ಜನಸಂಖ್ಯೆ ನಿಯಂತ್ರಣಕ್ಕೆ ಹೊಸ ಹೊಸನಿಯಮ; ಇನ್ಮುಂದೆ 2ಕ್ಕಿಂತ ಹೆಚ್ಚು ಮಕ್ಕಳಿದ್ರೆ ಪಂಚಾಯತ್​​ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ??

0
157

ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಸಂಖ್ಯೆ, ಚೀನಾ ದೇಶವನ್ನು ಮಿರಿಸುತ್ತಿದೆ. ಈಗಾಗಲೇ ಪ್ರಪಂಚದಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ಇನೇನು ಮುಂದಿನ ವರ್ಷದಲ್ಲಿ ಜನಸಂಖ್ಯೆಯಲ್ಲಿ ಮೊದಲೇ ಸ್ಥಾನಕ್ಕೆ ಏರಲಿದೆ. ಇದರಿಂದ ದೇಶದಲ್ಲಿ ಹಲವು ಸಮಸ್ಯೆಗಳು ಹುಟ್ಟುತ್ತಿವೆ. ಅಷ್ಟೇಅಲ್ಲದೆ ದೇಶದ ಅಭಿವೃದ್ದಿಗೆ ಕೂಡ ಮಾರಕವಾಗಿದೆ. ಈ ಸಂಬಂಧ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದರು ಪ್ರಯೋಜನಕ್ಕೆ ಬರುತ್ತಿಲ್ಲ, ಇದಕ್ಕಾಗಿ ಹೊಸ ಉಪಾಯ ಒಂದನ್ನು ಹುಡುಕಿರುವ ಸರ್ಕಾರ 2ಕ್ಕಿಂತ ಹೆಚ್ಚು ಮಕ್ಕಳಿದ್ರೆ ಪಂಚಾಯತ್​​ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎನ್ನುವ ಹೊಸನಿಯಮವನ್ನು ಜಾರಿಗೆ ಮಾಡಲು ಚಿಂತನೆ ನಡೆಸಿದೆ.

Also read: ಇನ್ಮುಂದೆ ರೇಷನ್ ಪಡೆಯಲು ಊರಿಗೆ ಹೋಗಲೇ ಬೇಕಿಲ್ಲ; ಈ ಕಾರ್ಡ್ ಇದ್ದರೇ, ದೇಶದ ಯಾವ ಭಾಗದಲ್ಲಾದ್ರೂ ರೇಷನ್ ಪಡಿಬಹುದು..

ಹೌದು ಕೆಲ ವರ್ಷಗಳಿಂದ ಭಾರತವೂ ಚೀನಾಕ್ಕೆ ಸೆಡ್ಡು ಹೊಡೆಯುವಂತೆ ಜನಸಂಖ್ಯಾಭಿವೃದ್ಧಿಯಲ್ಲಿ ದಾಪುಗಾಲಿಡುತ್ತಾ ಸಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರಗಳು ಹಲವು ಸರ್ಕಸ್ ನಡೆಸಿದ್ದರೂ ಫಲನೀಡಿಲ್ಲ. ಇದೀಗ ಉತ್ತರಾಖಂಡ ರಾಜ್ಯ ಸರ್ಕಾರ ಮಾತ್ರ ಹೊಸದೊಂದು ಕಾನೂನು ರೂಪಿಸಿದೆ.

ಏನದು ಕಾನೂನು?

ಉತ್ತರಾಖಂಡ್​ನ ರಾಜ್ಯ ಅಸೆಂಬ್ಲಿಯಲ್ಲಿ ಹೊಸ ಮಸೂದೆಯೊಂದು ಪಾಸ್​ ಆಗಿದೆ. ಅದೇನಂದ್ರೆ ಇನ್ಮುಂದೆ 2ಕ್ಕಿಂತ ಹೆಚ್ಚು ಮಕ್ಕಳು ಹೊಂದಿರುವವರು ಪಂಚಾಯತ್​​​ ಚುನಾವಣೆಗಳಿಗೆ ಸ್ಪರ್ಧಿಸುವಂತಿಲ್ಲ, ಇಂಥದ್ದೊಂದು ಹೊಸ ಕಾನೂನನ್ನ ಉತ್ತರಾಖಂಡ್​ನಲ್ಲಿ ಜಾರಿಗೆ ತರಲಾಗ್ತಿದೆ. ಸ್ಥಳೀಯ ಮಟ್ಟದ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕಾದರೆ ಕನಿಷ್ಠ ಹಾಗೂ ಇಬ್ಬರೇ ಮಕ್ಕಳನ್ನು ಹೊಂದಿರಲೇಬೇಕೆಂಬುದು ಕಡ್ಡಾಯ ನಿಯಮ. ಉತ್ತರಾಖಂಡ ನಿಯಮದ ಪ್ರಕಾರ ಇನ್ಮುಂದೆ, 10ನೇ ತರಗತಿ ಪಾಸ್​ ಮಾಡಿದವರು ಹಾಗೂ ಇಬ್ಬರಿಗಿಂತ ಕಡಿಮೆ ಮಕ್ಕಳನ್ನ ಹೊಂದಿದವರು ಮಾತ್ರ ಪಂಚಾಯತ್​ ಹಾಗೂ ಸ್ಥಳೀಯ ಮಟ್ಟದ ಚುನಾವಣೆಗೆ ಸ್ಫರ್ಧಿಸಲು ಅರ್ಹರಾಗಿದ್ದಾರೆ, ಎಸ್​​ಸಿ ಹಾಗೂ ಎಸ್​ಟಿ ಅಭ್ಯರ್ಥಿಗಳಿಗೆ ಕನಿಷ್ಠ 8ನೇ ತರಗತಿಯವರೆಗೆ ಓದಿರಬೇಕು ಎಂಬ ಫಿಕ್ಸ್​ ಮಾಡಲಾಗಿದೆ.

Also read: ವಾಹನ ಸವಾರರಿಗೆ ಎಚ್ಚರ ಇನ್ಮುಂದೆ ಚಿಕ್ಕ ತಪ್ಪಿಗೂ ಬೀಳುತ್ತೆ ಸಾವಿರಾರು ರೂ. ದಂಡ; ಯಾವ್ಯಾವ ರೂಲ್ಸ್ ಬ್ರೇಕ್‍ಗೆ ಎಷ್ಟೆಷ್ಟು ದಂಡ??

ಈ ರೀತಿಯ ಮಸೂದೆಗಳಿಂದ ಜನರಲ್ಲಿ ಜಾಗೃತಿ ಮೂಡುವ ಸಾಧ್ಯತೆ ಇದ್ದು, ಇದೇ ರೀತಿಯ ನಿಯಮಗಳು ಎಲ್ಲೆಡೆಯೂ ಜಾರಿಯಾಗಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಇದೆ ನಿಯಮವನ್ನು ದೇಶದೆಲ್ಲೆಡೆ ಜಾರಿ ಮಾಡುವುದರಲ್ಲಿ ಅನುಮಾನವಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಕಳೆದ ವರ್ಷವೇ ಒಡಿಶಾ ಗ್ರಾಮ ಪಂಚಾಯ್ತಿಗಳಿಗೆ ಸುಪ್ರೀಂ ಕೋರ್ಟ್ ಈ ಮಹತ್ವದ ತೀರ್ಪು ನೀಡಿ, ಮೂರು ಮಕ್ಕಳನ್ನು ಹೊಂದಿರುವ ವ್ಯಕ್ತಿ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಹಾಗೂ ಪಂಚಾಯತ್ ಸದಸ್ಯನಾಗಿರುವುದರಿಂದ ಅನರ್ಹ ಗೊಳ್ಳುತ್ತಾನೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

Also read: ವಾಹನ ಸವಾರರೆ ಎಚ್ಚರ; ಇನ್ಮುಂದೆ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಬಿಳ್ಳಲಿದೆ ಲಕ್ಷ ಲಕ್ಷ ದಂಡ!..

ಮೂರನೇ ಮಗು ಜನಿಸಿದ ಕಾರಣಕ್ಕೆ ಒಡಿಶಾದ ನುವಾಪಾಡಾ ಜಿಲ್ಲೆಯ ಪಂಚಾಯತ್‌ವೊಂದ ರಿಂದ ತಮ್ಮನ್ನು ಅನರ್ಹಗೊಳಿಸಿದ ಒಡಿಶಾ ಹೈಕೋರ್ಟ್ ನಿರ್ಧಾರ ಪ್ರಶ್ನಿಸಿ ಮೀನಾ ಸಿಂಗ್ ಮಾಂಝಿ ಎನ್ನುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ತನ್ನ ನಿರ್ಧಾರವನ್ನು ತಿಳಿಸಿದ್ದು. ಈಗ ಇದೆ ವಿಷಯ ಜೀವ ಪಡೆದುಕೊಂಡಿದ್ದು ಮುಂದಿನ ಚುನಾವಣೆ ಒಳಗೆ ದೇಶದ ಎಲ್ಲ ರಾಜ್ಯಗಳಲ್ಲಿವೂ ಜಾರಿಗೆ ಬರಲಿದೆ ಎನ್ನುವುದು ಮೂಲಗಳಿಂದ ತಿಳಿದಿದೆ.