ವಾರ-ಭವಿಷ್ಯ: 29 ಸೆಪ್ಟೆಂಬರ್ ರಿಂದ 05 ಅಕ್ಟೋಬರ್ ರವರೆಗೆ, 2019!!

0
870

Astrology in kannada | kannada news ವಾರ-ಭವಿಷ್ಯ: 29 ಸೆಪ್ಟೆಂಬರ್ ರಿಂದ 05 ಅಕ್ಟೋಬರ್ ರವರೆಗೆ, 2019!!

ವಾರ-ಭವಿಷ್ಯ: 29 ಸೆಪ್ಟೆಂಬರ್ ರಿಂದ 05 ಅಕ್ಟೋಬರ್ ರವರೆಗೆ, 2019!!

ಮೇಷ:

ದಿನ ಭವಿಷ್ಯ

ಮೇಷ:- ತಪ್ಪು-ಸರಿಗಳ ವಿವೇಚನೆ ಇಲ್ಲದೆ ಮಾತನಾಡಬೇಡಿ. ನೀವು ಖಾಸಗಿ ಕಂಪನಿ ನೌಕರರಾಗಿದ್ದಲ್ಲಿ ಗುಂಪುಗಾರಿಕೆ ಮಾಡಲು ಹೋಗಬೇಡಿ ಇದರಿಂದಾಗಿ ನೀವು ಆರ್ಥಿಕ ನಷ್ಟ ಅನುಭವಿಸಬೇಕಾಗುವುದು. ನಿರೀಕ್ಷಿತ ಮೂಲಗಳಿಂದ ಧನಾಗಮನವಾಗಲಿದೆ. ವತ್ತಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರ ಕಾಣಲಿವೆ. ಸಕಾಲಿಕ ಚಿಂತನೆಯಿಂದ ಶಾಂತಿ ಪಡೆಯುವಿರಿ. ನಿಮ್ಮ ಆಲೋಚನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಿರಿ. ಸ್ನೇಹಿತರ ಸಹಕಾರದಿಂದ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ನಿಮ್ಮ ಉನ್ನತಿಗೆ ಎಲ್ಲರಿಂದಲೂ ಸಹಾಯ ದೊರೆಯಲಿದೆ. ಅನಾವಶ್ಯಕ ಖರ್ಚು ಹೆಚ್ಚಾಗುವ ಸಂಭವ. ಸೋಮವಾರ ಮತ್ತು ಶುಕ್ರವಾರ ಶುಭ ದಿನ.

ವೃಷಭ:

ದಿನ ಭವಿಷ್ಯ

ವೃಷಭ:- ಬಿಡುವಿಲ್ಲದ ಕೆಲಸದಿಂದಾಗಿ ಖಿನ್ನತೆ ಕಾಡುವ ಸಾಧ್ಯತೆ ಇರುತ್ತದೆ. ಅಪರಿಚಿತರ ಮಾತಿನ ಜಾಲಕ್ಕೆ ಸಿಲುಕಿಕೊಳ್ಳುವ ಭಯ ಇರುತ್ತದ. ಆಪ್ತರ ಅಥವಾ ಸಂಗಾತಿಯ ಹಿತನುಡಿಗಳನ್ನು ಆಲಿಸುವುದು ಒಳ್ಳೆಯದು. ಮಾಡುವ ಕೆಲಸಗಳಲ್ಲಿ ಏಕಾಗ್ರತೆ ಇರಲಿ. ನಿರೀಕ್ಷಿತ ಶುಭ ಸಮಾಚಾರ ಕೇಳಿಬರಲಿದೆ. ಸಾಧು ಸಜ್ಜನರ ಭೇಟಿ ಆಗುವುದು. ಕೋರ್ಟು ಕಚೇರಿಯ ಕೆಲಸಗಳಲ್ಲಿ ಯಶಸ್ಸು ದೊರೆಯುವುದು. ಅನಾವಶ್ಯಕ ಉದ್ವೇಗಗೊಳ್ಳುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು. ಗುರುವಾರ, ಶುಕ್ರವಾರ ಶುಭ.

