ಪತ್ನಿಗೆ ಜೀವನಾಂಶ ನೀಡುವಾಗ ಮದುವೆ ಆಗಿದೆ ಎಂಬುದಕ್ಕೆ ಪಕ್ಕಾ ಸಾಕ್ಷ್ಯ ನೀಡುವ ಅಗತ್ಯವಿಲ್ಲ; ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು..

0
1411

ಗಂಡ ಹೆಂಡತಿಯ ದೂರವಾದರೆ ಪತ್ನಿಗೆ ಜೀವನಾಂಶ ಪಡೆಯಿವುದಕ್ಕೆ ಸಂಪ್ರದಾಯ ಬದ್ದವಾಗಿ ನಡೆದ ಮದುವೆಯ ಸಾಕ್ಷ್ಯಗಳು ಬೇಕಾಗಿತ್ತು. ಈ ಕಾರಣಕ್ಕೆ ಎಷ್ಟೋ ಹೆಣ್ಣು ಮಕ್ಕಳಿಗೆ ಮೊಸವಾಗುತ್ತಿತು ಆದರೆ ಇಂತಹದೇ ಒಂದು ಪ್ರಕರಣ ಮೈಸೂರಿನಲ್ಲಿ ಕೋರ್ಟು ಮೆಟ್ಟಿಲೇರಿ ಮದುವೆಯ ಸಾಕ್ಷ್ಯ ಒದಗಿಸಿಲ್ಲವೆಂಬ ಕಾರಣಕ್ಕೆ ಜೀವನಾಂಶ ನೀಡಲು ಕರ್ನಾಟಕ ಹೈಕೋರ್ಟ್‌ನ ನಿರಾಕರಿಸಿತ್ತು. ಈಗ ಆ ಆದೇಶವನ್ನು ಸುಪ್ರೀಂಕೋರ್ಟ್‌ ರದ್ದುಗೊಳಿಸಿ, ಕೌಟುಂಬಿಕ ಪ್ರಕರಣಗಳಲ್ಲಿ ಅಪರಾಧ ದಂಡ ಸಂಹಿತೆ ಸೆಕ್ಷನ್‌ 125ರಡಿ ಪತ್ನಿಗೆ ಜೀವನಾಂಶ ನೀಡುವಾಗ ಮದುವೆ ಆಗಿದೆ ಎಂಬುದಕ್ಕೆ ಪಕ್ಕಾ ಸಾಕ್ಷ್ಯ ನೀಡುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

Also read: ಮೋದಿ ಸರ್ಕಾರ ಬಂದಮೇಲೆ ಕನ್ನಡಿಗರಿಗೆ ಅನ್ಯಾಯದ ಮೇಲೆ ಅನ್ಯಾಯ; ಐ.ಬಿ.ಪಿ.ಎಸ್.ನಲ್ಲಿ ಕರ್ನಾಟಕದಲ್ಲಿ ಕನ್ನಡಿಗರು 20% ಅನ್ಯರು 80%!!

ಏನಿದು ಪ್ರಕರಣ?

