ಅನ್ನಕ್ಕಿಂತಲ್ಲೂ ಸಾವಿರ ಪಟ್ಟು ಶರೀರಕ್ಕೆ ಶಕ್ತಿ ಕೊಡುವ ಗೋಧಿ ಚಪಾತಿಯಿಂದಾಗುವ ಉಪಯೋಗಳು

0
1621

ಗೋಧಿ ಅತ್ಯಂತ ಆರೋಗ್ಯಕರವಾದ ಧಾನ್ಯ. ಉತ್ತರ ಭಾರತೀಯರಿಗೆ ಹೋಲಿಸಿದರೆ ದಕ್ಷಿಣ ಭಾರತೀಯರಲ್ಲಿ ಗೋಧಿ ಸೇವನೆಯ ಪ್ರಮಾಣ ಕಡಿಮೆಯೇ. ಹೆಚ್ಚು ತೂಕ ಇರುವವರು ಅಥವಾ ಅನ್ನ ಊಟ ಮಾಡಿದರೆ ಬೇಗ ಜೀರ್ಣವಾಗುವುದಿಲ್ಲ ಎಂದು ತುಂಬಾ ಜನ ಅನ್ನದ ಬದಲಿಗೆ ಚಪಾತಿ ತಿನ್ನುತ್ತಾರೆ. ಅಷ್ಟೇ ಅಲ್ಲ ಬಹಳಷ್ಟು ಮಂದಿ ತೂಕ ಕಡಿಮೆ ಮಾಡಿಕೊಳ್ಳಬೇಕೆನ್ನುವವರು ಗೋಧಿ ಹಿಟ್ಟಿನಿಂದ ಮಾಡಿದ ಚಪಾತಿಗಳನ್ನು ಹೆಚ್ಚಾಗಿ ತಿನ್ನುತ್ತಾರೆ.

ಅನ್ನಕ್ಕಿಂತಲ್ಲೂ ಸಾವಿರ ಪಟ್ಟು ಶರೀರಕ್ಕೆ ಶಕ್ತಿ ಕೊಡುವುದರ ಜೊತೆಗೆ ಅನೇಕ ವಿಷಯಗಳಲ್ಲಿ ಒಳ್ಳೆಯದು ಮಾಡುತ್ತದೆ ಎನ್ನುತ್ತಿದ್ದಾರೆ ಸಂಶೋಧಕರು.

