ಮಾನಸಿಕ ಒತ್ತಡ ಯಾವುದರಿಂದ ಬರುತ್ತೆ? ಇಂತಹ ಒತ್ತಡವನ್ನು ನಿಯಂತ್ರಿಸುವುದು ಹೇಗೆ.?

0
2451

ಈಗಿನ ಪ್ರತಿಯೊಂದು ಮಾನವನು ಮಾನಸಿಕವಾಗಿ ಯಾವುದೇ ರೀತಿಯಲ್ಲಿ ಬಳಲುತ್ತಿದ್ದಾರೆ. ಇದಕ್ಕೆ ಸರಿಯಾದ ಕಾರಣ ಜೀವನ್ ದಲ್ಲಿ ಆಗುವ ಕೆಲವೊಂದು ಘಟನೆಗಳು ಕಾರಣವಾದರೆ ಇನ್ನು ಹಣ, ಉತ್ತಮ ಕೆಲಸ, ಮನೆಯಲ್ಲಿ ಕಂಡು ಬರುವ ಕ್ಷುಲಕ ಕಾರಣದಿಂದ ಇಂದು ಮಾನವನು ಹಲವಾರು ಖಾಯಿಲೆಗೆ ಒಳಗಾಗಿದ್ದಾನೆ. ಒತ್ತಡವಿದ್ದರೆ ಹೊಸ ಸವಾಲುಗಳನ್ನು ಸ್ವೀಕರಿಸಲು, ಏಕಾಗ್ರತೆ ಪಡೆಯಲು, ಜಾಗರೂಕರಾಗಿರಲು ಹಾಗೂ ಉಲ್ಲಾಸದಿಂದ ಆರೋಗ್ಯಕರವಾಗಿ ಕಾರ್ಯವನ್ನು ಪೂರ್ಣಗೊಳಿಸಲು ನೆರವಾಗುತ್ತದೆ. ಹಾಗಾಗಿ ಒತ್ತಡಕ್ಕೂ ಒಂದು ಮಿತಿ ಇದೆ, ಯಾವಾಗ ಒತ್ತಡ ಈ ಮಿತಿಯನ್ನು ಮೀರುತ್ತದೆಯೋ ಆಗ ಉದ್ವೇಗ, ಚಡಪಡಿಕೆ, ತಲೆನೋವು, ಎದೆನೋವು, ಖಿನ್ನತೆ, ಲೈಂಗಿಕ ಬಯಕೆಯಿಂದ ವಂಚಿತರಾಗುವುದು, ಸುಸ್ತು, ಸಿಟ್ಟು, ಸಿಡಿಮಿಡಿ ಮೊದಲಾದವು ಎದುರಾಗುತ್ತವೆ. ಮಾನಸಿಕ ಒತ್ತಡ ಹೆಚ್ಚಾದರೆ ಇದರಿಂದ ದೇಹದ ಎಲ್ಲಾ ವ್ಯವಸ್ಥೆಗಳೂ ಪ್ರಭಾವ ಕ್ಕೊಳಗಾಗುತ್ತವೆ, ಇಂತಹ ಒತ್ತಡದಿಂದ ಹೊರ ಬರಲು, ಪ್ರತಿದಿನ ಮಾನಸಿಕ ಒತ್ತಡವನ್ನು ನಿಯಂತ್ರಿಸುವ ರೂಢಿ ಬೆಳೆಸಿಕೊಳ್ಳುವುದರಿಂದ ಎರಡು ಪ್ರಯೋಜನಗಳಿವೆ. ಒಂದನೆಯದು, ಮಾನಸಿಕ ಒತ್ತಡದ ಕಾರಣಗಳನ್ನು ಕಡಿಮೆಗೊಳಿಸಲು ಸಹಾಯವಾಗುತ್ತದೆ. ಎರಡನೆಯದು, ಆ ಕಾರಣಗಳನ್ನು ತಡೆಯಲು ಸಾಧ್ಯವಿಲ್ಲದಿರುವಾಗ ನಾವು ಪ್ರತಿಕ್ರಿಯಿಸುವ ರೀತಿಯ ಮೇಲೆ ಹಿಡಿತ ಸಾಧಿಸಬಲ್ಲೆವು.

