ರಿಂಗ್ ಫಿಂಗರ್‍ಗೆ ನಿಶ್ಚಿತಾರ್ಥ – ಮದುವೆಯ ಉಂಗುರ ಹಾಕಬೇಕು ಏಕೆ?

0
1993

ಸಾಮಾನ್ಯವಾಗಿ ನಿಶ್ಚಿತಾರ್ಥ ಮದುವೆಗಳಲ್ಲಿಹುಡುಗ ಹಾಗೂ ಹುಡುಗಿಯ ಕಿರುಬೆರಳಿನ ಪಕ್ಕದ ನಾಲ್ಕನೇ ಬೆರಳಿಗೆ (ರಿಂಗ್ ಫಿಂಗರ್) ಉಂಗುರ ತೊಡಿಸುವುದು ವಾಡಿಕೆ, ಹುಡುಗನಿಗೆ ಬಲಗೈನ ರಿಂಗ್ ಫಿಂಗರ್‍ಗೂ ಹುಡುಗಿಯ ಎಡಗೈನ ರಿಂಗ್ ಫಿಂಗರ್‍ಗೂ ಉಂಗುರ ತೊಡಿಸುತ್ತಾರೆ. ಈ ಬೆರಳಿಗೆ ಹೊಂದಿಕೊಂಡಿರುವ ರಕ್ತನಾಳ ನೇರವಾಗಿ ಹೃದಯಕ್ಕೆ ಸಂಬಂಧ ಕಲ್ಪಿಸುತ್ತದೆಯೆಂದೂ ಇದರಿಂದ ಪ್ರೀತಿಯ ಭಾವನೆಗಳು ಅರಳುತ್ತದೆಂದು ಕೆಲವರ ಕಲ್ಪನೆ ಅದರೆ ಚೀನಿಯರಲ್ಲಿ ಏಕೆ ಈ ಬೆರಳಿಗೆ ಉಂಗುರ ತೊಡಿಸಬೇಕು ಎಂದು ಸುಂದರ ಸ್ವಾರಸ್ಯಕರ ವಿವರಣೆಯಿದೆ ಇದನ್ನು ನೀವು ಮಾಡಿ ನೋಡಬಹುದು ನಂತರ ನಿಮಗೂ ಈ ವಿವರಣೆ ಸತ್ಯವೆನಿಸುವುದು ಇದಕ್ಕಿಂತ ಮುಂಚೆ ನಮ್ಮ ಈ ಕೈಬೆರಳುಗಳ ಬಗ್ಗೆ ತಿಳುದುಕೊಳ್ಳಬೇಕು ನಿಮಗೆ ಗೊತ್ತೆ? ನಮ್ಮ ಕೈನ ಒಂದೊಂದು ಬೆರಳು ನಮ್ಮ ಸುತ್ತಲಿನ ನಮ್ಮ ಜೀವನದ ಪ್ರತಿಯೊಂದು ಹತ್ತಿರದ ಸಂಬಂಧಗಳನ್ನು ಸೂಚಿಸುತ್ತದೆ ಮೊದಲನೆಯದಾಗಿ ನಮ್ಮ ಕೈನ ಹೆಬ್ಬೆರಳು ನಮ್ಮ ಹೆತ್ತವರನ್ನು ಸೂಚಿಸುತ್ತದೆ ನಮ್ಮ ತೋರ್ ಬೆರಳು ಅಕ್ಕ-ತಂಗಿ, ಅಣ್ಣ-ತಮ್ಮಂದಿರನ್ನು ಸೂಚಿಸಿದರೆ ಮಧ್ಯದ ಬೆರಳು ನಮ್ಮನ್ನು ಸೂಚಿಸುತ್ತದೆ ಕಿರುಬೆರಳು ಮಕ್ಕಳನ್ನು ಸೂಚಿಸುತ್ತದೆ ಕೊನೆಯದಾಗಿ ನಮ್ಮ ಉಂಗುರ ಬೆರಳು ಅಥವಾ ನಾಲ್ಕನೇ ಬೆರಳು ನಮ್ಮ ಬಾಳಸಂಗಾತಿಯನ್ನು ಸೂಚಿಸುತ್ತದೆ.