ಹಾಗಾದರೆ ಬನ್ನಿ ಚಪಾತಿಯಿಂದಾಗುವ ಉಪಯೋಗಗಳನ್ನು ತಿಳಿಯೋಣ

  • ಮಧುಮೇಹ ಮತ್ತು ಬೊಜ್ಜು ನಗರ ಪ್ರದೇಶದ ಬಹುತೇಕ ಜನರ ಸಮಸ್ಯೆ ಯಾಗಿದೆ. ಗೋಧಿ ಒಂದರ್ಥದಲ್ಲಿ ಅವರಿಗೆಲ್ಲ ಸಂಜೀವಿನಿಯಂತೆ ಕಂಡಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಇಂತಹ ಸಮಸ್ಸ್ಯೆಇರುವವರಿಗೆ ಚಪಾತಿ ಚನ್ನಾಗಿ ಕೆಲಸ ಮಾಡುತ್ತದೆ.
  • ಗೋಧಿ ಪದಾರ್ಥ ಸೇವಸುವುದರಿಂದ ಸ್ತನ ಕ್ಯಾನ್ಸರ್‌ಅನ್ನು ಸಹ ತಡೆಯಬಹುದು ಎಂದು ಇತ್ತೀಚಿನ ಸಂಶೋಧನೆಗಳಿಂದ ತಿಳಿದುಬಂದ ವಿಷಯ. ಇದು ದೇಹದಲ್ಲಿರುವ ಅನಗತ್ಯ ಕೊಬ್ಬಿನಂಶಗಳನ್ನು ಕರಗಿಸುವುದಲ್ಲದೆ, ದೇಹ ಹೆಚ್ಚು ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳುತ್ತದೆ. ಹಾಗಾಗಿ ಮಹಿಳೆಯರಿಗೆ ಗೋಧಿ ಚಪಾತಿಯಿಂದ ಉಪಯೋಗ ಹೆಚ್ಚು.
  • ಅಮೆರಿಕದಲ್ಲಿ ನಡೆದ ಸಂಶೋಧನೆಯಿಂದ ಮಕ್ಕಳಿಗೆ ಗೋಧಿ ಪದಾರ್ಥಗಳನ್ನು ಹೆಚ್ಚು ನೀಡುವುದರಿಂದ ಅಸ್ತಮಾ ಸಮಸ್ಯೆಯಿದ್ದರೆ ನಿವಾರಣೆಯಾಗುತ್ತದೆ ಎಂದು ತಿಳಿದಿದೆ.
  • ಚಪಾತಿಗೆ ಬಳಸುವ ಗೋಧಿಯಲ್ಲಿ ತುಂಬಾ ಕಡಿಮೆ ಕೊಬ್ಬಿನಾಂಶವಿರುತ್ತದೆ. ಇದರಲ್ಲಿ ವಿಟಮಿನ್ ಬಿ, ಇ, ಕಾಪರ್, ಅಯೋಡಿನ್, ಜಿಂಕ್, ಮ್ಯಾಂಗನೀಸ್, ಸಿಲಿಕಾನ್, ಆರ್ಸೆನಿಕ್, ಕ್ಲೋರಿನ್, ಸಲ್ಫರ್, ಪೊಟಾಷಿಯಂ, ಮೆಗ್ನೀಸಿಯಂ, ಕ್ಯಾಲ್ಸಿಯಂನಂತಹ ಖನಿಜಗಳಿವೆ.
  • ಗೋಧಿಯಲ್ಲಿ ಐರನ್ ಕಂಟೆಂಟ್ ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ. ಗೋಧಿ ಚಪಾತಿ ರಕ್ತದಲ್ಲಿನ ಹಿಮೋಗ್ಲೋಬಿನ್ ಅನ್ನು ಹೆಚ್ಚಳ ಮಾಡುತ್ತದೆ.
  • ಚಪಾತಿ ಚರ್ಮ ಸಂರಕ್ಷಣೆಗೆ ಸಹಕಾರಿ. ಜೀರ್ಣಕ್ರಿಯೆಯು ಉತ್ತಮಗೊಳುತ್ತದೆ. ಮತ್ತು ಶರೀರಕ್ಕೆ ಬೇಕಾದ ಪೌಷ್ಟಿಕ ಆಹಾರವನ್ನು ನೀಡುತ್ತವೆ. ಇದರಿಂದ ಮುಂದಿನ ದಿನ ಯಾಕ್ಟಿವ್ ಆಗಿರಲು ಸಹಾಯ ಮಾಡುತ್ತದೆ.
  • ಹೃದಯಾಘಾತವನ್ನೂ ನಿಯಂತ್ರಿಸುವ ಶಕ್ತಿ ಗೋಧಿಯಿಂದ ತಯಾರಿಸಿದ ಪದಾರ್ಥಗಳಿಗಿದೆ. ಆದ್ದರಿಂದಲೇ ಮಧುಮೇಹ, ರಕ್ತದೊತ್ತಡ, ಬೊಜ್ಜು, ಹೃದ್ರೋಗ ಯಾವುದೇ ಸಮಸ್ಯೆ ಇದ್ದರೂ ಪಥ್ಯದ ವಿಚಾರ ಬಂದಾಗ ತಜ್ಞರು ಹೇಳುವುದು ಗೋಧಿ ಚಪಾತಿ ಸೇವನೆಯ ಬಗ್ಗೆಯೇ.

ದೇಹದ ಸೌಂದರ್ಯವನ್ನೂ ಹೆಚ್ಚಿಸುವ ಗುಣ ಗೋಧಿಗಿದೆ. ಪ್ರತಿ ದಿನ ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸೇವನೆಗೂ ಮೊದಲು ಒಂದೋ, ಎರಡೋ ಚಪಾತಿ ಸೇವಿಸಿ ನಂತರ ಸ್ವಲ್ಪವೇ ಅನ್ನ ತಿನ್ನುವುದರಿಂದ ದೇಹ ಸದೃಢವಾಗುವುದಲ್ಲದೆ ರೋಗಮುಕ್ತವಾಗುತ್ತದೆ. ಮತ್ತು ದೇಹ ಚಟುವಟಿಕೆಯಿಂದ ಇರುವಂತೆ ಸಹಾಯ ಮಾಡುತ್ತದೆ.

Related image 85480 02512