ವಾಟ್ಸ್ಆಪ್ ಬಳಕೆದಾರರಿಗೆ ಆತಂಕ ಮೂಡಿಸಿದ ವಾಟ್ಸ್ಆಪ್ ಹ್ಯಾಕ್ ಸತ್ಯವೆಂದು ಒಪಿಕೊಂಡ ಕಂಪನಿ; ಕೂಡಲೇ ಅಪ್‍ಡೇಟ್ ಮಾಡಲು ಸೂಚನೆ..

0
182

ಪ್ರಪಂಚದಾದ್ಯಂತ ಕೋಟ್ಯಾಂತರ ಜನರ ಜನಪ್ರಿಯ ಆಪ್ ಆಗಿರುವ whatsapp ತನ್ನದೇ ಆದ ಹವಾ ಸೃಷ್ಟಿ ಮಾಡಿ ಎಲ್ಲರ ಮೊಬೈಲ್ -ನಲ್ಲಿ ಹೆಚ್ಚಿನ ಆದ್ಯತೆ ಪಡೆದಿದ್ದು ಹೆಚ್ಚು, ಸೇಫ್ ಆಗಿದೆ ಎಂದು ತಿಳಿದಿದ್ದ ಬಳಕೆದಾರರಿಗೆ ಆತಂಕಕ್ಕೆ ಎಡೆಮಾಡಿದ್ದು ವಾಯ್ಸ್​ ಕಾಲ್ ಮೂಲಕ ವಾಟ್ಸ್ಆಪ್‌ಗೆ ಸ್ಪೈವೇರ್ ಹರಡಿದೆ ಇದರಿಂದ ನಿಮ್ಮ ಫೋನ್ ಹ್ಯಾಕ್ ಮಾಡಿ whatsapp ಮೆಸೇಜ್, ಕಾಲ್ ಮಾಹಿತಿ ಮೂರನೆ ವ್ಯಕ್ತಿಗೆ ಸೋರಿಕೆಯಾಗುತ್ತಿದೆ. ಎನ್ನುವ ವಿಚಾರ ಹರಡಿದ್ದು ವಿಚಾರವನ್ನು ವಾಟ್ಸಪ್ ಕಂಪನಿ ಅಧಿಕೃತವಾಗಿ ಒಪ್ಪಿಕೊಂಡಿದ್ದು, ಕೂಡಲೇ ಎಲ್ಲ ಬಳಕೆದಾರರು ಅಪ್ಲಿಕೇಶನ್ ಅನ್ನು ಅಪ್‍ಡೇಟ್ ಮಾಡಿಕೊಳ್ಳಿ ಎಂದು ಸೂಚಿಸಿದೆ.

ಹೌದು ವಾಟ್ಸ್​​ಆಪ್​​​​​​​​ನಲ್ಲಿ ಎಂಡ್​ ಟು ಎಂಡ್​ ಎನ್ಕ್ರಿಪ್ಷನ್ ಸೆಕ್ಯುರಿಟಿ​ ಇರುವುದರಿಂದ ಯಾವುದೇ ಮೂರನೇ ವ್ಯಕ್ತಿ ನಿಮ್ಮ ಮಾಹಿತಿಯನ್ನ ಹ್ಯಾಕ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ವಾಯ್ಸ್​ ಕಾಲ್ ಮೂಲಕ ವಾಟ್ಸ್ಆಪ್‌ಗೆ ಸ್ಪೈವೇರ್ (​​spyware) ಹರಡಿದೆ ಎಂಬ ಆತಂಕಕಾರಿ ಸುದ್ದಿ ವರದಿಯಾಗಿದೆ ಈಗ facebook ಒಡೆತನದ ವಾಟ್ಸಪ್ ಹ್ಯಾಕ್ ಆಗಿರುವ ವಿಚಾರವನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದು ಇಸ್ರೇಲ್ ಮೂಲದ ಎನ್‍ಎಸ್ಒ ಗ್ರೂಪ್ ಹೆಸರಿನ ಭದ್ರತಾ ಸಂಸ್ಥೆ ಈ ಹ್ಯಾಕ್ ಮಾಡಿದೆ. ಒಂದು ತಿಂಗಳ ಹಿಂದೆಯೇ ಈ ವಿಚಾರ ಬೆಳಕಿಗೆ ಬಂದಿದ್ದು ಶುಕ್ರವಾರ ವಾಟ್ಸಪ್ ಬಗ್ ಫಿಕ್ಸ್ ಮಾಡಿದ್ದು ಶನಿವಾರ ತನ್ನ ಅಪ್ಲಿಕೇಶನ್ ಅಪ್‍ಡೇಟ್ ಮಾಡಿದೆ.

ಹ್ಯಾಕ್ ಹೇಗೆ ಆಗುತ್ತೆ?

ಟಾರ್ಗೆಟ್ ಮಾಡಿದ ವ್ಯಕ್ತಿಗೆ ವಾಟ್ಸಪ್ ಕರೆ ಬರುತ್ತದೆ. ಈ ಕರೆಯನ್ನು ಸ್ವೀಕರಿಸಿದರೂ ಅಥವಾ ಸ್ವೀಕರಿಸದೇ ಇದ್ದರೂ ಒಂದು ಕಣ್ಗಾವಾಲು ತಂತ್ರಾಂಶ (Surveillance Software) ಇನ್‍ಸ್ಟಾಲ್ ಆಗುತ್ತದೆ. ಕೇವಲ ರಿಂಗ್ ಆದರೂ ಈ ಸಾಫ್ಟ್ ವೇರ್ ಇನ್ ಸ್ಟಾಲ್ ಆಗುವಂತೆ ರೂಪಿಸಲಾಗಿದೆ. ವಾಟ್ಸಪ್ ಭದ್ರತಾ ತಂಡ ಈ ದಾಳಿಯನ್ನು ಒಂದು ತಿಂಗಳ ಹಿಂದೆ ಪತ್ತೆ ಹಚ್ಚಿತ್ತು. ಪತ್ರಕರ್ತರು, ವಕೀಲರು, ಮಾನವ ಹಕ್ಕು ಹೋರಾಟಗಾರರನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.

