ಮದುವೆಯಾಗುವ ಗಂಡು- ಹೆಣ್ಣಿನ ನಡುವೆ ವಯಸ್ಸಿನ ಅಂತರ ಇಲ್ಲಿ ಹೇಳಿರುವಷ್ಟು ಇಲ್ಲ ಅಂದ್ರೆ ಡೈವರ್ಸ್ ಆಗೋ ಸಾಧ್ಯತೆ ಹೆಚ್ಚು!! ವಯಸ್ಸಿಗೂ ಡೈವರ್ಸ್-ಗೂ ಸಂಬಂಧ ಇದೆ ಅಂತೀರ??

0
742

ಮನುಷ್ಯನ ಜೀವನದಲ್ಲಿ ಮಹತ್ವದ ಜೀವನದ ಘಟ, ಸಂತೋಷದ ಕ್ಷಣ ವೆಂದರೆ ಮದುವೆ ಎಂದು ಹಿರಿಯರು ಮೊದಲಿನಿಂದ ಸಾರಿ ಹೇಳಿದ್ದಾರೆ. ಈ ಬಂಧನದಲ್ಲಿ ಗಂಡ ಹೆಂಡತಿಯ ನಡುವೆ ಇರುವ ವಯಸ್ಸಿನ ಅಂತರ ಕೂಡ ಅಮೂಲ್ಯವಾದದ್ದು ಎನ್ನುವುದು ತಿಳಿದಿರುವ ವಿಷಯವಾಗಿದೆ.ಇದೆ ವಿಷಯಕ್ಕೆ ಹಲವು ಜೋಡಿಗಳ ಸಂಬಧಗಳು ಒಡೆದು ಡೈವರ್ಸ್ ಕೂಡ ನಡೆಯುತ್ತಿವೆ. ಇದೆ ವಯಸ್ಸಿನ ಅಂತರದಲ್ಲಿ ಮೊದಲು ಹಿರಿಯರು 10- 15 ವರ್ಷಗಳ ಅಂತರದಲ್ಲಿ ಮದುವೆ ಮಾಡಿದರು ಕೂಡ ಇಬ್ಬರು ಅನೂನ್ಯತೆ ಇಂದ ಜೀವನ ಸಾಗಿಸುತ್ತಿದ್ದರು ಆದರೆ ಕಾಲಮಾನ ಬದಲಾದಂತೆ ಸಂಬಂಧಗಳಲ್ಲಿ ಹಲವು ಬದಲಾವಣೆಗಳು ಕಂಡು ಬರುತ್ತಿವೆ.

Also read: ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹೌದು ಮದುವೆ ಜೀವನದ ಮಹತ್ವದ ಘಟ್ಟ. ಮದುವೆ ನಂತ್ರ ಸಂಗಾತಿಯ ವರ್ತನೆ, ಜವಾಬ್ದಾರಿ ಸಂಸಾರ ಎಷ್ಟು ದಿನ ನಡೆಯುತ್ತೆ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವುದು ಕಷ್ಟ. ಮದುವೆ ವೇಳೆ ಪತಿ-ಪತ್ನಿಯಾಗುವವರ ವಯಸ್ಸನ್ನು ಗಮನಕ್ಕೆ ತೆಗೆದುಕೊಳ್ಳಲಾಗುತ್ತದೆ. ಸುಖ ಸಂಸಾರಕ್ಕೆ ಪತಿ-ಪತ್ನಿ ನಡುವಿರುವ ವಯಸ್ಸಿನ ಅಂತರವೂ ಮಹತ್ವದ ವಿಚಾರವಾಗಿದೆ. ಏಕೆಂದರೆ ಹಲವರು ಕೋರ್ಟ್ ಮೆಟ್ಟಿಲೇರಿ ತಮ್ಮ ಜೀವನಕ್ಕೆ ಅಂತಿಮ ವಿರಾಮ ಹಾಡುತ್ತಿದ್ದಾರೆ. ಇದೆ ವಿಷಯವಾಗಿ ಅಟ್ಲಾಂಟಾ ಯುನಿವರ್ಸಿಟಿ ಸಂಶೋಧನೆ ನಡೆಸಿದ್ದು.

ಏನು ಹೇಳುತ್ತೆ ಸಂಶೋಧನೆ?

ಗಂಡು ಹೆಣ್ಣುಗಳ ನಡುವಿರುವ ವಯಸ್ಸಿನ ಅಂತರ ಕುರಿತು ಸಂಶೋಧನೆ ಹೇಳುವ ಪ್ರಕಾರ ಗಂಡ ಹೆಂಡತಿ ನಡುವೆ ವಯಸ್ಸಿನ ಅಂತರ ಹೆಚ್ಚಿದ್ದಷ್ಟು ಡಿವೋರ್ಸ್ ಸಾಧ್ಯತೆ ಹೆಚ್ಚಿರುತ್ತದೆ. ಎಂದು ತಿಳಿಸಿದ ಸಂಶೋಧನೆ ವಿವಿಧ ವಯಸ್ಸಿನ ಅಂತರ ಸುಮಾರು 3000 ಜೋಡಿಗಳ ಮೇಲೆ ಈ ಸಂಶೋಧನೆ ನಡೆಯಿತು. ಒಂದು ವರ್ಷದಷ್ಟು ವಯಸ್ಸಿನ ಅಂತರವಿರುವ ಗಂಡ ಹೆಂಡತಿ ಹೆಚ್ಚು ಅನ್ಯೋನ್ಯವಾಗಿರುತ್ತಾರೆ. ಎಂದು ತಿಳಿಸಿದೆ ಅದೇ ವಯಸ್ಸಿನ ಅಂತರ 3 ರಿಂದ 5 ವರ್ಷ ಹೆಚ್ಚಿದ್ದಾಗ ಈ ಅನ್ಯೋನ್ಯತೆ ಇರಲ್ಲ. 5 ರಿಂದ 10 ವರ್ಷದ ಗ್ಯಾಪ್‌ನಲ್ಲಂತೂ ಸಾಮರಸ್ಯ ಬಹಳ ಕಡಿಮೆ ಇರುತ್ತದೆ. ಸರಿ ವಯಸ್ಸಿನ ಹುಡುಗ-ಹುಡುಗಿ ಮದುವೆಯಾದಲ್ಲಿ ಇಬ್ಬರ ಆಲೋಚನೆ, ಬುದ್ದಿ ಒಂದೇ ರೀತಿ ಇರುವುದರಿಂದ ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.