Also read: ಹಿಮ್ಮಡಿ ಬಿರುಕಿನಿಂದ ನೋವು ಅನುಭವಿಸುತ್ತಿದ್ದಿರ..? ಹಾಗಾದ್ರೆ ನಾವು ಹೇಳುವ ರೀತಿ ನಿಂಬೆಹಣ್ಣನು ಬಳಸಿ ಕೆಲವೇ ದಿನದಲ್ಲಿ ನಿಮ್ಮ ಹಿಮ್ಮಡಿ ಕೋಮಲವಾಗುತ್ತೆ…

ಮಾನಸಿಕ ಒತ್ತಡವನ್ನು ತಗ್ಗಿಸುವ ಕೆಲವು ವಿಧಗಳು:

 • ನೀವು ವಿಚಾರ ಮಾಡುವುದರ ಬಗ್ಗೆ ಹಿಡಿತವಿರಲಿ
 • ಯಾವತ್ತು ನೀವು ಒಬ್ಬರೇ ಇರಲು ಇಚ್ಚಿಸಬೇಡಿ ದಿನದ ಅಲ್ಪಸಮಯವನ್ನು ಸಂವಾದದಲ್ಲಿ ಕಳೆಯರಿ
 • ನಿಮ್ಮ ಆತ್ಮಿಯತೆಯಿರುವ ಜನರ ಜೊತೆಗೆ ವಾದವು ನಿಮ್ಮ ನೆಮ್ಮದಿಯನ್ನು ಕೆಡಸಿ ಮಾನಸಿಕ ಒತ್ತಡದ ಮೇಲೆ ಪರಿಣಾಮ ಬಿರುತ್ತೆ
 • ಹೇರಳವಾಗಿ ಕೇಳಿಬರುವ ಸುದ್ದಿಯನ್ನು ನೀವು ನೀಜವೆಂದು ತಿಳಿಸುವ ನಿಮ್ಮ ಮನೋಭಾವ ಬಿಟ್ಟುಬಿಡಿ
 • ಬೇರೆಯವರ ವಿಚಾರವನ್ನು ಚಾಡಿಹೇಳುವ ಯೋಚನೆ ಮಾಡದಿರಿ
 • ನಿಮ್ಮ ಬೇಡವಾದ ಯಾವುದೇ ವಿಷಯ ಬೇಡವೇಬೇಡ ಎಂದು ತಿಲಿಯರಿ ಹುಟ್ಟಿದು ನೀವು ಒಬ್ಬರೇ ಅದಕ್ಕಾಗಿ
 • ಪ್ರತಿದಿನವೂ ಕಾಣುವ ಕನಸ್ಸು ಹಿಡಿತದಲ್ಲಿ ಇಲ್ಲದ್ದಿದರೆ ಮಾನಸಿಕ ಒತ್ತಡ ಹೆರುತ್ತೆ
 • ಅಗತ್ಯವಿದ್ದರೆ ವೃತ್ತಿಪರರ ಅಥವಾ ಆತ್ಮೀರಯರ ಸಹಾಯವನ್ನು ಪಡೆದುಕೊಳ್ಳಿ
 • ತಕ್ಕಮಟ್ಟಿಗಿನ ಮನೋರಂಜನೆ ಮತ್ತು ಸಾಕಷ್ಟು ನಿದ್ದೆ ಪಡೆಯಿರಿ
 • ಸರಿಯಾದ ಊಟ, ವ್ಯಾಯಾಮ ಮಾಡುವ ರೂಡಿ ಬೆಳೆಸಿಕೊಳ್ಳಿ
 • ಯಾವತ್ತು ಲಾಭದ ಅಥವಾ ನಷ್ಟದ ಪರವಾಗಿ ವಿಚಾರ ಮಾಡುವುದು ಬಿಡಿ

 

Also read: ಉಗುರು ಕಚ್ಚೋದ್ರಿಂದ ಯಾವ ಖಾಯಿಲೆ ಬರುತ್ತೆ..? ಉಗುರು ಕಚ್ಚು ವವರ ವ್ಯಕ್ತಿತ್ವ ಹೇಗಿರುತ್ತೆ ನೋಡಿ…

