ಉತ್ತರ ದಿಕ್ಕಿಗೆ ಮಲಗಬಾರದೇಕೆ? ವಾಸ್ತುಶಾಸ್ತ್ರದ ಹಾಗೂ ವೈಜ್ಞಾನಿಕ ಕಾರಣಗಳು ಇಲ್ಲಿದೆ ನೋಡಿ..

0
276

ಹಿಂದೆ ಹಿರಿಯರು ಮಾಡಿದ ಯಾವುದೇ ವಿಚಾರಗಳನ್ನು ಮರೆಯಲು ಸಾಧ್ಯವಿಲ್ಲ, ಏಕೆಂದರೆ, ಒಬ್ಬರಿಂದ ಒಬ್ಬರಿಗೆ ಬಳುವಳಿಯಾಗಿ ಉಪದೇಶಗಳು ಕೇಳಿ ಬಂದಿರುತ್ತೇವೆ. ಇಂತಹ ಯಾವುದೇ ಧಾರ್ಮಿಕ ಆಚಾರ, ವಿಚಾರಗಳು ವಯಸ್ಸಿನಲ್ಲಿ ಮೂಡನಂಬಿಕೆ ಎಂದರು ಮುಂದೆ ಜವಾಬ್ದಾರಿಯುತ್ತ ಸ್ಥಾನದಲ್ಲಿದ್ದಾಗ ಮನೆಯಲ್ಲಿರುವ ಕಿರಿಯರಿಗೆ ಹೇಳಲೇ ಬೇಕಾಗುತ್ತೆ. ಅದಕ್ಕಾಗಿ ಇನ್ನೂ ಹಲವು ವಿಚಾರಗಳು ಜೀವಂತವಾಗಿವೆ. ಅಂದಹಾಗೆ ಮನೆಯಲ್ಲಿ ಬೆಳಗ್ಗೆ ಎದ್ದಾಗಿನಿಂದ ಹಿಡಿದು ಮಲಗುವವರೆಗೆ ಒಂದೊಂದು ಆಚರಣೆಗಳು ಕೇಳುತ್ತಾನೆ ಇರುತ್ತೇವೆ, ಒಂದು ವೇಳೆ ಇಂತಹ ಮಾತುಗಳನ್ನು ಆಲಿಸದೆ ಇದ್ದರೆ ಅದು ಯಾವುದೋ ಒಂದು ವಿಷಯಕ್ಕೆ ಅಟ್ಟಿಕೊಂಡು ಬಿಡುತ್ತೆ, ಇಂತಹ ಪದ್ದತಿಯಲ್ಲಿ ಬರುವ ಯಾವ ದಿಕ್ಕಿಗೆ ಮಲಗಬೇಕು? ಯಾವ ದಿಕ್ಕಿಗೆ ಮಲಗಿದರೆ ಕೆಟ್ಟದು ಎನ್ನುವುದು ಸಾಕಷ್ಟ ಸಾರಿ ಕೇಳಿದ್ದಿರಿ. ಅದರಂತೆ ಉತ್ತರ ದಿಕ್ಕಿಗೆ ಮಲಗಿದರೆ ಏನಾಗುತ್ತೆ ಎನ್ನುವ ಪ್ರಶ್ನೆ ನಿಮ್ಮಲಿದೆ.

Also read: ಚರಣ ಸ್ಪರ್ಶದ ಹಿಂದಿನ ವೈಜ್ಞಾನಿಕ ಕಾರಣ

ಹೌದು ಬಹಳ ದಿನಗಳಿಂದ ಕೇಳಿಕೊಂಡು ಬರುವ ಉತ್ತರ ದಿಕ್ಕಿಗೆ ಮಲಗುವುದು ಅಪಾಯ ಎನ್ನುವುದು ತಿಳಿದಿದೆ ಯಾಕೆ ಅಂತ ಮಾತ್ರ ಗೊತ್ತಿರುವುದಿಲ್ಲ, ಹೌದು ನಾವು ವೈಜ್ಞಾನಿಕ ಯುಗದಲ್ಲಿದ್ದೇವೆ. ಕೆಲವೊಮ್ಮೆ ಅತಿಯಾದ ವೈಜ್ಞಾನಿಕ ಮನೋಭಾವನೆಯಿಂದ ಕೆಲವು ವಿಚಾರಗಳನ್ನು ಮೂಢನಂಬಿಕೆ, ಕಂದಾಚಾರವೆಂದು ದೂರಿ ಅಲ್ಲಗಳೆಯುತ್ತೇವೆ. ಹೀಗೆ ನಿರ್ಲಕ್ಷಕ್ಕೊಳಗಾದ ವಿದ್ಯೆಗಳಲ್ಲಿ ಜ್ಯೋತಿಷ್ಯ, ವಾಸ್ತು ಶಾಸ್ತ್ರಗಳೂ ಸೇರಿವೆ. ಆದರೆ ನಮ್ಮ ಹಿರಿಯರ ಕೊಡುಗೆಯಾದ ಈ ವಿದ್ಯೆಗಳನ್ನು ಸರಿಯಾದ ದೃಷ್ಟಿಕೋನದಲ್ಲಿ ವಿಶ್ಲೇಷಿಸಿ ನೋಡಿದಾಗ ಅದರಲ್ಲಿರುವ ಸತ್ಯಾಂಶಗಳು, ವೈಜ್ಞಾನಿಕ ಸತ್ಯಗಳು ನಮ್ಮ ಅರಿವಿಗೆ ಬರುತ್ತವೆ.

ಉತ್ತರ ದಿಕ್ಕಿಗೆ ಯಾಕೆ ಮಲಗಬಾರದು?

