ತರಕಾರಿ ಮತ್ತು ಹಣ್ಣುಗಳನ್ನ ಚೆನ್ನಾಗಿ ತೊಳಿಯದೆ ತಿಂದ್ರೆ ಸಂತಾನೋತ್ಪತ್ತಿ ಸಮಸ್ಯೆ ಕಾಡೋದಂತೂ ನಿಜ…ಹೇಗೆ ಅಂತೀರಾ ಈ ಆರ್ಟಿಕಲ್ ಓದಿ ನಿಮಗೆ ಗೊತ್ತಾಗುತ್ತೆ..

0
608

Kannada News | Health tips in kannada

ಇತ್ತೀಚಿನ ಸಿಕ್ಕಾಪಟ್ಟೆ ಬ್ಯುಸಿ ಲೈಫ್ ನಲ್ಲಿ ಅಡಿಗೆ ಮಾಡೋದಕ್ಕೆ ಪುರುಸೊತ್ತು  ಇಲ್ಲದಿರಬೇಕಾದ್ರೆ ತರಕಾರಿ ಮತ್ತು ಹಣ್ಣುಗಳನ್ನ ಮೂರು ಮೂರು ಸಲ ತೊಳೀಲಿಕ್ಕೆ ಟೈಮ್ ಎಲ್ಲಿ ಅಂತ ಸರಿಯಾಗಿ ವಾಶ್ ಮಾಡ್ದೆ ಅದನ್ನ ಸೇವಿಸೋವ್ರು ಜಾಗ್ರತೆಯಾಗಿರಿ. ಯಾಕಂದ್ರೆ ಈ ರೀತಿ ಮಾಡೋದ್ರಿಂದ ಬಂಜೆತನ ನಿಮ್ಮನ್ನ ಕಾಡಬಹುದು ಹುಷಾರ್..

ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ ಸಂಶೋಧನೆಯ ಪ್ರಕಾರ ಸರಿಯಾಗಿ ತೊಳೆಯದ  ತರಕಾರಿ ಹಣ್ಣುಗಳನ್ನು ಸೇವಿಸಿದ್ದಲ್ಲಿ ಅದರಲ್ಲಿ  ಇರುವ ಪೆಸ್ಟಿಸೈಡ್ ಗಳು ದೇಹದಲ್ಲಿ ಹಾರ್ಮೋನ್ ಗಳ ಏರಿಳಿತವನ್ನು ಉಂಟುಮಾಡುತ್ತವೆ. ಇದರಿಂದ ಸಂತಾನೋತ್ಪತ್ತಿ ಕಡಿಮೆಯಾಗಿ ಮಕ್ಕಳಾಗುವ  ಸಾಧ್ಯತೆಗಳು ಕ್ಷೀಣಿಸುತ್ತವೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಸಂಶೋದನೆಯಲ್ಲಿ ಪೆಸ್ಟಿಸೈಡ್ ಯುಕ್ತ ತರಕಾರಿ ಹಣ್ಣುಗಳನ್ನು ಸೇರಿಸುವವರನ್ನು ಪೆಸ್ಟಿಸೈಡ್ ರಹಿತವಾದ ಆಹಾರ ಸೇವಿಸುವವರನ್ನು ವಿಂಗಡಿಸಲಾಯಿತು. ಇವರೆಲ್ಲರಿಗೂ  ಐವಿಫ್ ಟ್ರೀಟ್ ಮೆಂಟ್ ನೀಡಲಾದರೂ ಪೆಸ್ಟಿಸೈಡ್  ರಹಿತ ಆಹಾರ ಸೇವಿಸದವರಿಗಿಂತ  ಪೆಸ್ಟಿಸೈಡ್ ಯುಕ್ತ ಆಹಾರ ಸೇವಿಸುವವರಲ್ಲಿ ಐವಿಫ್ ಟ್ರೀಟ್ಮೆಂಟ್ ಗಣನೀಯವಾಗಿ ವಿಫಲವಾಯಿತೆಂದು ವರದಿಗಳಿಂದ ತಿಳಿದುಬಂದಿತು. ಹಾಗೆಯೇ ಪುರುಷರಲ್ಲಿ ಪೆಸ್ಟಿಸೈಡ್ ಯುಕ್ತ ಆಹಾರ ಸೇವಿಸುವವರಲ್ಲಿ ವೀರ್ಯಾಣುಗಳ ಸಂಖ್ಯೆ ಕುಂಠಿತಗೊಂಡಿರುವುದು ಬೆಳಕಿಗೆ ಬಂದಿತು. ಆದರಿಂದ ಪೆಸ್ಟಿಸೈಡ್ ಯುಕ್ತ ಆಹಾರ ಪದಾರ್ಥಗಳು ಡೈರೆಕ್ಟ್ ಆಗಿ ಹಾನಿಯನ್ನು ಉಂಟುಮಾಡದಿದ್ದರೂ ದೇಹಕ್ಕೆ ಅದರಲ್ಲೂ ಗರ್ಭಧಾರಣೆಗೆ ಹಾನಿಯನ್ನುಂಟುಮಾಡುತ್ತದೆ ಎಂಬುದು ಈ  ಸಂಶೋಧನೆಯಿಂದ ದೃಢಪಟ್ಟಿದೆ.

ಆದ್ದರಿಂದಈಗಲಾದರೂ  ತರಕಾರಿ ಹಣ್ಣುಗಳನ್ನು ತೊಳೆಯಲು ಸೋಮಾರಿತನ ತೋರದೆ ಉಪ್ಪು ನೀರಿನಲ್ಲಿ ನೆನೆಸಿ ನಂತರ ಶುದ್ಧ ಹರಿಯುವ ನೀರಿನಲ್ಲಿ ಎರಡು ಮೂರು ಬಾರಿ ತೊಳೆದಲ್ಲಿ ಅವುಗಳಿಗೆ ಸ್ಪ್ರೇ ಮಾಡಿರುವ ಪೆಸ್ಟಿಸೈಡ್ ಮತ್ತು ಇನ್ಸೆಕ್ಟಿಸೈಡ್ ಗಳಿಂದ ಮುಕ್ತಿ ಪಡೆಯಬಹುದು. ಇಲ್ಲವಾದಲ್ಲಿ  ಆರ್ಗಾನಿಕ್ ತರಕಾರಿ ಮತ್ತು ಹಣ್ಣುಗಳ ಮೊರೆ ಹೋಗಬಹುದು. ನಿಮ್ಮ ಮತ್ತು ನಿಮ್ಮ ಮನೆಯವರ ಆರೋಗ್ಯದ ಬಗ್ಗೆ ಇನ್ನಾದ್ರೂ ನಿಗಾ ವಹಿಸಿ  ಅಡುಗೆಯ ಪದಾರ್ಥಗಳ ಬಗ್ಗೆ ಗಮನಹರಿಸಿ..

Dr Sharanya Anantharamu
MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840

Also Read: ಹಲ್ಲುಗಳ ಹಾಳಾಗೋದರಿಂದ ಹೇಗೆ ಕಾಪಾಡಿಕೊಳ್ಳಬೇಕು ಎಂಬ ಆತಂಕ ಇದೆಯಾ…ಟೆನ್ಶನ್ ಬಿಡಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ…