ಇದುವರೆಗೂ ಪ್ರತಿ ಚುನಾವಣೆಯಲ್ಲಿ ಯಾವ ಪಕ್ಷ ಈ ಒಂದು ಕ್ಷೇತ್ರ ಗೆಲ್ಲುತ್ತಾರೋ ಅವರೇ ಸರ್ಕಾರವನ್ನು ರಚಿಸಿರುವುದು!! ಯಾವುದು ಈ ಕ್ಷೇತ್ರ??

0
451

ಕರ್ನಾಟಕದಲ್ಲಿ ಈಗ ಚುನಾವಣ ಕಾವು ಜೋರಾಗಿದೆ. ಯಾವ ಅಭ್ಯರ್ಥಿಗೆ ಮತ ಹಾಕಬೇಕು.. ಯಾವ ಪಕ್ಷ ಬಹುಮತ ಪಡೆಯುತ್ತದೆ. ಹಿಂದಿನ ಸರ್ಕಾರಗಳು ಮಾಡಿದ ಸಾಧನೆ ಏನು ಎಂಬ ಲೆಕ್ಕಾಚಾರ ಆರಂಭವಾಗಿವೆ. ಇದರ ಮಧ್ಯ ಮತದಾರರನ್ನು ಒಲೈಸಲು ಮುಂದಾಗಿದ್ದಾರೆ. ಈ ನಡುವೆ ಈ ಒಂದು ಕ್ಷೇತ್ರ ಮಾತ್ರ ಎಲ್ಲರ ಚಿತ್ತ ಕದ್ದಿದೆ.

ಹೌದು.. ಮೇ 12ಕ್ಕೆ ಒಂದು ಹಂತದಲ್ಲಿ 224 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಎಲ್ಲಾ ಕ್ಷೇತ್ರಗಳಿಗೂ ಅಳೆದು ತೂಗಿ ಅಭ್ಯರ್ಥಿಯನ್ನು ಪಕ್ಷಗಳು ಹಾಕುತ್ತಿವೆ. ಆದ್ರೆ ಈ ಕ್ಷೇತ್ರದಲ್ಲಿ ಅಭ್ಯರ್ಥಿಯ ಹೆಸರು ಸೂಚಿಸಲು ಪಕ್ಷಗಳು ಭಾರೀ ಯೋಚನೆಯಲ್ಲಿ ತೊಡಗಿವೆ. ಯಾಕಪ್ಪ ಅಂದ್ರೆ ಈ ಕ್ಷೇತ್ರದಲ್ಲಿ ಗೆದ್ದ ಅಭ್ಯರ್ಥಿಯ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂಬ ಮಾತಿದೆ.

ಹೌದು, ಇಂತಹದೊಂದು ರೋಚಕ ಮತಕ್ಷೇತ್ರ ಇರೋದು ಕಲಬುರಗಿಯ ಚಿಂಚೋಳಿ ವಿಧಾನಸಭಾ ಕ್ಷೇತ್ರ. ಹೈದರಬಾದ್​​ ಸಂಸ್ಥಾನದ ನಿಜಾಮರ ಮುಷ್ಠಿಯಿಂದ 1957ಕ್ಕೆ ಬಿಡಿಸಿಕೊಂಡ ಈ ಕ್ಷೇತ್ರ ಕರ್ನಾಟಕಕ್ಕೆ ಸೇರಿತು. ಅಲ್ಲಿಂದ ಈ ವರೆಗೆ ಅಂದ್ರೆ 1957 ರಿಂದ 2013ರ ವರೆಗೆ 13 ವಿಧಾನಸಭಾ ಚುನವಾಣೆಯಲ್ಲಿ 12 ಬಾರಿ ಇಲ್ಲಿ ಗೆದ್ದ ಅಭ್ಯರ್ಥಿಯ ಪಕ್ಷವೇ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಿದೆ.

ಮತಕ್ಷೇತ್ರದ ಹಿನ್ನೆಲೆ?

