ಮಸೀದಿಯಲ್ಲಿ ಮುಸ್ಲಿಂ ಮಹಿಳೆಯರ ಪ್ರವೇಶ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್; ಅರ್ಜಿದಾರನಿಗೆ ನೀನು ಯಾರು? ಎಂದು ಪ್ರಶ್ನಿಸಿದ ನ್ಯಾಯಪೀಠ..

0
264

ಬಹುದಿನಗಳಿಂದ ವಿವಾದಕ್ಕೆ ಗುರಿಯಾಗಿದ್ದ ದೇವಾಲಯಗಳಲ್ಲಿ ಮತ್ತು ಮಸೀದಿಯಲ್ಲಿ ಮಹಿಳೆಯರ ಪ್ರವೇಶ ಕುರಿತು ಕೇರಳ ಹೈಕೊರ್ಟ್​​ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿಹಿಡಿದಿದ್ದು, ಮುಸ್ಲಿಂ ಮಹಿಳೆಯರಿಗೆ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕೋರಿ ನಿರ್ದೇಶನ ನೀಡುವಂತೆ ಕೇರಳ ಅಖಿಲ ಭಾರತ ಹಿಂದು ಮಹಾಸಭಾ ಸಲ್ಲಿಸಿದ್ದ ಪಿಐಎಲ್‌ನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಜಾಗೊಳಿಸಿದೆ. ಇದೇ ಅರ್ಜಿ ಕುರಿತು ಈ ಹಿಂದೆ ಕೇರಳ ಹೈಕೋರ್ಟ್‌ ವಿಚಾರಣೆ ನಡೆಸಿ ಪಿಐಎಲ್‌ ‘ಅಗ್ಗದ ಪ್ರಚಾರದ ಉದ್ದೇಶ’ ಹೊಂದಿದೆ ಎಂಬ ಆದೇಶವನ್ನು ಸುಪ್ರೀಂ ಕೂಡ ತಿಳಿಸಿದೆ.

Also read: ಸ್ಲಂನಲ್ಲಿ, ಸುಗಂಧದ ಪರಿಮಳ ಬರಬೇಕು, ದುರ್ವಾಸನೆ ಆಗೊಲ್ಲ ಎಂದರೆ ಹೇಗೆ? ಮೈತ್ರಿ ಸರ್ಕಾರದ ನಡೆಗೆ ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯೆ..

ಹೌದು ಕೇರಳದ ಅಯಪ್ಪಸ್ವಾಮಿ ದೇವಾಲಯದಲ್ಲಿ ಮಹಿಳೆಯರ ಪ್ರವೇಶ ಕುರಿತು ಇನ್ನೂ ಹೋರಾಟದ ಕಾವು ಅರುತಿಲ್ಲ, ಇದೆ ವಿಷಯಕ್ಕೆ ಸಂಬಂಧಪಟ್ಟಂತೆ ದೇಶದಲ್ಲಿ ಬೇಧಭಾವ ನಡೆಯುತ್ತಿದೆ. ಮುಸ್ಲಿಂ ಮಸಿದಿಗಳಿಗೆ ಒಂದು ನ್ಯಾಯವಾದರೆ ಹಿಂದೂ ದೇವಾಲಯಗಳಿಗೆ ಒಂದು ನ್ಯಾಯ ಎನ್ನುವ ದೂರಿನಲ್ಲಿ ಕೇರಳ ಹಿಂದೂ ಭಾರತ್ ಹಿಂದೂ ಮಹಾಸಭಾದ ನಮ್ಮ ದೇವಾಲಯಕ್ಕೆ ಮಾತ್ರ ಮಹಿಳೆಯರಿಗೆ ಪ್ರವೇಶ ನೀಡಿದರೆ ಮಸೀದಿಯಲ್ಲಿ ಯಾಕೆ ಮಹಿಳೆಯರಿಗೆ ಅವಕಾಶ ನೀಡುತ್ತಿಲ್ಲ ಎಂದು ಹಲವು ದಿನಗಳಿಂದ ಹೋರಾಟ ವೇಳೆ ಪ್ರಶ್ನೆ ಮಾಡಿತ್ತು. ಅಷ್ಟೇ ಅಲ್ಲದೆ ಕೋರ್ಟ್ ಮೆಟ್ಟಿಲೇರಿ ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವಂತೆ ಅಖಿಲ ಭಾರತ್ ಹಿಂದೂ ಮಹಾಸಭಾದ ಕೇರಳ ಘಟಕ ಸಲ್ಲಿಸಿಸಿತ್ತು.

ಸರ್ಜಿ ವಜಾಗೊಳಿಸಿದ ಸುಪ್ರಿಂ

Also read: ಮೈತ್ರಿ ಸರ್ಕಾರ ಪತನ; ದೋಸ್ತಿ ಸರ್ಕಾರದ 13 ಶಾಸಕರು ರಾಜೀನಾಮೆ? ಸರ್ಕಾರ ಉರುಳಿಸಲು ಕಾರಣವಾಯಿತಾ IMA ಪ್ರಕರಣ?

