ಚಳಿಗಾಲದಲ್ಲಿ ಹೆಚ್ಚಾಗಿ ಮಾಂಸ ಹಾಗೂ ಹಾಲಿನ ಪದಾರ್ಥಗಳನ್ನು ಸೇವಿಸುತ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ದೊಡ್ಡ ಗಂಡಾಂತರ ಕಾದಿದೆ ಎಚ್ಚರ…

0
1176

Kannada News | Health tips in kannada

ಚಳಿಗಾಲದಲ್ಲಿ ಮಾಂಸ, ಹಾಲಿನ ಪದಾರ್ಥಗಳ ಸೇವನೆ ಬೇಡ…

ಅಯ್ಯೋ… ಚಳಿ..ಚಳಿ.. ಚಳಿಗಾಲ ಶುರುವಾಗಿದೆ. ಇನ್ನು ಮೇಲಿಂದ ಬೆಚ್ಚಗಿರಬೇಕು. ಅಷ್ಟೇ ಅಲ್ಲ ಆರೋಗ್ಯದ ಬಗ್ಗೆ ಕಾಳಜಿಯೂ ಬೇಕು. ಒಣ ಹಣ್ಣುಗಳು, ಬೀಜಗಳು, ತುಳಸಿ, ಶುಂಠಿ, ಸೊಪ್ಪು ತರಕಾರಿಗಳು ನಮ್ಮ ದಿನನಿತ್ಯದ ಆಹಾರದಲ್ಲಿ ಇದ್ದರೆ ಉತ್ತಮ. ಚಳಿಗಾಲದಲ್ಲಿ ಮಾಂಸ ಮತ್ತು ಹಾಲಿನ ಉತ್ಪನ್ನಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಿದರೆ ಒಳ್ಳೆಯದು.

ಚಳಿಗಾಲದಲ್ಲಿ ಯಾವೆಲ್ಲಾ ಆಹಾರ ಪದಾರ್ಥಗಳಿಂದ ದೂರವಿರಬೇಕು..?

ಡೈರಿ ಉತ್ಪನ್ನಗಳು:

ಚಳಿಗಾಲದಲ್ಲಿ ಹಾಲಿನ ಉತ್ಪನ್ನಗಳನ್ನು ಸೇವಿಸುವುದನ್ನು ಕಡಿಮೆ ಮಾಡುವುದು ಒಳಿತು. ನಮ್ಮ ದೇಹದಲ್ಲಿ ಕಫದ ಉತ್ಪತ್ತಿಯನ್ನು ಹೆಚ್ಚಿಸುವುದಲ್ಲದೆ ಈಗಾಗಲೇ ಇರುವ ಕಫವನ್ನು ಗಟ್ಟಿ ಮಾಡುತ್ತದೆ. ಇದರಿಂದ ಗಂಟಲಿನಲ್ಲಿ ತೀವ್ರ ಕೆರೆತ, ನೋವು ಉಂಟಾಗುತ್ತದೆ.

ಬಿಸಿ ಅಥವಾ ತಂಪು ಪಾನೀಯಗಳು:

ಚಳಿಗಾಲದಲ್ಲಿ ಪ್ರತಿಯೊಬ್ಬರೂ ಬಿಸಿಬಿಸಿ ಕಾಫಿ, ಟೀ ಅಥವಾ ಬಿಸಿ ಚಾಕಲೇಟ್ ಕುಡಿಯಲು ಬಯಸುತ್ತಾರೆ. ಆದರೆ ಅದರಲ್ಲಿರುವ ಕೊಬ್ಬು ಮತ್ತು ಕೆಫೀನ್ ಇರುತ್ತದೆ. ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈ ಪಾನೀಯಗಳು ನಮ್ಮ ದೇಹವನ್ನು ಒಣಗಿಸುತ್ತವೆ. ಅಲ್ಲದೆ ದೇಹದಲ್ಲಿ ಕಫ ಉತ್ಪತ್ತಿ ಮಾಡುತ್ತದೆ. ಹೀಗಾಗಿ ಕೆಫೀನ್ ನ್ನು ಬಿಟ್ಟು ನೀರು ಅಥವಾ ಗಿಡಮೂಲಿಕೆಗಳ ಪಾನೀಯವನ್ನು ಕುಡಿದರೆ ಒಳ್ಳೆಯದು.