ಮಿಥುನ:

ದಿನ ಭವಿಷ್ಯ

ಮಿಥುನ:- ಅಕ್ಕಪಕ್ಕದವರ ಮನೆಯಿಂದ ನಿಂದೆಯ ಮಾತುಗಳು ಕೇಳಿಬರುವ ಸಾಧ್ಯತೆ. ನೆರೆಹೊರೆಯವರೊಂದಿಗೆ ಪ್ರೀತಿ-ವಿಶ್ವಾಸದಿಂದ ವ್ಯವಹರಿಸಿರಿ. ಹಳೆಯ ಕಹಿ ಘಟನೆಗಳನ್ನು ಮತ್ತೆ ಮತ್ತೆ ಮೆಲುಕು ಹಾಕುವುದರಿಂದ ಏನೂ ಪ್ರಯೋಜನವಿಲ್ಲ. ಮಾಡುವ ಕೆಲಸ ಕಾರ್ಯಗಳಲ್ಲಿ ಅವಸರ ಬೇಡ. ಹಿರಿಯರ ಸಲಹೆಯನ್ನು ಯಾವುದೇ ಕಾರಣಕ್ಕು ತಿರಸ್ಕರಿಸಬೇಡಿರಿ. ಮತ್ತು ಕಂಡವರ ವಿಷಯದಲ್ಲಿ ಮೂಗು ತೂರಿಸದಿರಿ. ತಾಳ್ಮೆ ಈ ವಾರದ ಮಂತ್ರವಾಗಿರಲಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ರಾಜಕೀಯ ಧುರೀಣರಿಗೆ ಬಿಡುವಿಲ್ಲದ ತಿರುಗಾಟ ಹಾಗೂ ತೀವ್ರ ಒತ್ತಡದ ಸನ್ನಿವೇಶ. ಆರೋಗ್ಯದ ಬಗ್ಗೆ ಉದಾಸೀನ ಬೇಡ. ಊಟ ಮತ್ತು ಉಪಚಾರ ವಿಷಯದಲ್ಲಿ ಎಚ್ಚರಿದಿಂದಿರಿ. ಬಾಕಿ ಹಣ ಮರು ಪಾವತಿಯಾಗಲಿದೆ. ಮಾನಸಿಕ ಗೊಂದಲಗಳಿಂದ ಹೊರ ಬರಲು ಹೊಸ ಮಾರ್ಗ ಕಂಡುಕೊಳ್ಳುವಿರಿ. ವ್ಯಾಪಾರಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಲೇವಾದೇವಿ ವ್ಯವಹಾರದಲ್ಲಿ ಅತಿಯಾದ ನಂಬಿಕೆಯಿಂದ ಅಪಾರ ನಷ್ಟ ಅನುಭವಿಸುವಿರಿ. ಹಿರಿಯರಿಂದ ಬರುವ ಸಲಹೆಗಳನ್ನು ತಿರಸ್ಕರಿಸದಿರಿ.

ಸಿಂಹ:

