ತಿಮಿಂಗಿಲ ವಾಂತಿಯಿಂದ ಕೋಟ್ಯಧಿಪತಿಯಾದ ಮೀನುಗಾರರು

0
2871

ಏಕಾಏಕಿ ಶ್ರೀಮಂತ ಆಗಲು ಲಾಟರಿಯೇ ಹೊಡೆಯಬೇಕೆಂದಿಲ್ಲ..ಮಧ್ಯ ಪ್ರಾಚ್ಯದ ಒಮನ್‌ ದೇಶದ ಮೂವರು ಮೀನುಗಾರರಿಗೆ 176 ಪೌಂಡ್(80 ಕೆ.ಜಿ.)ಯಷ್ಟು ತೇಲುತ್ತಿರುವ ತಿಮಿಂಗಿಲ ವಾಂತಿ ದೊರೆತಿದೆ. ಅದರ ಮಾರುಕಟ್ಟೆ ಮೌಲ್ಯ 17 ಕೋಟಿ ರೂಪಾಯಿ. ಇದು ಲಾಟರಿಗಿಂತಲೂ ದೊಡ್ಡ ವಿಷಯ!

ಒಮನ್‌ ದೇಶದ ಕಡಲ ತೀರವು ‘ಸ್ಪರ್ಮ್‌ ತಿಮಿಂಗಲ’ಗಳಿಗೆ ಹೆಸರುವಾಸಿ. ಈ ದೇಶದ ಖುರಾಯತ್‌ ಪ್ರಾಂತ್ಯದ ಸಮುದ್ರ ತೀರದಲ್ಲಿ ಅಕ್ಟೋಬರ್‌ 30 ರಂದು ಮೀನುಗಾರರಿಗೆ ಕೆಜಿಗಟ್ಟಲೆ ಮೀನುಗಳನ್ನು ಹಿಡಿದು ದೋಣಿಯಲ್ಲಿ ಹಾಕಿಕೊಂಡು ತೀರಕ್ಕೆ ಮರಳುತ್ತಿರುವಾಗ, ಯಾವುದೋ ಬಿಳಿ ರೂಪದ ವಸ್ತು ತೇಲುತ್ತಿರುವುದನ್ನು ಗಮನಿಸಿ  ನೋಡಿದಾಗ ಇದು ಕೋಟಿ ಕೋಟಿ ದುಡ್ಡು ತಂದುಕೊಡುವ ತಿಮಿಂಗಿಲ ವಾಂತಿ ಎಂಬುದನ್ನು ತಿಳಿದು ಬಂದಿದೆ. ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವರಿಗೆ ದೊರಕಿದ ತಿಮಿಂಗಿಲ ವಾಂತಿ ಬರೋಬ್ಬರಿ 80 ಕೆ.ಜಿ. ಅದರ ಮಾರುಕಟ್ಟೆ ಮೌಲ್ಯ 17 ಕೋಟಿ ರೂಪಾಯಿ. ಸ್ಥಳೀಯ ಮಾಧ್ಯಮಗಳಲ್ಲಿ ಅದನ್ನು ಕಂಪನಿಗಳಿಗೆ ಮಾರಾಟ ಮಾಡುತ್ತಿದ್ದಾರೆಂದು ವರದಿ ಮಾಡಿವೆ.

ಈ ಹಿಂದೆ ಲಂಡನ್‌ನಲ್ಲಿ. ನಾಯಿಯೊಂದಿಗೆ ಸಮುದ್ರ ತೀರದಲ್ಲಿ ವಾಕಿಂಗ್‌ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಸಿಕ್ಕಿದ್ದು 2 ವರ್ಷ ಹಳೆಯ 1 ಕೇಜಿಯಷ್ಟು ತಿಮಿಂಗಿಲ ವಾಂತಿ ಸಿಕ್ಕಿತ್ತು ಅದರ ಮೊತ್ತ 7 ಲಕ್ಷ ರೂ.

ಏನಿದು ತಿಮಿಂಗಿಲ ವಾಂತಿ?

ತಿಮಿಂಗಿಲಗಳು ತಮ್ಮ ವೀರ್ಯವನ್ನು ಕೆಲವೊಮ್ಮೆ ವಿಶಿಷ್ಟವಾಗಿ ವಾಂತಿ ಮಾಡುತ್ತವೆ. ಇವುಗಳು ಮೇಣದಂತಿದ್ದು ಈ ರೀತಿ ತೇಲುತ್ತಿರುವ ಮೇಣದಂತಹ ತಿಮಿಂಗಿಲ ವಾಂತಿಯು ಮೊದಲಿಗೆ ಕೆಟ್ಟ ವಾಸನೆ ಸೂಸುತ್ತವೆ. ಮೇಣದಂತಹ ಈ ವಸ್ತುವು ಮೊದಲು ತೇಲುತ್ತಿರುತ್ತದೆ. ನಂತರದಲ್ಲಿ ಘನರೂಪಕ್ಕೆ ಬಂದಾಗ ಸುವಾಸನೆ ಬೀರುತ್ತದೆ. ಇದನ್ನು ಸುಗಂಧ ದ್ರವ್ಯ ಉದ್ದಿಮೆಗಳಲ್ಲಿ  ಬಳಸಲಾಗುತ್ತದೆ.

ಇದನ್ನು ಅಂಬರ್‌ಗ್ರೀಸ್‌ ಎಂದೂ ಸಹ ಕರೆಯಲಾಗುತ್ತದೆ. ಈ ‘ಅಂಬರ್‌ಗ್ರೀಸ್’ ವಿಶೇಷವೆಂದರೆ, ಇದು ಸುಗಂಧ ದ್ರವ್ಯದ ಸುವಾಸನೆಯ ಅವಧಿಯನ್ನು ದುಪ್ಪಟ್ಟುಗೊಳಿಸುತ್ತದೆ. ಹೀಗಾಗಿ ಸೆಂಟ್ ಉದ್ಯಮದಲ್ಲಿ ಇದಕ್ಕೆ ಭಾರಿ ಬೇಡಿಕೆಯಿದ್ದು, ಕಾಳ ಸಂತೆಯಲ್ಲಿ ಇದನ್ನು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಲಾಗುತ್ತದೆ.