ಸ್ಮಾರ್ಟ್ ಫೋನ್-ಗಳಲ್ಲಿ ಎಲ್ಲೆಂದರಲ್ಲಿ ಸೆಲ್ಪಿ ತೆಗೆದುಕೊಳ್ಳುವುದರಿಂದ ಎಷ್ಟೊಂದು ಲಾಭಗಳಿವೆ..?

0
357

ಜನರ ಅಭಿರುಚಿಗೆ ತಕ್ಕಂತೆ ಎಲ್ಲ ಬದಲಾವಣೆಗಳು ಕೂಡ ಕಂಡು ಬರುತ್ತಿದು ತಂತ್ರಜ್ಞಾನದಲ್ಲಿ ಸಾಕಷ್ಟು ಹೊಸ ವಿಷಯಗಳು ಕಂಡು ಬಂದಿವೆ, ಅದರಲ್ಲಿ ಸ್ಮಾರ್ಟ್ ಫೋನ್-ಗಳು ಜನರ ಕೈಗೆ ಸಿಕ್ಕಿದ್ದೇ ಸಿಕ್ಕಿದ್ದು, ಜನ ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಸೆಲ್ಫಿ ತೆಗೆದುಕೊಳ್ಳವ ಹುಚ್ಚು ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ಎಷ್ಟೊಂದು ಜನರು ಪ್ರಪಾತಕ್ಕೆ ಬಿದ್ದು, ನದಿಗೆ ಬಿದ್ದು, ವಾಹನಗಳಿಗೆ ಸಿಕ್ಕು ಪ್ರಾಣಕಳೆದುಕೊಂಡಿದ್ದಾರೆ. ಇಷ್ಟೇ ಅಲ್ಲದೆ ಈ ಸೆಲ್ಪಿ ಅವಾಂತರದಿಂದ ‘ಸೆಲ್ಫಿ ಎಲ್ಬೊ’ ಎಂಬ ಆರೋಗ್ಯ ಸಮಸ್ಯೆ. ಮೊಣಕೈ ನೋವು, ಮುಂಗೈ ಮಣಿಕಟ್ಟಿನ ನೋವಿನ ಸಮಸ್ಯೆ ಬರುತ್ತೆ ಎಂದು ತಿಳಿಸಿದರು.


Also read: ಕೊಡಗಿನ ಸಂತ್ರಸ್ತರಿಗೆ ಸಿಂಗಲ್​​ ಬೆಡ್​​​ರೂಮ್​​​ ಮನೆ ಬದಲಾಗಿ ಡಬ್ಬಲ್ ಬೆಡ್​​​ರೂಮ್ ಮನೆ ಕಟ್ಟಿಕೊಡಲು ಸರ್ಕಾರ ನಿರ್ಧಾರ..

ಅದು ಅಷ್ಟೇ ಅಲ್ಲದೆ ಸೆಲ್ಪಿ ಫೋಟೋ ತೆಗೆದುಕೊಳ್ಳುವಾಗೆ ಮಾಡುವ ಕೆಲವೊಂದು ಡ್ರಾಮಾಗಳಲ್ಲಿ ಎರಡು ಬೆರೆಳು ತೋರಿಸಿ ವಿನ್ ಅಂತ ಹೇಳುವುದು. ಇಲ್ಲ ಹೆಬ್ಬೆಟ್ಟು ತೋರಿಸಿ ಡನ್ ಅಂತ ಹೇಳುವುದರಿಂದ ವ್ಯಕ್ತಿಯ ಬ್ಯಾಂಕ್ ಖಾತೆಗೆ ಖನ್ನ ಹಾಕುತ್ತಾರೆ ಎಂಬ ವಿಷಯಗಳು ಹರಿಡಿದ್ದವು. ಹಾಗೆಯೇ ಸೆಲ್ಪಿಯಿಂದ ಆಗುವ ದುಷ್ಟಪರಿಣಾಮಗಳನ್ನು ಸಂಶೋಧನೆಯಿಂದ ಹಲವಾರು ಜನರು ತಿಳಿಸಿ ಅದರಿಂದ ಆಗುವ ಪರಿಣಾಮಗಳನ್ನು ಹೊರಗೆಳೆದಿದ್ದರು. ಈಗ ಮತ್ತೊಂದು ಸಂಶೋಧನೆ ಹೊರ ಬಂದಿದು ಸೆಲ್ಪಿಯಿಂದ ಹಲವಾರು ಲಾಭಗಳು ಮತ್ತು ಬದಲಾವಣೆಗಳು ಇರುವುದನ್ನು ತಿಳಿಸಿದ್ದಾರೆ. ಕೇಳಲು ಸೋಜ್ಜಿಗ ಎನಿಸಿದ್ದರು ಇದು ಸತ್ಯವಾಗಿದೆ ಅದು ಹೇಗೆ ಅಂತ ಇಲ್ಲಿದೆ ನೋಡಿ.


Also read: ನೆಲದ ಮೇಲೆ ಕುಳಿತೇ ಏಕೆ ಊಟ ಮಾಡಬೇಕು? ಇದರ ಹಿಂದಿರುವ ವೈಜ್ಞಾನಿಕ ಸತ್ಯ ಇಲ್ಲಿದೆ ನೋಡಿ..

ಹೌದು ಸೆಲ್ಫಿ ತೆಗೆದುಕೊಳ್ಳುವುದರ ಬಗ್ಗೆ ಇತ್ತೀಚೆಗೆ ಇಂಗ್ಲೆಡ್​ನ ಸ್ಟಾನ್ಸೇ ಮತ್ತು ಇಟಲಿಯ ಮಿಲನ ವಿಶ್ವವಿದ್ಯಾಲಯ ಸಂಶೋಧನೆಯನ್ನು ನಡೆಸಿ ಸೆಲ್ಫಿ ತೆಗೆದುಕೊಳ್ಳುವುದರಿಂದ ಎಷ್ಟು ಅಪಾಯವೋ ಅಷ್ಟೆ ಲಾಭ ಕೂಡ ಇದೆ ಎಂದು ತಿಳಿಸಿದ್ದಾರೆ. ಹೇಗೆಂದರೆ ಸೆಲ್ಫಿ ತೆಗೆದುಕೊಳ್ಳುವರಲ್ಲಿ ಸ್ವ ಪ್ರಶಂಸೆ ಮೂಡಿ ಅವರಲ್ಲಿನ ಆತ್ಮಾಸಕ್ತಿಯನ್ನು ಹೆಚ್ಚಿಸುತ್ತದೆ. ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಫೋಟೋ ಪೋಸ್ಟ್​ ಮಾಡುವ ಶೇ. 25ರಷ್ಟು ಜನರಲ್ಲಿ ಆತ್ಮಾಸಕ್ತಿ ಕಂಡು ಬರುತ್ತದೆ.ಈ ಆತ್ಮ ಪ್ರಶಂಸೆ ಒಳ್ಳೆಯದಾಗಿದ್ದು ನಮ್ಮಲ್ಲಿ ಸ್ವಪ್ರಶಂಸೆ ಹೆಚ್ಚಿದಷ್ಟು, ಜನರ ಮುಂದೆ ತಮ್ಮನ್ನು ಪ್ರದರ್ಶಿಸಿಕೊಳ್ಳಬೇಕು ಎಂಬ ಆಸೆ ಹೆಚ್ಚಿರುತ್ತದೆ. ಅಷ್ಟೇ ಅಲ್ಲದೇ, ಇದು ಬೇರೆಯವರನ್ನು ಕೀಳಾಗಿ ಕಾಣುವ ಮನೋಭಾವನೆ ಮೂಡಿಸುತ್ತದೆ ಎಂದಿದ್ದಾರೆ.


Also read: ಮಲಿನವಾದ ವಾತವರಣದಿಂದ ನಿಮ್ಮ ಕಣ್ಣುಗಳ ಹಾಳಾಗುತ್ತಿವೆ; ಕೂಡಲೇ ಜಾಗೃತಗೊಂಡು ಈ ರೀತಿಯಲ್ಲಿ ಆರೈಕೆ ಮಾಡಿ ನಿಮ್ಮ ಕಣ್ಣುಗಳಿಗೆ ರಕ್ಷಣೆ ನೀಡಿ.

facebook instagram ಬಳಸುವ ಶೇ 60/25 ಹಾಗೂ ಟ್ವಿಟರ್​ ಬಳಸುವ ಶೇ 13ರಷ್ಟು ಜನರನ್ನು ಈ ಅಧ್ಯಯನಕ್ಕೆ ಬಳಸಿಕೊಂಡು. ಇದರಲ್ಲಿ ಮೂರನೇ ಎರಡರಷ್ಟು ಜನರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಇಮೇಜ್​ಗಳನ್ನು ಪ್ರಕಟಿಸುವರಾಗಿದ್ದಾರೆ. ಈ ಅಧ್ಯಯನದ ಪ್ರಕಾರ ಶೇ.20ರಷ್ಟು ಜನರಿಗೆ ತಮಗೆ ತಿಳಿಯದಂತೆ ಆತ್ಮಪ್ರಶಂಸೆ ಬಂದಿರುತ್ತದೆ. ಈ ಮೂಲಕ ಅವರು ತಮಗೆ ಗೊತ್ತಿಲ್ಲದಂತೆ ಸಾಮಾಜಿಕ ಮಾಧ್ಯಮವನ್ನು ಅತಿ ಹೆಚ್ಚು ಬಳಸುತ್ತಿರುತ್ತಾರೆ. ಅಷ್ಟೇ ಅಲ್ಲದೇ ನಾವು ಆಕರ್ಷಣೆಯ ಕೇಂದ್ರ ಬಿಂದು ಎಂಬ ಭಾವನೆ ಅವರಲ್ಲಿ ಮೂಡಿ, ಬೇರೆಯವರ ಬಗ್ಗೆ ತಾತ್ಸಾರ ಮನೋಭಾವ ಮೂಡುತ್ತದೆ ಎಂದಿದ್ದಾರೆ. ಇದರಿಂದ ವ್ಯಕ್ತಿಯ ಭಾವನೆಗಳಿಗೆ ಒಳ್ಳೆಯದು ಎಷ್ಟು ಇದೇಯೋ ಅಷ್ಟೇ ಕೆಟ್ಟದು ಇದೆ ಎಂದು ಈ ಸಂಶೋಧನೆ ತಿಳಿಸಿದೆ.