ATM ನ ಪಿನ್ ನಂಬರ್ ಮರೆತು ಹೋದರೆ ಅಥವಾ ಪಿನ್ ಅನ್ನು ಬದಲಿಸುವುದು ಹೇಗೆ?? ATM ಕೇಂದ್ರದಲ್ಲೇ ಸುಲಭವಾಗಿ ಪಿನ್ ಅನ್ನು ಪಡೆದುಕೊಳ್ಳಬಹುದು ಹೇಗೆ ಎಂದು ನೋಡಿ..

0
1385

ಇತ್ತೀಚೆಗಿನ ದಿನಗಳಲ್ಲಿ ಕ್ಯಾಶ್ ಲೆಸ್ ವ್ಯವಹಾರಗಳು ಹೆಚ್ಚುತ್ತಿದೆ.. ಅದೇ ರೀತಿಯಾಗಿ ATM ನ ಬಳಕೆಯೂ ಕೂಡ ಹೆಚ್ಚಾಗುತ್ತಿದೆ.. ಆದರೆ ಅಕಸ್ಮಾತ್ ATM ಪಿನ್ ನಂಬರ್ ಅನ್ನು ನಾವು ಮರೆತರೆ ಬ್ಲಾಕ್ ಮಾಡಿಸಿ ಹೊಸ ಕಾರ್ಡ್ ಪಡೆದುಕೊಳ್ಳುವುದು ಬೇಡ.. ಅದರ ಬದಲು ಸುಲಭವಾಗಿ ಹತ್ತಿರದ ATM ಸೆನ್ಟರ್ ಗಳಲ್ಲಿಯೇ ಪಿನ್ ನಂಬರ್ ಅನ್ನು ಪಡೆದುಕೊಳ್ಳಬಹುದು.. ಅಥವಾ ಇರುವ ನಂಬರ್ ಅನ್ನು ಸುಲಭವಾಗಿ ಬದಲಿಸಬಹುದು..

ಪಿನ್ ನಂಬರ್ ಮರಳಿ ಪಡೆಯಲು ATM ಕಾರ್ಡ್, ಬ್ಯಾಂಕ್ ಅಕೌಂಟ್ ನಂಬರ್, ಬ್ಯಾಂಕ್ ಅಕೌಂಟ್ ಗೆ ಲಿಂಕ್‌ ಮಾಡಲಾದ ಫೋನ್ ನಂಬರ್ ಇಷ್ಟಿದ್ದರೇ ಸಾಕು..

ಹತ್ತಿರದ ATM ಕೇಂದ್ರಕ್ಕೆ ಹೋಗಿ.. ನೀವು ಮಾಡಬೇಕಾದದ್ದು ಇಷ್ಟೇ..

  • ಮೊದಲು ಕಾರ್ಡ್ ಅನ್ನು ಇಡಿ..
  • ಸ್ಕ್ರೀನ್ ಮೇಲೆ ಕಾಣುವ BANKING ಆಪ್ಶನ್ ಅನ್ನು ಆಯ್ಕೆ ಮಾಡಿಕೊಳ್ಳಿ.
  • ನಂತರ PIN GENERATE ಅಥವಾ PIN RESET ಆಪ್ಶನ್ ಅನ್ನು ಸೆಲೆಕ್ಟ್ ಮಾಡಿ.
  • ನಿಮ್ಮ ಅಕೌಂಟ್ ನಂಬರ್ ಅನ್ನು ಕೊಡಿ..
  • ಅಕೌಂಟ್ ಗೆ ಲಿಂಕ್ ಮಾಡಿದ ಫೋನ್ ನಂಬರ್ ಅನ್ನು ಕೊಡಿ.
  • ನಿಮ್ಮ ಫೋನ್ ಗೆ OTP ಬರುತ್ತದೆ..
  • ಬಂದ OTP one time password ಅನ್ನು ಎಂಟರ್ ಮಾಡಿ..
  • ನಿಮ್ಮ ಪಿನ್ ನಂಬರ್ ಬದಲಾಯಿಸಿ..
  • ಹಳೆಯ ಪಿನ್ ನಂಬರ್ ಡಿಲೀಟ್ ಆಗಿ ಹೊಸ ನಂಬರ್ ಆಕ್ಟೀವ್ ಆಗುತ್ತದೆ..

ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ.. ಇತರರಿಗೂ ಉಪಯೋಗವಾಗಬಹುದು..