ಬೆಳಗಿನ ಜಾಗಿಂಗ್ ಗಿಂತ ಸಂಜೆಯ ವಾಕಿಂಗ್ ಆರೋಗ್ಯಕ್ಕೆ ಒಳ್ಳೆಯದಂತೆ.. !

0
4911

ಬೆಳಗಾದರೆ ಸಾಕು ಬುದುಕಿನ ಜಂಜಾಟಗಳು ಬೆನ್ನುಬೀಳತೊಡಗುತ್ತವೆ. ಒಂದೆಡೆ ಆಫೀಸ್ ಕೆಲಸದ ಒತ್ತಡ. ಮತ್ತೊಂದೆಡೆ ಸ್ಟ್ರೆಸ್, ಟೆಂಷ್ಯನ್ ಹೀಗೆ ದಿನಪೂರ್ತಿ ಕೆಲಸ ಹಾಗೂ ದುಡ್ಡು ಗಳಿಸುವ ತವಕದಿಂದ ಆರೋಗ್ಯದ ಮೇಲಿನ ಕಾಳಜಿ ದಿನದಿಂದ ದಿನಕ್ಕೆ ಕಡಿಮೆಯಾಗಿಬಿಡುತ್ತದೆ. ಆಗ ಒಂದು ದಿನ ಆರೋಗ್ಯ ಕೈಕೊಟ್ಟು ಎಲ್ಲ ಕೆಲಸಗಳಿಗೂ ಬ್ರೇಕ್ ಬಿಳುತ್ತದೆ. ಆಧುನಿಕ ಬದುಕಿನಲ್ಲಿ ಆರೋಗ್ಯ ಕೈಕೊಟ್ಟರೆ ಸಮಸ್ಯೆಗಳು ಸಾಲುಗಟ್ಟಿ ನಿಂತು ಕಾಡಲಾರಂಭಿಸುತ್ತವೆ. ನಾವು ಎಲ್ಲಿಯವರೆಗೂ ಆರೋಗ್ಯಕ್ಕಾಗಿ ಸಮಯವನ್ನು ಕಾಯ್ದಿರಿಸುವುದುಲ್ಲವೋ ಅಲ್ಲಿಯವರೆಗೂ ದಾರಿಯುದ್ದಕ್ಕೂ ಗಂಡಾಂತರಗಳು ಓಡುವ ಬದುಕಿಗೆ ತಡೆಯೊಡ್ಡಲು ಕಾದು ಕೂತಿರುತ್ತವೆ. ಪ್ರತಿಯೊಬ್ಬರಿಗೂ ವ್ಯಾಯಾಮವೆಂಬುದು ಅತೀ ಅವಶ್ಯ. ಆದರೆ, ಇಂದು ಕೆಲಸಗಳ ಮಧ್ಯೆ ಸಮಯದ ಅಭಾವ ಎಲ್ಲರನ್ನೂ ಕಾಡುತ್ತದೆ.

ಬೆಳಗಿನ ಜಾವ ಜಾಗಿಂಗ್ ಹೋಗಲು ಎಷ್ಟೋ ಜನರಿಗೆ ಸಮಯವೇ ಇರುವುದಿಲ್ಲ. ಕೆಲಸಕ್ಕೆಂದು ಹತ್ತಾರು ಕಿಲೋಮೀಟರ್ ದೂರ ಹೋಗಬೇಕು, ಅದರಿಂದ ಎರಡು ಗಂಟೆ ಮೊದಲೇ ಮನೆಬಿಡಬೇಕು. ಹೀಗಿದ್ದಾಗ ಬೆಳಗಿನ ಜಾವ ಆರೋಗ್ಯಕ್ಕೆ ಸಮಯ ನಿಗದಿಪಡಿಸಿಕೊಳ್ಳಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆಫೀಸ್‍ಗೆ ಹೋಗುವ ಒತ್ತಡದಲ್ಲಿ ವ್ಯಾಯಾಮ ಮಾಡಿದರೂ ಅದರ ಲಾಭ ಪಡೆದುಕೊಳ್ಳುವುದು ಎಷ್ಟು ಸಾಧ್ಯ ಎನ್ನುವ ಪ್ರಶ್ನೆ ಕಾಡುವುದು ಸಾಮಾನ್ಯ. ಆದರೆ, ಬೆಳಗಿನಜಾವದಲ್ಲೇ ವ್ಯಾಯಾಮಕ್ಕಾಗಿ ಕಾಲ ನಿಗದಿಪಡಿಸಿ ಕೊಳ್ಳಬೇಕೆಂದೇನಿಲ್ಲ. ಸಂಜೆ ವೇಳೆಯಲ್ಲಿ ವ್ಯಾಯಾಮಕ್ಕೆ ಸಮಯ ನಿಗದಿಪಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವುದರೊಂದಿಗೆ ಸಮಯವನ್ನು ಸರಿಯಾಗಿ ಬ್ಯಾಲೆನ್ಸ್ ಮಾಡಬಹುದು.