ಮಾಂಸ ಆಹಾರ:

ಮೊಟ್ಟೆ ಮತ್ತು ಮಾಂಸಗಳಲ್ಲಿ ಅಧಿಕ ಪ್ರಮಾಣದಲ್ಲಿ ಪ್ರೊಟೀನ್ ಗಳಿವೆ. ಹೆಚ್ಚು ಪ್ರೊಟೀನ್ ಗಳ ಸೇವನೆಯಿಂದ ಗಂಟಲಿನಲ್ಲಿ ಕಫ ಉತ್ಪತ್ತಿಯಾಗುತ್ತವೆ. ಸಂಸ್ಕರಿತ ಮಾಂಸಗಳು ಮತ್ತು ಅಧಿಕ ಕೊಬ್ಬಿನ ಮಾಂಸಗಳು ನಮ್ಮ ದೇಹಕ್ಕೆ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಮೀನು ಮತ್ತು ಕೋಳಿ ಮಾಂಸಗಳು ಇದಕ್ಕೆ ಹೋಲಿಸಿದರೆ ಸುರಕ್ಷಿತ. ಹೀಗಾಗಿ ಸಂಸ್ಕರಿತ ಮಾಂಸಗಳಿಗಿಂತ ಸಾವಯವ ಮಾಂಸ ಉತ್ತಮ.

ಎಣ್ಣೆ ಪದಾರ್ಥಗಳು:

ಎಣ್ಣೆಯಲ್ಲಿ ಕರಿದ ಪದಾರ್ಥಗಳಲ್ಲಿ ದೇಹದ ಉತ್ತಮ ಬೆಳವಣಿಗೆಗೆ ಬೇಕಾದ ಅಂಶಗಳಿರುವುದಿಲ್ಲ. ಅಲ್ಲದೆ ಇದರಿಂದ ಹೊಟ್ಟೆ ಕೆಡುವ ಸಾಧ್ಯತೆಗಳು ಕೂಡ ಹೆಚ್ಚಿರುತ್ತವೆ.
ಋತುಮಾನಗಳಲ್ಲದ ಹಣ್ಣುಗಳು: ನಿರ್ದಿಷ್ಟ ಋತುಮಾನದಲ್ಲಿ ಬೆಳೆಯದ ಹಣ್ಣು ಆ ಋತುವಿನಲ್ಲಿ ಸಿಕ್ಕಿದರೆ ಅವುಗಳನ್ನು ಸೇವಿಸಲು ಹೋಗಬೇಡಿ, ಯಾಕೆಂದರೆ ಅವು ತಾಜಾತನವನ್ನು ಹೊಂದಿರುವುದಿಲ್ಲ. ಅಂತವುಗಳನ್ನು ಸೇವಿಸಿದರೆ ಆರೋಗ್ಯ ಕೆಡಬಹುದು. ಚಳಿಗಾಲದಲ್ಲಿ ಹೆಚ್ಚೆಚ್ಚು ಸಿಟ್ರಸ್ ಹಣ್ಣುಗಳನ್ನು ಸೇವಿಸಿದರೆ ದೇಹದ ಜೀರ್ಣಕ್ರಿಯೆ ಹೆಚ್ಚಾಗುತ್ತದೆ.

ಸಕ್ಕರೆ:

ಚಳಿಗಾಲದಲ್ಲಿ ಸಕ್ಕರೆಯನ್ನು ಅಧಿಕವಾಗಿ ಸೇವಿಸುವವರ ದೇಹ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವಲ್ಲಿ ಶಕ್ತಿಗುಂದಿರುತ್ತವೆ.

ಆಲ್ಕೋಹಾಲ್:

ಚಳಿಗಾಲದಲ್ಲಿ ವಾತಾವರಣ ತಂಪಾಗಿರುವುದರಿಂದ ಸಾಮಾನ್ಯವಾಗಿ ನೀರು ಕುಡಿಯುವ ಪ್ರಮಾಣ ಕಡಿಮೆಯಿರುತ್ತದೆ. ನೀರು ಕುಡಿಯುವುದು ಕಡಿಮೆಯಾದಾಗ ದೇಹ ಒಣಗುವ ಸಾಧ್ಯತೆ ಹೆಚ್ಚು. ಇಂತಹ ಸಂದರ್ಭದಲ್ಲಿ ಆಲ್ಕೋಹಾಲ್ ಸೇವನೆ ದೇಹವನ್ನು ಬಿಸಿ ಮಾಡುತ್ತದೆ ಆದರೆ ಆಲ್ಕೋಹಾಲ್ ದೇಹವನ್ನು ಒಣಗಿಸುತ್ತದೆ ಕೂಡ.
ಅಲ್ಲದೆ ಆಲ್ಕೋಹಾಲ್ ಸೇವನೆಯಿಂದ ದೇಹದ ಉಷ್ಣತೆ ಕೂಡ ಹೆಚ್ಚಾಗುತ್ತದೆ.

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840

ಈ ವಾತಾವರಣಕ್ಕೆ ನಮ್ಮ ಉಡುಗೆಗಳು ಹೇಗಿರಬೇಕು?? ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುವುದು?? ಮಕ್ಕಳ ಪೋಷಣೆ ಹೇಗಿರಬೇಕು ಗೊತ್ತಾ??

Watch: