ಮನೆ ಮುಂದೆ ರಂಗೋಲಿ ಹಾಕುವುದು ಹಳ್ಳಿ ಪದ್ಧತಿ ಅಂತ ಹಾಕದೆ ಇರಬೇಡಿ, ಅದರ ಹಿಂದಿನ ಕಾರಣ ಗೊತ್ತಾದ್ರೆ, ನಮ್ಮ ಸಂಸ್ಕೃತಿ ಬಗ್ಗೆ ಹೆಮ್ಮೆ ಪಟ್ಕೊಂಡು ಇಂದೇ ಹಾಕಲು ಶುರು ಮಾಡ್ತೀರಾ..

0
2239

ಸಾಮಾನ್ಯವಾಗಿ ಮನೆಯ ಮುಂದೆ, ಹೊಸ್ತಿಲ ಮೇಲೆ, ದೇವರ ಮುಂದೆ, ತುಳಸಿ ಕಟ್ಟೆಯ ಮುಂದೆ ರಂಗೋಲಿ ಇದ್ದರೆ ಅದು ಶುಭ ಸಂಕೇತ.. ರಂಗೋಲಿ ಇಲ್ಲದ ಮನೆ ಅಂದರೆ ಅದು ಅಶುಭ ಎಂಬ ನಂಬಿಕೆ. ಹಿಂದೆಲ್ಲಾ ರಂಗೋಲಿಯಿಲ್ಲದ ಮನೆಗೆ ಸಾಧು ಸಂತರು ಭೇಟಿ ನೀಡುತ್ತಿರಲಿಲ್ಲವಂತೆ. ಹಿಂದೂ ಸಂಸ್ಕೃತಿಯಲ್ಲಿ ರಂಗೋಲಿಗೆ ಅಷ್ಟೊಂದು ಪ್ರಾಮುಖ್ಯತೆ ಇದೆ.

 

ಗೃಹಿಣಿ ಮುಂಜಾನೆ ಸ್ನಾನ ಮಾಡಿ, ಎಲ್ಲಕ್ಕಿಂತ ಮೊದಲು ಮಾಡುವ ಕೆಲಸವೇ ಮನೆಯ ಮುಂದಿನ ಬಾಗಿಲು ಸಾರಿಸಿ ರಂಗೋಲಿ ಇಡುವುದು. ರಂಗೋಲಿ ಇಟ್ಟ ನಂತರ ತುಳಸಿ ಪೂಜೆ ಮಾಡಿಯೇ ಉಳಿದ ಕೆಲಸಗಳಿಗೆ ಕೈ ಹಾಕುವ ಸಂಪ್ರದಾಯ. ಶುಭ ಕಾರ್ಯಗಳಲ್ಲಿ, ಹಬ್ಬ ಹರಿದಿನಗಳಲ್ಲಿ, ಮನೆಯ ಮುಂದೆ ವಿಶೇಷವಾಗಿ ರಂಗೋಲಿ ಹಾಕುವುದೇ ಒಂದು ಸಂಭ್ರಮ. ರಂಗೋಲಿಯನ್ನು, ರಂಗೋಲಿ ಪುಡಿ, ಅಕ್ಕಿ ಹಿಟ್ಟು, ಹೂವು ಮುಂತಾದವುಗಳಿಂದ ಹಾಕಲಾಗುತ್ತದೆ.

ರಂಗೋಲಿಗೆ ಸುಮಾರು ಐದು ಸಾವಿರ ವರ್ಷಗಳ ಇತಿಹಾಸವಿದೆ. ಸಿಂಧೂ ನಾಗರಿಕತೆಯ ಸಂದರ್ಭದಲ್ಲಿಯೂ ಅಲ್ಲಿಯ ಜನರಿಗೆ ರಂಗೋಲಿ ಕಲೆ ಗೊತ್ತಿತ್ತು. ಅವರು ಸಹ ಮುಂಜಾನೆ ಮನೆಸ್ವಚ್ಛಗೊಳಿಸಿ ಮನೆಯ ಮುಂದೆ ರಂಗೋಲಿ ಹಾಕುವ ಸಂಸ್ಕೃತಿ ರೂಢಿಯಲ್ಲಿತ್ತು. ಆ ಕಾಲದಿಂದಲೇ ರಂಗೋಲಿ ಕಲೆ ಭಾರತೀಯ ಸಂಸ್ಕೃತಿಯೊಂದಿಗೆ ತಳುಕು ಹಾಕಿಕೊಂಡಿದೆ.

ರಂಗೋಲಿ ನಮ್ಮ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ, ಕನ್ಯಾಕುಮಾರಿಯಿಂದ ಹಿಡಿದು, ಹಿಮಾಲಯದವರೆಗಿನ ವಿವಿಧ ಹಿಂದೂ ಸಂಸ್ಕೃತಿಗಳಲ್ಲಿಯೂ ರಂಗೋಲಿ ಬಿಡಿಸಲಾಗುತ್ತದೆ. ಬಹಳಷ್ಟು ಬುಡಕಟ್ಟು ಜನಾಂಗಗಳಲ್ಲಿ ಅತ್ಯಂತ ಅಪರೂಪದ ರಂಗೋಲಿಗಳು ಇಂದಿಗೂ ಜೀವಂತವಾಗಿವೆ. ಕೆಲವು ಕಡೆ ವಿಶೇಷವಾಗಿ ಗೋಡೆಯ ಮೇಲೆ ರಂಗೋಲಿ ಬಿಡಿಸಲಾಗುತ್ತದೆ.

 

ಕೇರಳದಲ್ಲಿ ನಡೆಯುವ ಓಣಂ ಹಬ್ಬಕ್ಕೆ ವಿಶೇಷವಾಗಿ ಹೂವುಗಳಿಂದ ಮಾಡಿದ ಪೂಕಳಂ ನಿಂದ ಸ್ವಾಗತಿಸುತ್ತಾರೆ. ಓಣಂ ಎಂದರೆ ಅಂದು ವಾಮನನನ್ನು ಹೂವುಗಳ ರಂಗೋಲಿ ಮಾಡಿ ಸ್ವಾಗತ ಕೋರುವ ಹಬ್ಬವಾಗಿ ವಿಶೇಷತೆ ಪಡೆದಿದೆ.

ಹಬ್ಬ ಹರಿದಿನಗಳ ಸಂದರ್ಭದಲ್ಲಿ ವಿಶೇಷವಾಗಿ ದೇವಾನು ದೇವತೆಗಳನ್ನು ಸ್ವಾಗತಿಸುವ, ಮನೆಗೆ ಬರಮಾಡಿಕೊಳ್ಳುವ ಸಲುವಾಗಿ ರಂಗೋಲಿಯಿಂದ ಮನೆಯನ್ನು ಅಲಂಕರಿಸುತ್ತಾರೆ.

ಆದರೆ ಈಗಿನ ಮುಂದುವರಿದ ಯುಗದಲ್ಲಿ ಮಾಯವಾಗುತ್ತಿರುವ ರಂಗೋಲಿಯ ಬಗ್ಗೆ ಅರಿವು ಮೂಡಿಸಿ ಸಂಸ್ಕೃತಿಯನ್ನು ಉಳಿಸ ಬೇಕಾಗಿದೆ.. ಶೇರ್ ಮಾಡಿ ರಂಗೋಲಿಯ ಮಹತ್ವವನ್ನು ತಿಳಿಸಿ..