ಮತ್ತೆ ‘ವಾಟ್ಸ್ಆಪ್’ ವಿವಾದ; ಭಾರತದಲ್ಲಿ ಶೀಘ್ರವೇ ಬ್ಯಾನ್ ಆಗಲಿದೆ ‘ವಾಟ್ಸ್ಆಪ್’?

0
328

ಮೊಬೈಲ್-ಗಳ ಮುಖ್ಯ ಲಕ್ಷಣವಾಗಿ ವಾಟ್ಸ್ಆಪ್ ಬೆಳೆದು ನಿಂತಿದೆ. ಅದರಂತೆ ಕ್ಷಣಾರ್ಧದಲ್ಲಿ ಯಾವುದೇ ಸುದ್ದಿಯನ್ನು ಹರಡಿಸುತ್ತೆ ಈ ವಾಟ್ಸ್ಆಪ್, ಇದರಿಂದ ಹೆಚ್ಚು ಸುಳ್ಳು ಸಂದೇಶಗಳೆ ಹರಡುತ್ತಿದ್ದು, ಇದರ ಬಗ್ಗೆ ಹಲವು ವಿವಾದಗಳು ನಡೆದು ಕೇಂದ್ರ ಸರ್ಕಾರ ‘ವಾಟ್ಸ್ಆಪ್’ ಕಂಪನಿಗೆ ವಾರ್ನಿಂಗ್ ಮಾಡಿದ್ದು, whatsaap ರವಾನೆಯಾಗುವ ಎಲ್ಲಾ ಸಂದೇಶ, ಫೋಟೊ, ವಿಡಿಯೊ ಹಾಗೂ ವಾಯ್ಸ್‌ ಮೆಸೇಜ್‌ ಇತ್ಯಾದಿಗಳನ್ನು ಎನ್‌ಕ್ರಿಪ್ಷನ್’ ತಂತ್ರಜ್ಞಾನದ ಮೂಲಕ ಸುರಕ್ಷಿತವಾಗಿ ಇಡಬೇಕು. ದುರ್ಘಟನೆಗಳಿಂದಾಗಿ ವಾಟ್ಸ್ಆಪ್ ಸಂದೇಶಗಳ ಮೂಲವನ್ನು ಪತ್ತೆ ಹಚ್ಚಲು ಸಹಕರಿಸಬೇಕು ಎಂದು ಸರ್ಕಾರ ವಾಟ್ಸ್ಆಪ್ ಸಂಸ್ಥೆಗೆ ಸೂಚಿಸಿದೆ.

Also read: ಯುವಪಿಳಿಗೆಗೆ ಮಾರಕವಾದ TikTok ಆ್ಯಪ್ ಬ್ಯಾನ್ ನಂತೆ ಪಬ್ಜಿ ಗೇಮ್ ಗೂ ಬ್ಯಾನ್ ಬಿಸಿ??

ಏನಿದು ಸರ್ಕಾರ ಮತ್ತು ಕಂಪನಿಯ ಜಟಾಪಟಿ?

ಇದಕ್ಕೆ ಪ್ರತಿಕ್ರಿಯೆ ನೀಡಿದ whatsapp ಕಂಪನಿ ಕೇಂದ್ರದ ಬೇಡಿಕೆಯನ್ನು ತಿರಸ್ಕರಿಸಿ. ತನ್ನ ಬಳಕೆದಾರರ ಸಂದೇಶವನ್ನು ಕಂಪನಿ ನೋಡುವುದಿಲ್ಲ, ಅವರ ವೈಯಕ್ತಿಕ ಮಾಹಿತಿ ಮತ್ತು ಹಿತಾಸಕ್ತಿ ರಕ್ಷಿಸುವುದು ಕಂಪನಿಯ ನಿಯಮವಾಗಿದ್ದು, ಸಂದೇಶಗಳು ಹತ್ತಿಕ್ಕುವಂತಹ ಸೂಚನೆಯನ್ನು ಅನುಸರಿಸಲು ಸಾಧ್ಯವಿಲ್ಲ, ಅದನ್ನು ಮೀರಲಾಗದು ಎಂದು ಹೇಳಿದ್ದು, ಜನರು ತಮ್ಮ ಸೂಕ್ಮ ಸಂಭಾಷಣೆಗಳನ್ನು ನಡೆಸಲು ವಾಟ್ಸ್ಆಪ್ ಅನ್ನು ಅವಲಂಬಿಸಿದ್ದಾರೆ. ಅದಲ್ಲದೆ, ಸಂದೇಶಗಳ ಮೂಲ ಪತ್ತೆ ಹಚ್ಚುವಿಕೆ ದುರ್ಬಳಕೆ ಸಾಧ್ಯತೆಯನ್ನು ಸೃಷ್ಟಿಸುತ್ತದೆ. ವಾಟ್ಸ್‌ಆಪ್‌ನಲ್ಲಿ ಹರಿದಾಡುವ ಸಂದೇಶಗಳ ಮೂಲವನ್ನು ಪತ್ತೆಹಚ್ಚುವುದರಿಂದ ವಾಟ್ಸ್ಆಪ್ ಬಳಕೆದಾರರ ಖಾಸಗೀತನಕ್ಕೆ ಅಡ್ಡಿಪಡಿಸಿದಂತಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಕೇಂದ್ರದಿಂದ ಹೊಸ ಸೂಚನೆ?

Also read: ಎಳೆ ಕಂದಮ್ಮಗಳಿಗೆ ಹಚ್ಚುವ ಜಾನ್ಸನ್ ಬೇಬಿ ಪೌಡರ್-ನಿಂದ ಮಕ್ಕಳಿಗೆ ಭೇಕರ ಕ್ಯಾನ್ಸರ್ ಬರಬಹುದು ಎಂದು ಶ್ರೀಲಂಕಾದಲ್ಲಿ ಬ್ಯಾನ್ ಮಾಡಲಾಗಿದೆ.. ನಮ್ಮ ದೇಶದಲ್ಲೂ ಹೀಗೆ ಮಾಡಬೇಕಾ?

ಮತ್ತೆ whatsapp ಗೆ ಕೇಂದ್ರದ ಅಧಿಕಾರಿಗಳು ಡಿಜಿಟಲ್‌ ಫಿಂಗರ್‌ಪ್ರಿಂಟ್‌ನಿಂದ ಎನ್‌ಕ್ರಿಪ್ಷನ್ ಭೇದಿಸದೆಯೇ ಸಂದೇಶಗಳ ಮೂಲವನ್ನು ಪತ್ತೆ ಹಚ್ಚಬಹುದು ಎಂದು ತಿಳಿಸಿದರು. ಡಿಜಿಟಲ್‌ ಫಿಂಗರ್‌ಪ್ರಿಂಟ್‌ನಿಂದ, ಸಂದೇಶಗಳ ಎನ್‌ಕ್ರಿಪ್ಷನ್ ಕೋಡ್‌ ಅನ್ನು ಭೇದಿಸದೆಯೇ ಮೊದಲು ಯಾರು ಪ್ರಸಾರ ಮಾಡಿದರು ಎಂಬುದನ್ನು ಪತ್ತೆ ಹಚ್ಚಬಹುದು ಎಂದು ಅಧಿಕಾರಿಗಳು ಹೇಳಿದರು. ಈ ವಿಷವನ್ನು ವಾಟ್ಸ್ಆಪ್ ಕಂಪನಿ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ, ಇದಕ್ಕೆ ಮತ್ತೆ ರೊಚ್ಚಿಗೆದ್ದ ಅಧಿಕಾರಿಗಳು, ಸರ್ಕಾರವು ವಾಟ್ಸ್‌ಆಪ್‌ ಮೆಸೇಜ್‌ಗಳನ್ನು ಓದಲು ಬಯಸುವುದಿಲ್ಲ. ಆದರೆ ಸಮಸ್ಯೆ ಸೃಷ್ಟಿಸುವ ಸಂದೇಶಗಳನ್ನು ನಿಯಂತ್ರಿಸಲು, ಅದರ ಮೂಲವನ್ನು ಪತ್ತೆ ಹಚ್ಚಲು ವಾಟ್ಸ್‌ಆಪ್‌ ಸಹಕರಿಸಬೇಕು ಮತ್ತು ವಾಟ್ಸ್‌ಆಪ್‌ ಸಂದೇಶಗಳ ಮೂಲ ಯಾವುದು? ಎಷ್ಟು ಮಂದಿ ಓದಿದ್ದಾರೆ ಹಾಗೂ ಎಷ್ಟು ಮಂದಿ ಹಂಚಿದ್ದಾರೆ ಎಂಬಿತ್ಯಾದಿ ವಿವರಗಳನ್ನು ಕಲೆ ಹಾಕಲು ಕೇಳಿತ್ತು. ಇದನ್ನು ಒಪ್ಪದಿಂದರೆ ದೊಡ್ಡ ಹೊಡೆತವನ್ನು ಅನುಭವಿಸಬೇಕಾಗುತ್ತೆ ಎಂದು ಸೂಚನೆ ನೀಡಿತ್ತು.