ದಿನ ಭವಿಷ್ಯ

ಸಿಂಹ:- ಕುಟುಂಬದ ಸದಸ್ಯರಿಗೆ ನಿಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿರಿ. ಕಳೆದುಹೋಗಿದ್ದ ದಾಖಲೆ ಪತ್ರ ಮರಳಿ ಕೈಸೇರುವುದು. ದೂರ ಪ್ರಯಾಣಕ್ಕೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುವಿರಿ. ಹೊಸ ಗೆಳೆಯರೊಂದಿಗೆ ಪರಮಾಪ್ತತೆ ಹೊಂದುವಿರಿ. ಸಂಶೋಧಕರಿಗೆ ಗುರುಗಳಿಂದ ಉತ್ತಮ ಮಾರ್ಗದರ್ಶನ ಲಭಿಸುವುದು. ಮನೆಯಲ್ಲಿ ವಿಶೇಷ ಧಾರ್ಮಿಕ ಕಾರ್ಯಗಳು ನಡೆಯುವವು. ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಭ್ಯಾಸ ಮಾಡುವುದು ಒಳ್ಳೆಯದು. ಭಾನುವಾರ ಶುಭ ದಿನ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿರಿ. ಮನೆಯಲ್ಲಿ ಅತಿ ಸನಿಹದಲ್ಲಿ ಮಂಗಳ ಕಾರ್ಯಗಳು ನಡೆಯುವ ಸಾಧ್ಯತೆ ಇರುವುದು. ಮುಖಸ್ತುತಿ ಮಾಡುವವರನ್ನು ಆದಷ್ಟು ದೂರ ಇಡುವುದು ಒಳ್ಳೆಯದು. ಆಹಾರದ ವ್ಯತ್ಯಯದಿಂದ ಆರೋಗ್ಯದಲ್ಲಿ ಸಮಸ್ಯೆ ಎದುರಾಗುವ ಸಂಭವ ಇರುತ್ತದೆ. ವ್ಯವಹಾರದಲ್ಲಿ ಹಾಕಿದ ಬಂಡವಾಳ ಮುಂದೆ ದೊಡ್ಡ ಮೊತ್ತವಾಗಿ ನಿಮ್ಮ ಕೈಸೇರುವುದು. ವಿಜ್ಞಾನಿಗಳು, ಸಂಶೋಧಕರಿಗೆ ಉತ್ತಮ ವಾರವಿದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಪರರ ಕೆಲಸ ನಿಮಿತ್ತವಾಗಿ ನಿಮ್ಮ ವೈಯಕ್ತಿಕ ಕೆಲಸಗಳನ್ನು ಅಲಕ್ಷಿಬೇಡಿರಿ. ಹೊಸ ಯೋಜನೆಗಳಿಗೆ ಮಾತುಕತೆ ನಡೆಸಲು ಅಡ್ಡಿಯಿಲ್ಲ. ಸವಿ ಮಾತುಗಳಿಂದ ಮಾತ್ರ ಬೇರೆಯವರು ನಿಮಗೆ ಸಹಾಯ ಮಾಡಬಹುದು. ಮನೆಯಲ್ಲಿ ಆರೋಗ್ಯಕರ ವಾತಾವರಣ ಮೂಡಲಿದ್ದು ತುಸು ನೆಮ್ಮದಿ ತರಲಿದೆ. ಹೊಸ ಉದ್ಯಮ ನಡೆಸಲು ಇದು ಸೂಕ್ತ ಸಮಯ. ಮಡದಿಯ ಆರೋಗ್ಯದ ಬಗ್ಗೆ ಅಲಕ್ಷ್ಯ ಬೇಡ. ಆರ್ಥಿಕ ಸ್ಥಿತಿ ಉತ್ತಮ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಸದ್ಯಕ್ಕೆ ಈವಾರ ಹೆಚ್ಚಿನ ಖರ್ಚಿಗೆ ದಾರಿ ಉಂಟು ಮಾಡುವ ಘಟನೆಗಳು ಜರುಗುವುದು. ಉದ್ಯೋಗ ಜೀವನದಲ್ಲಿ ಏಕತಾನತೆಯಿಂದ ಬೇಸರ ಮೂಡುವುದು. ಕೆಲವೊಮ್ಮೆ ಮಾಡುತ್ತಿರುವ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬೇರೊಂದು ಕಂಪನಿಗೆ ಸೇರುವ ಆತುರ ತೋರುವಿರಿ. ಆದರೆ ಕೆಲಸ ಬದಲಾಯಿಸಲು ಸೂಕ್ತ ಸಮಯವಲ್ಲ.ಹೊಸ ಸ್ನೇಹಿತರ ಭೇಟಿ ಆಗಲಿದೆ. ಶಿವ ಪಂಚಾಕ್ಷರಿ ಮಂತ್ರ ಪಠಿಸಿರಿ.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ಆರ್ಥಿಕ ಉನ್ನತಿಗಾಗಿ ಮಹಾಲಕ್ಷ್ಮೀಯನ್ನು ಪೂಜಿಸಿರಿ. ಬಂಧುಗಳ ವೈಯಕ್ತಿಕ ವ್ಯವಹಾರದಲ್ಲಿ ನಿಮ್ಮ ಮಧ್ಯಸ್ಥಿಕೆಯಾಗಲೀ ಅಥವಾ ಕುತೂಹಲವಾಗಲೀ ಬೇಡ. ಇಲ್ಲವಾದಲ್ಲಿ ನೀವೇ ಅಪಮಾನಕ್ಕೆ ಈಡಾಗುವಿರಿ. ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬರಲಿದೆ. ದೂರದ ಪ್ರಯಾಣ ಅನಿವಾರ್ಯವಾಗಬಹುದು. ರಾಜಕಾರಣಿಗಳಿಗೆ ಈ ವಾರ ಒತ್ತಡ ತಪ್ಪಿದ್ದಲ್ಲ. ಗುರುವಿನ ಕೃಪೆಯಿಂದ ಮಾನ-ಸನ್ಮಾನಗಳು ಆಗುವವು. ಪರಿವಾರದೊಂದಿಗೆ ಕುಲದೇವತಾ ದರ್ಶನ ಪಡೆಯಿರಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಮಕ್ಕಳ ವಿದ್ಯಾಭ್ಯಾಸ ಮುಂದುವರಿಕೆಗೆ ಹಣಕಾಸಿನ ವ್ಯವಸ್ಥೆ ಮಾಡಬೇಕಾಗುವುದು. ವಿದ್ಯುತ್ ಉಪಕರಣ ಖರೀದಿಯಿಂದ ವಿಪರೀತ ಖರ್ಚು ಕಂಡುಬರುವುದು. ಗೆಳೆಯರು ಕೊಡುವ ಸಲಹೆಗಳನ್ನು ಕಡೆಗಣಿಸಬೇಡಿ. ನಿಮ್ಮ ಹಿರಿತನದ ಸ್ವಭಾವ ಮತ್ತೊಬ್ಬರಿಗೆ ಮುಜುಗರ ಉಂಟುಮಾಡುವ ಸಾಧ್ಯತೆ ಇರುವುದು. ಆಯುಧಗಳಿಂದ ಗಾಯಗಳು ಆಗುವ ಸಂಭವ. ಬರಲಿರುವ ಉತ್ತಮ ಅವಕಾಶಗಳನ್ನು ಪೂರ್ಣವಾಗಿ ಬಳಸಿಕೊಳ್ಳಿರಿ. ಅತಿಯಾದ ಸಂಶಯದಿಂದ ಒಳ್ಳೆಯ ಸಮಯ ಕಳೆದುಕೊಳ್ಳುವಿರಿ.

ಕುಂಭ:

ದಿನ ಭವಿಷ್ಯ

ಕುಂಭ:- ದಕ್ಷತೆಯಿಂದ ಕಾರ್ಯ ನಿರ್ವಹಿಸುವಿರಿ. ಉದರ ಸಂಬಂಧಿ ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆ. ಸಾಲಕ್ಕೆ ಸಂಬಂಧಪಟ್ಟ ವ್ಯಾಜ್ಯಗಳನ್ನು ಜಾಣತನದಿಂದ ನಿಭಾಯಿಸುವಿರಿ. ಅತಿ ಮುಂಗೋಪ ದ್ವೇಷಕ್ಕೆ ಕಾರಣವಾಗುವುದು. ಗೆಳೆಯರೊಂದಿಗೆ ಇಲ್ಲವೆ ಹಿರಿಯರೊಂದಿಗೆ ಸಮಾಲೋಚಿಸಿ ನಿರ್ಣಯ ತೆಗೆದುಕೊಳ್ಳಿರಿ. ಮತ್ತೊಬ್ಬರ ವಾಹನವನ್ನು ಉಪಯೋಗಿಸುವಾಗ ಎಚ್ಚರವಿರಲಿ.ಮಂಗಳವಾರ ಶುಭ ದಿನ.

ಮೀನ:

ದಿನ ಭವಿಷ್ಯ

ಮೀನ:- ಈವಾರ ನೀವು ಅತೀ ಮುಖ್ಯವಾದ ಕೆಲಸಗಳ ಕಡೆ ಗಮನ ಕೊಡುವುದು ಒಳ್ಳೆಯದು. ಮಡದಿಯ ಮಾತು ಮನಸ್ಸಿಗೆ ಮುದ ತರಲಿದೆ. ದೂರದ ಪ್ರಯಾಣವನ್ನು ಮುಂದೂಡುವುದು ಒಳಿತು. ನಿಮ್ಮ ಉತ್ತಮ ಕಾರ್ಯಗಳಿಗೆ ಸೋದರರಿಂದ ಬೆಂಬಲ ದೊರೆಯುವುದು. ಕುಲದೇವತಾ ಆರಾಧನೆಯಿಂದ ನೀವು ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುವಿರಿ. ಗುರುವಿನ ಸ್ತೋತ್ರ ಪಠಿಸಿ. ಬುಧವಾರ, ಗುರುವಾರ ಶುಭ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ವಾರ-ಭವಿಷ್ಯ: 29 ಸೆಪ್ಟೆಂಬರ್ ರಿಂದ 05 ಅಕ್ಟೋಬರ್ ರವರೆಗೆ, 2019!!