ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21ರಂದೇ ಯಾಕೆ ಆಚರಣೆ ಮಾಡುತ್ತಾರೆ? ವಿಶ್ವ ಯೋಗ ದಿನದ ಬಗ್ಗೆ ತಿಳಿಯಲೇ ಬೇಕಾದ ವಿಷಯಗಳು.!

0
492

ಯೋಗದಿಂದಲೇ ಆರೋಗ್ಯಕೆ ಯೋಗ, ಎನ್ನುವಂತೆ ಧಿರ್ಘಕಾಲ ಬಾಳಲು ಪ್ರತಿಯೊಬ್ಬರೂ ಯೋಗವನ್ನು ಮಾಡಬೇಕು ಎಂದು ಹಲವು ಅಧ್ಯಯನಗಳು ತಿಳಿಸಿವೆ. ಅದರಂತೆ ಯೋಗದಿಂದ ಮಾನವನಿಗೆ ಬರುವ ಹೃದಯ ಸಂಬಂಧಿ ಕಾಯಿಲೆಗಳಿಂದ ಹಿಡಿದು, ಕ್ಯಾನ್ಸರ್ ಅಂತ ಕಾಯಿಲೆಯನ್ನು ದೂರಮಾಡುವುದಲ್ಲದೆ, ಮಾನಸಿಕ ನೆಮ್ಮದಿ, ಜೀವನದಲ್ಲಿ ಉಲ್ಲಾಸದಿಂದ ಇರಿಸಲು ಯೋಗ ಮಹತ್ವದಾಗಿದೆ. ಅಷ್ಟೇ ಅಲ್ಲದೆ ಯೋಗದಲ್ಲಿರುವ ಶಕ್ತಿಯನ್ನು ನೋಡಿದರೆ ಪ್ರತಿಯೊಬ್ಬ ಮಾನವನಿಗೆ ಇದರ ಅವಶ್ಯಕತೆ ಅಪಾಯವಿದೆ.

Also read: ಈ ಎಂಟು ಯೋಗ ಮುದ್ರೆಗಳನ್ನ ಅಭ್ಯಾಸ ಮಾಡ್ತಾ ಬನ್ನಿ, ನಿಮ್ಮ ದೇಹದಲ್ಲಿ ಶಕ್ತಿ ಮತ್ತೆ ಆರೋಗ್ಯ ಎರಡೂ ವೃದ್ಧಿಯಾಗಿ ಸಂತೋಷದಿಂದ ಇರುತ್ತೀರಿ!!

ಯೋಗದ ಮಹತ್ವವೇನು?

ಯೋಗ ವ್ಯಾಯಾಮ ಮಾತ್ರವಲ್ಲದೆ ನಿಮ್ಮೊಂದಿಗೆ, ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ಕಂಡುಹಿಡಿಯಲು ನೆರವಾಗುತ್ತದೆ. ನಮ್ಮ ಜೀವನಶೈಲಿ ಹಾಗೂ ಪ್ರಜ್ಞೆ ರಚಿಸುವ ಮೂಲಕ ಹಮಾಮಾನ ಬದಲಾವಣೆ ನಿಭಾಯಿಸಲು ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಯೋಗವು ಮನಸ್ಸು ಮತ್ತು ದೇಹ; ಚಿಂತನೆ ಮತ್ತು ಕ್ರಿಯೆ; ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ. ಹಾಗೆಯೇ ಪ್ರಕೃತಿ ಮತ್ತು ಮನುಷ್ಯ ನಡುವೆ ಸಾಮರಸ್ಯವನ್ನುಂಟು ಮಾಡುತ್ತದೆ. ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸುವ ವಿಶೇಷ ಕಲೆಯಾಗಿದೆ.

Also read: ಮುದ್ರಾ ಯೋಗ ಮಾಡಿದರೆ ನೀವು ರೋಗ ಮುಕ್ತ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ..!

ಯೋಗ ಬೆಳೆದು ಬಂದ ಇತಿಹಾಸ?