1998ರ ಜು.18ರಂದು ಶ್ರೀರಂಗಪಟ್ಟಣದ ಕರಿಘಟ್ಟ ದೇವಾಲಯದ ಬಳಿ ಕಮಲ ಮತ್ತು ಎಂ.ಆರ್‌.ಮೋಹನ್‌ಕುಮಾರ್‌ ನಡುವೆ ಮದುವೆಯಾಗಿತ್ತು. ನಂತರ ಪತ್ನಿ 2001ರಲ್ಲಿ ಪುತ್ರಿ ಹಾಗೂ ಪುತ್ರನಿಗೆ ಜನ್ಮ ನೀಡಿದ್ದರು. ಸ್ವರಸ್ವತಿಪುರಂ ಬಾಡಿಗೆ ಮನೆಯಲ್ಲಿ ಅವರು ನೆಲೆಸಿದ್ದರು. 2005ರಲ್ಲಿ ಮೋಹನ್‌ ಕುಮಾರ್‌ ತನ್ನ ಸಹೋದ್ಯೋಗಿ ಅರ್ಚನಾ ಎಂಬುವರನ್ನು 2ನೇ ವಿವಾಹವಾದರು.ಆನಂತರ ಮೊದಲ ಪತ್ನಿ ಹಾಗೂ ಮಕ್ಕಳನ್ನು ಆತ ನಿರ್ಲಕ್ಷ್ಯಸುತ್ತಾ ಬಂದ. ಸ್ವಲ್ಪ ದಿನ ನೋಡಿದ ಪತ್ನಿ ಪೊಲೀಸರಿಗೆ ದೂರು ನೀಡಿದರು. ಆಗ ಪೊಲೀಸರು ನಿರ್ದೇಶನದ ಮೇರೆಗೆ ಮೋಹನ್‌ ಕುಮಾರ್‌, ಕಮಲರಿಗೆ ತಿಂಗಳಿಗೆ 3ಸಾವಿರ ರೂ. ಜೀವನಾಂಶ ನೀಡುತ್ತಿದ್ದರು. ನಂತರ ಕಮಲ ಚಾಮುಂಡಿಪುರಂಗೆ ಸ್ಥಳಾಂತರಗೊಂಡರು. ಆಗಲೂ ಪತಿ ಆಕೆ ಮತ್ತು ಮಕ್ಕಳ ಬಗ್ಗೆ ಯಾವುದೇ ನಿಗಾ ಇಡುತ್ತಿರಲಿಲ್ಲ. ಜೀವನಾಂಶ ನೀಡುವುದನ್ನೂ ನಿಲ್ಲಿಸಿದ್ದರು.


Also read: ದೀಪಾವಳಿ ಹಬ್ಬಕ್ಕೆ ಟ್ರೈನ್-ನಲ್ಲಿ ಪ್ರಯಾಣ ಮಾಡುವವರಿಗೆ ಸಿಹಿ ಸುದ್ದಿ..

ನಂತರ ಕಮಲ ಬೇರೆ ದಾರಿ ಇಲ್ಲದೆ, ಕೌಟುಂಬಿಕ ನ್ಯಾಯಾಲಯದ ಮೊರೆ ಹೋದರು. ಆಗ ಮಕ್ಕಳ ಶಾಲಾ ದಾಖಲೆಗಳಲ್ಲಿ ತಂದೆ ಹೆಸರಿನ ಜಾಗದಲ್ಲಿ ಮೋಹನ್‌ಕುಮಾರ್‌ ಹೆಸರಿತ್ತು. ಜೊತೆಗೆ ಮನೆ ಬಾಡಿಗೆ ನೀಡಿದ್ದ ಮಾಲೀಕರು ಮತ್ತು ಮೋಹನ್‌ ಸಹೋದ್ಯೋಗಿಗಳೇ, ಮೋಹನ್‌ ಮತ್ತು ಕಮಲ ಗಂಡ-ಹೆಂಡತಿಯಂತೆ ಬಾಳ್ವೆ ನಡೆಸುತ್ತಿದ್ದರೆಂದು ಹೇಳಿದ್ದರು. ಈ ಸಾಕ್ಷ್ಯಗಳನ್ನು ಗಮನಿಸಿದ್ದ ಕೌಟುಂಬಿಕ ನ್ಯಾಯಾಲಯ, 2008ರಲ್ಲಿ ಪ್ರತಿ ತಿಂಗಳು 2500 ರೂ. ಜೀವನಾಂಶ ನೀಡುವಂತೆ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದ ಪತಿ, ಮದುವೆ ಆಗಿರುವುದಕ್ಕೆ ಯಾವುದೇ ಗುರುತರ ಸಾಕ್ಷ್ಯವಿಲ್ಲ, ಹಾಗಾಗಿ ಜೀವನಾಂಶ ನೀಡಲಾಗದು ಎಂದು ವಾದಿಸಿದ್ದರು. ಹೈಕೋರ್ಟ್‌ ಆ ವಾದ ಪುರಸ್ಕರಿಸಿತ್ತು. ಆದರೆ ಸುಪ್ರೀಂಕೋರ್ಟ್‌ ಈಗ ಪತಿರಾಯನಿಗೆ, 2009ರಿಂದ ಇಲ್ಲಿಯವರೆಗೆ ಬಾಕಿ ಸೇರಿಸಿ ಜೀವನಾಂಶ ನೀಡುವಂತೆ ಆದೇಶಿಸುವ ಮೂಲಕ ದೊಡ್ಡ ಆಘಾತ ನೀಡಿದೆ.


