ಹೆಣ್ಣು ಹುಟ್ಟಿದರೆ ಶಾಪವೆನ್ನುವ ಕಾಲದಲ್ಲಿ ಮಗಳ ನೆನಪಿಗೋಸ್ಕರ ಇಡಿ ಶಾಲೆಯ ಬಡ ಹೆಣ್ಣುಮಕ್ಕಳ ಫೀಸ್ ಕಟ್ಟಿದ ಸಾಧಾರಣ ಕ್ಲರ್ಕ್ ಬಸವರಾಜ್..

0
1414

ಹೆಣ್ಣು ಮಗು ಜನಿಸಿದರೆ ಪಾಲಕರಿಗೆ ತಲೆನೋವು ಅದೇ ಗಂಡು ಮಗು ಜನಿಸಿದರೆ ಎಲ್ಲಿಲದ ಆನಂದ. ಅದ್ರಲ್ಲಿ ತಂದೆಯಾದವನಿಗೆ ತನ್ನ ವಂಶಬೆಳಗಲು ಒಂದು ಗಂಡು ಮಗು ಬೇಕೇಬೇಕು. ಒಂದು ವೇಳೆ ಪತ್ನಿ ಹೆಣ್ಣುಮಗುವಿಗೆ ಜನ್ಮ ನೀಡಿದರೆ ಅವಳಿಗೆ ದ್ವೇಷಿಸುವುದು ಗಂಡ ಕೂಡ ಅಲ್ಲ ಮನೆಯ ಮಂದಿಯೇ ಕೀಳಾಗಿ ಕಾಣುತ್ತಾರೆ. ಇಂತಹ ನಿದರ್ಶನಗಳು ದೇಶದ ತುಂಬೆಲ್ಲ ಕಂಡು ಬರುವುದು ಎಲ್ಲರಿಗೂ ಗೊತ್ತೇ ಇದೆ. ಹಾಗೆಯೇ ಮನೆಯಲ್ಲಿ ಹುಟ್ಟಿದ ಗಂಡು ಮಗುವಿಗೆ ಹೆಣ್ಣು ಮಗುವಿಗೆ, ಪಾಲನೆಯಲ್ಲಿ ವ್ಯತಾಸಗಳು ಮಾಡುವುದು ಇದೆ. ಗಂಡು ಮಗುವಿಗೆ ಸರಿಯಾದ ಶಿಕ್ಷಣ ಕೊಡಿಸಿದರೆ ಹೆಣ್ಣು ಮಕ್ಕಳಿಗೆ ಮನೆಯಲ್ಲಿಯೇ ಪಾತ್ರೆತೊಳೆಯಿವ ಭಾಗ್ಯವನ್ನು ಕಲ್ಪಿಸುವ ಜನರೆ ತುಂಬಾ. ಇಂತಹ ಶೋಷಣೆಯಲ್ಲಿರುವ ಹೆಣ್ಣು ಮಗು ಜನಿಸಿದರೆ ಸಂತೋಷ ಪಡುವ ಜನ ಕೇವಲ ಬೆರೆಳೆಣಿಕೆಯಲ್ಲಿ ಸಿಗುತ್ತಾರೆ, ಅಂತವರ ಸಾಲಿನಲ್ಲಿ ಬರುವ ಬಸವರಾಜ್ ಅವರ ಮಗಳಮೇಲಿರುವ ಮಮತೆ ದೇಶಕ್ಕೆ ಮಾದರಿಯಾದ ಕಥೆಯೊಂದು ಇಲ್ಲಿದೆ ನೋಡಿ.

Also read: ಈ ಇಬ್ಬರು ಪೋಲಿಸ್ ಅಧಿಕಾರಿಗಳ ಖಡಕ್-ನಡೆಗೆ ಸಿಕ್ಕಿರೋ ಅಭಿಮಾನ ಯಾವ ಸಿನೆಮಾ ಹೀರೋಗಳಿಗೇನು ಕಡಿಮೆ ಇಲ್ಲ!!

