ಮದುವೆಯ ಆಮಂತ್ರಣ ಪತ್ರಿಕೆ ಮೇಲೆ ಗಣಪತಿ ಚಿತ್ರವನ್ನು ಹಾಕುವುದರ ಹಿಂದೆ ಇರುವ ಕಾರಣ ನಿಜವಾಗಲೂ ರೋಚಕವಾದದ್ದು..

0
2512

ಸಾಮಾನ್ಯವಾಗಿ ಮದುವೆ ಆಮಂತ್ರಣ ಪತ್ರಿಕೆಯ ಮೇಲೆ ಗಣಪತಿಯ ಚಿತ್ರವಿರುವುದನ್ನು ನೋಡಿರುತ್ತೇವೆ.. ಆದರೆ ಯಾವತ್ತೂ ಆ ಚಿತ್ರವನ್ನೇ ಏಕೆ ಹಾಕಿರುತ್ತಾರೆ ಎಂದು ಕಾರಣ ಹುಡುಕುವ ಪ್ರಯತ್ನ ಮಾಡಿರುವುದಿಲ್ಲ.. ಏಕೆಂದರೆ ದೇವರ ಫೋಟೋ ಎಂದು ಸುಮ್ಮನಿರುತ್ತೇವೆ.. ಆದರೆ ಗಣಪತಿಯ ಪ್ರತಿಯೊಂದು ಭಾಗವೂ ಒಂದೊಂದು ಅಂಶವನ್ನು ಸೂಚಿಸುತ್ತದೆ..

ಮೊದಲನೆದಾಗಿ ಗಣಪತಿಗೆ ಮೊದಲ ಪೂಜೆ ಸಲ್ಲಿಸುವುದು ಎಲ್ಲರಿಗೂ ತಿಳಿದಿರುವ ವಿಷಯ.. ನಮ್ಮ ಸಂಪ್ರದಾಯದಲ್ಲಿ ಗಜಾನನನಿಗೆ ಹೆಚ್ಚಿನ ಮಹತ್ವವನ್ನು ಕೊಡುತ್ತೇವೆ.. ಸಕಲ ಗಣಗಳಿಗೆ ಅದಿಪತಿಯಾದ ಗಣಪತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುತ್ತೇವೆ.. ಯಾವುದೇ ಕೆಲಸವಾಗಲಿ ಯಾವುದೇ ತೊಂದರೆ ಬರದೆ ಇರುವ ಹಾಗೆ ನೋಡಿಕೊಳ್ಳುವ ದೇವರು ಎಂದರೆ ತಪ್ಪಾಗಲಾರದು.. ಇನ್ನು ಲಗ್ನ ಪತ್ರಿಕೆಯ ಮೇಲೆ ಏಕೆ ಗಣಪತಿಯ ಫೋಟೋವನ್ನು ಹಾಕಿರುತ್ತಾರೆ ಎಂದರೆ.. ಮನುಷ್ಯರಿಗೆ ಎಲ್ಲಾ ರೀತಿಯ ಸಕಲ ಸೌಭಾಗ್ಯಗಳನ್ನು ಕೊಡುವ ದೇವರು ಎಂದರೆ ಅದು ಗಣಪತಿ.. ವಿದ್ಯಾ ದಾನ ವನ್ನು ಮಾಡುವ ಗಣಪತಿಗೆ ಸರಸ್ವತಿಯ ಜೊತೆಗೆ ಕಲೆಗಳ ಅದಿಪತಿ ಎಂದು ಪರಿಗಣಿಸಲಾಗುತ್ತದೆ..

ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡುವ ದಂಪತಿಗಳಿಗೆ ಮೊದಲು ಸಕಲ ವಿಘ್ನ ನಿವಾರಕನ ಆಶಿರ್ವಾದ ತಪ್ಪದೇ ಬೇಕು.. ಇನ್ನು ಮೊದಲೇ ಹೇಳಿದಂತೆ ವಿನಾಯಕನ ಪ್ರತಿಯೊಂದು ಭಾಗಗಳು ಒಂದೊಂದನ್ನು ಸೂಚಿಸುತ್ತವೆ.. ವಿನಾಯಕನ ಕಣ್ಣುಗಳು ಎಲ್ಲಾ ವಿಷಯದಲ್ಲೂ ಸೂಕ್ಷ್ಮ ದೃಷ್ಟಿಯನ್ನು ವಿಶ್ಲೇಷಣಾತ್ಮಕ ಶಕ್ತಿಯನ್ನು ಹೊಂದಿರಬೇಕೆಂದು ಸೂಚಿಸಿತ್ತದೆ.. ಪ್ರತಿಯೊಬ್ಬರ ಜೊತೆಯೂ ನ್ಯಾಯ ಸಮ್ಮತವಾಗಿ ನಡೆದುಕೊಳ್ಳಬೇಕೆಂದು ಎಲ್ಲರನ್ನು ಸಮನಾಗಿ ಕಾಣಬೇಕೆಂದು ಕಣ್ಣುಗಳು ತಿಳಿಸುತ್ತವೆ..
ಇನ್ನು ದಂತಗಳ ವಿಷಯಕ್ಕೆ ಬಂದರೆ ಗಣಪತಿಯ ಒಂದು ದಂತ ಸಣ್ಣದಾಗಿಯೂ ಇನ್ನೊಂದು ದಂತ ದೊಡ್ಡದಾಗಿಯೂ ಇರುತ್ತದೆ..

ದೊಡ್ಡ ದಂತ ನಂಬಿಕೆಯ ಪ್ರತೀಕವಾಗಿದ್ದರೆ ಸಣ್ಣ ದಂತ ಬುದ್ಧಿವಂತಿಕೆಯನ್ನು ಸೂಚಿಸುತ್ತದೆ.. ಜೀವನದಲ್ಲಿ ನಡೆಯುವ ಅತಿ ಮುಖ್ಯವಾದ ಸಮಾರಂಭ ಎಂದರೆ ಅದು ಮದುವೆ.. ಈ ಮದುವೆ ನಂಬಿಕೆಗಳ ಮೇಲೆ ನಿಂತಿರುತ್ತದೆ.. ಈ ಕಾರ್ಯಕ್ಕೆ ಯಾವುದೇ ರೀತಿಯ ಅಡೆತಡೆಗಳು ಆಗಬಾರದೆಂದು ವಿಘ್ನನಿವಾರಕನ ಚಿತ್ರವನ್ನು ಹಾಕುವುದು ಅಭ್ಯಾಸವಾಗಿದೆ..