 • ಪ್ರತಿದಿನ ಕನಿಷ್ಟ ಐದು ನಿಮಿಷಗಳವರೆಗಾದರೂ ದೀರ್ಘವಾಗಿ ಉಸಿರಾಡಿ ಧ್ಯಾನ ಮಾಡಿ
 • ಒತ್ತಡದ ಸಂದರ್ಭದಲ್ಲಿ ಕ್ಷಿಪ್ರವಾಗಿ ಸ್ಪಂದಿಸದೇ ಪೂರ್ಣವಾಗಿ ಭಾಗಿಯಾಗಿ
 • ಮಾನಸಿಕ ಒತ್ತಡ ಹೆಚ್ಚಾದರೆ ಇದರಿಂದ ದೇಹದ ಎಲ್ಲಾ ವ್ಯವಸ್ಥೆಗಳೂ ಪ್ರಭಾವ ಕ್ಕೊಳಗಾಗಿ ಈ ಕೆಳಗಿನ ತೊಂದರೆಗಳು ಕಾಡಲು ಶುರುವಾಗುತ್ತೆ.

ಹೃದಯ ಮತ್ತು ರಕ್ತಪರಿಚಲನಾ ವ್ಯವಸ್ಥೆ:

ಒತ್ತಡದ ಸಮಯದಲ್ಲಿ ಹೃದಯದ ಬಡಿತದ ವೇಗ ಹೆಚ್ಚುತ್ತದೆ! ಪರಿಣಾಮವಾಗಿ ಪ್ರತಿ ಜೀವಕೋಶಗಳೂ ತಮ್ಮ ಗರಿಷ್ಟ ಕ್ಷಮತೆಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ವಿಶೇಷವಾಗಿ ಸ್ನಾಯುಗಳು ಹೆಚ್ಚಿನ ಆಮ್ಲಜನಕ ಬೇಡುತ್ತವೆ, ಮೆದುಳಿನ ಜೀವಕೋಶಗಳೂಳಿಗೂ ಹೆಚ್ಚಿನ ಆಮ್ಲಜನಕ ಬೇಕಾಗಿದ್ದು ಪರಿಣಾಮವಾಗಿ ರಕ್ತದೊತ್ತಡವೂ ಏರುತ್ತದೆ. ಇವು ಹೃದಯ ಸಂಬಂಧಿ ರೋಗಗಳು ಆವರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ.

ರೋಗ ನಿರೋಧಕ ವ್ಯವಸ್ಥೆ:

ಸಾಮಾನ್ಯವಾಗಿ ಸದಾ ಮಾನಸಿಕ ಒತ್ತಡಲ್ಲಿಯೇ ಇರುವ ವ್ಯಕ್ತಿಗಳು ಹೆಚ್ಚು ಹೆಚ್ಚು ಶೀತ ಮತ್ತು ಫ್ಲೂ ಜ್ವರಕ್ಕೆ ಸುಲಭವಾಗು ತುತ್ತಾಗುತ್ತಾರೆ. ಮಾನಸಿಕ ಒತ್ತಡದ ಸಂದರ್ಭದಲ್ಲಿ ಬಿಡುಗಡೆಯಾಗುವ ಕೆಲವು ರಸದೂತಗಳು ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತವೆ ಹಾಗೂ ತಕ್ಷಣವೇ ಸ್ಪಂದಿಸಲು ವಿಫಲಗೊಳ್ಳುತ್ತವೆ. ಚಿಕ್ಕ ಪುಟ್ಟ ಕಾಯಿಲೆಗಳಿಂದ ಚೇತರಿಸಿಕೊಳ್ಳಳು ಸಹಾ ದೇಹ ಅಗತ್ಯಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

Also read: ಅರೆ ತಲೆನೋವು ಅನುಭವಿಸುವರು ಇದನ್ನು ನೋಡಿ ಜೀವನ ಪೂರ್ತಿ ತಲೆನೋವಿನಿಂದ ಮುಕ್ತಿ ಹೊಂದಿ.

