ನೀವು ಓದಲೇ ಬೇಕಾದ ಸ್ಟೋರಿ ಬಡವರು ಯಾರು.? ಶ್ರೀಮಂತರು ಯಾರು.?

0
1830

ಒಬ್ಬ ಶ್ರೀಮಂತ ಮಹಿಳೆ ಸೀರೆ ಅಂಗಡಿಗೆ ಬಂದು

*Excuse me
ಒಂದು ಕಡಿಮೆ ಬೆಲೆ ಸೀರೆ ತೋರಿಸಿ
ನನ್ನ ಮಗನ ಮದುವೆ ಇದೆ ಕೆಲಸದವಳಿಗೆ ಕೋಡೊಕೆ*

ಸ್ವಲ್ಪ ಸಮಯದ ನಂತರ ಅದೇ ಅಂಗಡಿಗೆ ಆ ಮನೆ ಕೆಲಸದವಳು ಬಂದಳು

ಅಣ್ಣಾ ಒಂದು ದುಬಾರಿ ಸೀರೆ ತೋರಿಸು ನಮ್ಮ ಮಾಲಿಕರ ಮಗನ ಮದುವೆಗೆ ಉಡುಗೊರೆ ಕೊಡಬೇಕು”

ಬಡತನ ಅನ್ನೋದು ಮನಸ್ಸಿನಲ್ಲಿ ಇದೆಯಾ ಅಥವಾ ಆಸ್ತಿಯಲ್ಲಿ ?

ಇವರಲ್ಲಿ ಯಾರು ಬಡವರು?

ಒಂದು ದಿನ ಒಬ್ಬ ಮಹಿಳೆ ತನ್ನ ಕುಟುಂಬ ಸಮೇತ 5 ಸ್ಟಾರ್ ಹೋಟೆಲ್ ಗೆ ಊಟಕ್ಕೆ ಹೋಗಿದ್ದರು

ಅವಳು ಆರು ತಿಂಗಳ ಮಗುವಿನ ತಾಯಿ,ಮಗು ಹಸಿವಿನಿಂದ ಅಳತೊಡಗಿತು

“ಅವಳು ಹೋಟೆಲ್ ಮ್ಯಾನೇಜರ್ ಗೆ ಕೇಳಿದಳು ಒಂದು ಲೋಟ ಹಾಲು ಸಿಗುತ್ತಾ..?

“ಎಸ್ ಮೇಡಮ್”, “ಆದರೆ ಅದಕ್ಕೆ ಮತ್ತೆ ದುಡ್ಡಾಗುತ್ತೆ”

*” ಮಹಿಳೆ ಹೇಳಿದಳು ನೋ ಪ್ರಾಬ್ಲಮ್”, *

*ಹೋಟೆಲ್ ನಿಂದ ವಾಪಸ್ ಬರುವಾಗ ಮಗು ಹಸಿವಿನಿಂದ ಮತ್ತೆ ಅಳತೊಡಗಿತು *

ರಸ್ತೆ ಪಕ್ಕ ಗಾಡಿ ನಿಲ್ಲಿಸಿ ಚಹಾ ಮಾರುವವನ ಹತ್ತೀರ ಒಂದು ಲೋಟ ಹಾಲು ಕೊಂಡಳು

ಅವಳು ಕೇಳಿದಳು
ದುಡ್ಡು ಎಷ್ಟು ?

*” ಆ ಮುದುಕ ನಗುತ್ತಾ ಹೇಳಿದ
ಮೇಡಮ್ ಮಕ್ಕಳ ಹಾಲಿಗೆ ನಾವು ದುಡ್ಡು ತೆಗೆದುಕೊಳ್ಳಲ್ಲ”,*

“ನೀವು ಇನ್ನೂ ಬಹಳಷ್ಟು ಪ್ರಯಾಣ ಮಾಡುವದಿದ್ದರೆ ಇನ್ನೊಂದು ಲೋಟ ಹಾಲು ತಗೊಳ್ಳಿ”

ಆ ಮಹಿಳೆ ಇನ್ನೊಂದು ಲೋಟ ಹಾಲು ತೆಗೆದುಕೊಂಡು ಹೊರಟಳು

*ಅವಳಿಗೆ ಆಶ್ಚರ್ಯ! !

ಇವರಲ್ಲಿ ಶ್ರೀಮಂತರು ಯಾರು?*

* ನಿಜವಾಗಿ ಶ್ರೀಮಂತರು ಯಾರು ಹೋಟೆಲ್ ಮ್ಯಾನೇಜರ್ ಅಥವಾ ಚಹಾ ಮಾರುವವ ?*

ದುಡ್ಡಿನ ಓಟದಲ್ಲಿ ನಾವು ಯಾರು ಎಂಬುದನ್ನು ನಾವೇ ಮರೆತಿದ್ದೇವೆ

ಬನ್ನಿ ಸಹಾಯದ ಅವಶ್ಯಕತೆಯಿರುವವರಿಗೆ ಪ್ರತಿಫಲ ನಿರಿಕ್ಷಿಸದೆ ಸಹಾಯ ಮಾಡೋಣ

ಅದು ನಮ್ಮ ಮನಸಿಗೆ ಸುಖ ನೀಡುತ್ತದೆ ಆ ಸುಖ ದುಡ್ಡಿನಿಂದ ಸಿಗುವದಿಲ್ಲ

ಕಾಫಿ ಸಕ್ಕರೆ ಮತ್ತು ಹಾಲು ಇಲ್ಲದೆ ರುಚಿಯಾಗದು

ಏಕಾಂಗಿಯಾಗಿ ನಾವು ಒಳ್ಳೆಯವರೆ ಆದರೆ ಎಲ್ಲರೂ ಸೇರಿದಾಗ ಕಾಳಜಿ ಕೂಡ ಬರುತ್ತದೆ

ಸಂಪರ್ಕದಲ್ಲಿರೋಣ ಜಗತ್ತು ಒಳ್ಳೆಯವರಿಂದ ತುಂಬಿದೆ ನಾವು ಹುಡುಕಬೇಕಷ್ಟೆ