ತಾಯ್ನಾಡಿಗೆ ಮರಳಿದ ಅಭಿನಂದನ್ ಜೊತೆಗೆ ಇದ್ದ ಮಹಿಳೆ ಯಾರು? ಅಭಿನಂದನ್ ಗೆ ಮೋದಿ ಏನ್ ಅಂದ್ರು ಗೊತ್ತಾ?

0
597

ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಾಯುಪಡೆಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಥಮಾನ್ ಅವರು ವಾಘಾ ಗಡಿ ಮೂಲಕ ಭಾರತ ಪ್ರವೇಶಿಸಿದರು. ಈ ಹಿನ್ನೆಲೆಯಲ್ಲಿ ಎರಡು ದೇಶಗಳ ನಡುವೆ ಶಾಂತಿ ಸಂಕೇತವಾಗಿ ಅಭಿನಂದನ್​ ಅವರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಗುರುವಾರ ಹೇಳಿದ್ದರು. ಅಂತೆಯೇ ಅವರನ್ನು ಪಾಕಿಸ್ತಾನ ಭಾರತಕ್ಕೆ ಹಸ್ತಾಂತರ ಮಾಡದೆ. ಅಭಿನಂದನ್​ ಪಾಲಕರು ಆಗಮಿಸಿದ್ದರು.

Also read: ಭಾರತ ಪಾಕ್ ಮೇಲೆ ದಾಳಿ ಮಾಡಿದರೆ ದೇಶದಲ್ಲಿ ಹಿಂದೂ-ಮುಸ್ಲಿಂ ಸಂಘರ್ಷಕ್ಕೆ ದಾರಿ; ದೇಶ ವಿರೋಧಿಗಳ ಪರ ಬ್ಯಾಟಿಂಗ್ ಮಾಡುತ್ತಿದ್ದಾರ ಮುಖ್ಯಮಂತ್ರಿ ಎಚ್.ಡಿ.ಕೆ??

ಅಭಿನಂದನ್‌ ವರ್ಧಮಾನ್‌ ಅವರು ಶುಕ್ರವಾರ ರಾತ್ರಿ 9.20ಕ್ಕೆ ತಾಯ್ನೆಲಕ್ಕೆ ಹೆಜ್ಜೆಯಿಟ್ಟರು. ರಾತ್ರಿ 9.10ರ ಹೊತ್ತಿಗೆ ಅಭಿನಂದನ್‌ ಅವರು ಪಾಕಿಸ್ತಾನ ಕಡೆಯ ಗಡಿ ಭಾಗ ವಾಘಾದಲ್ಲಿ ಕಾಣಿಸಿಕೊಂಡರು. ಅಭಿನಂದನ್ ತಯ್ನಾಡಿಗೆ ಮರಳುತ್ತಿರುವ ದೃಶ್ಯಗಳು ಪ್ರತಿಯೊಬ್ಬರ ಮನದಲ್ಲೂ ದೀರ್ಘ ಕಾಲದವರೆಗೆ ಉಳಿದುಕೊಳ್ಳುವುದರಲ್ಲಿ ಅನುಮಾನವಿಲ್ಲ. ಈ ಸಂಧರ್ಭದಲ್ಲಿ ಅಲ್ಲಿ ನೆರದಿದ್ದ ಜನರಿಗೆ ಒಂದು ಆಶ್ಚರ್ಯ ಮತ್ತು ಪ್ರಶ್ನೆ ಕಾದಿತ್ತು ಅದು ಏನೇ ಅಂದರೆ ಪೈಟಲ್ ಅಭಿನಂದನ್ ಭಾರತಕ್ಕೆ ಮರಳುವ ವೇಳೆ ವಾಘಾ ಬಾರ್ಡರ್ ನಲ್ಲಿ ಅವರೊಂದಿಗಿದ್ದ ಪಾಕಿಸ್ತಾನದ ಅಧಿಕಾರಿಗಳು ಮತ್ತು ಓರ್ವ ಮಹಿಳೆ ಅವರೊಂದಿಗೆ ಇದ್ದರು ಈ ಮಹಿಳೆ ಯಾರು ಎಂಬ ಪ್ರಶ್ನೆ ಬಹುತೇಕರನ್ನು ಕಾಡಿದೆ. ಇವರು ಅಭಿನಂದನ್ ಪತ್ನಿಯು ಅಲ್ಲ, ಸಂಬಧಿವೂ ಅಲ್ಲ ಆದರೆ ಇವರ ಜೊತೆ ಯಾಕೆ ಬಂದರು ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು.

ಯಾರು ಆ ಮಹಿಳೆ?

ಅಲ್ಲಿ ನೆರೆದಿರುವ ಜನರು ತಿಳಿದಂತೆ ಅವರು ಅಭಿನಂದನ್ ಪತ್ನಿ ಅಥವಾ ಕುಟುಂಬ ಸದಸ್ಯರಲ್ಲ. ಬದಲಾಗಿ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದಲ್ಲಿ ಭಾರತೀಯ ವ್ಯವಹಾರಗಳ ಇಲಾಖೆ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಫಾರಿಹಾ ಬುಗತಿ ಆಗಿದ್ದರು. ಫರಿಹಾ ಓರ್ವ FSP ಅಧಿಕಾರಿಯಾಗಿದ್ದಾರೆ, ಅವರು ಭಾರತದ IFS ಗ್ರೇಡ್ ನಲ್ಲಿ ಕಾರ್ಯ ನಿರ್ವಹಿಸುತ್ತಾರ. ವಿದೇಶಾಂಗ ಸಚಿವಾಲಯದಲ್ಲಿ ಫಾರಿಹಾ ಭಾರತಕ್ಕೆ ಸಂಬಂಧಿಸಿದ ವ್ಯವಹಾರಗಳ ಉಸ್ತುವಾರಿಯಾಗಿದ್ದಾರೆ.