 • 1957ರಲ್ಲಿ ಕಾಂಗ್ರೆಸ್​ ಪಕ್ಷದ ಅಭ್ಯರ್ಥಿ ಜಯ ಸಾಧಿಸುತ್ತಾರೆ. ಆಗ ವೀರೇಂದ್ರ ಪಾಟೀಲ್‌ ಗೆದ್ದು ಶಾಸಕರಾಗಿದ್ದರು.
 • 1962ರಲ್ಲಿ ವೀರೇಂದ್ರ ಪಾಟೀಲ್‌ ಗೆದ್ದು ಬೀಗುತ್ತಾರೆ
 • 1967ರಲ್ಲಿ ಮತ್ತೆ ವಿಧಾನಸಭೆಗೆ ಎಂಟ್ರಿ ನೀಡಿದ ವೀರೇಂದ್ರ ಪಾಟೀಲ್‌ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ರು.
 • 1972, 1978, 1983 ರಲ್ಲಿ ಕೈ ಅಭ್ಯರ್ಥಿ ದೇವೇಂದ್ರ ಜಮಾದಾರ್​ ಜಯ ಸಾಧಿಸಿದ್ರು. ಆಗ ಕಾಂಗ್ರೆಸ್​ ರಾಜ್ಯದಲ್ಲಿ ಅಧಿಕಾರ ನಡೆಸಿತ್ತು.
 • 1985ರಲ್ಲಿ ಮಾತ್ರ ಕಾಂಗ್ರೆಸ್ ಪಕ್ಷದ ವೀರಯ್ಯ ಸ್ವಾಮಿ ಆಯ್ಕೆಯಾದರೆ ರಾಜ್ಯದಲ್ಲಿ ಜನತಾ ಪಕ್ಷ ಆಡಳಿತಕ್ಕೆ ಬಂದಿದ್ದು ವಿಶೇಷ.
 • 1989ರಲ್ಲಿ ಕಾಂಗ್ರೆಸ್​​ನ ವೀರೇಂದ್ರ ಪಾಟೀಲ್‌ ಜಯ ಸಾಧಿಸಿ ಸಿಎಂ ಆಗಿದ್ದರು.
 • 1994ರಲ್ಲಿ ಜನತಾ ದಳದಿಂದ ವೈಜನಾಥ ಪಾಟೀಲ್‌ ಶಾಸಕರಾಗಿದ್ರು.
 • 1999ರಲ್ಲಿ ಕೈಲಾಸನಾಥ ಪಾಟೀಲ ಕೈ ಮೇಲಾಗಿತ್ತು
 • 2004ರಲ್ಲಿ ಸಮಿಶ್ರ ಸರ್ಕಾರ ಆದಾಗಲೂ ಜೆಡಿಎಸ್​ನ ವೈಜನಾಥ ಪಾಟೀಲ್‌ ಜಯ ಸಾಧಿಸಿದ್ದರು.
 • 2008ರಲ್ಲಿ ಬಿಜೆಪಿ ಪಕ್ಷದಿಂದ ಸುನೀಲ ವಲ್ಯಾಪೂರೆ ಶಾಸಕರಾದ್ರು, ರಾಜ್ಯದಲ್ಲಿ ಕಮಲ ಪಾಳಯದ್ದೇ ದರ್ಬಾರ್​​
 • 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಉಮೇಶ್ ಜಾಧವ ಜಯ ಶಾಲಿಯಾಗಿದ್ರು.

ಈ ಕ್ಷೇತ್ರದ ಮತ್ತೊಂದು ವಿಶೇಷವಿದೆ. ಇಲ್ಲಿಂದ ಗೆದ್ದ ಅಭ್ಯಾರ್ಥಿಗಳು ಸಿಎಂ ಹಾಗೂ ಸಚಿವರಾದ್ರೂ ಅವಧಿ ಪೂರ್ಣಗೊಳಿಸಿಲ್ಲ. ಎರಡು ಬಾರಿ ವೀರೇಂದ್ರ ಪಾಟೀಲ್​ ಸಿಎಂ ಆದಾಗಲೂ, ದೇವಿಂದ್ರಪ್ಪ ಜಮಾದಾರ, ವೈಜನಾಥ ಪಾಟೀಲ್, ಸುನೀಲ ವಲ್ಯಾಪುರೆ ಸಚಿವರಾಗಿ ಅವಧಿ ಪೂರ್ಣಗೊಳಿಸಿಲ್ಲ ಎಂಬುದೇ ವಿಶೇಷ.