಿಯತೆ ನಿಮ್ಮನ್ನು ಹುಡುಕಿಕೊಂಡ ಬರಲಿದೆ. ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಏರ್ಪಡುವುದು. ವಾಹನಗಳನ್ನು ಚಲಿಸುವಾಗ ಎಚ್ಚರಿಕೆಯಿರಲಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ವಾರ-ಭವಿಷ್ಯ: 28 ಏಪ್ರಿಲ್ ರಿಂದ 4 ಮೇ ರವರೆಗೆ, 2019!!