ಪ್ರಧಾನ ಅಧಿಕಾರಿ ಡಾ. ಫರಿಹಾ ಬುಗ್ತಿ;

ಆಕೆ ಪಾಕಿಸ್ತಾನದ ವಿದೇಶಾಂಗ ಕಚೇರಿಯಲ್ಲಿ ಭಾರತಕ್ಕಿರುವ ವೈದ್ಯೆ ಡಾ. ಫರಿಹಾ ಬುಗ್ತಿ. ಎಫ್ಎಸ್‍ಪಿ ಭಾರತದ ಐಎಫ್‍ಎಸ್ ಗೆ ಸಮಾನವಾದ ಪಾಕಿಸ್ತಾನದಲ್ಲಿರುವ ಫಾರಿನ್ ಸರ್ವೀಸ್ ಆಫ್ ಪಾಕಿಸ್ತಾನ್ ಅಧಿಕಾರಿ. ಇವರು ಇಗಷ್ಟೆ ಅಲ್ಲದೆ ಈ ಹಿಂದೆವು ಕಾಣಸಿಕೊಂಡಿದ್ದು. ಪಾಕ್ ಜೈಲಿನಲ್ಲಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್  ಜಾದವ್ ಪ್ರಕರಣ ಸೇರಿದಂತೆ ಇತರ ಪ್ರಕರಣಗಳನ್ನ ನಿರ್ವಹಿಸುವ ಪ್ರಧಾನ ಅಧಿಕಾರಿಗಳಲ್ಲೊಬ್ಬರಾಗಿದ್ದಾರೆ ಫರಿಹಾ. 2017ರಲ್ಲಿ ಇಸ್ಲಾಮಾಬಾದ್‍ನಲ್ಲಿ ಜಾದವ್ ಅವರ ಅಮ್ಮ ಮತ್ತು  ಪತ್ನಿಗೆ ಜಾದವ್ ಭೇಟಿಗೆ ಅವಕಾಶ ಕಲ್ಪಿಸಿದಾಗ ಅಲ್ಲಿಯೂ ಫರಿಹಾ ಇದ್ದರು.  ಕಳೆದ ತಿಂಗಳು ಜಾದವ್ ಪ್ರಕರಣದ ವಿಚಾರಣೆ ನೆದರ್‌ಲೆಂಡ್ ಹೇಗ್ ನಲ್ಲಿ ನಡೆದಾಗ ಅಲ್ಲಿಗೂ ಫರಿಹಾ ಬಂದಿದ್ದರು. 2005ರಲ್ಲಿ ಪಾಕಿಸ್ತಾನದ ವಿದೇಶ ವ್ಯವಹಾರಗಳ ಕಚೇರಿಯಲ್ಲಿ ವೃತ್ತಿ ಜೀವನ ಆರಂಭಿಸಿದ ಇವರು 2007ರಲ್ಲಿ ವಿದೇಶಾಂಗ ಸಚಿವಾಲಯದ ವಕ್ತಾರ ಆಗಿ ಕಾರ್ಯ ನಿರ್ವಹಿಸಿದ್ದರು.

ಅಭಿನಂದನ್’ ಅಂದರೆ ಧೈರ್ಯ, ಶೌರ್ಯ;

ಅಭಿನಂದನ್ ಭಾರತಕ್ಕೆ ಮರುಳಿದ ಬಗ್ಗೆ ಮಾತನಾಡಿದ ನರೇಂದ್ರ ಮೋದಿ ಭಾರತ ಏನು ಮಾಡುತ್ತದೋ ಅದನ್ನು ಜಗತ್ತು ಗಮನಿಸುತ್ತಿರುತ್ತದೆ. ಪದಕೋಶದಲ್ಲಿನ ಶಬ್ದದ ಅರ್ಥವನ್ನೇ ಬದಲಿಸುವ ಶಕ್ತಿ ಭಾರತಕ್ಕಿದೆ. ಮೊದಲಿಗೆ ‘ಅಭಿನಂದನ್’ ಅಂದರೆ ಆಂಗ್ಲ ಭಾಷೆಯಲ್ಲಿ ಕಂಗ್ರಾಚ್ಯುಲೇಷನ್ಸ್ ಅಂತ ಇತ್ತು. ಇದೀಗ ‘ಅಭಿನಂದನ್’ ಶಬ್ದದ ಅರ್ಥವನ್ನೇ ಭಾರತ ಬದಲಾಯಿಸಿದೆ.” ಅಭಿನಂದನ್’ ಅಂದರೆ ಧೈರ್ಯ, ಶೌರ್ಯ ಎಂಬ ಅರ್ಥವೂ ಪಡೆದುಕೊಂಡಿದೆ ಎಂದು ಮಾತನಾಡಿದ್ದಾರೆ.

Also read: ನರೇಂದ್ರ ಮೋದಿ ಸರ್ಕಾರದಿಂದ ಕೇಂದ್ರ ನೌಕರರಿಗೆ ಗುಡ್ ನ್ಯೂಸ್: ಶೇ. 3ರಷ್ಟು ತುಟ್ಟಿ ಭತ್ಯೆ ಹೆಚ್ಚಳ..