ನೀರಿನಲ್ಲಿ ಮೋಬೈಲ್ ಬಿದ್ದರೆ ಏನು ಮಾಡಬೇಕು?? ಇಲ್ಲಿದೆ ನೋಡಿ ಅಧ್ಬುತ ಉಪಾಯ

0
2945

ಸಾಮಾನ್ಯವಾಗಿ ಹಲವಾರು ಮಂದಿ ಬಾತ್ ರೂಮ್ ನಲ್ಲೋ ಅಥವಾ ಸಮುದ್ರದಲ್ಲಿ ಆಡುವಾಗಲೋ ಅಥವಾ ಮಳೆಯಲ್ಲಿ ನೆನೆದಾಗಲೋ ಮೊಬೈಲ್ ಗಳು ಹಾಳಾಗಿ ಸಾವಿರಾರು ರೂಪಾಯಿಗಳು ಖರ್ಚು ಮಾಡಿರುತ್ತಾರೆ‌.

ಅದಕ್ಕೆ ಸಿಂಪಲ್ ಆಗಿ ಸರಿ ಮಾಡಬಹುದಾದ ವಿಧಾನ ಯಾವುದೆಂದು ಇಲ್ಲಿದೆ ನೋಡಿ.. ಶೇರ್ ಮಾಡಿ ಸ್ನೇಹಿತರಿಗೂ ಉಪಯೋಗವಾಗಬಹುದು..

ನಮ್ಮ ಮೊಬೈಲ್ ನೀರಿಗೆ ಬಿದ್ದರೇ ಮೊದಲು ನಾವು ಮಾಡಬೇಕಾದದ್ದು ಏನೆಂದರೇ.. ಮೊಬೈಲ್ ಸ್ವಿಚ್ ಆಫ಼್ ಆಗಿರಲಿ ಬಿಡಲಿ ನಾವು ತಕ್ಷಣ ಸ್ವಿಚ್ ಆಫ್ ಮಾಡಿ.. ಬ್ಯಾಟರಿಯನ್ನು ರಿಮೂವ್ ಮಾಡಬೇಕು.. ಅಕಸ್ಮಾತ್ ರಿಮೂವೆಬಲ್ ಬ್ಯಾಟರಿ ಆಗಿರದಿದ್ದರೇ.. ಫೋನ್ ಸ್ವಿಚ್ ಆಫ್ ಮಾಡಬೇಕು.. ಏಕೆಂದರೆ ಬ್ಯಾಟರಿ ಮೂಲಕವೇ ಕರೆಂಟ್ ಪಾಸ್ ಆಗಿ ಶಾರ್ಟ್ ಸರ್ಕ್ಯೂಟ್ ಆಗುವುದು.. ನಂತರ ಮೊಬೈಲ್ ರಿಪೇರಿ ಮಾಡಲು ಸಾದ್ಯವಾಗದ ಸ್ಥಿತಿ ತಲುಪಿ ಬಿಡುತ್ತದೆ.. ಅದಕ್ಕಾಗಿಯೇ ತಕ್ಷಣ ಬ್ಯಾಟರಿ ರಿಮೂವ್ ಮಾಡಿ..

ಆನಂತರ ಫೋನ್ ನಿಂದ ಸಿಮ್ ಮೆಮೊರಿ ಕಾರ್ಡ್ ಗಳನ್ನು ರಿಮೂವ್ ಮಾಡಿ ಬಿಸಿಲಿನಲ್ಲಿ ಇಡಿ.. ಯಾವುದೇ ಕಾರಣಕ್ಕೂ ಮೊಬೈಲ್ ಸ್ವಿಚ್ ಆನ್ ಮಾಡಲು ಆತುರ ಪಡಬೇಡಿ.. ನಂತರ ಮೊಬೈಲ್ ಅನ್ನು ಒಂದು ಅಕ್ಕಿಯ ಬ್ಯಾಗ್ ಒಳಗೆ ಹಾಕಿ.. ಮೊಬೈಲ್ ಸಂಪೂರ್ಣ ಮುಚ್ಚುವಷ್ಟು ಬ್ಯಾಗ್ ನಲ್ಲಿ ಅಕ್ಕಿಯಿರಲಿ.. ಎರಡು ಮೂರು ದಿನ ಫೋನ್ ಅನ್ನು ಅಲ್ಲೇ ಇರಲು ಬಿಡಿ.. ಏಕೆಂದರೆ ಅಕ್ಕಿ ಒಂದು ನೀರನ್ನು ಹೀರಿಕೊಳ್ಳುವ ಅಧ್ಬುತ ವಸ್ತು..

3 ದಿನಗಳ ಬಳಿಕ ಫೋನ್ ನನ್ನು ತೆಗೆದು ಬ್ಯಾಟರಿ ಹಾಕಿ ಸ್ವಿಚ್ ಆನ್ ಮಾಡಿ.. ನಿಮ್ಮ ಫೋನ್ ಎಂದಿನಂತೆ ವರ್ಕ್ ಆಗುವುದು..

ಈ ರೀತಿ ಮಾಡಿದರೇ ಶೇಕಡ 95% ಮೊಬೈಲ್ ಗಳು ಸರಿ ಹೋಗುತ್ತವೆ.. ಆದರೆ ಉಪ್ಪು ನೀರು ಅಂದರೆ ಸಮುದ್ರ ನೀರಿನಲ್ಲಿ ಮೊಬೈಲ್ ಬಿದ್ದರೇ ಸರಿ ಹೋಗುವ ಸಂಭವ ಕಡಿಮೆ.. ಏಕೆಂದರೇ ಉಪ್ಪು ನೀರು ಒಂದು ಉತ್ತಮ ವಿದ್ಯುತ್ ವಾಹಕ ಆಗಿರುವುದರಿಂದ ಮೊಬೈಲ್ ಬೇಗ ಹಾಳಾಗಿರುತ್ತದೆ..

ಶೇರ್ ಮಾಡಿ ಸ್ನೇಹಿತರಿಗೂ ಉಪಯೋಗವಾದರೂ ಆದೀತು‌‌