ಅಖಿಲ ಭಾರತ್ ಹಿಂದೂ ಮಹಾಸಭಾದ ಕೇರಳ ಘಟಕ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಅರ್ಜಿಯು ದುರುದ್ದೇಶಪೂರಿತವಾಗಿದೆ ಹಾಗೂ ಅಗ್ಗದ ಪ್ರಚಾರಕ್ಕಾಗಿ ಬಳಸಲ್ಪಟ್ಟಿದೆ ಎಂದಿದ್ದ ಕೇರಳ ಹೈಕೊರ್ಟ್​​ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿಹಿಡಿದೆ. ಕೇರಳ ಹೈಕೋರ್ಟ್​ ಆದೇಶದ ವಿರುದ್ದ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್​​ ಗೊಗೊಯ್ ಮತ್ತು ನ್ಯಾಯಮೂರ್ತಿಗಳಾದ ದೀಪಕ್​​​ ಗುಪ್ತಾ ಹಾಗೂ ಅನಿರುದ್ದ ಬೋಸ್​​​ ಅವರ ನ್ಯಾಯಪೀಠ ವಜಾಗೊಳಿಸಿದೆ. “ಮುಸ್ಲಿಂ ಮಹಿಳೆಯರಿಗೆ ಮಸೀದಿಗಳಲ್ಲಿ ಪ್ರವೇಶ ನಿರಾಕರಿಸುವ ವ್ಯವಸ್ಥೆ ಇದೆ ಎಂದು ಸುಳಿವು ನೀಡುವ ಯಾವುದೇ ವಸ್ತುವನ್ನು ರಿಟ್ ಅರ್ಜಿಯಲ್ಲಿ ನೀಡಲಾಗಿಲ್ಲ” ಎಂದು ಹೈಕೋರ್ಟ್ ತನ್ನ ತೀರ್ಪಿನ ವೇಳೆ ತಿಳಿಸಿತ್ತು.

ಅರ್ಜಿದಾರರಾದ ಅಖಿಲ ಭಾರತೀಯ ಹಿಂದು ಮಹಾಸಭಾದ ಕೇರಳ ಘಟಕದ ಅಧ್ಯಕ್ಷ ಸ್ವಾಮಿ ದತ್ತಾತ್ರೇಯ ಸಾಯಿ ಸ್ವರೂಪ್​​ ನಾಥ್ ಅವರು ಕೋರ್ಟ್ ಕೇಳಿದ ಪ್ರಶ್ನೆಗೆ ಮಲಯಾಳಿ ಭಾಷೆಯಲ್ಲಿ ಉತ್ತರಿಸಲು ಪ್ರಯತ್ನಿಸಿದಾಗ ನ್ಯಾಯಾಪೀಠವು ನ್ಯಾಯಾಲಯದ ಕೋಣೆಯಲ್ಲಿ ವಕೀಲರೊಬ್ಬರ ಸಹಾಯದಿಂದ ಆಂಗ್ಲ ಭಾಷೆಗೆ ಭಾಷಾಂತರ ಮಾಡಿಸಿಕೊಂಡಿತು. ಕೇರಳ ಹೈಕೋರ್ಟ್ 2018, ಅಕ್ಟೋಬರ್ 11ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರು ಮೇಲ್ಮನವಿ ಸಲ್ಲಿಸಿರುವ ವಿಚಾರವನ್ನು ಅನುವಾದಕರು ನ್ಯಾಯಪೀಠದ ಮುಂದೆ ತಿಳಿಸಿದರು.

ನೀನು ಯಾರು ಕೇಳಲು?

Also read: ಮುಂದಿನ ವರ್ಷ ಮಾರ್ಚ್ ಒಳಗೆ ಮನೆ ಖರೀದಿಸುವವರಿಗೆ ಮತ್ತು ಕಟ್ಟುವವರಿಗೆ, ಬಜೆಟ್ ಘೋಷಣೆ ಪ್ರಕಾರ 7 ಲಕ್ಷ ರುಪಾಯಿ ಉಳಿಸಬಹುದು ಹೇಗೆ ಅಂತ ಓದಿ!!

ಅರ್ಜಿ ಕುರಿತು ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿ, ಅರ್ಜಿದಾರರಾದ ಕೇರಳ ಹಿಂದು ಮಹಾಸಭಾದ ಅಧ್ಯಕ್ಷ, ಸ್ವಾಮಿ ದತ್ತಾತ್ರೇಯ ಸಾಯಿ ಸ್ವರೂಪ ನಾಥ್‌ ಅವರನ್ನು ತರಾಟೆಗೆ ತೆಗೆದುಕೊಂಡು, ಅರ್ಜಿದಾರನಿಗೆ ನೀನು ಯಾರು?, ಇದರಿಂದ ನಿನಗೆ ಏನು ತೊಂದರೆಯಾಗಿದೆ?, ಬೇಕಾದರೆ ಬಾಧಿತ ವ್ಯಕ್ತಿಗಳು ನಮ್ಮ ಮುಂದೆ ಬರಲಿ” ಪ್ರಾರ್ಥನೆಗಾಗಿ ಮಸೀದಿಗೆ ತೆರಳಲು ತೊಂದರೆಗೀಡಾದವರು ಬಂದು ನಮ್ಮ ಮುಂದೆ ಅರ್ಜಿ ಸಲ್ಲಿಸಲಿ ಎಂದು ಸೂಚಿಸಿ ಅರ್ಜಿಯನ್ನು ವಜಾ ಮಾಡಿತು. ಜೊತೆಗೆ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಳ್ಳುವ ಮುನ್ನವೇ ಮುದ್ರಣ ಮಾದ್ಯಮದಲ್ಲಿ ಈ ಕುರಿತು ವರದಿಗಳು ಪ್ರಕಟವಾಗಿದ್ದು, ಇದು ‘ಅಗ್ಗದ ಪ್ರಚಾರದ ಉದ್ದೇಶ’ ಹೊಂದಿರುವುದು ಸ್ಪಷ್ಟಎಂದು ಕೋರ್ಟ್‌ ವಿಚಾರಣೆ ವೇಳೆ ಹೇಳಿತು.