ಕ್ರಿ.ಪೂ 3ನೇ ಶತಮಾನದಲ್ಲಿದ್ದ ಪತಂಜಲಿ ಋಷಿಯ ಚಿಂತನೆಯ ಫಲವಾದ ಯೋಗ ಬರೀ ಶಾಸ್ತ್ರವಾಗದೆ, ಆಚರಣೆ, ಅಭ್ಯಾಸವಾಗಿ ಇಲ್ಲಿ ತನಕ ಬೆಳೆದು ಬಂದಿದೆ. ಪ್ರತಿ ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಉನ್ನತಿಗೆ ಯೋಗ ಸಹಕಾರಿಯಾಗಿದೆ. ಹಾಗೆಯೇ ಯೋಗ ಮೂಲವನ್ನು ಹುಡುಕಿಕೊಂಡು ಸಾಗಿದಾಗ ಭಗವಾನ್ ಶಿವನಲ್ಲಿ ಬಂದು ಸೇರುತ್ತದೆ. ಶಿವ ದೇವರು ‘ಆದಿ ಯೋಗಿ’ ಅಥವಾ ಯೋಗದ ಮೊದಲ ಗುರು ಎಂಬ ನಂಬಿಕೆಯಾಗಿದ್ದು, ಪ್ರಪಂಚದ ಎಲ್ಲ ಯೋಗಿಗಳಿಗೆ ಶಿಕ್ಷಕನೆಂದು ಹೇಳಲಾಗುತ್ತದೆ. ಆದಾಗ್ಯೂ ಇಂದು ದಿನನಿತ್ಯ ಯೋಗ ಅಭ್ಯಾಸಿಸುವ ಅವಶ್ಯಕತೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಪ್ರಾರಂಭವಾಗಿದೆ.

Also read: ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಯೋಗಕ್ಕೆ ಜೂನ್ 21 ದಿನವೇ ಏಕೆ?

ಜೂನ್ 21 ಉತ್ತರ ಗೋಳಾರ್ಧದ ವರ್ಷದ ಅತಿ ದೀರ್ಘವಾದ ದಿನವಾಗಿದೆ. ವರ್ಷದಲ್ಲಿ ಉತ್ತರ ಗೋಳಾರ್ಧದ ಅತಿ ಉದ್ದದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ. ಇದನ್ನು ಬೇಸಿಗೆ ಅಯನ ಸಂಕ್ರಾಂತಿ ದಿನವೆಂದು (ವರ್ಷದಲ್ಲಿನ ಅತ್ಯಂತ ಹೆಚ್ಚು ಹಗಲುಳ್ಳ ದಿನ) ಕರೆಯಲಾಗುತ್ತದೆ. ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ. ಇದು ದಕ್ಷಿಣಯಾನಕ್ಕೆ ಪರಿವರ್ತನೆ ಎಂದು ಗುರುತಿಸಲಾಗುತ್ತದೆ. ಅದರಂತೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನು 2014 ಡಿಸೆಂಬರ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಖಾಯಂ ಪ್ರತನಿಧಿಯಾಗಿರುವ ಅಶೋಕ್ ಕುಮಾರ್ ಮಂಡಿಸಿದ್ದರು.

Also read: ಪ್ರತಿನಿತ್ಯ ನಾವೇಕೆ “ಯೋಗಾಭ್ಯಾಸ” ಮಾಡಬೇಕು? ಅನ್ನುವವರಿಗೆ ಇಲ್ಲಿದೆ ನೋಡಿ ಸರಿಯಾದ ಉತ್ತರ…/a>

ಯೋಗ ಆಚರಣೆಗೆ 177 ರಾಷ್ಟ್ರಗಳ ಅನುಮೋದನೆ

ವಿಶ್ವಸಂಸ್ಥೆಗೆ ಇದು ಐತಿಹಾಸಿಕ ಕ್ಷಣವಾಗಿದ್ದು, ಅದರ ಸದಸ್ಯ ರಾಷ್ಟ್ರಗಳು ಅಭೂತಪೂರ್ವ ಬೆಂಬಲ ಸೂಚಿಸಿದ್ದರು. ವಿಶ್ವ ಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಅನುಮೋದನೆಯನ್ನು ನೀಡಿದ್ದವು. ನಂತರ 2015 ಜೂನ್ 21ರಂದು ಚೊಚ್ಚಲ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಆಯುಶ್ ಸಚಿವಾಲಯದ ನೇತೃತ್ವದಲ್ಲಿ ಆ ದಿನವನ್ನು ರಾಜಪಥದಲ್ಲಿ ಭಾರಿ ವಿಜ್ರಂಭಣೆಯಿಂದ ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ 84 ರಾಷ್ಟ್ರಗಳ ಗಣ್ಯರು ಭಾಗವಹಿಸಿದ ಕಾರ್ಯಕ್ರಮದಲ್ಲಿ 21 ಯೋಗ ಆಸನಗಳನ್ನು ಅಭ್ಯಾಸಿಸಲಾಯಿತು.