ಭಾರತದಲ್ಲಿ ವಾಟ್ಸ್ಆಪ್ ಬ್ಯಾನ್?

Also read: ಪೆಟ್ರೋಲ್ ಬಂಕ್-ನಲ್ಲಿ ಮೊಬೈಲ್ ಬಳಸುವುದು ಬ್ಯಾನ್ ಆಗಿದ್ದರೂ, PayTM ಅಥವಾ BHIM ಆಪ್-ಗಳನ್ನು ಬಳಸುವುದು ಎಷ್ಟು ಸುರಕ್ಷಿತ

ಜನರ ಮತ್ತು ದೇಶದ ಹಿತಕ್ಕಾಗಿ ವಾಟ್ಸ್‌ಆಪ್‌ನಲ್ಲಿ ಹರಿದಾಡುವ ಸುಳ್ಳುಸುದ್ದಿ ಮತ್ತು ಅಪರಾದ ಪ್ರಚೋದನಕಾರಿ ಸಂದೇಶಗಳು ಹತ್ತಿಕ್ಕಲು ತಾಂತ್ರಿಕ ಬದಲಾವಣೆ ಮಾಡುವುದರಲ್ಲಿ ತಪ್ಪೇನಿದೆ ಎಂದು ಕಾನೂನು ತಜ್ಞರು ಪ್ರಶ್ನಿಸಿದ್ದಾರೆ. ಆದರೆ ಸಂದೇಶಗಳು ಹತ್ತಿಕ್ಕುವಂತಹ ಸೂಚನೆಯನ್ನು ಅನುಸರಿಸಲು ಸಾಧ್ಯವಿಲ್ಲ ಎಂದು ವಾಟ್ಸ್‌ಆಪ್ ಹೇಳಿರುವುದು ಭಾರತದಲ್ಲಿ ವಾಟ್ಸ್ಆಪ್ ಬ್ಯಾನ್ ಆಗುವ ಸಾಧ್ಯತೆಯನ್ನು ಹೆಚ್ಚಿಸಿದೆ. ಈಗಾಗಲೇ ಹಲವು ದೇಶಗಳಲ್ಲಿ ಬ್ಯಾನ್ ಆಗಿರುವ ಸಾಮಾಜಿಕ ತಾಣ, 2017ರಿಂದ ಚೀನಾದಲ್ಲಿ ಸಂಪೂರ್ಣವಾಗಿ ಬ್ಯಾನ್ ಆಗಿದೆ, ಅದರಂತೆ ಇರಾನ್‌, ಟರ್ಕಿ, ಬ್ರೆಜಿಲ್‌ನಲ್ಲಿ ಹಲವು ಬಾರಿ ಬ್ಯಾನ್ ಗೆ ಒಳಗಾಗಿದೆ. ಈಗ ಇದೆ ಸರದಿ ಭಾರತದಲ್ಲಿ ಬರುವ ಸಾದ್ಯತೆ ಹೆಚ್ಚಾಗಿದೆ.