ಸಮಯ ಪ್ರಜ್ಞೆ ಇಲ್ಲದ ರೈಲ್ವೆ ಇಲಾಖೆ, ರೈಲ್ವೆಯಲ್ಲೇ ಶಾಪಿಂಗ್ ಮಾಲ್ ತೆರೆಯುತ್ತಿದೆ; ಇದು ಕೇಂದ್ರ ಸರ್ಕಾರದ ದಡ್ಡತನಲ್ಲವೇ..?

0
358

ಇಂಡಿಯನ್ ರೈಲ್ವೆ ತನ್ನ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹಲವಾರು ಹೊಸ ಯೋಜನೆಗಳನ್ನು ರೂಪಿಸುತ್ತಿದ್ದು ರೈಲ್ವೆಯಲ್ಲೇ ಎಲ್ಲ ತರಹದ ಸೌಲಭ್ಯಗಳನ್ನು ಒದಗಿಸುವುದು ಮುಖ್ಯ ಗುರಿಯಾಗಿದೆ. ಈ ಸಾಲಿನಲ್ಲಿ ಈಗಾಗಲೇ ಫುಡ್, ಡ್ರಿಂಕಿಂಗ್ ವಾಟರ್, ಟಿಕೆಟ್ ನಲ್ಲಿ ರಿಯಾಯತಿ ಮಾಡಿದ್ದು ಕೆಲವೊಂದು ಟಿಕೆಟ್ ಬುಕಿಂಗ್ ಕೂಡ ಪ್ರಯಾಣಿಕರಿಗೆ ಅನುಕೂಲಕರವಾಗಿವೆ. ಇತ್ತೀಚೆಗಷ್ಟೇ ಮೊಬೈಲ್ -ನಲ್ಲಿ ಜನರಲ್ ಟಿಕೆಟ್ ಬುಕಿಂಗ್ ಸೇವೆಯನ್ನು ಪ್ರಾರಂಭಿಸಿದ್ದು ಇದರಿಂದ ಪ್ರಯಾಣಿಕರು ಸಾಲಿನಲ್ಲಿ ನಿಲ್ಲುವ ಪಜೀತಿ ತಪ್ಪಿದು ಇದು ಭಾರತೀಯ ರೈಲ್ವೆ ಇಲಾಖೆಯ ಬೆಳವಣಿಗೆಯಾಗಿದೆ.

ಈಗ ಮತ್ತೊಂದು ಬೆಳವಣಿಗೆ ಕೈ ಹಾಕಿದ್ದು ದೂರದ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಅತ್ಯುತ್ತಮ ಸೇವೆ ಒದಗಿಸಲು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಈ ಹೊಸ ಯೋಜನೆಯ ಮೂಲಕ ನೀವು ರೈಲಿನಲ್ಲೇ ಶಾಪಿಂಗ್​ ಮಾಡಬಹುದು. ಇದೇನಿದು ರೈಲ್ವೆ ಇಲಾಖೆ ಮಾಡಿರುವ ಈ ಯೋಚನೆ ವಿಬ್ಬಿನ್ನವಾಗಿದೆ. ಇದನ್ನು ಊಹಿಸಲು ಸಾಧ್ಯವಾಗುತ್ತಿಲ್ಲ ಎಂದರು ಇದು ಸತ್ಯವಾಗಿದೆ.

ರೈಲಿನಲ್ಲಿ ಶಾಪಿಂಗ್ ಮಾಲ್?

ಹೌದು ಈ ಶಾಪಿಂಗ್ ಸೇವೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಿದ್ದು ಮೆಸರ್ಸ್​ ಎಚ್​ಬಿಎನ್​ ಪ್ರೈವೆಟ್​ ಲಿಮಿಟೆಡ್ ಎಂಬ ಕಂಪೆನಿಯು ಈಗಾಗಲೇ 5 ವರ್ಷಗಳ ಅವಧಿಗೆ 3.66 ಕೋಟಿಗೆ ಗುತ್ತಿಗೆಯನ್ನು ಪಡೆದಿದೆ. ಇದನ್ನು ಪಶ್ಚಿಮ ರೈಲ್ವೇಯ 16 ಮೇಲ್ ಮತ್ತು ಎಕ್ಸ್​ಪ್ರೆಸ್​ ರೈಲುಗಳಲ್ಲಿ ಪ್ರಾರಂಭಿಸಲಾಗುತ್ತದೆ. ಈ ಯೋಜನೆಯಲ್ಲಿ 1 x 3 x 3 ಅಡಿ ಗರಿಷ್ಠ ವಿಸ್ತೀರ್ಣದ ಶಾಪಿಂಗ್ ಕಾರ್ಟ್​ನ್ನು ಸ್ಥಾಪಿಸಲಾಗುತ್ತಿದ್ದು, ಇಲ್ಲಿ ಇಬ್ಬರು ಸೇಲ್ಸ್​ಮೆನ್​ ಕಾರ್ಯ ನಿರ್ವಹಿಸಲಿದ್ದಾರೆ. ಇದರಲ್ಲಿ ಪ್ರಯಾಣಿಕರಿಗೆ ಪ್ರಯಾಣದ ಸಮಯದಲ್ಲಿ ಬೇಕಾಗುವ ವಸ್ತುಗಳು ಸಿಗಲಿವೆ.

ಎಂದಿನಿಂದ ಕಾರ್ಯಾರಂಭ?