ಇವರು ಕಲಬುರ್ಗಿಯ ಮುಕ್ತಾಂಪುರದಲ್ಲಿರುವ MPHS ಶಾಲೆಯ ಸಾಮಾನ್ಯ ಗುಮಾಸ್ತ.. ಕಳೆದ ವರ್ಷವಷ್ಟೇ ಇವರ 9ನೇ ತರಗತಿ ಓದುತ್ತಿದ್ದ ಮುದ್ದಿನ ಮಗಳು ದಾನೇಶ್ವರಿ ಯಾವುದೋ ಕಾಯಿಲೆಯಿಂದ ಸಾವಿಗೀಡಾಗಿದ್ದಳು.. ದಾನೇಶ್ವರಿಯೆಂದರೆ ಬಸವರಾಜುಗೆ ಜೀವ.. ಎಲ್ಲಾ ಹೆಣ್ಣುಮಕ್ಕಳಂತೆ ಅವಳಿಗೂ ಅಪ್ಪನೆಂದರೆ ಪ್ರಾಣ..
ಮಗಳು ದಾನು ಸಾವಿಗೀಡಾದಾಗ ಬಸವರಾಜರಿಗೆ ನಿಂತ ನೆಲವೇ ಕುಸಿದಿತ್ತು, ಹುಚ್ಚನಂತಾದರು.. ದಿನವೂ ಶಾಲೆಗೆ ಹೋಗುವರು.. ಶಾಲೆಯ ಮೈದಾನದಲ್ಲಿ ಸುಮ್ಮನೆ ಕುಳಿತು ಮಕ್ಕಳು ಆಡುವುದನ್ನು ನೋಡುವರು.. ನೀಲಿ ಲಂಗ, ಬಿಳಿ ಅಂಗಿಯ ಹುಡುಗಿಯರಲ್ಲಿ ತನ್ನ ಮಗಳನ್ನು ಹುಡುಕುವರು.. ಆದರೆ ಮರೆಯಾದ ದಾನು ಎಷ್ಟು ಹುಡುಕಿದರು.. ಎಲ್ಲಿ ಬರುವಳು ದಾನು?

Also read: ಒಂದು ಹೆಣ್ಣು ಈ ರೀತಿಯೆಲ್ಲಾ ಅಪೇಕ್ಷೆ ಪಡುತ್ತಾಳ..?

ಒಂದು ದಿನ ಅದೇ ಮೈದಾನದಲ್ಲಿ ಮರದ ಕೆಳಗೆ ಒಂದಷ್ಟು ಮಕ್ಕಳು ಕುಳಿತಿದ್ದನ್ನು ಕಂಡರು ಬಸವರಾಜು.. ಶಾಲೆಯ ಅಟೆಂಡರ್​ ಅವರೆದುರು ಒಂದು ಚೀಟಿ ಹಿಡಿದು ನಿಂತಿದ್ದ.. ಒಂದು, ಎರಡು, ಮೂರು… ಹೀಗೆ 45 ಮಕ್ಕಳ ಹೆಸರು ಹೇಳಿದ್ದ.. ಅಟೆಂಡರನ ಲೆಕ್ಕ ಕೇಳಿ ಕುಳಿತಿದ್ದ ಅಷ್ಟೂ ಮಕ್ಕಳು.. ಬಿಕ್ಕಿಬಿಕ್ಕಿ ಅಳುತ್ತಿದ್ದರು
ಬಸವರಾಜುಗೆ ಮಗಳು ದಾನು ನೆನಪಾದಳು… ವಿಷಯ ಗೊತ್ತಾಗಲಿಲ್ಲ ಬಸವರಾಜುಗೆ.. ನೇರ ಶಾಲೆಯ ಮುಖ್ಯೋಪಾಧ್ಯಾಯರ ಬಳಿ ತೆರಳಿದ ಹೆಚ್​ಎಮ್​ ಬಳಿ ಕೇಳಿದಾಗ ಹೇಳಿದ್ದು- ಈ 45 ಮಕ್ಕಳೂ ಶಾಲೆಯ ಫೀಸು ಕಟ್ಟಿಲ್ಲ.. ನಾಳೆಯಿಂದ ಚೀಟಿಯಲ್ಲಿರುವ ಅಷ್ಟೂ ಮಕ್ಕಳು ಶಾಲೆಗೆ ಬರಬಾರದೆಂದು ಆದೇಶಿಸಲಾಗಿತ್ತು. ಬಸವರಾಜುಗೆ ಆ ಮಕ್ಕಳಲ್ಲಿ ದಾನೇಶ್ವರಿ ಕಾಣಿಸಿದಳು, ಅವಳ ನಗು, ನಕ್ಕಾಗ ಕೆನ್ನೆ ಮೇಲೆ ಬೀಳುತ್ತಿದ್ದ ಕುಳಿ.. ಈ 45 ಮಕ್ಕಳಲ್ಲೂ ದಾನುವನ್ನು ಕಂಡಿದ್ದ ಬಸವರಾಜು ಒಂದು ನಿರ್ಧಾರಕ್ಕೆ ಬಂದರು..

