ಆಷಾಡದಲ್ಲಿ ಹೊಸ ಜೋಡಿ ಹಕ್ಕಿಗಳು ಯಾಕೆ ಬೇರೆ ಬೇರೆ ಇರುತ್ತಾರೆ ಗೊತ್ತೇ !!!!

0
11163

ಆಷಾಡ ಮಾಸ ಬಂದರೆ ಸಾಕು ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ತಮ್ಮ ತವರು ಮನೆಗೆ ಹೋಗುತ್ತಾರೆ.  ಈ ಮಾಸದಲ್ಲಿ ನವದಂಪತಿಗಳು ಸೇರಬಾರದೇಂದು, ಅತ್ತೆ ಸೊಸೆಯ ಮುಖ ನೋಡಬಾರದೆಂದು, ಹೊಸ ಆಳಿಯ ಆತ್ತೆಯ ಮುಖ ನೋಡಬಾರದೆಂದು ಹೀಗೆ ಅನೇಕ ರೀತಿಯಲ್ಲಿ ನಿಬಂಧನೆಗಳನ್ನು ವಿಧಿಸುತ್ತಾರೆ. ಆದರೆ ಅದರ ಹಿಂದೆ ತುಂಬಾ ಲಾಜಿಕ್ ಇದೆ. ನಮ್ಮ ಆಚರಣೆಗಳನ್ನು ವೈಜ್ಞಾನಿಕವಾಗಿ ನೋಡಿದರೆ ಪ್ರಪಂಚದಲ್ಲಿ ಭಾರತ ಗ್ರೇಟ್ ಎನ್ನುವಿರಿ. ಮೂಢನಂಬಿಕೆ ಎಂದು ತಿರಸ್ಕಾರ ಮಾಡುವ ಬದಲು ಅದರ ಹಿಂದಿರುವ ವೈಜ್ಞಾನಿಕ ಅಂಶಗಳನ್ನು ಅರಿತು ಕೊಂಡರೆ ಒಳ್ಳೆಯದು.

ಆಷಾಡ ಮಾಸದಲ್ಲಿ ಹೊಸದಾಗಿ ಮದುವೆಯಾದ ಜೋಡಿಯನ್ನು ಬೇರೆ ಮಾಡಲು 4 ಕಾರಣಗಳು ಹೀಗಿವೆ:

    1. ನಮ್ಮ ದೇಶ ವ್ಯವಸಾಯ ಆಧರಿತ ದೇಶ.‌ ಆಷಾಡ ಮಾಸದಲ್ಲಿ ಮೆಳೆ ಬರಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ವ್ಯವಸಾಯಕ್ಕೆ ಸಂಬಂಧಿಸಿದ ಕೆಲಸಗಳಿರುತ್ತವೆ. ಉಳುಮೆ ಮಾಡುವುದು, ಬಿತ್ತನೆ ಮಾಡುವುದು, ಶಶಿ ನಾಟಿಮಾಡುವುದು ಇತ್ಜೊತ ಹೀಗೆ ಈ ಸೀಜನ್’ನಲ್ಲಿ ಎಲ್ಲರೂ ವ್ಯವಸಾಯ ಕಾರ್ಯದಲ್ಲಿ ಬ್ಯುಸಿಯಾಗಿರುತ್ತಾರೆ. ಈ ಸಂದರ್ಭದಲ್ಲಿ ಹೊಸದಾಗಿ ಮದುವೆಯಾದವರು ಒಂದು ಕಡೆಯಿದ್ದರೆ, ಪುರುಷರು ವ್ಯವಸಾಯ ಮಾಡಲು ಆಸಕ್ತಿ ತೋರುವುದಿಲ್ಲ. ಇದರ ಪರಿಣಾಮ ಬೆಳೆಯ ಮೇಲೆ ಬೀಳುತ್ತದೆ. ಇದರಿಂದ ಅತ್ತೆ ಮತ್ತು ಸೊಸೆಯ ನಡುವೆ ವೈಮನಸ್ಸು ಮೂಡಲು ಕಾರಣವಾಗುತ್ತದೆ.

    1. ಇದು ಮಳೆಗಾಲದ ಸೀಜನ್. ಅಂದರೆ ಕಾಯಿಲೆಗಳು ಬೇಗ ಹರಡುವ ಕಾಲ. ಈ ಸಮಯದಲ್ಲಿ ಹೊಸ ವದುವರರು ಒಂದು ಕಡೆಯಿದ್ದರೆ ಹೆಂಡತಿ ಗರ್ಭಧರಿಸುವ ಅವಕಾಶವಿರುತ್ತದೆ. ಈ ಸೀಜನ್’ನಲ್ಲಿ ಆರೋಗ್ಯವಾಗಿರುವ ವ್ಯಕ್ತಿಯೇ ಕಾಯಿಲೆಗಳಿಗೆ ಗುರಿಯಾಗುವಂತಹ ಸಂದರ್ಭದಲ್ಲಿ ಆಗತಾನೇ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಮೇಲೆ ಈ ಕಾಯಿಲೆಗಳ ಪ್ರಭಾವ ಮತ್ತಷ್ಟು ಹೆಚ್ಚಿರುತ್ತದೆ. ಹಾಗಾಗಿ ಹೊಸದಾಗಿ ಮದುವೆಯಾದವರನ್ನು ದೂರವಿಡುತ್ತಾರೆ.
    2. ಈ ಸಮಯದಲ್ಲಿ ಗರ್ಭಧರಿಸಿರೆ ಡೆಲಿವರಿ ಸಮಯ ಬೇಸಿಗೆಕಾಲದಲ್ಲಾಗುತ್ತದೆ. ಆ ಟೈಮ್’ನಲ್ಲಿ ವಿಪರೀತ ಬಿಸಿಲು ಇರುತ್ತದೆ. ಆಗತಾನೇ ಹುಟ್ಟಿದ ಮಕ್ಕಳು ತಟ್ಟುಕೊಳ್ಳಲಾರರೆಂದು ಮುನ್ನೆಚ್ಚರಿಕೆಯಾಗಿ ನವದಂಪತಿಗಳನ್ನು ಈ ಮಾಸದಲ್ಲಿ ದೂರ ಮಾಡುತ್ತಾರೆ.

  1. ಅತಿ ಸರ್ವತ್ರಾ ವರ್ಜಯೇತ್ ಎನ್ನುತ್ತಾರೆ. ಹಾಗೆ ನೋಡಿದರೆ ಹೊಸದಾಗಿ ಮದುವೆಯಾದವರ ಮಧ್ಯೆ ಸ್ವಲ್ಪ ಗ್ಯಾಪ್ ಕೊಡಬೇಕು. ಇಲ್ಲದಿದ್ದರೆ ಸ್ವಲ್ಪ ದಿನಗಳಲ್ಲೇ ಒಬ್ಬರಮೇಲೆ ಒಬ್ಬರಿಗೆ ಪ್ರೀತಿ ಕಡಿಮೆಯಾಗುತ್ತದೆ. ರತಿಕ್ರೀಡೆಯ ಮೇಲೆ ಆಸಕ್ತಿ ಕುಗುತ್ತದೆ. ಇದರಿಂದಾಗಿ ವೈವಾಹಿಕ ಜೀವನ ನಿಸ್ಸಾರವಾಗುತ್ತದೆ. ಹಾಗೆ ಆಗಬಾರದೆಂದು ಈ ಮಾಸದಲ್ಲಿ ನವ ವಧುವರರನ್ನು ದೂರ ಮಾಡುತ್ತಾರೆ.