10-cach-cat-giam-calo-10

ನಿಜ ಹೇಳಬೇಕೆಂದರೆ ಬೆಳಗಿನಜಾವಕ್ಕಿಂತ ಸಂಜೆ ಸಮಯದಲ್ಲಿ ಮನಸ್ಸು ಶಾಂತವಾಗಿರುತ್ತದೆ. ಎದ್ದು ಬಿದ್ದು ಆಫೀಸ್‍ಗೆ ಓಡುವ ಒತ್ತಡವಿರುವುದಿಲ್ಲ. ಹೀಗೆ ಮನಸ್ಸು ಶಾಂತಚಿತ್ತವಾಗಿದ್ದಾಗ ಅಲ್ಪ ಸಮಯವನ್ನಾದರೂ ಆರೋಗ್ಯಕ್ಕೆಂದು ಮೀಸಲಿರಿಸಿದರೆ. ಓಡುವ ಬದುಕಿಗೆ ಬೇಕಾದ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳಬಹುದು. ಅಷ್ಟೇ ಅಲ್ಲ ಸಂಜೆ ಸಮಯದಲ್ಲಿ ವಾಕಿಂಗ್ ಅಥವಾ ವ್ಯಾಯಾಮ ಮಾಡುವುದರಿಂದ ಹೆಚ್ಚಿನ ಲಾಭಗಳನ್ನು ಪಡೆದುಕೊಳ್ಳಬಹುದು ಹೇಗೆ ಎಬುದನ್ನು ಈ ಕೆಳಗಿನ ಅಂಶಗಳು ನಿಮಗೆ ಮನವರಿಕೆ ಮಾಡಿಕೊಡುತ್ತವೆ.

ಉತ್ತಮ ನಿದ್ರೆಯನ್ನು ಖಚಿತಪಡಿಸುತ್ತದೆ :

ಹೌದು ದಿನವಿಡಿ ಕೆಲಸದಿಂದ ಹೈರಾಣಾಗಿ ಸಂಜೆ ಸಮಯದಲ್ಲಿ ಕನಿಷ್ಠವೆಂದರೂ ಒಂದು ಗಂಟೆಯಾದರೂ ವ್ಯಾಯಾಮ ಅಥವಾ ವಾಕಿಂಗ್ ಮಾಡುವುದರಿಂದ ಆ ದಿನದ ಎಲ್ಲ ಒತ್ತಡಗಳನ್ನು ಕಡಿಮೆಮಾಡಬಹುದು. ಸಂಜೆ ಸಮಯದಲ್ಲಿ ಇತರರೊಂದಿಗೆ ಸೇರಿ ಖುಷಿಯಿಂದ ಕಾಲಕಳೆಯುತ್ತ ವರ್ಕೌಟ್ ಮಾಡುವುದರಿಂದ ದೇಹ ಹಗುರವಾಗುತ್ತದೆ. ಇದರಿಂದ ರಾತ್ರಿ ವೇಳೆಯಲ್ಲಿ ಸುಖನಿದ್ದೆಗೆ ಜಾರಬಹುದು. ನೆಮ್ಮದಿ ನಿದ್ದೆಯಿಂದ ಆರೋಗ್ಯ ತಾನಾಗಿಯೇ ಹತೋಟಿಗೆ ಬರುತ್ತದೆ. ಹಾಗೂ ಮರುದಿನ ಬೆಳಿಗ್ಗೆ ಮತ್ತೆ ಉತ್ಸಾಹದಿಂದ ಕೆಲಸದಲ್ಲಿ ತೊಡಿಗಿಸಿಕೊಳ್ಳಬಹುದು.

ಹೆಚ್ಚು ಕ್ಯಾಲೋರಿಗಳನ್ನು ಬರ್ನ್ ಮಾಡಿ :

ಹೆಚ್ಚು ಹೆಚ್ಚು ವ್ಯಾಯಾಮ ಮಾಡುವುದರಿಂದ ಹೆಚ್ಚು ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು. ಆದರೆ ಬೆಳಗಿನ ಜಾವ ಹೆಚ್ಚಾಗಿ ವರ್ಕೌಟ್ ಮಾಡಲು ಸಮಯದ ಅಭಾವವಿರುತ್ತದೆ. ಬೊಜ್ಜು, ದೇಹದ ಅತಿಯಾದ ತೂಕ ಹೀಗೆ ಅನೇಕ ಸಮಸ್ಯೆಗಳಿರುವವರು ಸಂಜೆ ಸಮಯವನ್ನೇ ಆಯ್ದುಕೊಳ್ಳುವುದು ಒಳಿತು. ಆಗ ಹೆಚ್ಚು ಕ್ಯಾಲೋರಿಗಳನ್ನು ಕರಗಿಸಲು ಸಮಯ ಸಿಗುತ್ತದೆ.

ಆರೋಗ್ಯಕ್ಕಾಗಿ ಹೆಚ್ಚಿನ ಸಮಯವನ್ನು ಮೀಸಲಿಡಬಹುದು :

ಬೆಳಗಿನ ಜಾವಕ್ಕೆ ಹೋಲಿಸಿದರೆ ಸಂಜೆ ಯಾವುದೇ ಕೆಲಸಗಳ ಒತ್ತಡವಿರುವುದಿಲ್ಲ. ಆಗ ಹೆಚ್ಚಿನ ಸಮಯವನ್ನು ದೇಹದ ಫಿಟ್ನೆಸ್ ಬಗ್ಗೆ ಮೀಸಲಿಡಬಹುದು. ಸಂಜೆ ಹೆಚ್ಚು ಸಮಯ ಸಿಗುವುದರಿಂದ ವಾಕಿಂಗ್, ವ್ಯಾಯಾಮ, ಯೋಗದಂತಹ ಚಟುವಟಿಕೆಗಳಲ್ಲಿ ನಿಶ್ಚಿಂತೆಯಿಂದ ತೊಡಗಿಸಿಕೊಳ್ಳಬಹುದು.

Also read: ಮಾವಿನ ಎಲೆಗಳನ್ನು ನಾವು ಹೇಳಿರುವಂತೆ ಬಳಸಿ, ಸುಲಭವಾಗಿ ಮಧುಮೇಹ (Diabetes) ನಿಯಂತ್ರಣಕ್ಕೆ ಬರುತ್ತೆ!! ತಪ್ಪದೇ ಈ ಮಾಹಿತಿ ಶೇರ್ ಮಾಡಿ!!