hand-engagement-ring_431cab447162d922

ಈ ಕೆಳಗಿನ ಸಣ್ಣ ಕುತೂಹಲಭರಿತ ಪರೀಕ್ಷೆಯನ್ನು ನೀವೂ ಮಾಡಿ ನೋಡಿ, ನಿಮ್ಮ ಕೈಯನ್ನು ಚಿತ್ರದಲ್ಲಿರುವಂತೆ ಜೋಡಿಸಿ ಹಿಡಿಯಿರಿ ಮಧ್ಯದ ಬೆರಳು ಹಿಂದಕ್ಕೆ ಮಡಿಚಿರಲಿ ಉಳಿದ ಬೆರಳುಗಳನ್ನು ಚಿತ್ರದಲ್ಲಿರುವಂತೆ ಬೆರಳ ತುದಿಗಳು ಒಂದಕ್ಕೊಂದು ಅಂಟಿಕ್ಕೊಂಡಂತೆ ಹಿಡಿಯಿರಿ.

ಈಗ ನಿಧಾನವಾಗಿ ಹೆಬ್ಬೆರಳನ್ನು ಒಂದಕ್ಕೊಂದು ಬೇರ್ಪಡಿಸಿರಿ ಅವೆರಡು ಬೇರೆ ಬೇರೆಯಾಗುತ್ತದೆ. ಈ ಹೆಬ್ಬೆರಳು ನಮ್ಮ ಹೆತ್ತವರನ್ನು ಸೂಚಿಸುತ್ತದೆಯಲ್ಲವೇ? ನಮ್ಮನ್ನು ಬೆಳೆಸಿ ಓದಿಸಿ ನಮ್ಮ ಕಾಲ ಮೇಲೆ ನಾವು ನಿಂತ ಮೇಲೆ ಇಳಿವಯಸ್ಸಿನಲ್ಲಿ ಮಕ್ಕಳು ಸುಖವಗಿರುವುದನ್ನು ಕಂಡು ಇಂದಲ್ಲ ನಾಳೆ ನಮ್ಮಿಂದ ದೂರವಾಗುತ್ತಾರೆ. ಕೊನೆಯವರೆಗೂ ಅವರು ನಮ್ಮ ಜೊತೆ ಇರುವುದಿಲ್ಲ ಎಂದು ಇದು ಸೂಚಿಸುತ್ತದೆ.

ಈಗ ಹೆಬ್ಬೆರಳನ್ನು ಮತ್ತೆ ಜೋಡಿಸಿರಿ, ತೋರು ಬೆರಳನ್ನು ಬೇರ್ಪಡಿಸಿರಿ ಅವು ಕೂಡ ಬೇರ್ಪಡುತ್ತವೆ ಈ ತೋರ್ ಬೆರಳುಗಳು ನಮ್ಮ ಅಕ್ಕ-ಅಣ್ಣ, ತಮ್ಮ ತಂಗಿಯರನ್ನು ಸೂಚಿಸುತ್ತದೆ. ಬೆಳೆದು ದೊಡ್ಡವರಾಗುತ್ತಾ ಮದುವೆ, ಮಕ್ಕಳು ಸಂಸಾರ ಅಂತ ಅವರವರ ಹಾದಿ ಅವರು ನೋಡಿಕೊಂಡು ಬೇರೆಬೇರೆಯಾಗುತ್ತೇವೆ, ಒಡಹುಟ್ಟಿದವರ ಜೊತೆಗೂ ಕೊನೆಯ ತನಕ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಈ ಬೆರೆಳಿನ ಬೇರ್ಪಡಿಕೆ ಸೂಚಿಸುತ್ತದೆ.

