ಸಂಬಂಧಗಳಿಗೆ ಯಾವುತ್ತು ಹಣ ಮುಖ್ಯ ಅಲ್ಲ ಕಣ್ರೀ ಮಾನವೀಯತೆ ಬೆಲೆ ಗೊತ್ತಿರಬೇಕು ಅಷ್ಟೇ..

0
1106

ಒಂದು ಬಡ ಕುಟುಂಬ ಆ ಬಡ ಕುಟುಂಬದಲ್ಲಿ ಒಬ್ಬ ಬಾಲಕ
ಅವನ ಕೆಲಸ ಪ್ರತಿದಿನ ಪೇಪರ್ ಹಾಕುವುದು
ಹೀಗೆ ಪ್ರತಿದಿನ ಪೇಪರ್ ಹಾಕಲು ಹೋಗುತಿದ್ದ
ಆದ್ರೆ ಒಂದು ದಿನ ತನ್ನ ತಂದೆ ತಾಯಿ ಆಕಸ್ಮಿಕವಾಗಿ ಸಾಯುತ್ತಾರೆ.
ಆದ್ರೆ ಹುಡುಗ ಒಬ್ಬನೇ ಮಗ ಆಗಿರುವ ಕಾರಣ ಆನಾಥನಾಗುತ್ತಾನೆ
ತಿನ್ನಲು ಏನು ಸಿಗದೇ ಭಿಕ್ಷೆ ಬೇಡಲು ಪ್ರಾಂಭಿಸುತ್ತಾನೆ
ಹೀಗೆ ಭಿಕ್ಷೆ ಬೇಡುತ್ತ ಒಂದು ದಿನ ಒಬ್ಬ ಹೂ ಮಾರುವ ಅಮ್ಮ ಇವನಿಗೆ
ಬುದ್ದಿ ಹೇಳಿ ೧೦೦ ಕೊಟ್ಟು ನೀನು ಭಿಕ್ಷೆ ಬೇಡ ನೀನು ದುಡಿದು ತಿನ್ನಬೇಕು ಓದಬೇಕು ಅಂತಾಳೆ
ಆಗ ಹುಡುಗ ಅದೇ ೧೦೦ ರೂ ಹೂವಿನ ವ್ಯಾಪಾರ ಶುರು ಮಾಡಿದ
ಆ ವ್ಯಾಪಾರ ಅವನು ತುಂಬ ಯಶಸ್ಸು ಕಂಡು ತುಂಬ ಹಣ ಗಳಿಸುತ್ತಾನೆ.
ಒಂದು ದಿನ ಈ ಹೂವಿನ ಅಂಗಡಿ ಮುಂದೆ ಒಂದು ಅಜ್ಜಿ ಬಂದು ಭಿಕ್ಷೆ ಬೇಡುತ್ತಾಳೆ
ಆಗ ಆ ಅಜ್ಜಿಯನ್ನು ನೋಡಿದ ಆ ಹುಡುಗ ಅಜ್ಜಿ ನೀನು ಭಿಕ್ಷೆ ಯಾಕೆ ಬೇಡುತ್ತೀಯ
ನಾನು ಯಾರು ಅಂತ ಗೊತ್ತ ನಿಂಗೆ ಅಂತಾನೆ
ಅಜ್ಜಿ ಇಲ್ಲ ನಂಗೆ ಕಣ್ಣು ಸರಿಯಾಗಿ ಕಾಣಲ್ಲ ನನ್ನ ಮಗ ನನ್ನ ಮನೆಯಿಂದ ಹೊರಗೆ ಹಾಕಿದನಪ್ಪ
ಅದುಕ್ಕೆ ಬದುಕೋಕೆ ಭಿಕ್ಷೆ ಮಾಡ್ತೀನಿ ಅಂತಾಳೆ ಅಜ್ಜಿ
ಆಗ ಆ ಹುಡುಗ ಹೇಳುತ್ತಾನೆ ಅಜ್ಜಿ ಯಾಕೆ ಬೇಜಾರ ಮಾಡಕೊಳ್ತಿಯಾ ನಿನ್ನ ಎರಡನೇ ಮಗ ಇದನಲ್ಲ ಅಂತಾನೆ
ಅಜ್ಜಿ ಇಲ್ಲಪ್ಪ ನಂಗೆ ಒಬ್ಬನೇ ಮಗ ಅಂತಾಳೆ
ಆಗ ಹುಡುಗ ಯಾಕಮ್ಮ ಮರೆತು ಬಿಟ್ಟ ನಿನ್ನ ಎರಡನೇ ಮಗನಿಗೆ ೧೦೦ ರೊ ಕೊಟ್ಟು ಬೆಳೆಸಿದ್ದು
ನಾನೆ ಅವತ್ತು ನಿನ್ನ ಹತ್ತಿರ ಭಿಕ್ಷೆ ಬೇಡುವಾಗ ನೀವು ನಂಗೆ ೧೦೦ ಕೊಟ್ಟಿದ್ದು
ನೀನು ನನ್ನ ತಾಯಿ ಅನ್ಕೊಂಡು ನಿನ್ನ ತುಂಬ ಸಂತೋಷವಾಗಿ ನೋಡಿಕೊಳ್ತೀನಿ
ನನ್ನ ಹತ್ತಿರ ಇರು ಅಂತಾನೆ. ಅಜ್ಜಿ ಕಣ್ಣಲ್ಲಿ ನೀಡು ಬರುತ್ತೆ.
ಸಂಬಂಧಗಳಿಗೆ ಯಾವುತ್ತು ಹಣ ಮುಖ್ಯ ಅಲ್ಲ ಕಣ್ರೀ ಮಾನವೀಯತೆ ಬೆಲೆ ಗೊತ್ತಿರಬೇಕು ಅಷ್ಟೇ..