ಸಾಮಾನ್ಯವಾಗಿ ಮರಗಳಿಂದ ಆಮ್ಲಜನಕ, ತರಹೇವಾರಿ ಹಣ್ಣು-ಹಂಪಲುಗಳು ಸಿಗುತ್ತವೆ, ಆದರೆ ಈ ವಿಶೇಷ ಮರ ವಿದ್ಯುತ್ ಕೊಡುತ್ತೆ!!

0
528

ದೇಶದ ಸರ್ಕಾರಗಳ ನಿದ್ದೆ ಗೆಡಿಸಿದ ಸಮಸ್ಯೆಗಳಲ್ಲಿ ವಿದ್ಯುತ್​ ಸಮಸ್ಯೆ ಕೂಡ ಒಂದು.. ಹೇಗಾದ್ರು ಪರ್ಯಾಯ ಮಾರ್ಗವನ್ನು ಹುಡಕಲು ಕಾರ್ಯ ಪ್ರವೃತ್ತವಾಗಿವೆ. ಅಲ್ಲದೆ ಪರ್ಯಾಯ ಹುಡುಕಾಟಕ್ಕಾಗಿ ಕೋಟ್ಯಾಂತರ ಹಣವನ್ನು ವ್ಯಯಮಾಡಲಾಗುತ್ತಿದೆ. ಹೀಗಿದ್ದಾಗ ಪಶ್ವಿಮ ಬಂಗಾಳದಲ್ಲಿ ಸೋಲಾರ್​​ ಟ್ರೀ ಹೆಸರನಲ್ಲಿ ಒಂದು ಯೋಜನೆ ರಚಿಸಲಾಗಿದೆ. ಈ ಯೋಜನೆ ಸದ್ಯ ದೇಶವಾಸಿಗಳ ಗಮನ ಕದ್ದಿದೆ. ಹಾಗಿದ್ರೆ ಆ ಸೋಲಾರ್​ ವಿಶೇಷತೆಗಳು ಏನು ಇಲ್ಲಿದೆ ಒಂದು ಕಂಪ್ಲೀಟ್​ ರಿಪೋರ್ಟ್​​​…

ಕೇವಲ ನಾಲ್ಕು ಸ್ಕ್ವೇರ್​ ಫೀಟ್​​ನಷ್ಟು ಸ್ಥಳದಲ್ಲಿ ಸುಮಾರು 3 ಕಿಲೋಮಿಟರ್​​ಗಳಿಗೆ ವಿದ್ಯುತ್​ ಪೂರೈಸುವ ಉದ್ದೇಶ ಈ ಯೋಜನೆಯದ್ದಾಗಿದೆ. ಈ ಸೋಲಾರ್​ ಟ್ರೀಯಿಂದ ಸುಮಾರು 5 ಮನೆಗಳಿಗೆ ವಿದ್ಯುತ್​ ಸರಬಾರಜು ಮಾಡಬುಹದಾಗಿದೆ ಎಂದು ಅಂದಾಜಿಸಲಾಗಿದೆ.
ಇನ್ನು ಕಡಿಮೆ ಸ್ಥಳ ಇರುವ ಪ್ರದೇಶದಲ್ಲಿ ಈ ಸೋಲರಾ ಟ್ರೀ ಅಳವಡಿಸಬಹುದಾಗಿದೆ. ಇನ್ನು ಈ ಸೋಲಾರ್​ ಟ್ರೀಗಳಿಂದ ಒಂದು ಮೆಗಾವ್ಯಾಟ್​ ವಿದ್ಯುತ್​ ಉತ್ಸಾಪದಿಸಲು ಸುಮಾರು 5 ಎಕರೆ ಜಮೀನು ಅವಶ್ಯ. ಇನ್ನು 10 ಸಾವಿರ ಮೆಗಾವ್ಯಾಟ್​ ವಿದ್ಯುತ್​​ ತಯಾರಿಸಲು ಸುಮಾರು 50 ಸಾವಿರ ಎಕರೆ ಸ್ಥಳದ ಅವಶ್ಯಕತೆ ಇದೆ. ಇಂತಹ ಯೋಜನೆಗಳು ವಿದ್ಯುತ್​​ ಕೊರತೆ ಅನುಭವಿಸುತ್ತಿರುವ ರಾಜ್ಯಗಳಲ್ಲಿ ಬಳಸಹುದಾಗಿದೆ.

ಇನ್ನು ಇದೇ ಅಂದಾಜಿನಲ್ಲಿ 5 ಕಿಲೋವ್ಯಾಟ್​ ವಿದ್ಯುತ್​ ತಯಾರಿಸಲು 400 ಸ್ಕ್ವೇರ್​​ ಫೀಟ್​​ ಸ್ಥಳ ಬೇಕಾಗುತ್ತದೆ. ಇನ್ನು ಮೂರು ಕಿಲೋ ವ್ಯಾಟ್​ ಸೋಲಾರ್​ ಪಾವರ್​ ಟ್ರೀಯನ್ನು ಬಳಸಬಹುದು. ಅಲ್ಲದೆ ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿ ಈಂತಹ ಟ್ರೀ ಇದ್ದಲ್ಲಿ ರಾಜ್ಯದಲ್ಲಿ ವಿದ್ಯುತ್​ ಕ್ಷಾಮ ತಲೆದೂರದು.

ಈ ಯೋಜನೆಯನ್ನು ಸದ್ಯ ಪಶ್ಚಿಮ್​ ಬಂಗಾಳದಲ್ಲಿ ಈತ್ತೀಚಿಗೆ ಉದ್ಘಾಟಿಸಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಮಾಡುವ ಪ್ಲಾನ್​ ಮಾಡಿಕೊಳ್ಳಲಾಗಿದೆ. ಏನೇ ಆಗ್ಲಿ ಒಳ್ಳೆಯ ಕೆಲಸಕ್ಕೆ ಕೈ ಜೋಡಿಸಿ ನಮ್ಮ ರಾಜ್ಯಗಳಲ್ಲೂ ಇಂತಹ ಬದಲಾವಣೆ ಬಂದ್ರೆ ಒಳ್ಳೆಯದೇ ಅಲ್ವಾ..