ಏನಿದು ಸ್ಪೈವೇರ್! ​

ಕೆಲವು ದಿನಗಳ ಹಿಂದೆ ವಾಟ್ಸ್​​ಆಪ್​ ವಾಯ್ಸ್​ ಕಾಲ್​​ಗೆ ಹೆಚ್ಚುವರಿ ಸೆಕ್ಯೂರಿಟಿ ಎನ್​​ಹ್ಯಾನ್ಸ್​ಮೆಂಟ್​​ಗಳನ್ನು ಸೇರಿಸುವಾಗ ವಾಟ್ಸ್ಆಪ್‌ನಲ್ಲಿ ಸ್ಪೈವೇರ್ ಇರುವ ಬಗ್ಗೆ ತಿಳಿದುಬಂದಿದೆ. ಇದರಲ್ಲಿ ಆಪ್ ಬಳಕೆದಾರರ ಪಾತ್ರವೇನೂ ಇರುವುದಿಲ್ಲ. ಸ್ಪೈವೇರ್​ಗೆ ಟಾರ್ಗೆಟ್​ ಆದ ಬಳಕೆದಾರರಿಗೆ ಅಪರಿಚಿತ ನಂಬರ್​​ನಿಂದ ಫೋನ್​ ಕಾಲ್ ಬರುತ್ತದೆ. ಆ ಕರೆಯನ್ನ ಸ್ವೀಕರಿಸಿದ್ರೂ, ಸ್ವೀಕರಿಸದೇ ಇದ್ರೂ ಸ್ಪೈವೇರ್​ ಹರಡುತ್ತದೆ ಎಂದು ಹೇಳಲಾಗಿದೆ. ಹಲವಾರು ಜನರ ಫೋನ್​ಗಳಿಗೆ ವಾಟ್ಸ್​​ಆಪ್​​ ವಾಯ್ಸ್​ ಕಾಲ್ ಮುಖಾಂತರ ಸ್ಪೈವೇರ್ (​​spyware) ​ಹರಡಿರುವುದಾಗಿ ವಾಟ್ಸ್​ಆಪ್​​​ ಸಂಸ್ಥೆ ಇಂದು ಒಪ್ಪಿಕೊಂಡಿದ್ದು, ಐಫೋನ್​ ಹಾಗೂ ಆಂಡ್ರಾಯ್ಡ್​ ಬಳಕೆದಾರರೀರ್ವರಿಗೂ ಈ ಸ್ಪೈವೆರ್ ಪರಿಣಾಮ ಬೀರಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಇದಕ್ಕೆ ಸಾತ್ ನೀಡುತ್ತಿರುವರು ಯಾರು?

ಸೈಬರ್ ದಾಳಿಯ ವಿಚಾರದಲ್ಲಿ ಪ್ರಸಿದ್ಧವಾಗಿರುವ ಇಸ್ರೇಲಿನ ಎನ್‍ಎಸ್‍ಒ ಗ್ರೂಪ್ ಈ ವಾಟ್ಸಪ್ ದಾಳಿಯ ಹಿಂದೆ ಇದೆ. ಈ ಕಂಪನಿಯ ಭಾಗಶ: ಪಾಲನ್ನು ಫೆಬ್ರವರಿಯಲ್ಲಿ ಲಂಡನ್ ಮೂಲದ ನೋವಲ್‍ಪಿನಾ ಕ್ಯಾಪಿಟಲ್ ಪಡೆದುಕೊಂಡಿದೆ. ಎನ್‍ಎಸ್‍ಒ ಕಂಪನಿ ಸ್ಪೈ ಸಾಫ್ಟ್ ವೇರ್ ಪೆಗಾಸಸ್ ಅಭಿವೃದ್ಧಿ ಪಡಿಸಿದೆ. ಫೋನ್ ಮೂಲಕ ಕ್ಯಾಮೆರಾ, ಮೈಕ್ರೋಫೋನ್, ಲೋಕೇಶನ್ ಡೇಟಾಗಳನ್ನು ಈ ಸಾಫ್ಟ್ ವೇರ್ ಸಂಗ್ರಹಿಸಿ ವ್ಯಕ್ತಿಯ ಮೇಲೆ ಗೂಢಾಚಾರಿಕೆ ಮಾಡುತ್ತದೆ. ಅಪರಾಧ ಮತ್ತು ಉಗ್ರಗಾಮಿ ಚಟುವಟಿಕೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದು, ಇದಕ್ಕೆ ಇಸ್ರೇಲ್ ಸರ್ಕಾರದಿಂದಲೇ ಅನುಮತಿ ಪಡೆದಿದ್ದೇವೆ ಎಂದು ಎನ್‍ಎಸ್‍ಒ ಕಂಪನಿ ಸ್ಪಷ್ಟನೆ ನೀಡಿದೆ.

Also read: ಈಗ ವಾಟ್ಸಾಪ್ ಮೂಲಕವೇ ಹಣ ಕಳಿಸಬಹುದು/ಸ್ವೀಕರಸಬಹುದು, ಈ ಹೊಸ ಫೀಚರ್-ಅನ್ನು ಬಳಸುವುದು ಹೇಗೆ ಅಂತ ಹೇಳ್ತೀವಿ ಓದಿ..