Also read: ಅಪ್ಪಿಕೊಳ್ಳುವುದರ ಹಿಂದಿನ ವೈಜ್ಞಾನಿಕ ಕಾರಣ

ಉತ್ತರ ದಿಕ್ಕಿಗೆ ತಲೆಹಾಕಿ ಮಲಗಬಾರದು ಅನ್ನೋದೇಕೆ ? ಗಣಪತಿಯ ಕತೆ. ಹೇಳುತ್ತಾರೆ. ಆದರೆ ವಾಸ್ತು ಶಾಸ್ತ್ರವು ಉತ್ತರ ದಿಕ್ಕಿಗೆ ತಲೆಹಾಕಿ ಮಲಗಬಾರದು ಎಂದು ಹೇಳುತ್ತದೆ. ಮೃತ ಶರೀರವನ್ನು ಮಾತ್ರ ಉತ್ತರ ದಿಕ್ಕಿಗೆ ತಲೆಯಿರಿಸಿ ಮಲಗಿಸುವ ಪದ್ದತಿಯಿದೆ . ನಾವು ಉತ್ತರ ದಿಕ್ಕಿಗೆ ತಲೆಹಾಕಿ ಮಲಗಿದರೆ ಅನಾರೋಗ್ಯದ ಸಮಸ್ಯೆಗಳು ಬರಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ದಕ್ಷಿಣ ದಿಕ್ಕಿಗೆ ತಲೆಹಾಕಿ ಮಲಗುವುದು ಒಳ್ಳೆಯದು . ನಮ್ಮ ಶರೀರಕ್ಕೆ ತಲೆಯು ಉತ್ತರ ಧ್ರುವ ಇದ್ದಂತೆ . ತಲೆಯನ್ನು ಉತ್ತರ ದಿಕ್ಕಿಗೆ ಇರಿಸಿ ಮಲಗಿದರೆ ದೇಹದ ಉತ್ತರ ಧ್ರುವ ಹಾಗೂ ಭೂಮಿಯ ಉತ್ತರ ಧ್ರುವಗಳು ಸಂಧಿಸಿ ರಕ್ತದ ಚಲನೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ, ಅದರಿಂದ ನಿದ್ದೆ ಸರಿಯಾಗಿ ಬರುವುದಿಲ್ಲ ಮತ್ತು ಒತ್ತಡ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.

ವೈಜ್ಞಾನಿಕ ಕಾರಣ ಏನು?

Also read: ಭಾರತದ ಪೂರ್ವಜರ ವಿವಾಹ ಪದ್ದತಿಯ ಹಿಂದೆ ಇರುವ ವೈಜ್ಞಾನಿಕ ಅರ್ಥ ಗೊತ್ತಾದ್ರೆ, ಹೆಮ್ಮೆ ಆಶ್ಚರ್ಯ ಎರಡೂ ಆಗುತ್ತೆ!!

ಈ ವಿಚಾರವನ್ನು ಇದನ್ನು ವೈದ್ಯಕೀಯ ವಿಜ್ಞಾನ ಒಪ್ಪುವುದಿಲ್ಲ. ಅದಕ್ಕೆ ಬೇರೆಯದೇ ವಿವರಣೆಯನ್ನು ನೀಡುವ ವಿಜ್ಞಾನ ಶಾಸ್ತ್ರದಲ್ಲಿ ಉತ್ತರ ದಿಕ್ಕಿಗೆ ತಲೆಯಿರಿಸಿ ಮಲಗಬಾರದೆಂದು ಹೇಳಲು ಕಾರಣವೇನೆಂದರೆ, ಭೂಮಿಯ ಆಯಸ್ಕಾಂತ ಶಕ್ತಿಯು ನಿರಂತರವಾಗಿ ದಕ್ಷಿಣದಿಂದ ಉತ್ತರಕ್ಕೆ ಪ್ರವಹಿಸುತ್ತಿರುತ್ತದೆ. ಇದರಿಂದ ನಾವು ಉತ್ತರಕ್ಕೆ ತಲೆಯಿರಿಸಿ ಮಲಗಿದಾಗ ನಮ್ಮ ದೇಹದಲ್ಲಿರುವ ಕಬ್ಬಿಣ, ಕೋಬಾಲ್ಟ್, ನಿಕ್ಕಲ್‌ನ ಅಂಶಗಳು ತಲೆಯ ಭಾಗದತ್ತ ಪ್ರವಹಿಸುತ್ತವೆ. ಇದರಿಂದ ದುಸ್ವಪ್ನ ಬೀಳುವುದು, ನಿದ್ರಾಹೀನತೆ, ನಿದ್ದೆಯಲ್ಲಿ ಗೊಣಗಾಡುವುದು ಮತ್ತು ತಲೆ ಭಾರವಾಗಿ ತಲೆನೋವು ಬರುವ ತೊಂದರೆಗಳು ಆರಂಭವಾಗುತ್ತವೆ. ಶರೀರದ ಎಲ್ಲ ಭಾಗಗಳಿಗೆ ಅಗತ್ಯ ಶಕ್ತಿ ಪ್ರಸಾರವಾಗದೆ ಬಲಹೀನತೆ, ಅಲಸ್ಯ, ಅತಿಯಾದ ದಣಿವಿನ ತೊಂದರೆ ಆರಂಭವಾಗುವುದಲ್ಲದೆ, ಚಿಕ್ಕಚಿಕ್ಕ ವಿಷಯಗಳಿಗೂ ಚಿಂತೆ ಮಾಡುವುದು, ಒತ್ತಡವನ್ನು ಅನುಭವಿಸುವುದು ಮತ್ತು ಸಿಡುಕುವಂಥ ಮಾನಸಿಕ ತೊಂದರೆಗಳು ಕೂಡ ಆರಂಭವಾಗುತ್ತದೆ. ಎಂದು ಹೇಳುತ್ತದೆ.