Also read: ನೀವು ಕ್ರೆಡಿಟ್​ ಕಾರ್ಡ್​ ಬಳಕೆದಾರರೆ? ಹಾಗಾದ್ರೆ ತಪ್ಪದೆ ಈ ಮಾಹಿತಿ ನೋಡಿ; ಹಣ ವಂಚನೆಯಾದರೆ ಸಿಗಲಿದೆ ಪರಿಹಾರ..

ಸುಪ್ರೀಂಕೋರ್ಟ್‌ ಆದೇಶದಂತೆ ಪತಿಯಿಂದ ಜೀವನಾಂಶ ಪಡೆಯಿವುದಕ್ಕೆ ಬೇಕ್ಕಾದ ಸಾಕ್ಷಿಗಳು:

  • ಪುರುಷ-ಮಹಿಳೆ ದೀರ್ಘಕಾಲ ಬಾಳ್ವೆ ನಡೆಸಿದರೂ ಜೀವನಾಂಶಕ್ಕೆ ಪರಿಗಣನೆ
  • ಮದುವೆಗೆ ಪಕ್ಕಾ ದಾಖಲೆ ಕೇಳಿದರೆ ಸೆಕ್ಷನ್‌ 125ರ ಉದ್ದೇಶವೇ ವಿಫಲ.
  • ಮಕ್ಕಳ ಶಾಲಾ ದಾಖಲೆಗಳಲ್ಲಿ ತಂದೆ ಹೆಸರು ಇದ್ದರೆ ಸಾಕು.
  • ಅಕ್ಕ ಪಕ್ಕದ ಇಲ್ಲ ಮನೆ ಬಾಡಿಗೆ ನೀಡಿದ್ದ ಮಾಲೀಕರ ಹೇಳಿಕೆ ಸಾಕು.
  • ಸಹೋದ್ಯೋಗಿಗಳು ನೀಡುವ ಸಾಕ್ಷ್ಯಈ ಮೇಲಿನ ಸಾಕ್ಷಿಗಳು ಇದ್ದರೆ ಪತಿಯಿಂದ ಪತ್ನಿ ಜೀವನಾಂಶ ಪಡೆಯಬಹುದು. ಎಂದು ಸುಪ್ರೀಂಕೋರ್ಟ್‌ ಇಬ್ಬರು ಮಹಿಳಾ ನ್ಯಾಯಮೂರ್ತಿಗಳೇ ಈ ತೀರ್ಪು ನೀಡಿರುವುದು ಮತ್ತೊಂದು ವಿಶೇಷತೆಯಾಗಿದೆ. ಪ್ರಕರಣದ ವಾದ-ಪ್ರತಿವಾದ ಆಲಿಸಿ, ಹಿಂದಿನ ತೀರ್ಪುಗಳನ್ನು ಅವಲೋಕಿಸಿ ನ್ಯಾಯಮೂರ್ತಿಗಳಾದ ಆರ್‌.ಬಾನುಮತಿ ಮತ್ತು ಇಂದಿರಾ ಬ್ಯಾನರ್ಜಿ ತೀವ್ರ ಪರಿಣಾಮ ಬೀರುವಂತಹ ತೀರ್ಪು ಕೊಟ್ಟಿದ್ದಾರೆ.