Also read: ಜೀವನದಲ್ಲಿ ಸೋತಿದ್ದು.. ನೊಂದಿದ್ದು.. ಅವಮಾನ ಪಟ್ಟಿದ್ದು ಸಾಕು.. ಇನ್ನಾದರೂ ಬದಲಾಗಿ.. ನಿಮ್ಮೊಳಗಿರುವ ಅತ್ಮಬಲವನ್ನು ಹೊರಹಾಕಲು ಹೀಗೆ ಮಾಡಿ..

ಹೆಚ್​ಎಂ ಎದುರು ಹೇಳಿದರು- ‘ಸರ್, ಫೀಸ್​ ಕಟ್ಟಿಲ್ಲ ಅಂತ ಆ ಮಕ್ಕಳನ್ನು ಹೊರಗೆ ಹಾಕಿದ್ರಂತೆ.. ದಯವಿಟ್ಟು ಹಾಗೆ ಮಾಡಬೇಡಿ.. ನಾನು ಅವರ ಫೀಸು ಕಟ್ಟುತ್ತೇನೆ.. ಮತ್ತೆ ಅವರನ್ನು ಒಳಸೇರಿಸಿಕೊಳ್ಳಿ..’ ಎಂದು ಶಾಲೆಯ ಅಕೌಂಟ್​ ನಂಬರ್​ ಕೇಳಿ ಪಡೆದರು. ಒಂದು ಸಾರಿ ಬಸವರಾಜುನತ್ತ ನೋಡಿದರು ಆ ಹೆಚ್​ಎಂ.. ಸಾಮಾನ್ಯ ​ ಒಬ್ಬ ಕ್ಲರ್ಕ್​ ಏನೋ ಹೇಳ್ತಿದ್ದಾನೆಂದು, ಆಯ್ತಪ್ಪಾ ಕಟ್ಟು ಎಂದು ಸಾಗಹಾಕಿದರು. ಈತ ಫೀಸು ಕಟ್ಟಲ್ಲ ಎಂದೇ ನಂಬಿದ್ದರು ಹೆಡ್​ಮಾಸ್ಟರ್​ ಆದರೆ ಮಾರನೇ ದಿನವೇ ಶಾಲೆಯ ಬ್ಯಾಂಕ್​ ಖಾತೆಗೆ 45 ಮಕ್ಕಳ ಶುಲ್ಕದ ಮೊತ್ತ ಜಮೆಯಾಗಿತ್ತು. ಜೊತೆಗೆ ಇನ್ನೂ ಒಂದಷ್ಟು ಸಾವಿರ ರೂಪಾಯಿಗಳನ್ನು ಇನ್ನೂ ಶುಲ್ಕ ಕಟ್ಟಲಾಗದ ಮಕ್ಕಳಿದ್ದರೆ ಅವರ ಶುಲ್ಕವನ್ನೂ ಕಟ್ಟಿಸಿಕೊಳ್ಳಿ ಎಂದು ಹೇಳಿದ್ದರು ಬಸವರಾಜು ಮರುದಿನ ಎಲ್ಲ ಮಕ್ಕಳು ಶಾಲೆಗೆ ಬಂದರು.. ಪಾಠ ಕೇಳಿದರು… ಆಡಿದರು.. ಹಾಡಿದರು.. ನಲಿದರು.. ಬಸವರಾಜು ಅವರಿಗೆಲ್ಲಾ ಈಗ ದೇವರ ಸಮಾನ ಪ್ರತಿ ವರ್ಷ ಬಡ ಮಕ್ಕಳ ಫೀಸು ಕಟ್ಟುವ ಸಂಕಲ್ಪ ತೊಟ್ಟಿರುವ ಬಸವರಾಜು ಕಣ್ಣುಗಳಲ್ಲಿ ದಾನೇಶ್ವರಿ ಮಿಣುಗುತ್ತಿದ್ದಾಳೆ
ಅಲ್ಲೇ ಮರದಡಿ ಆಟವಾಡುತ್ತ ಇರುವ ಅವಳ ಆತ್ಮ ನಿಟ್ಟುಸಿರು ಬಿಡುತ್ತಿದೆ.