ಉಸಿರಾಟದ ವ್ಯವಸ್ಥೆ:

ಒತ್ತಡದ ಸಮಯದಲ್ಲಿ ಬಿಡುಗಡೆಯಾಗುವ ರಸದೂತಗಳು ಉಸಿರಾಟದ ವ್ಯವಸ್ಥೆಯನ್ನೇ ಕಲಸು ಮಲಸು ಮಾಡಿಬಿಡಬಲ್ಲವು

ಸಂತಾನೋತ್ಪತ್ತಿ ವ್ಯವಸ್ಥೆ:

ಮಾನಸಿಕ ಒತ್ತಡದ ಪ್ರಭಾವದಲ್ಲಿ ಟೆಸ್ಟೋಸ್ಟೆರಾನ್ ರಸದೂತ ಹೆಚ್ಚಿನ ಪ್ರಮಾಣದಲ್ಲಿ ಸ್ರವಿಸಲ್ಪಡುತ್ತವೆ. ಈ ಸಂದರ್ಭದಲ್ಲಿ ನಿಮಿರುದೌರ್ಬಲ್ಯಕ್ಕೂ ಕಾರಣವಾಗಬಹುದು. ಮಹಿಳೆಯರಲ್ಲಿ ಮಾನಸಿಕ ಒತ್ತಡ ಅನಿಯಮಿತ ಮಾಸಿಕ ರಜಾದಿನ ಹಾಗೂ ಸಾಮಾನ್ಯಕ್ಕೂ ಹೆಚ್ಚಿನ ನೋವು ಅನುಭವಿಸುತ್ತಾರೆ ಹಾಗೂ ಲೈಂಗಿಕ ಬಯಕೆಗಳ ಉದ್ದೀಪನವಾಗದೇ ಹೋಗಬಹುದು.

ಸ್ನಾಯುಗಳ ವ್ಯವಸ್ಥೆ, ಜೀರ್ಣ ವ್ಯವಸ್ಥೆ, ಕೇಂದ್ರ ನರಮಂಡಲ ವ್ಯವಸ್ಥೆ:

ನಮ್ಮ ದೇಹದ ಎಲ್ಲಾ ವ್ಯವಸ್ಥೆಗಳಲ್ಲಿ ಈ ವ್ಯವಸ್ಥೆ ಪ್ರಧಾನವಾಗಿದ್ದು ಬೇರೆಲ್ಲಾ ವ್ಯವಸ್ಥೆಗಳನ್ನು ನಿರ್ವಹಿಸುತ್ತದೆ. ಮೆದುಳಿನಲ್ಲಿರುವ ಹೈಪೋಥಲಮಸ್ ಎಂಬ ಭಾಗ ಒತ್ತಡದ ಸಮಯದಲ್ಲಿ ಕಾರ್ಟೀಸೋಲ್ ಮತ್ತು ಅಡ್ರಿನಲಿನ್ ಎಂಬ ರಸದೂತಗಳನ್ನು ಥಟ್ಟನೇ ಬಿಡುಗಡೆ ಮಾಡುತ್ತದೆ, ಮಾನಸಿಕ ಒತ್ತಡದಲ್ಲಿದ್ದಾಗ, ಯಕೃತ್ ಅಗತ್ಯಕ್ಕೂ ಹೆಚ್ಚು ಸಕ್ಕರೆಯನ್ನು ಒಡೆಯುತ್ತದೆ ಹಾಗೂ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಧಿಡೀರನೇ ಏರುತ್ತದೆ. ಈ ಸಮಯದಲ್ಲಿ ಉಸಿರಾಟ ತೀವ್ರವಾಗುವುದು, ಹೃದಯದ ಬಡಿತ ಏರುವುದು ಹಾಗೂ ದೇಹದಲ್ಲಿ ಹೆಚ್ಚು ಸ್ರವಿಸಲ್ಪಡುವ ರಸದೂತಗಳು ಜೀರ್ಣರಸಗಳ ಮೇಲೆ ಪ್ರಭಾವ ಬೀರಿ ಎದೆಯುರಿ, ಹೊಟ್ಟೆಯುರಿ, ಆಮ್ಲೀಯತೆ ಕಂಡು ಬರುತ್ತೆ.