ಸಿಲಿಕಾನ್ ಸಿಟಿ ಜನರೇ ಇತ್ತ ಗಮನಿಸಿ; ನಗರದಲ್ಲಿ ಹೆಚ್ಚಾಗಲಿದೆ ಇನ್ನಷ್ಟು ಟ್ರಾಫಿಕ್ ಜಾಮ್ ಕಿರಿಕಿರಿ

0
551

ಈಗಾಗ್ಲೇ ಬಿಬಿಎಂಪಿ ಬೆಂಗಳೂರು ನಗರದ ನೃಪತುಂಗ ರಸ್ತೆ ಸೇರಿದಂತೆ ಕೆಲವೆಡೆ ವೈಟ್ ಟ್ಯಾಪಿಂಗ್ ಮಾಡಿ ಸಕ್ಸಸ್ ಆಗಿದೆ. ಹೀಗಿರುವಾಗ ಉದ್ಯಾನನಗರಿಯ 28 ಪ್ರಮುಖ ಟಾರ್ ರೋಡ್’ಗಳಿಗೆ ವೈಟ್ ಟ್ಯಾಪಿಂಗ್ ಮಾಡಲು ಬಿಬಿಎಂಪಿ ಸಿದ್ಧವಾಗಿದೆ. ಹೀಗಾಗಿ ಟ್ರಾಫಿಕ್ ಜಾಮ್ ಕೊಂಚ ಹೆಚ್ಚಾಗಲಿದೆ.

ಮುಂದಿನ ದಿನಗಳಲ್ಲಿ, ನಗರದ 28 ಪ್ರಮುಖ ರಸ್ತೆಗಳಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿಯನ್ನು ಬಿಬಿಎಂಪಿ ಆರಂಭಿಸಲಿದೆ. 1 ಕುಲೋಮೀಟರ್ ರಸ್ತೆಯನ್ನು ವೈಟ್ ಟ್ಯಾಪಿಂಗ್ ಮಾಡಲು 10 ದಿನಗಳ ಸಮಯ ಬೇಕು. ಅದರಂತೆ ಸಂಪೂರ್ಣ ಕಾಮಗಾರಿಗೆ 11 ತಿಂಗಳ ಕಾಲ ಸಮಯ ಬೇಕಾಗುತ್ತದೆ. ಮುಂದಿನ ವರ್ಷ ಆಗಸ್ಟ್ ತಿಂಗಳ ಹೊತ್ತಿಗೆ ಕಾಮಗಾರಿ ಮುಗಿಸಲು BBMP ಪ್ಲಾನ್ ಮಾಡಿದೆ.

ಬನ್ನೇರುಘಟ್ಟ ರಸ್ತೆ, ಮೈಸೂರು ರಸ್ತೆ ಮತ್ತು ಔಟರ್ ರಿಂಗ್ ರೋಡ್‘ಗಳಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿ ನಡೆಯುತ್ತಿದೆ.

ಇನ್ನು ವೈಟ್‌ಟಾಪಿಂಗ್‌ ಕಾಮಗಾರಿಗಾಗಿ ಟಿನ್‌ಫ್ಯಾಕ್ಟರಿಯಿಂದ ಹೆಬ್ಬಾಳಕ್ಕೆ ಸಂಪರ್ಕ ಕಲ್ಪಿಸುವ ಹೊರವರ್ತುಲ ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಇದರಿಂದ ಈ ಭಾಗದಲ್ಲಿ ಸಂಚಾರ ದಟ್ಟಣೆ ಉ‌ಲ್ಭಣಗೊಂಡಿದೆ.

10 ಅಡಿ ಅಗಲದ ಸರ್ವೀಸ್‌ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ದಟ್ಟಣೆ ಹೆಚ್ಚಾಗಿದ್ದು, ಮಹದೇವಪುರ ಹಾಗೂ ಕೆ.ಆರ್‌.ಪುರದಿಂದ ಹೆಬ್ಬಾಳದ ಕಡೆಗೆ ಹೋಗುವ ಸಾವಿರಾರು ವಾಹನಗಳು ನಿಧಾನವಾಗಿ ಚಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.