Also read: ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಇನ್ನೊಂದು ಮಹತ್ವದ ವಿಷಯ ಎಂದರೆ ವಯಸ್ಸಿನ ಅಂತರ ಹೆಚ್ಚಾದಷ್ಟೂ ದಂಪತಿಗಳಲ್ಲಿ ವಿರಸ ಹೆಚ್ಚು, ಸಮರಸ ಕಡಿಮೆ ಅಂತ ಈ ಸಂಶೋಧನೆ ಹೇಳುತ್ತೆ. ಇದಕ್ಕೆ ಉದಾಹರಣೆಯಾಗಿ ಎಷ್ಟೋ ಜೋಡಿಗಳು ಭಾರತದಲ್ಲಿ ಸಿಗಬಹುದು. ಏಕೆಂದರೆ ಮುಂದುವರಿದ ಕಾಲದಲ್ಲಿ ಸಂಬಧಗಳಿಗೆ ಬೆಲೆ ಎನ್ನುವುದು ಕಡಿಮೆಯಾಗಿತ್ತಿದ್ದೆ. ಅದೇ ರೀತಿ ಮಗುವಿಲ್ಲದ ಜೋಡಿಗಳು ಬೇಗ ಸಪರೇಟ್ ಆಗ್ತಾರೆ. ಮಗುವಿರುವವರು ಬೇರ್ಪಡುವ ಬಗ್ಗೆ ಕೊಂಚ ಯೋಚಿಸುತ್ತಾರೆ ಅನ್ನುವ ವಿವರಗಳೂ ಈ ಸಂಶೋಧನೆಯಿಂದ ಲಭ್ಯವಾಗಿವೆ.
ಸಂಪ್ರದಾಯಕ್ಕೆ ಹೆಸರು ಪಡೆದ ಭಾರತದಲ್ಲಿ ಗಂಡನ ವಯಸ್ಸು ಹೆಚ್ಚಿರುತ್ತದೆ. ಇದಕ್ಕೆ ಹಲವು ಕಾರಣಗಳು ಕೂಡ ಇವೆ. ಅದರಲ್ಲಿ ಸಾಮಾನ್ಯವಾಗಿ ಹುಡುಗಿಯರು ಹುಡುಗರಿಗಿಂತ ವೇಗವಾಗಿ ಬೆಳೆಯುತ್ತಾರೆ. ಒಂದು ವೇಳೆ ಹುಡುಗರ ವಯಸ್ಸು ಕಡಿಮೆಯಿದ್ದರೆ ಈ ದಾಂಪತ್ಯದಲ್ಲಿ ಹೊಂದಾಣಿಕೆ ಸ್ವಲ್ಪ ಕಷ್ಟವಾಗುತ್ತದೆ. ಎನ್ನುವ ವಿಷಯಗಳು ಒಂದು ಕಡೆ ಆದರೆ. ಇನ್ನೊಂದು ಕಡೆ ಗಂಡ ವಯಸ್ಸಾದ ದಿನಗಳಲ್ಲಿ ಅವನಿಗೆ ನೋಡಿಕೊಳ್ಳಲು ಹೆಂಡತಿ ಬೇಕಾಗುತ್ತೆ. ಒಂದು ವೇಳೆ ಗಂಡ ಹೆಂಡತಿ ಇಬ್ಬರು ಹಾಸಿಗೆ ಹಿಡಿದರೆ ನೋಡಿಕೊಳ್ಳುವರು ಯಾರು ಎನ್ನುವ ವಿಚಾರದಿಂದ ಇಬ್ಬರಲ್ಲೂ ವಯಸ್ಸಿನ ಅಂತರವಿಟ್ಟು ಮದುವೆ ಮಾಡುತ್ತಿದ್ದರು.

Also read: ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಈ ಪದ್ಧತಿ ಈಗಲೂ ಕೂಡ ಚಾಲ್ತಿಯಲ್ಲಿದೆ. ಭಾರತದಲ್ಲಿ ನಡೆಯುವ 100 ರಷ್ಟು ಮದುವೆಗಳಲ್ಲಿ 80 ರಷ್ಟು ಮದುವೆಗಳ ಅಂತರ 5- 10 ಇದ್ದೆ ಇರುತ್ತದೆ. ಇನ್ನೂ ಹಳ್ಳಿಗಳಲ್ಲಿ ಅಂತು ಹೆಚ್ಚಾಗಿ ಈ ರೀತಿಯ ಮದುವೆಗಳು ಹೆಚ್ಚೆಚ್ಚು ಕಂಡು ಬರುತ್ತಿವೆ. ಒಟ್ಟಾರೆಯಾಗಿ ಸರಿ ವಯಸ್ಸಿನ ಹುಡುಗ-ಹುಡುಗಿ ಮದುವೆಯಾದಲ್ಲಿ ಇಬ್ಬರ ಆಲೋಚನೆ, ಬುದ್ದಿ ಒಂದೇ ರೀತಿ ಇರುವುದರಿಂದ ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.