ಈಗ ತೋರ್ ಬೆರಳನ್ನು ಮತ್ತೆ ಸೇರಿಸಿರಿ ಕಿರು ಬೆರಳುಗಳನ್ನು ಬೇರ್ಪಡಿಸಿರಿ. ಇವು ಕೂಡ ಒಂದಕ್ಕೊಂದು ಬೇರ್ಪಡುತ್ತದೆ. ಕಿರು ಬೆರಳುಗಳು ನಮ್ಮ ಮಕ್ಕಳನ್ನು ಸೂಚಿಸುತ್ತದೆ ಮುಂದೆ ಓದಿ ದೊಡ್ಡವರಾದ ಮೇಲೆ ಅವರವರ ದಾರಿ ಅವರು ನೋಡಿಕೊಂಡು ಬೇರೆ ಇರುತ್ತಾರೆ ಇತ್ತೀಚೆಗೆ ವಯಸ್ಸಾದ ತಂದೆ ತಾಯಿ ಮಕ್ಕಳ ಜೊತೆ ಕೊನೆಯವರೆಗೂ ಇರುವುದೇ ಬಹಳ ಅಪರೂಪ!!! ಮಕ್ಕಳ ಜೊತೆಗೂ ನಮಗೆ ಕೊನೆಯವರೆಗೂ ಇರಲು ಆಗುವುದಿಲ್ಲ ಎಂದು ಈ ಬೆರಳ ಬೇರ್ಪಡಿಕೆ ಸೂಚಿಸುತ್ತದೆ.

ಈಗ ಕಿರು ಬೆರಳನ್ನು ಮತ್ತೆ ಸೇರಿಸಿ ಹಾಗೂ ಉಂಗುರ ಬೆರಳನ್ನು ಬೇರ್ಪಡಿಸಲು ಪ್ರಯತ್ನಿಸಿ ನಿಮಗೊಂದು ಆಶ್ಚರ್ಯ ಕಾದಿರುತ್ತದೆ!!! ಏಕೆಂದರೆ ಈ ಉಂಗುರ ಬೆರಳನ್ನು ಬೇರ್ಪಡಿಸಲು ನಿಮ್ಮಿಂದ ಸಾಧ್ಯವಾಗುವುದಿಲ್ಲ!!! ಈ ಉಂಗುರ ಬೆರಳು ನಿಮ್ಮ ಬಾಳ ಸಂಗಾತಿಯನ್ನು ಸೂಚಿಸುತ್ತದೆ ಅಲ್ಲವೇ? ಅಂದರೆ ಗಂಡ ಹೆಂಡತಿ ಕಷ್ಟವೋ ಸುಖವೋ ಕೊನೆಯವರೆಗೂ ಜೊತೆಯಾಗಿರುತ್ತಾರೆ ಎಂಬುದೇ ಇದರ ಸಾರ !ನೀ ನನಗಿದ್ದರೆ ನಾ ನಿನಗೆ ಎಂದು ಕೊನೆಯವರೆಗೂ ಇಳಿವಯಸ್ಸಿನಲ್ಲಿ ಒಬ್ಬರಿಗೊಬ್ಬರು ಆಸರೆಯಾಗಿ ಇರುವುದು ಗಂಡ ಹೆಂಡತಿ ಮಾತ್ರ. ಅದಕ್ಕೆ ಹೇಳುವುದು ಜೀವನ ಸಂಗತಿಯೆಂದು. ಹಾಗಾಗಿಯೇ ನಿಶ್ಚಿತಾರ್ಥ – ಮದುವೆಯಲ್ಲಿ ಉಂಗುರವನ್ನು ನಾಲ್ಕನೇ ಬೆರಳಿಗೆ ಹಾಕುವುದು. ಎಷ್ಟು ಚೆನ್ನಾಗಿದೆ ಅಲ್ಲವೇ ಚೀನಿಯರ ಪ್ರೀತಿಯ ಸಿದ್ಧಾಂತ?

ಪ್ರಕಾಶ್.ಕೆ.ನಾಡಿಗ್
ಶಿವಮೊಗ್ಗ