ಕತ್ತು, ಕೈ ಅಥವಾ ಕಾಲು ಉಳುಕಿದ್ರೆ ಡಾಕ್ಟರ್ ಹತ್ರ ಹೋಗೋ ಮೊದಲು ಈ ಕ್ರಮಗಳನ್ನು ಅನುಸರಿಸಿ…

0
2558

Kannada News | Health tips in kannada

ದಾರಿಯಲ್ಲಿ ನಡಿಬೇಕಾದ್ರೆ ಅಥವಾ ರಾತ್ರಿ ಮಲಗಿದ್ದಾಗ ಸಡನ್ ಆಗಿ ಕತ್ತೋ ಕಾಲೋ ಉಳುಕಿಸ್ಕೊಂಡು ಬಿಟ್ಟಿರ್ತೀವಿ. ಉಳುಕಿನ ನೋವು ಮಾತ್ರ ಯಾವ ಕೆಲ್ಸನೂ ಮಾಡಕ್ಕೆ ಬಿಡ್ದೆ ಹಿಂಸೆ ಮತ್ತು ಕಿರಿಕಿರಿ ಮಾಡ್ತಾ ಇರತ್ತೆ. ಕೆಲವೊಮ್ಮೆ ಒಂದು ದಿನಕ್ಕೆ ವಾಸಿಯೋಗೋ ನೋವು ಎಷ್ಟೋ ಸಲ ವಾರ ಆದರು ಹೋಗಿರಲ್ಲ. ಉಳುಕಿದ ತಕ್ಷಣ ನಾವು ಹೇಳೋ ಕ್ರಮಗಳನ್ನ ಪಾಲಿಸಿದ್ರೆ ನೋವು ಜಾಸ್ತಿ ಹೊತ್ತು ಇರಲ್ಲ.

೧) ರೆಸ್ಟ್/ವಿಶ್ರಾಂತಿ:
ಯಾವ ಭಾಗ ಉಳುಕಿದೆಯೋ ಆ ಭಾಗಕ್ಕೆ ವಿಶ್ರಾಂತಿ ನೀಡೋದು ತುಂಬಾ ಮುಖ್ಯ. ವಿಶ್ರಾಂತಿ ಜಾಸ್ತಿ ಆದಷ್ಟು ನೋವು ಬೇಗ ಕಡಿಮೆಯಾಗುತ್ತದೆ. ಆ ಭಾಗನ ಜಾಸ್ತಿ ಉಪಯೋಗಿಸದೆ ಇದ್ದಾಗ ಅಲ್ಲಿನ ಸ್ನಾಯುಗಳು ರಿಲ್ಯಾಕ್ಸ್ ಆಗಿ ಉಳುಕು ಕಡಿಮೆಯಾಗುತ್ತದೆ.

೨) ಐಸ್/ ಮಂಜುಗಡ್ಡೆ ಅಪ್ಲಿಕೇಶನ್:
ಉಳುಕಿನ ಜಾಗಕ್ಕೆ ಗಂಟೆಗೆ ೨೦ ನಿಮಿಷಗಳ ಕಾಲ ಮಂಜುಗಡ್ಡೆಯಿಂದ ಮಸಾಜ್ ನೀಡಿದ್ದಲ್ಲಿ ಅಲ್ಲಿನ ಸ್ನಾಯುಗಳ ಬಿಗಿತ ಕಡಿಮೆಯಾಡಿ ನೋವು ಕಡಿಮೆಯಾಗುತ್ತದೆ. ನೇರವಾಗಿ ಮಂಜುಗಡ್ಡೆಯನ್ನು ಚರ್ಮಕ್ಕೆ ಸೋಕಿಸುವ ಬದಲು ಒಂದು ಬಟ್ಟೆಯಲ್ಲಿ ಕಟ್ಟಿ ಮಸಾಜ್ ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ.ನೋವು ಕಡಿಮೆಯಾಗದಿದ್ದಲ್ಲಿ ಗಂಟೆಗೊಮ್ಮೆ ಈ ರೀತಿ ಮಾಡಿದ್ದಲ್ಲಿ ಉಳುಕು ಮಂಗಮಾಯವಾಗುತ್ತದೆ.

೩) ಕಂಪ್ರೆಸ್ಸ್/ಬಿಗಿಯಾಗಿ ಕಟ್ಟುವುದು;
ಎಲ್ಲಿ ಉಳುಕಿದೆಯೋ ಆ ಭಾಗವನ್ನು ಬ್ಯಾಂಡೇಜ್ ಗಳ ಸಹಾಯದಿಂದ ಬಿಗಿಯಾಗಿ ಕಟ್ಟಿದ್ದಲ್ಲಿ ಆ ಭಾಗವು ಜಾಸ್ತಿ ಚಲನೆಗೆ ಒಳಪಡದೆ ವಿಶ್ರಾಂತಿ ಲಭಿಸುತ್ತದೆ. ಹೀಗೆ ಮಾಡುವುದರಿಂದ ಸ್ನಾಯುಗಳ ರಕ್ತಸಂಚಾರ ಅಧಿಕವಾಗಿ ಅವುಗಳು ಸಡಿಲವಾಗುತ್ತವೆ. ವಿವಿಧ ಭಾಗಗಳಿಗೆ ಅದಕ್ಕೆ ತಕ್ಕುನಾದ ಬ್ಯಾಂಡೇಜ್ ಗಳು ಮೆಡಿಕಲ್ ಶಾಪ್ ಗಳಲ್ಲಿ ಲಭ್ಯವಿರುತ್ತದೆ.

೪) ಎಲಿವೇಷನ್/ ಎತ್ತಿರಿಸಿ:
ಯಾವ ಭಾಗವು ಉಳಿಕಿದೆಯೋ ಅದನ್ನು ಹೃದಯದ ಭಾಗಕ್ಕಿಂತ ಮೇಲಕ್ಕೆ ಇರಿಸಿ ವಿಶ್ರಮಿಸಿ. ಇದರಿಂದ ರಕ್ತಸಂಚಾರ ಸರಾಗವಾಗಿ ಊತ ಕಡಿಮೆಯಾಗುತ್ತದೆ.

Also Read: ಸೂರ್ಯನಮಸ್ಕಾರದಿಂದ ಏನೆಲ್ಲಾ ಪ್ರಯೋಜನ ಆಗುತ್ತೆ ಅಂತ ಗೊತ್ತಾದ್ರೆ ಈಗ್ಲಿಂದನೇ ಮಾಡಕ್ಕೆ ಪ್ರಾರಂಭಿಸ್ತಿರಾ…

Watch: