ಭಾರತಕ್ಕೆ ಹೆದರಿ ಸೈನಿಕರ ಶವವನ್ನು ಹೊತ್ತೊಯ್ಯಲು ಎರಡು ದಿನ ಪರದಾಡಿದ ಪಾಕ್; ಬಿಳಿ ಬಾವುಟ ತೋರಿಸಿ ಶರಣಾದ ವಿಡಿಯೋ ವೈರಲ್.!

0
312

ಭಾರತದ ಮೇಲೆ ಸದಾ ಕಾಲು ಕೇದರಿ ಜಗಳಕ್ಕೆ ಬರುತ್ತಿರುವ ಪಾಕಿಸ್ಥಾನಕ್ಕೆ ಭಾರತೀಯ ಸೇನೆ ನರಕಯಾತನೆ ತೋರಿಸಿದೆ. ಸತ್ತ ತಮ್ಮ ಸೈನಿಕರ ಹೆಣವನ್ನು ಹೊತ್ತೊಯಲು ಎರಡು ದಿನ ಪೇಚಾಡಿದ ಪಾಕ್ ಸೈನಿಕರು ಕೊನೆಗೆ ನಾವು ಸೋತೆವು ಎಂದು ಬಿಳಿ ಬಣ್ಣದ ದ್ವಜ ತೋರಿಸಿ ಮೃತದೇಹವನ್ನು ತೆಗೆದುಕೊಂಡು ಹೋಗಿದ್ದಾರೆ. ಪಾಕ್ ಸೈನಿಕರು ಬಿಳಿ ದ್ವಜ ತೋರಿಸಿ ಹೆಣವನ್ನು ತೆಗೆದುಕೊಂಡು ಹೋದ ವೀಡಿಯೊ ಈಗ ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರಿ ವೈರಲ್ ಆಗಿದ್ದು, ಪಾಕಿಸ್ತಾನಕ್ಕೆ ಸೋಲುವುದು ಹೊಸದಲ್ಲ ಭಾರತದ ಕಾಲಿಗೆ ಬಿಳ್ಳುವುದು ಹೊಸದಲ್ಲ ಎನ್ನುವ ಚರ್ಚೆಗಳು ನಡೆದಿವೆ.

ಶ್ವೇತ ಬಾವುಟ ತೋರಿಸಿದ ಪಾಕ್?

ಹೌದು ಕದನ ವಿರಾಮ ಉಲ್ಲಂಘನೆ ಮಾಡಿ ಭಾರತೀಯ ಸೈನಿಕರ ಪೋಸ್ಟ್ ಗಳ ಮೇಲೆ ದಾಳಿ ಮಾಡಲು ಯತ್ನಿಸಿದ್ದ ಪಾಕಿಸ್ತಾನಿ ಸೈನಿಕರು ಇದೀಗ ತಮ್ಮ ಸಾವನ್ನಪ್ಪಿದ ಸೈನಿಕರ ಶವಗಳ ಹಿಂಪಡೆಯಲು ಬಿಳಿ ದ್ವಜ ಪ್ರದರ್ಶಿಸಿದ ಘಟನೆ ಶುಕ್ರವಾರ ನಡೆದಿದೆ. ಮೂಲಗಳ ಪ್ರಕಾರ ಪಿಒಕೆ ಬಳಿ ಇರುವ ಹಾಜಿಪುರ ಸೆಕ್ಚರ್ ನಲ್ಲಿ ಭಾರತೀಯ ಪೋಸ್ಟ್ ಗಳ ಮೇಲೆ ದಾಳಿ ವೇಳೆ ಸಾವನ್ನಪ್ಪಿದ್ದ ಪಾಕ್ ಸೈನಿಕ ಸೆಪೋಯ್ ಗುಲಾಂ ರಸೂಲ್ ಮೃತ ಶರೀರವನ್ನು ವಾಪಸ್ ಪಡೆಯಲು ಪಾಕಿಸ್ತಾನಿ ಸೇನಾಧಿಕಾರಿಗಳು ಬಿಳಿಧ್ವಜ ಪ್ರದರ್ಶನ ಮಾಡಿ ದಾಳಿ ಮಾಡದಂತೆ ಭಾರತೀಯ ಸೈನಿಕರನ್ನು ಮನವಿ ಮಾಡಿದ್ದಾರೆ.

ಸತ್ತ ಪಾಕ್ ಸೈನಿಕ ಸೆಪೋಯ್ ಗುಲಾಂ ರಸೂಲ್ ಪಾಕಿಸ್ತಾನದ ಪಂಜಾಬ್ ನ ಬಹವಲ್ ನಗರದ ಪ್ರಾಂತ್ಯದಲ್ಲಿ ಕರ್ತವ್ಯ ನಿರತರಾಗಿದ್ದ. ಈ ವೇಳೆ ಭಾರತೀಯ ಮೇಲೆ ದಾಳಿ ನಡೆಸಿ. ಗುಂಡು ತಗುಲಿ ಸಾವನ್ನಪ್ಪಿದ್ದ ಪಾಕಿಸ್ತಾನಿ ಸೈನಿಕರನ್ನು ಸೆಪ್ಟೆಂಬರ್ 10, 11 ರಂದು ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ಯ ಹಾಜಿಪುರ ಸೆಕ್ಟರ್‍ ನಲ್ಲಿ ಹೊಡೆದು ಹಾಕಿತ್ತು. ಈ ಗುಂಡಿನ ದಾಳಿಯಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹವಾಲ್‍ನಗರ ಮೂಲದ ಸೈನಿಕ ಗುಲಾಮ್ ರಸೂಲ್‍ನನ್ನು ಭಾರತೀಯ ಸೇನೆ ಕೊಂದು ಹಾಕಿತ್ತು. ಈ ಗುಂಡಿನ ಚಕಮಕಿಯಲ್ಲಿ ಹತನಾದ ರಸೂಲ್ ಮೃತ ದೇಹವನ್ನು ತೆಗೆದುಕೊಂಡು ಹೋಗಲು ಪಾಕ್ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿ ಗುಂಡಿನ ದಾಳಿ ಮುಂದುವರಿಸಿತ್ತು. ಈ ದಾಳಿಗೆ ಭಾರತೀಯ ಸೇನೆ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಿದ ಪರಿಣಾಮ ಪಾಕಿನ ಮತ್ತೊಬ್ಬ ಸೈನಿಕ ಸಹ ಹತ್ಯೆಯಾಗಿದ್ದ. ಈ ಎರಡು ಮೃತದೇಹಗಳನ್ನು ವಾಪಸ್ ಪಡೆಯಲು ಪಾಕಿಸ್ತಾನಿ ಸೇನೆ ಎರಡು ದಿನಗಳ ಕಾಲ ಬಹಳ ಪ್ರಯತ್ನ ಪಟ್ಟರೂ ಭಾರತೀಯ ಸೇನೆ ಬಿಟ್ಟುಕೊಟ್ಟಿರಲಿಲ್ಲ.

ಎರಡು ದಿನ ಪ್ರಯತ್ನ ಪಟ್ಟು ಸೋತ ಪಾಕಿಸ್ತಾನಿ ಸೈನಿಕರು ಸೆಪ್ಟಂಬರ್ 13 ಶುಕ್ರವಾರ ಬಿಳಿ ಬಣ್ಣದ ಬಾವುಟವನ್ನು ತೋರಿಸಿ ನಾವು ಶರಣಾಗಿದ್ದೇವೆ ಎಂದು ಸಂದೇಶ ರವಾನೆ ಮಾಡುವ ಮೂಲಕ ಎರಡು ಮೃತ ದೇಹವನ್ನು ತೆಗೆದುಕೊಂಡು ಹೋಗಿದ್ದಾರೆ. ಶ್ವೇತ ಬಾವುಟ ತೋರಿಸಿ ಶರಣಾಗಿ ಬಂದ ಪಾಕ್ ಸೈನಿಕರನ್ನು ಕಂಡ ಭಾರತೀಯ ಸೈನಿಕರು ಮತ್ತೆ ಗುಂಡಿನ ದಾಳಿ ಮಾಡದೇ ಮೃತ ದೇಹಗಳನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಿದ್ದಾರೆ. ಈ ಮೂಲಕ ಸೋತು ಶರಣಾದವರಿಗೆ ನಾವು ಗೌರವ ನೀಡುತ್ತೇವೆ ಎಂಬ ಸಂದೇಶವನ್ನು ಭಾರತೀಯ ಸೇನೆ ನೀಡಿದೆ. ಆದರೆ ಭಯದಲ್ಲಿ ಪಾಕ್ ಸೈನಿಕರು ಓಡಿಬಂದು 5 ನಿಮಿಷದಲ್ಲಿ ಮೃತದೇಹ ಎತ್ತಿಕೊಂಡು ಕಾಲ್ಕಿತ್ತಿದ್ದಾರೆ.