ಅಚ್ಚರಿ..! ಪವಿತ್ರ ನಗರವಾದ ಅಯೋಧ್ಯಾಗೆ ಪ್ರತೀ ವರ್ಷ ನೂರಾರು ಕೊರಿಯನ್ನರು ಭೇಟಿಕೊಡುತ್ತಾರೆ.! ಕಾರಣ ತಿಳಿಯಬೇಕೇ??

0
736

ರಾಮನು ಹುಟ್ಟಿದ ನಗರವಾದ ಅಯೋಧ್ಯಾ ಮತ್ತು ಭಾರತದ ಅತ್ಯಂತ ಪವಿತ್ರ ನಗರಗಳಲ್ಲಿ ಒಂದಾಗಿದೆ ಎಂದು ನಮಗೆ ತಿಳಿದಿದೆ. ಆದರೆ ಶ್ರೀರಾಮ ಜನ್ಮಸ್ಥಳವಾಗಿರುವ ಆಯೋಧ್ಯಾ ಕೋಟ್ಯಾಂತರ ಹಿಂದೂಗಳಿಗೆ ಧಾರ್ಮಿಕ ಶ್ರದ್ಧಾಕೇಂದ್ರ ಅಷ್ಟೇ ಅಲ್ಲ, ಹಿಂದೂಗಳ ಈ ಕ್ಷೇತ್ರಕ್ಕೆ ಪ್ರತಿವರ್ಷ 6೦ ಲಕ್ಷ ಕೊರಿಯನ್ನರು ಆಗಮಿಸುತ್ತಾರೆ ಎಂಬುದೇ ವಿಶೇಷ.

ಪವಿತ್ರ ನಗರವಾದ ಅಯೋಧ್ಯಾಗೆ ಪ್ರತೀ ವರ್ಷ ನೂರಾರು ಕೊರಿಯನ್ನರು ಭೇಟಿಕೊಡುತ್ತಾರೆ. ಇವರಾರೂ ಪ್ರವಾಸಿಗಳಲ್ಲ. ತಮ್ಮ ವಂಶದ ರಾಣಿಗೆ ಶ್ರದ್ಧಾಂಜಲಿ ನೀಡಲು ಇವರು ಇಲ್ಲಿಗೆ ಬರುತ್ತಿರುವ ಅಚ್ಚರಿ ವಿಷಯ ಅಷ್ಟಾಗಿ ಪ್ರಚಾರ ಪಡೆದಿಲ್ಲ. ಕೊರಿಯನ್ನರ ಪ್ರಸಿದ್ಧ ರಾಣಿ ಹೇ ಹ್ವಾಂಗ್-ಸರಿಗೆ ತಮ್ಮ ಗೌರವವನ್ನು ಸಲ್ಲಿಸುತ್ತಾರೆ. ಅಯೋಧ್ಯಾದಲ್ಲಿ ತಮ್ಮ ರಾಣಿ ಏನು ಮಾಡಿದರು? ಇದು ಎಲ್ಲರಿಗೂ ತುಂಬಾ ನಿಗೂಢವಾಗಿದೆ. ಅದರ ಕಥೆ ಖಂಡಿತವಾಗಿಯೂ ನಿಮ್ಮನ್ನು ಆಘಾತಗೊಳಿಸುತ್ತದೆ.

ಇತಿಹಾಸದ ಪ್ರಕಾರ ಹುರ್ ಹವಾಂಗ್ ಎಂಬಾಕೆ ಅಯೋಧ್ಯಾದಲ್ಲಿ ನೆಲೆಸಿದ್ದ ಸುರಿರತ್ನ ಎಂಬ ರಾಣಿ ಆಗಿದ್ದಳು. ಕ್ರಿ.ಶ. 48ರಲ್ಲಿ ಅಯೋಧ್ಯೆಯ ರಾಜಕುಮಾರಿ ಸುರಿರತ್ನ ಎಂಬಾಕೆ ಕೊರಿಯಾದ ರಾಜ ಕಿಮ್ ಸುರೋ ಎಂಬಾತನನ್ನು ವರಿಸಿದ್ದಳು. ಇವರ ವಂಶಕ್ಕೆ ಕಾರಕ್ ಎಂಬ ಹೆಸರಿದೆ. ಸುರಿರತ್ನಳನ್ನು ಕೊರಿಯದಲ್ಲಿ ಹುರ್ ಹ್ವಾಂಗ್-ಓಕ್ (Hur Hwang-ok) ಎಂದು ಕರೆಯಲಾಗುತ್ತಿದೆ. ಇವರ ಕಾರಕ್ ವಂಶದ ಜನರು ಅಯೋಧ್ಯೆಯನ್ನು ತಮ್ಮ ತಾಯಿಯ ಮನೆ (Maternal Home) ಎಂದು ಪರಿಗಣಿಸಿ, ಪ್ರತೀ ವರ್ಷ ಇಲ್ಲಿಗೆ ತಪ್ಪದೇ ಭೇಟಿ ಕೊಡುತ್ತಾರೆ. ತಮ್ಮ ಚಾರಿತ್ರಿಕ ರಾಣಿ ಹುರ್ ಹವಂಗ್ ಓಕೆ ಅವರಿಗೆ ಗೌರವ ಸಲ್ಲಿಸುವುದಕ್ಕಾಗಿ ಪ್ರತಿವರ್ಷ ಕರಕ್ ಸಮುದಾಯಕ್ಕೆ ಸೇರಿದ 60 ಲಕ್ಷ ಕೊರಿಯನ್ನರು ಆಯೋಧ್ಯೆಗೆ ಆಗಮಿಸುತ್ತಾರೆ.