ರೈಲ್ವೆ ಶಾಪಿಂಗ್ ಮಾಲ್ ಗಳು ಬರುವ ಜನವರಿ 2019 ರ ಮೊದಲ ವಾರದಲ್ಲಿ ಸೌಲಭ್ಯವನ್ನು ಪ್ರಾರಂಭಿಸಲಿದ್ದು. ಇಲ್ಲಿ ನಗದು, ಕ್ರೆಡಿಟ್​ ಮತ್ತು ಡೆಬಿಟ್​ ಕಾರ್ಡುಗಳ ಮೂಲಕ ಶಾಪಿಂಗ್ ಮಾಡಿಕೊಳ್ಳಬಹುದು. ಈ ಯೋಜನೆ ಪ್ರಾರಂಭದಲ್ಲಿ ಮೂರು ರೈಲುಗಳ ಪ್ರಯಾಣಿಕರಿಗೆ ಸೇವೆ ದೊರಕಲಿದೆ. ಈ ಕುರಿತು ಈಗಾಗಲೇ ಮುಂಬೈ-ಅಹಮದಾಬಾದ್ ಶತಾಬ್ದಿ ಎಕ್ಸ್​ಪ್ರೆಸ್​ನಲ್ಲಿ ಶಾಪಿಂಗ್ ಸೇವೆ ತೆರೆಯಲು ಕೆಲಸಗಳು ಆರಂಭವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಪ್ರಯಾಣಿಕರಿಗೆ ಪ್ರಯಾಣದ ಜೊತೆಗೆ ವಸ್ತುಗಳ ಖರೀದಿಸುವ ಸೌಭಾಗ್ಯ ಸಿಗಲಿದೆ.

ರೈಲ್ವೆ ಶಾಪಿಂಗ್-ನಲ್ಲಿ ಇನ್ನೆಲ್ಲ ಸಿಗಲಿವೆ?

ಹೌದು ಬರಿ ಶಾಪಿಂಗ್ ಪರಿಚಯ ಮಾಡಿದರೆ ಅದರಲ್ಲಿ ಯಾವ ರೀತಿಯ ವಸ್ತುಗಳು ಸಿಗುತ್ತೆ ಅಂದ್ರೆ ಮುಖ್ಯವಾಗಿ ಪ್ರಯಾಣಿಕರು ಎಫ್​ಎಂಜಿಸಿ ಸರಕುಗಳನ್ನು, ಸೌಂದರ್ಯವರ್ಧಕ, ಅಡುಗೆ ಸಮಾನು, ಸಲಕರಣೆ ಮತ್ತು ಫಿಟ್ನೆಸ್​ ಸರಕುಗಳು ಸೇರಿದಂತೆ ಹಲವು ಉತ್ಪನ್ನಗಳನ್ನು ಖರೀದಿಸಬಹುದು. ಅಲ್ಲದೆ ತಂಬಾಕು, ಸಿಗರೇಟ್​ ಮತ್ತು ಗುಟ್ಕಾ ಉತ್ಪನ್ನಗಳಿಗೆ ಮಾರಾಟವನ್ನು ನಿರ್ಬಂಧ ವಿಧಿಸಲಾಗಿದೆ. ರೈಲಿನಲ್ಲಿ ಪ್ರಾರಂಭಿಸಲಾಗುವ ಈ ಅಂಗಡಿಗಳನ್ನು ಬೆಳಿಗ್ಗೆ 8 ರಿಂದ ರಾತ್ರಿ 9 ರವರೆಗೆ ತೆರೆದಿರಲಾಗುತ್ತದೆ. 16 ಮೇಲ್​ ಮತ್ತು ಎಕ್ಸ್​ಪ್ರೆಸ್​ ರೈಲುಗಳಲ್ಲಿ ಈ ಸೌಲಭ್ಯ ಸಿಗಲಿದ್ದು, ಇದರಿಂದ ದೂರದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.

ಈ ಇದರ ವಿರುದ್ದ ಪ್ರಯಾಣಿಕರ ದೂರು:

ರೈಲ್ವೆ ಇಲಾಖೆ ಮೊದಲು ಸರಿಯಾದ ಸಮಯ ಪ್ರಜ್ಞೆ ಕಲಿತುಕೊಂಡು ಪ್ರಯಾಣಿಕರಿಗೆ ಅನುಕೂಲವಾಗಲಿ. ಇದೆಲ್ಲವನ್ನು ಬಿಟ್ಟು ಬರಿ ತನ್ನ ಆದಾಯವನ್ನು ಹೆಚ್ಚಿಸುವ ಯೋಚನೆಯನ್ನು ಮಾಡುತಿದ್ದೆ ಹೊರೆತು ಸರಿಯಾದ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗುತ್ತಿರುವುದು ಅರಿತುಕೊಳ್ಳಬೇಕು ಎಂದು ಇದರ ವಿರುದ್ಧ ಹಲವಾರು ದೂರುಗಳು ಕೇಳಿಬರುತ್ತಿವೆ.

Also read: ಕೇಂದ್ರ ಸರ್ಕಾರ ಟ್ರಾಯ್‌ ಮೂಲಕ ಹೊಸ ನಿಯಮ ಜಾರಿ; ಟಿವಿ ವಿಕ್ಷಕರಿಗೆ ಬಾರಿ ದುಬಾರಿಯಾದ ಟಿವಿ ಚಾನೆಲ್-ಗಳು..